1 Kings 10 (IRVK)

1 ಯೆಹೋವನ ನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು ಶೆಬೆದ ರಾಣಿಯು ಕೇಳಿ, ಅವನನ್ನು ಒಗಟುಗಳಿಂದ ಪರೀಕ್ಷಿಸುವುದಕ್ಕಾಗಿ ಬಂದಳು. 2 ಆಕೆಯು ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು, ಮಹಾಪರಿವಾರದೊಡನೆ ಯೆರೂಸಲೇಮಿಗೆ ಬಂದು ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸೊಲೊಮೋನನೊಡನೆ ಸಂಭಾಷಿಸಿದಳು. 3 ಸೊಲೊಮೋನನು ಆಕೆಯ ಎಲ್ಲಾ ಪ್ರಶ್ನೆಗಳಿಗೂ ಉತ್ತರಕೊಟ್ಟನು. ಅವುಗಳಲ್ಲಿ ಸೊಲೊಮೋನನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದುದರಿಂದ ಅವನು ಅವೆಲ್ಲವುಗಳಿಗೆ ಉತ್ತರಕೊಟ್ಟನು. 4 ಶೆಬೆದ ರಾಣಿಯು ಸೊಲೊಮೋನನ ಎಲ್ಲಾ ಜ್ಞಾನ, ಅವನು ಕಟ್ಟಿಸಿದ ಅರಮನೆ, 5 ಅವನ ಭೋಜನಪೀಠದ ಆಹಾರ, ಆ ಪೀಠದ ಸುತ್ತಲಿರುವ ಉದ್ಯೋಗಸ್ಥರ ಆಸನಗಳು, ಅವನ ಪರಿಚಾರಕರ ಸೇವಾಕ್ರಮ, ಅವರ ಉಡುಪುಗಳು, ಅವನ ಪಾನಕಗಳು ಇವುಗಳನ್ನೂ ಮತ್ತು ಅವನು ಯೆಹೋವನ ಆಲಯದಲ್ಲಿ ಸಮರ್ಪಿಸುತ್ತಿದ್ದ ಸರ್ವಾಂಗಹೋಮಗಳನ್ನೂ ನೋಡಿದಾಗ ವಿಸ್ಮಿತಳಾಗಿ ಹೋದಳು. 6 ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಜ್ಞಾನವನ್ನು, ಕೃತ್ಯಗಳನ್ನೂ ಕುರಿತು ಕೇಳಿದ್ದು ಸತ್ಯವಾಗಿದೆ. 7 ನಾನಾಗಿ ಇಲ್ಲಿಗೆ ಬಂದು ಕಣ್ಣಾರೆ ನೋಡುವುದಕ್ಕಿಂತ ಮೊದಲು ಜನರು ಹೇಳಿದ ಸುದ್ದಿಯನ್ನು ನಂಬಿರಲಿಲ್ಲ. ಈಗ ಇಲ್ಲಿ ಬಂದು ನೋಡಿದರೆ ನಿನ್ನ ಜ್ಞಾನವೈಭವಗಳು ನಾನು ಕೇಳಿದ್ದಕ್ಕಿಂತ ಹೆಚ್ಚಾಗಿವೆ. ಜನರು ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. 