Psalms 43 (BOKCV2)
1 ದೇವರೇ, ನನ್ನನ್ನು ನಿರ್ದೋಷಿ ಎಂದು ನಿರ್ಣಯಿಸಿರಿ,ಭಕ್ತಿಹೀನ ಜನತೆಯ ವಿರೋಧವಾಗಿನನ್ನ ನ್ಯಾಯವನ್ನು ವಾದಿಸಿರಿ.ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದನನ್ನನ್ನು ತಪ್ಪಿಸಿರಿ. 2 ನೀವು ನನ್ನ ದೇವರು, ನನ್ನ ಬಲವಾದ ಕೋಟೆಯು;ನೀವು ಏಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ?ಏಕೆ ನಾನು ಶತ್ರುವಿನ ಬಾಧೆಯಿಂದದುಃಖದಲ್ಲಿ ನಡೆದುಕೊಳ್ಳಬೇಕು? 3 ನಿಮ್ಮ ಬೆಳಕನ್ನೂ ನಿಮ್ಮ ಸತ್ಯವನ್ನೂ ಕಳುಹಿಸಿರಿ;ಅವು ನನ್ನನ್ನು ನೀವು ವಾಸಿಸುವನಿಮ್ಮ ಪರಿಶುದ್ಧ ಪರ್ವತಕ್ಕೆನನ್ನನ್ನು ಬರಮಾಡಲಿ. 4 ದೇವರೇ, ನನ್ನ ದೇವರೇ, ಆಗ ನಿಮ್ಮ ಬಲಿಪೀಠದ ಬಳಿಗೆ ಬರುವೆನು.ನನ್ನ ಸಂತೋಷವೂ ಹರ್ಷವೂಆಗಿರುವ ನಿಮ್ಮ ಬಳಿಗೂ ಬಂದು,ಕಿನ್ನರಿಯಿಂದ ನಿಮ್ಮನ್ನು ಕೊಂಡಾಡುವೆನು. 5 ನನ್ನ ಪ್ರಾಣವೇ, ನೀನು ಏಕೆ ಕುಗ್ಗಿ ಹೋಗಿದ್ದೀ?ನನ್ನಲ್ಲಿ ನೀನು ಏಕೆ ವ್ಯಥೆಪಡುತ್ತೀ?ದೇವರನ್ನು ನಿರೀಕ್ಷಿಸು; ಅವರೇ ನನ್ನ ರಕ್ಷಕರೂ ದೇವರೂ ಆಗಿದ್ದಾರೆ.ಹೌದು, ನಾನುದೇವರನ್ನೇ ಕೊಂಡಾಡುತ್ತಿರುವೆನು.