Job 8 (BOKCV2)
1 ಆಗ, ಶೂಹ್ಯನಾದ ಬಿಲ್ದದನು ಈ ಪ್ರಕಾರ ಉತ್ತರಕೊಟ್ಟನು: 2 “ನೀನು ಎಷ್ಟರವರೆಗೆ ಇವುಗಳನ್ನು ನುಡಿಯುತ್ತಿರುವೆ?ನೀನು ಬಿರುಗಾಳಿಯಂಥ ಮಾತುಗಳನ್ನಾಡುತ್ತಿರುವೆ. 3 ದೇವರು ತೀರ್ಪಿಗೆ ವಿರುದ್ಧವಾದದ್ದನ್ನು ಮಾಡುತ್ತಾರೋ?ಸರ್ವಶಕ್ತರು ನೀತಿಗೆ ವಿರುದ್ಧವಾದದ್ದನ್ನು ಮಾಡುವರೋ? 4 ನಿನ್ನ ಮಕ್ಕಳು ದೇವರಿಗೆ ವಿರೋಧವಾಗಿ ಪಾಪಮಾಡಿದ್ದರೆ,ದೇವರು ಅವರ ಪಾಪಕ್ಕಾಗಿ ಅವರನ್ನು ದಂಡಿಸುವರು. 5 ಆದರೆ ನೀನೇ ದೇವರನ್ನು ಜಾಗ್ರತೆಯಾಗಿ ಹುಡುಕಿ,ಸರ್ವಶಕ್ತರಿಗೆ ಬಿನ್ನಹ ಮಾಡು. 6 ನೀನು ಶುದ್ಧನೂ, ಯಥಾರ್ಥನೂ ಆಗಿದ್ದರೆ,ನಿಶ್ಚಯವಾಗಿ ಈಗಲೇ ದೇವರು ನಿನಗೋಸ್ಕರ ಎಚ್ಚೆತ್ತು,ನಿನ್ನ ನೀತಿಯ ನಿವಾಸವನ್ನು ಸಮೃದ್ಧಿಗೊಳಿಸುವರು. 7 ನಿನ್ನ ಆರಂಭವು ಅಲ್ಪವಾಗಿದ್ದರೂ,ನಿನ್ನ ಅಂತ್ಯವು ಬಹಳವಾಗಿ ವೃದ್ಧಿ ಹೊಂದುವುದು. 8 “ಪೂರ್ವಿಕರನ್ನು ವಿಚಾರಿಸು;ಅವರ ಪಿತೃಗಳು ಕಲಿತಿದ್ದನ್ನು ಕಂಡುಕೊಳ್ಳುವುದಕ್ಕೆ ಸಿದ್ಧನಾಗು. 9 ನಾವು ನಿನ್ನೆ ಹುಟ್ಟಿದವರೂ ಏನೂ ಅರಿಯದವರೂ ಆಗಿದ್ದೇವೆ;ಏಕೆಂದರೆ ನಮ್ಮ ದಿವಸಗಳು ಭೂಮಿಯ ಮೇಲೆ ನೆರಳಿನಂತಿವೆ. 10 ಪೂರ್ವಿಕರು ನಿನಗೆ ಬೋಧಿಸಿ ಬುದ್ಧಿ ಹೇಳಲಿಲ್ಲವೋ?ಅವರು ತಮ್ಮ ತಿಳುವಳಿಕೆಯನ್ನು ಹೊರತರಲಿಲ್ಲವೋ? 11 ಕೆಸರಿಲ್ಲದೆ ಆಪು ಹುಲ್ಲು ಬೆಳೆಯುವುದೋ?ನೀರಿಲ್ಲದೆ ಜಂಬು ಹುಲ್ಲು ಮೊಳೆಯುವುದೋ? 