8 ನಿನ್ನ ಪ್ರಜೆಗಳು ಸದಾ ನಿನ್ನ ಮುಂದೆ ನಿಂತುಕೊಂಡು ನಿನ್ನ ಜ್ಞಾನವಾಕ್ಯಗಳನ್ನು ಕೇಳುವ ನಿನ್ನ ಸೇವಕರು ಧನ್ಯರು. 9 ನಿನ್ನನ್ನು ಮೆಚ್ಚಿ ಇಸ್ರಾಯೇಲ್ ಸಿಂಹಾಸನದ ಮೇಲೆ ಕುಳ್ಳಿರಿಸಿದ ನಿನ್ನ ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಆತನು ಇಸ್ರಾಯೇಲರನ್ನು ಸದಾ ಪ್ರೀತಿಸುವವನಾದುದರಿಂದ ಅವರ ನೀತಿನ್ಯಾಯಗಳನ್ನು ಸ್ಥಾಪಿಸುವುದಕ್ಕೋಸ್ಕರ ನಿನ್ನನ್ನೇ ಅರಸನನ್ನಾಗಿ ನೇಮಿಸಿದ್ದಾನೆ” ಎಂದು ಹೇಳಿದಳು. 10 ಆಕೆಯು ಅರಸನಿಗೆ ನೂರಿಪ್ಪತ್ತು ತಲಾಂತು ಬಂಗಾರವನ್ನೂ, ಅಪರಿಮಿತ ಸುಗಂಧದ್ರವ್ಯವನ್ನೂ ಮತ್ತು ರತ್ನಗಳನ್ನೂ ಕೊಟ್ಟಳು. ಶೆಬೆದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಷ್ಟು ಸುಗಂಧದ್ರವ್ಯವನ್ನು ಅವನಿಗೆ ಪುನಃ ಯಾರು ಕೊಡಲಿಲ್ಲ. ಬರಲೇ ಇಲ್ಲ. 11 ಹೀರಾಮನ ಹಡಗುಗಳು ಓಫೀರ್ ದೇಶದಿಂದ ಬಂಗಾರದ ಹೊರತಾಗಿ ಸುಗಂಧದ ಮರವನ್ನೂ ಮತ್ತು ರತ್ನಗಳನ್ನೂ ರಾಶಿ ರಾಶಿಯಾಗಿ ತಂದವು. 12 ಅರಸನು ಸುಗಂಧದ ಮರದಿಂದ ಯೆಹೋವನ ಆಲಯ ಮತ್ತು ಅರಮನೆ ಇವುಗಳಿಗೆ ಸ್ತಂಭಗಳನ್ನು, ಗಾಯಕರಿಗೋಸ್ಕರ ಕಿನ್ನರಿಗಳನ್ನೂ, ಸ್ವರಮಂಡಲಗಳನ್ನೂ ಮಾಡಿಸಿದನು. ಆಗ ಬಂದಷ್ಟು ಸುಗಂಧದ ಮರವು ಇಂದಿನ ವರೆಗೂ ಆ ದೇಶಕ್ಕೆ ಬರಲಿಲ್ಲ ಮತ್ತು ಕಾಣಲಿಲ್ಲ. 13 ಅರಸನಾದ ಸೊಲೊಮೋನನು ಶೆಬೆದ ರಾಣಿಗೆ ತಾನಾಗಿ ರಾಜಮರ್ಯಾದೆಯಿಂದ ಕೊಟ್ಟ ವಸ್ತುಗಳಲ್ಲದೆ ಆಕೆಯು ಕೇಳಿದವುಗಳೆಲ್ಲವನ್ನು ಕೊಟ್ಟುಬಿಟ್ಟನು. ಅನಂತರ ಆಕೆಯು ತನ್ನ ಪರಿವಾರದೊಡನೆ ಸ್ವದೇಶಕ್ಕೆ ಹೊರಟುಹೋದಳು. 14 ಸೊಲೊಮೋನನಿಗೆ ಒಂದು ವರ್ಷದಲ್ಲಿ ಆರುನೂರ ಅರುವತ್ತಾರು ತಲಾಂತು ಬಂಗಾರ ದೊರಕುತ್ತಿತ್ತು. 