Psalms 52 (BOKCV2)
undefined ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನು ಅಹೀಮೆಲೆಕನ ಮನೆಗೆ ಬಂದ ವರ್ತಮಾನವನ್ನು ಎದೋಮ್ಯನಾದ ದೋಯೇಗನು ಸೌಲನಿಗೆ ತಿಳಿಸಿದಾಗ, ಮಸ್ಕೀಲ್ ರಾಗದಲ್ಲಿ ದಾವೀದನು ರಚಿಸಿದ ಪದ್ಯ. 1 ಬಲಿಷ್ಠನೇ, ನೀನು ಕೆಟ್ಟತನದಲ್ಲಿ ಹೆಚ್ಚಳ ಪಡುವುದೇಕೆ?ದೇವರ ದೃಷ್ಟಿಯಲ್ಲಿ ಅಪಕೀರ್ತಿಯಾದವನೇ,ದೇವರ ಅನಂತ ಕೃಪೆಯು ಯಾವಾಗಲೂ ಇರುವದು. 2 ಮೋಸ ಮಾಡುವವನೇ,ಹದವಾದ ಕ್ಷೌರ ಕತ್ತಿಯ ಹಾಗೆನಿನ್ನ ನಾಲಿಗೆಯು ಕೇಡನ್ನು ಕಲ್ಪಿಸುತ್ತದೆ. 3 ಒಳ್ಳೆಯದಕ್ಕಿಂತ ಕೆಟ್ಟದ್ದನ್ನೇ ನೀನು ಪ್ರೀತಿಸುತ್ತಿ.ಸತ್ಯವನಾಡುವುದಕ್ಕಿಂತ ಸುಳ್ಳನ್ನೇ ನೀನು ಮಾತನಾಡುತ್ತಿ. 4 ಮೋಸದ ನಾಲಿಗೆಯೇ,ನಿನಗೆ ಹಾನಿಕರವಾದ ಮಾತುಗಳೇ ಇಷ್ಟ. 5 ಆದ್ದರಿಂದ ದೇವರು ನಿಶ್ಚಯವಾಗಿ ನಿನ್ನನ್ನು ನಿತ್ಯ ನಾಶಕ್ಕೆ ತರುವರು.ದೇವರು ನಿನ್ನನ್ನು ನಿನ್ನ ವಾಸಸ್ಥಳದಿಂದ ಕಿತ್ತುಹಾಕುವರು.ಜೀವಿತರ ದೇಶದೊಳಗಿಂದ ನಿನ್ನನ್ನು ಬೇರುಸಹಿತ ಕೀಳುವರು. 6 ನೀತಿವಂತರು ಇದನ್ನು ಕಂಡು ಭಯಪಡುವರು.ಅವರು ನಿನ್ನ ಬಗ್ಗೆ ನಗಾಡಿ ಹೀಗನ್ನುವರು, 7 “ಇಗೋ, ದೇವರನ್ನು ತನ್ನ ಬಲವನ್ನಾಗಿ ಮಾಡಿಕೊಳ್ಳದೆ,ತನ್ನ ಅಧಿಕ ಐಶ್ವರ್ಯದಲ್ಲಿ ಭರವಸವಿಟ್ಟುತನ್ನ ಕೆಟ್ಟತನದಲ್ಲಿ ಬಲಗೊಂಡು ಇತರರನ್ನು ನಾಶಮಾಡಿದಮನುಷ್ಯನು ಇವನೇ!” 8 ನಾನಾದರೋ ದೇವರ ಆಲಯದಲ್ಲಿರುವಅಭಿವರ್ದಿಸುವ ಓಲಿವ್ ಮರದ ಹಾಗೆ ಇರುವೆನು.ದೇವರ ಒಡಂಬಡಿಕೆಯ ಪ್ರೀತಿಯಲ್ಲಿಯುಗಯುಗಾಂತರವೂ ಭರವಸವಿಟ್ಟಿರುವೆನು. 9 ದೇವರೇ ನಿಮ್ಮ ಉಪಕಾರಕ್ಕಾಗಿ ಯಾವಾಗಲೂನಿಮ್ಮ ಭಕ್ತರ ಮುಂದೆ ನಿಮ್ಮನ್ನು ಸ್ತುತಿಸುತ್ತಿರುವೆನು.ನಿಮ್ಮ ಹೆಸರು ಒಳ್ಳೆಯದು.ಆದುದರಿಂದ ನಿಮ್ಮ ಹೆಸರನ್ನೇ ನಿರೀಕ್ಷಿಸಿಕೊಂಡಿರುವೆನು.