12 ಅದು ಹಸುರಾಗಿ ಇನ್ನೂ ಕೊಯ್ಯದೆ ಇದ್ದಾಗಲೂ,ಎಲ್ಲಾ ಹುಲ್ಲಿಗಿಂತಲೂ ಅದು ಮೊದಲು ಒಣಗಿಹೋಗುವುದು. 13 ದೇವರನ್ನು ಮರೆಯುವವರೆಲ್ಲರ ದಾರಿ ಹಾಗೆಯೇ;ಭಕ್ತಿಹೀನರ ನಿರೀಕ್ಷೆಯು ನಾಶವಾಗುವುದು. 14 ಅಂಥವರ ಭರವಸೆಯು ಭಂಗವಾಗುವುದು;ಅವರ ಆಶ್ರಯವು ಜೇಡರ ಹುಳದ ಮನೆಯಂತಿರುವುದು. 15 ಅಂಥಾ ಮನೆ ಮೇಲೆ ಒರಗಿಕೊಂಡರೆ, ಅದು ನಿಲ್ಲದು;ಅದನ್ನು ಬಿಗಿಹಿಡಿದರೆ, ಅದು ತಡೆಯಲಾರದು. 16 ಸೂರ್ಯನ ಮುಂದೆ ಭಕ್ತಿಹೀನರು ಹಸುರು ಬಳ್ಳಿಯಂತೆ ಇದ್ದಾರೆ;ಆ ಬಳ್ಳಿಯು ತೋಟದಲ್ಲೆಲ್ಲಾ ಹಬ್ಬುತ್ತಿದೆ. 17 ಅವರ ಬೇರುಗಳು ಬಂಡೆಗಳ ರಾಶಿಯ ಮೇಲೆ ಸುತ್ತಿ,ಕಲ್ಲುಗಳ ನಡುವೆ ನುಗ್ಗುತ್ತವೆ. 18 ಭಕ್ತಿಹೀನನನ್ನು ಅವನ ಸ್ಥಳದಿಂದ ಕಿತ್ತುಹಾಕಿದರೆ,‘ನಾನು ನಿನ್ನನ್ನು ಎಂದಿಗೂ ನೋಡಿಲ್ಲ,’ ಎಂದು ಆ ನೆಲವು ಅವನನ್ನು ಅಲ್ಲಗಳೆಯುವುದು. 19 ಹೀಗೆ ಭಕ್ತಿಹೀನನ ಜೀವವು ಒಣಗಿಹೋಗುವುದು;ಆದರೆ ಆ ಮಣ್ಣಿನ ನೆಲದಿಂದ ಬೇರೆ ಸಸಿಗಳು ಮೊಳೆಯುವುದು. 20 “ದೇವರು ನಿರ್ದೋಷಿಯನ್ನು ತಿರಸ್ಕರಿಸುವುದಿಲ್ಲ;ಕೆಡುಕರ ಕೈಗಳನ್ನು ದೇವರು ಬಲಪಡಿಸುವದಿಲ್ಲ. 21 ದೇವರು ನಿನ್ನ ಬಾಯನ್ನು ನಗೆಯಿಂದ ತುಂಬಿಸುವರು;ನಿನ್ನ ತುಟಿಗಳನ್ನು ಜಯ ಧ್ವನಿಯಿಂದಲೂ ತುಂಬಿಸುವರು. 22 ನಿನ್ನ ಶತ್ರುಗಳಿಗೆ ನಾಚಿಕೆಯಾಗುವುದು;ದುಷ್ಟರ ವಾಸಸ್ಥಳವು ಇಲ್ಲದೆ ಹೋಗುವುದು.”