15 ಅದರ ಜೊತೆಗೆ ದೇಶಾಂತರ ವ್ಯಾಪಾರಿಗಳೂ, ವರ್ತಕರೂ, ಅರಬಿಯ ಅರಸರೂ, ಪ್ರದೇಶಾಧಿಪತಿಗಳೂ ಸಹ ಸೊಲೊಮೋನನಿಗೆ ಬೆಳ್ಳಿ ಬಂಗಾರವನ್ನು ಕೊಡುತ್ತಿದ್ದರು. 16 ಅರಸನಾದ ಸೊಲೊಮೋನನು ಬಂಗಾರದ ತಗಡಿನಿಂದ ಇನ್ನೂರು ಗುರಾಣಿಗಳನ್ನು ಮಾಡಿಸಿದನು. ಪ್ರತಿಯೊಂದು ಗುರಾಣಿಗೆ ಆರುನೂರು ತೊಲಾ ಬಂಗಾರ ಹಿಡಿಯಿತು. 17 ಇದಲ್ಲದೆ ಅವನು ಬಂಗಾರದ ತಗಡಿನಿಂದ ಮುನ್ನೂರು ಖೇಡ್ಯಗಳನ್ನು ಮಾಡಿಸಿದನು. ಪ್ರತಿಯೊಂದು ಖೇಡ್ಯಕ್ಕೆ ನೂರೈವತ್ತು ತೊಲಾ ಬಂಗಾರ ಹಿಡಿಯಿತು. ಅವನು ಇವುಗಳನ್ನು ಲೆಬನೋನಿನ ತೋಪು ಎನ್ನಿಸಿಕೊಳ್ಳುವ ಮಂದಿರದಲ್ಲಿ ಇರಿಸಿದನು. 18 ಇದಲ್ಲದೆ ಅರಸನು ದೊಡ್ಡದಾದ ಒಂದು ದಂತ ಸಿಂಹಾಸನವನ್ನು ಮಾಡಿಸಿ ಅದಕ್ಕೆ ಚೊಕ್ಕ ಬಂಗಾರದ ತಗಡನ್ನು ಹೊದಿಸಿದನು 19 ಅದಕ್ಕೆ ಆರು ಮೆಟ್ಟಲುಗಳಿದ್ದವು. ಅದರ ಹಿಂಭಾಗದ ತುದಿಯು ಚಕ್ರಾಕಾರವಾಗಿತ್ತು. ಆಸನಕ್ಕೆ ಎರಡು ಕೈಗಳು, ಅವುಗಳ ಹತ್ತಿರ ಎರಡು ಸಿಂಹಗಳು ಇದ್ದವು. 20 ಆರು ಮೆಟ್ಟಲುಗಳ ಎರಡು ಕಡೆಗಳಲ್ಲೂ ಒಟ್ಟು ಹನ್ನೆರಡು ಸಿಂಹಗಳು ನಿಂತಿದ್ದವು. ಇಂಥ ಸಿಂಹಾಸನವು ಬೇರೆ ಯಾವ ರಾಜ್ಯದಲ್ಲಿಯೂ ಇರಲಿಲ್ಲ. 21 ಅರಸನಾದ ಸೊಲೊಮೋನನ ಪಾನಪಾತ್ರೆಗಳು, ಲೆಬನೋನಿನ ತೋಪು ಎನಿಸಿಕೊಳ್ಳುವ ಮಂದಿರದಲ್ಲಿದ್ದ ಎಲ್ಲಾ ಪಾನಪಾತ್ರೆಗಳು ಬಂಗಾರದವುಗಳು. ಸೊಲೊಮೋನನ ಕಾಲದಲ್ಲಿ ಬೆಳ್ಳಿಗೆ ಬೆಲೆ ಇರಲಿಲ್ಲವಾದುದರಿಂದ ಅವನಲ್ಲಿ ಬೆಳ್ಳಿಯ ಸಾಮಾನು ಒಂದಾದರೂ ಕಾಣಿಸಲಿಲ್ಲ. 22 ಹೀರಾಮನ ನಾವೆಗಳ ಜೊತೆಯಲ್ಲಿ ಸೊಲೊಮೋನನ ತಾರ್ಷೀಷ್ ಹಡಗುಗಳು ಹೋಗಿ ಮೂರು ವರ್ಷಕ್ಕೊಮ್ಮೆ ಬಂಗಾರ, ಬೆಳ್ಳಿ, ದಂತ, ವಾನರಗಳನ್ನು ಮತ್ತು ನವಿಲುಗಳನ್ನೂ ತರುತ್ತಿದ್ದವು. 