Psalms 122 (IRVK)
undefined ಯಾತ್ರಾಗೀತೆ; ದಾವೀದನ ಕೀರ್ತನೆ. 1 “ಯೆಹೋವನ ಮಂದಿರಕ್ಕೆ ಹೋಗೋಣ ಬಾ!”ಎಂದು ಜನರು ನನ್ನನ್ನು ಕರೆದಾಗ ನನಗೆ ಸಂತೋಷವಾಯಿತು. 2 ಯೆರೂಸಲೇಮೇ! ನಮ್ಮ ಕಾಲುಗಳು,ನಿನ್ನ ಬಾಗಿಲುಗಳಲ್ಲಿ ಸೇರಿರುತ್ತವಲ್ಲಾ. 3 ಯೆರೂಸಲೇಮೇ! ನೀನು ಸರಿಯಾದ ಹೊಂದಿಕೆಯಿಂದ,ಕಟ್ಟಲ್ಪಟ್ಟ ನಗರವಾಗಿದ್ದಿ. 4 ಕುಲಗಳು ಅಂದರೆ ಯೆಹೋವನ ಕುಲದವರು,ಯೆಹೋವನ ನಾಮದ ಕೀರ್ತನೆಗೋಸ್ಕರ,ಇಲ್ಲಿಗೆ ಯಾತ್ರೆ ಮಾಡುತ್ತಿದ್ದರು.ಇದು ಇಸ್ರಾಯೇಲರಲ್ಲಿದ್ದ ಕಟ್ಟಳೆಯಷ್ಟೆ. 5 ನ್ಯಾಯಪೀಠಗಳಾಗಿರುವ ದಾವೀದನ ಮನೆತನದವರ,ಸಿಂಹಾಸನಗಳು ಇಲ್ಲಿಯೇ ಇದ್ದವಲ್ಲಾ. 6 ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥಿಸಿರಿ.“ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಸೌಭಾಗ್ಯವುಂಟಾಗಲಿ. 7 ನಿನ್ನ ಪೌಳಿಗೋಡೆಗಳೊಳಗೆ ಶುಭವುಂಟಾಗಲಿ;ನಿನ್ನ ಅರಮನೆಗಳಲ್ಲಿ ಸೌಭಾಗ್ಯವಿರಲಿ.” 8 ನನ್ನ ಬಂಧುಮಿತ್ರರ ನಿಮಿತ್ತವಾಗಿ,“ನಿನಗೆ ಸಮಾಧಾನವಾಗಲಿ” ಎಂದು ಹೇಳುತ್ತೇನೆ. 9 ನಮ್ಮ ದೇವರಾದ ಯೆಹೋವನ ಮಂದಿರದ ನಿಮಿತ್ತವಾಗಿ,ನಿನ್ನ ಸುಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.