In Other Versions
Job 8 in the ANGEFD
Job 8 in the ANTPNG2D
Job 8 in the AS21
Job 8 in the BAGH
Job 8 in the BBPNG
Job 8 in the BBT1E
Job 8 in the BDS
Job 8 in the BEV
Job 8 in the BHAD
Job 8 in the BIB
Job 8 in the BLPT
Job 8 in the BNT
Job 8 in the BNTABOOT
Job 8 in the BNTLV
Job 8 in the BOATCB
Job 8 in the BOATCB2
Job 8 in the BOBCV
Job 8 in the BOCNT
Job 8 in the BOECS
Job 8 in the BOGWICC
Job 8 in the BOHCB
Job 8 in the BOHCV
Job 8 in the BOHLNT
Job 8 in the BOHNTLTAL
Job 8 in the BOICB
Job 8 in the BOILNTAP
Job 8 in the BOITCV
Job 8 in the BOKCV
Job 8 in the BOKHWOG
Job 8 in the BOKSSV
Job 8 in the BOLCB
Job 8 in the BOLCB2
Job 8 in the BOMCV
Job 8 in the BONAV
Job 8 in the BONCB
Job 8 in the BONLT
Job 8 in the BONUT2
Job 8 in the BOPLNT
Job 8 in the BOSCB
Job 8 in the BOSNC
Job 8 in the BOTLNT
Job 8 in the BOVCB
Job 8 in the BOYCB
Job 8 in the BPBB
Job 8 in the BPH
Job 8 in the BSB
Job 8 in the CCB
Job 8 in the CUV
Job 8 in the CUVS
Job 8 in the DBT
Job 8 in the DGDNT
Job 8 in the DHNT
Job 8 in the DNT
Job 8 in the ELBE
Job 8 in the EMTV
Job 8 in the ESV
Job 8 in the FBV
Job 8 in the FEB
Job 8 in the GGMNT
Job 8 in the GNT
Job 8 in the HARY
Job 8 in the HNT
Job 8 in the IRVA
Job 8 in the IRVB
Job 8 in the IRVG
Job 8 in the IRVH
Job 8 in the IRVK
Job 8 in the IRVM
Job 8 in the IRVM2
Job 8 in the IRVO
Job 8 in the IRVP
Job 8 in the IRVT
Job 8 in the IRVT2
Job 8 in the IRVU
Job 8 in the ISVN
Job 8 in the JSNT
Job 8 in the KAPI
Job 8 in the KBT1ETNIK
Job 8 in the KBV
Job 8 in the KJV
Job 8 in the KNFD
Job 8 in the LBA
Job 8 in the LBLA
Job 8 in the LNT
Job 8 in the LSV
Job 8 in the MAAL
Job 8 in the MBV
Job 8 in the MBV2
Job 8 in the MHNT
Job 8 in the MKNFD
Job 8 in the MNG
Job 8 in the MNT
Job 8 in the MNT2
Job 8 in the MRS1T
Job 8 in the NAA
Job 8 in the NASB
Job 8 in the NBLA
Job 8 in the NBS
Job 8 in the NBVTP
Job 8 in the NET2
Job 8 in the NIV11
Job 8 in the NNT
Job 8 in the NNT2
Job 8 in the NNT3
Job 8 in the PDDPT
Job 8 in the PFNT
Job 8 in the RMNT
Job 8 in the SBIAS
Job 8 in the SBIBS
Job 8 in the SBIBS2
Job 8 in the SBICS
Job 8 in the SBIDS
Job 8 in the SBIGS
Job 8 in the SBIHS
Job 8 in the SBIIS
Job 8 in the SBIIS2
Job 8 in the SBIIS3
Job 8 in the SBIKS
Job 8 in the SBIKS2
Job 8 in the SBIMS
Job 8 in the SBIOS
Job 8 in the SBIPS
Job 8 in the SBISS
Job 8 in the SBITS
Job 8 in the SBITS2
Job 8 in the SBITS3
Job 8 in the SBITS4
Job 8 in the SBIUS
Job 8 in the SBIVS
Job 8 in the SBT
Job 8 in the SBT1E
Job 8 in the SCHL
Job 8 in the SNT
Job 8 in the SUSU
Job 8 in the SUSU2
Job 8 in the SYNO
Job 8 in the TBIAOTANT
Job 8 in the TBT1E
Job 8 in the TBT1E2
Job 8 in the TFTIP
Job 8 in the TFTU
Job 8 in the TGNTATF3T
Job 8 in the THAI
Job 8 in the TNFD
Job 8 in the TNT
Job 8 in the TNTIK
Job 8 in the TNTIL
Job 8 in the TNTIN
Job 8 in the TNTIP
Job 8 in the TNTIZ
Job 8 in the TOMA
Job 8 in the TTENT
Job 8 in the UBG
Job 8 in the UGV
Job 8 in the UGV2
Job 8 in the UGV3
Job 8 in the VBL
Job 8 in the VDCC
Job 8 in the YALU
Job 8 in the YAPE
Job 8 in the YBVTP
Job 8 in the ZBP