23 ಈ ಪ್ರಕಾರ ಅರಸನಾದ ಸೊಲೊಮೋನನು ಐಶ್ವರ್ಯದಲ್ಲಿಯೂ, ಜ್ಞಾನದಲ್ಲಿಯೂ ಭೂಲೋಕದ ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದನು. 24 ಭೂಲೋಕದವರೆಲ್ಲರೂ ದೇವರು ಅವನಿಗೆ ಅನುಗ್ರಹಿಸಿದ ಜ್ಞಾನವಾಕ್ಯಗಳನ್ನು ಕೇಳುವುದಕ್ಕೋಸ್ಕರ ಅವನ ದರ್ಶನಕ್ಕೆ ಬಂದರು. 25 ಅವರೆಲ್ಲರೂ ಅವನಿಗೆ ವರ್ಷ ವರ್ಷ ಬೆಳ್ಳಿಬಂಗಾರದ ಸಾಮಾನು, ಉಡುಪು, ಯುದ್ಧಕ್ಕೆ ಬೇಕಾದ ಆಯುಧಗಳು, ಸುಗಂಧದ್ರವ್ಯ, ಕುದುರೆ ಮತ್ತು ಹೇಸರಗತ್ತೆ ಇವುಗಳನ್ನು ಕಾಣಿಕೆಯಾಗಿ ಕೊಡುತ್ತಿದ್ದರು. 26 ಸೊಲೊಮೋನನು ರಥಗಳನ್ನೂ ಮತ್ತು ರಾಹುತರನ್ನೂ ಸಂಗ್ರಹಿಸಿದನು. ಅವನ ರಥಗಳು ಸಾವಿರದ ನಾನೂರು. ರಾಹುತರು ಹನ್ನೆರಡು ಸಾವಿರ. ಇವುಗಳಲ್ಲಿ ಕೆಲವನ್ನು ಯೆರೂಸಲೇಮಿನಲ್ಲಿ ತನ್ನ ಬಳಿಯಲ್ಲಿಯೂ, ಉಳಿದವುಗಳನ್ನು ರಥಗಳಿಗೋಸ್ಕರ ನೇಮಿಸಿದ ಪಟ್ಟಣಗಳಲ್ಲಿಯೂ ಇರಿಸಿದನು. 27 ಅವನ ಮುಖಾಂತರವಾಗಿ ಯೆರೂಸಲೇಮಿನಲ್ಲಿ ಬೆಳ್ಳಿಯು ಸಾಮಾನ್ಯ ಕಲ್ಲಿನ ಹಾಗೂ ದೇವದಾರುಮರಗಳು ಇಳಕಲಿನ ಪ್ರದೇಶದಲ್ಲಿ ಬೆಳೆಯುವ ಅತ್ತಿಮರಗಳ ಹಾಗೂ ಹೇರಳವಾಗಿ ದೊರೆಯುತ್ತಿತ್ತು. 28 ಅರಸನಾದ ಸೊಲೊಮೋನನ ಕುದುರೆಗಳು ಐಗುಪ್ತ ದೇಶದವುಗಳು. ಅವನ ವರ್ತಕರು ಅವುಗಳನ್ನು ಹಿಂಡುಗಟ್ಟಲೆ ಕೊಂಡುಕೊಂಡು ಬರುತ್ತಿದ್ದರು. 29 ಐಗುಪ್ತದೇಶದಿಂದ ರಥಗಳನ್ನೂ ಮತ್ತು ಕುದುರೆಗಳನ್ನೂ ತರಿಸಬೇಕಾದರೆ ಪ್ರತಿಯೊಂದು ರಥಕ್ಕೆ ಆರುನೂರು ರೂಪಾಯಿಗಳನ್ನೂ, ಕುದುರೆಗೆ ನೂರೈವತ್ತು ರೂಪಾಯಿಗಳನ್ನೂ ಕೊಡಬೇಕಾಗಿತ್ತು. ಅವು ಹಿತ್ತಿಯರ ಮತ್ತು ಅರಾಮ್ಯರ ಎಲ್ಲಾ ಅರಸರಿಗೆ ಇವರ ಮುಖಾಂತರವಾಗಿಯೇ ಮಾರಾಟವಾಗುತ್ತಿದ್ದವು.

