Psalms 146 (BOKCV2)
1 ಯೆಹೋವ ದೇವರನ್ನು ಸ್ತುತಿಸಿರಿ. ನನ್ನ ಪ್ರಾಣವೇ, ಯೆಹೋವ ದೇವರನ್ನು ಸ್ತುತಿಸು. 2 ನಾನು ಬದುಕುವವರೆಗೂ ಯೆಹೋವ ದೇವರನ್ನು ಸ್ತುತಿಸುವೆನು;ನಾನು ಇರುವವರೆಗೂ ನನ್ನ ದೇವರನ್ನು ಸ್ತುತಿಸುವೆನು. 3 ಅಧಿಪತಿಗಳಲ್ಲಿಯೂ ರಕ್ಷಿಸಲಾಗದಮಾನವರಲ್ಲಿಯೂ ಭರವಸವಿಡಬೇಡಿರಿ. 4 ಅವರ ಶ್ವಾಸವು ಹೋಗಲು ಮಣ್ಣಿಗೆ ಸೇರುತ್ತಾರೆ,ಅದೇ ದಿವಸದಲ್ಲಿ ಅವರ ಆಲೋಚನೆಗಳೆಲ್ಲಾ ನಾಶವಾಗುತ್ತವೆ. 5 ಯಾಕೋಬನ ದೇವರನ್ನು ತಮ್ಮ ಸಹಾಯಕರಾಗಿ ಮಾಡಿಕೊಂಡವನು ಧನ್ಯನು;ಅವನು ತನ್ನ ದೇವರಾದ ಯೆಹೋವ ದೇವರ ಮೇಲೆ ನಿರೀಕ್ಷೆ ಇಡುವನು. 6 ಆಕಾಶವನ್ನೂ, ಭೂಮಿಯನ್ನೂ,ಸಮುದ್ರವನ್ನೂ, ಅವುಗಳಲ್ಲಿರುವ ಎಲ್ಲವನ್ನೂಉಂಟುಮಾಡಿದ ದೇವರೇ ಎಂದೆಂದಿಗೂ ನಂಬಿಗಸ್ತರು. 7 ಅವರು ದಬ್ಬಾಳಿಕೆಯಾದ ನ್ಯಾಯತೀರಿಸುತ್ತಾರೆ,ಹಸಿದವರಿಗೆ ಆಹಾರವನ್ನು ಕೊಡುತ್ತಾರೆ.ಯೆಹೋವ ದೇವರು ಸೆರೆಯವರನ್ನು ಬಿಡಿಸುತ್ತಾರೆ. 8 ಯೆಹೋವ ದೇವರು ಕುರುಡರ ಕಣ್ಣುಗಳನ್ನು ತೆರೆಯುತ್ತಾರೆ.ಅವರು ದೀನರನ್ನು ಎತ್ತುತ್ತಾರೆ.ನೀತಿವಂತರನ್ನು ಪ್ರೀತಿಸುತ್ತಾರೆ. 9 ಯೆಹೋವ ದೇವರು ಪರದೇಶಸ್ಥರನ್ನು ಕಾಪಾಡುತ್ತಾರೆ.ದಿಕ್ಕಿಲ್ಲದವರನ್ನೂ, ವಿಧವೆಯರನ್ನೂ ಉದ್ಧರಿಸುತ್ತಾರೆ.ಆದರೆ ದುಷ್ಟರ ಮಾರ್ಗವನ್ನು ಬೇಸರಪಡಿಸುತ್ತಾರೆ. 10 ಚೀಯೋನೇ, ನಿಮ್ಮ ದೇವರಾದ ಯೆಹೋವ ದೇವರು ತಲತಲಾಂತರಕ್ಕೂ,ಸರ್ವ ಸಂತತಿಗಳವರೆಗೂ ಆಳಿಕೆ ಮಾಡುತ್ತಾರೆ. ಯೆಹೋವ ದೇವರಿಗೆ ಸ್ತೋತ್ರ.