In Other Versions

1 Kings 10 in the ANGEFD

1 Kings 10 in the ANTPNG2D

1 Kings 10 in the AS21

1 Kings 10 in the BAGH

1 Kings 10 in the BBPNG

1 Kings 10 in the BBT1E

1 Kings 10 in the BDS

1 Kings 10 in the BEV

1 Kings 10 in the BHAD

1 Kings 10 in the BIB

1 Kings 10 in the BLPT

1 Kings 10 in the BNT

1 Kings 10 in the BNTABOOT

1 Kings 10 in the BNTLV

1 Kings 10 in the BOATCB

1 Kings 10 in the BOATCB2

1 Kings 10 in the BOBCV

1 Kings 10 in the BOCNT

1 Kings 10 in the BOECS

1 Kings 10 in the BOGWICC

1 Kings 10 in the BOHCB

1 Kings 10 in the BOHCV

1 Kings 10 in the BOHLNT

1 Kings 10 in the BOHNTLTAL

1 Kings 10 in the BOICB

1 Kings 10 in the BOILNTAP

1 Kings 10 in the BOITCV

1 Kings 10 in the BOKCV

1 Kings 10 in the BOKCV2

1 Kings 10 in the BOKHWOG

1 Kings 10 in the BOKSSV

1 Kings 10 in the BOLCB

1 Kings 10 in the BOLCB2

1 Kings 10 in the BOMCV

1 Kings 10 in the BONAV

1 Kings 10 in the BONCB

1 Kings 10 in the BONLT

1 Kings 10 in the BONUT2

1 Kings 10 in the BOPLNT

1 Kings 10 in the BOSCB

1 Kings 10 in the BOSNC

1 Kings 10 in the BOTLNT

1 Kings 10 in the BOVCB

1 Kings 10 in the BOYCB

1 Kings 10 in the BPBB

1 Kings 10 in the BPH

1 Kings 10 in the BSB

1 Kings 10 in the CCB

1 Kings 10 in the CUV

1 Kings 10 in the CUVS

1 Kings 10 in the DBT

1 Kings 10 in the DGDNT

1 Kings 10 in the DHNT

1 Kings 10 in the DNT

1 Kings 10 in the ELBE

1 Kings 10 in the EMTV

1 Kings 10 in the ESV

1 Kings 10 in the FBV

1 Kings 10 in the FEB

1 Kings 10 in the GGMNT

1 Kings 10 in the GNT

1 Kings 10 in the HARY

1 Kings 10 in the HNT

1 Kings 10 in the IRVA

1 Kings 10 in the IRVB

1 Kings 10 in the IRVG

1 Kings 10 in the IRVH

1 Kings 10 in the IRVM

1 Kings 10 in the IRVM2

1 Kings 10 in the IRVO

1 Kings 10 in the IRVP

1 Kings 10 in the IRVT

1 Kings 10 in the IRVT2

1 Kings 10 in the IRVU

1 Kings 10 in the ISVN

1 Kings 10 in the JSNT

1 Kings 10 in the KAPI

1 Kings 10 in the KBT1ETNIK

1 Kings 10 in the KBV

1 Kings 10 in the KJV

1 Kings 10 in the KNFD

1 Kings 10 in the LBA

1 Kings 10 in the LBLA

1 Kings 10 in the LNT

1 Kings 10 in the LSV

1 Kings 10 in the MAAL

1 Kings 10 in the MBV

1 Kings 10 in the MBV2

1 Kings 10 in the MHNT

1 Kings 10 in the MKNFD

1 Kings 10 in the MNG

1 Kings 10 in the MNT

1 Kings 10 in the MNT2

1 Kings 10 in the MRS1T

1 Kings 10 in the NAA

1 Kings 10 in the NASB

1 Kings 10 in the NBLA

1 Kings 10 in the NBS

1 Kings 10 in the NBVTP

1 Kings 10 in the NET2

1 Kings 10 in the NIV11

1 Kings 10 in the NNT

1 Kings 10 in the NNT2

1 Kings 10 in the NNT3

1 Kings 10 in the PDDPT

1 Kings 10 in the PFNT

1 Kings 10 in the RMNT

1 Kings 10 in the SBIAS

1 Kings 10 in the SBIBS

1 Kings 10 in the SBIBS2

1 Kings 10 in the SBICS

1 Kings 10 in the SBIDS

1 Kings 10 in the SBIGS

1 Kings 10 in the SBIHS

1 Kings 10 in the SBIIS

1 Kings 10 in the SBIIS2

1 Kings 10 in the SBIIS3

1 Kings 10 in the SBIKS

1 Kings 10 in the SBIKS2

1 Kings 10 in the SBIMS

1 Kings 10 in the SBIOS

1 Kings 10 in the SBIPS

1 Kings 10 in the SBISS

1 Kings 10 in the SBITS

1 Kings 10 in the SBITS2

1 Kings 10 in the SBITS3

1 Kings 10 in the SBITS4

1 Kings 10 in the SBIUS

1 Kings 10 in the SBIVS

1 Kings 10 in the SBT

1 Kings 10 in the SBT1E

1 Kings 10 in the SCHL

1 Kings 10 in the SNT

1 Kings 10 in the SUSU

1 Kings 10 in the SUSU2

1 Kings 10 in the SYNO

1 Kings 10 in the TBIAOTANT

1 Kings 10 in the TBT1E

1 Kings 10 in the TBT1E2

1 Kings 10 in the TFTIP

1 Kings 10 in the TFTU

1 Kings 10 in the TGNTATF3T

1 Kings 10 in the THAI

1 Kings 10 in the TNFD

1 Kings 10 in the TNT

1 Kings 10 in the TNTIK

1 Kings 10 in the TNTIL

1 Kings 10 in the TNTIN

1 Kings 10 in the TNTIP

1 Kings 10 in the TNTIZ

1 Kings 10 in the TOMA

1 Kings 10 in the TTENT

1 Kings 10 in the UBG

1 Kings 10 in the UGV

1 Kings 10 in the UGV2

1 Kings 10 in the UGV3

1 Kings 10 in the VBL

1 Kings 10 in the VDCC

1 Kings 10 in the YALU

1 Kings 10 in the YAPE

1 Kings 10 in the YBVTP

1 Kings 10 in the ZBP