Romans 13 (BOKCV2)

1 ಪ್ರತಿಯೊಬ್ಬನೂ ಮೇಲಧಿಕಾರಿಗಳಿಗೆ ಅಧೀನನಾಗಿರಬೇಕು, ಏಕೆಂದರೆ ದೇವರು ನೇಮಿಸಿದ ಅಧಿಕಾರದ ಹೊರತು ಬೇರೆ ಯಾವದೂ ಇರುವುದಿಲ್ಲ. ಇರುವ ಅಧಿಕಾರಗಳು ದೇವರಿಂದಲೇ ನೇಮಕಗೊಂಡಿವೆ. 2 ಆದ್ದರಿಂದ ಅಧಿಕಾರಕ್ಕೆ ಎದುರು ಬೀಳುವವನು ದೇವರ ನೇಮಕವನ್ನು ಎದುರಿಸುವವನಾಗಿರುತ್ತಾನೆ. ಹಾಗೆ ಎದುರಿಸುವವರು ತೀರ್ಪಿಗೆ ಗುರಿಯಾಗುವರು. 3 ಕೆಟ್ಟದ್ದನ್ನು ಮಾಡುವವನಿಗೆ ಅಧಿಪತಿಗಳ ಭಯವಿರುವುದೇ ಹೊರತು, ಒಳ್ಳೆಯದನ್ನು ಮಾಡುವವನಿಗೆ ಅಲ್ಲ. ಅಧಿಕಾರಿಗಳಿಗೆ ಭಯಪಡಬಾರದೇ? ಒಳ್ಳೆಯದನ್ನು ಮಾಡು. ಅದರಿಂದ ನಿನಗೆ ಪ್ರಶಂಸೆ ದೊರಕುವುದು. 4 ಏಕೆಂದರೆ, ಅವನು ನಿನಗೆ ಒಳ್ಳೆಯದನ್ನು ಮಾಡುವುದಕ್ಕೋಸ್ಕರ ಇರುವ ದೇವರ ಸೇವಕನಾಗಿರುತ್ತಾನೆ. ಆದರೆ ನೀನು ಕೆಟ್ಟದ್ದನ್ನು ಮಾಡುವವನಾಗಿದ್ದರೆ ಭಯಪಡಬೇಕು. ಏಕೆಂದರೆ ಅವನು ವ್ಯರ್ಥವಾಗಿ ಅಧಿಕಾರವನ್ನು ಪಡೆದಿಲ್ಲ. ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ಅಭ್ಯಾಸ ಮಾಡುವವನಿಗೆ ದಂಡನೆಯನ್ನು ವಿಧಿಸುತ್ತಾನೆ. 5 ಆದ್ದರಿಂದ, ಭಯದ ನಿಮಿತ್ತದಿಂದ ಮಾತ್ರವಲ್ಲ ಮನಸ್ಸಾಕ್ಷಿಯ ನಿಮಿತ್ತವೂ ಅಧಿಕಾರಿಗಳಿಗೆ ಅಧೀನನಾಗಿರುವುದು ಅಗತ್ಯವಾಗಿರುತ್ತದೆ. 6 ಇದರ ನಿಮಿತ್ತವಾಗಿಯೇ ನೀವು ತೆರಿಗೆಯನ್ನು ಪಾವತಿ ಮಾಡುತ್ತೀರಿ. ಏಕೆಂದರೆ, ಅಧಿಕಾರಿಗಳು ಇದರಲ್ಲಿಯೇ ನಿರತರಾಗಿರುವ ದೇವರ ಸೇವಕರಾಗಿರುತ್ತಾರೆ. 7 ನೀವು ಯಾರಿಗೆ ಏನು ಸಲ್ಲಿಸಬೇಕೋ ಅದನ್ನು ಸಲ್ಲಿಸಿರಿ. ತೆರಿಗೆ ಕಟ್ಟಬೇಕಾಗಿದ್ದರೆ ತೆರಿಗೆಯನ್ನು, ಸುಂಕ ಕೊಡಬೇಕಾಗಿದ್ದರೆ ಸುಂಕವನ್ನು, ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು, ಗೌರವ ಸಲ್ಲಿಸಬೇಕಾಗಿದ್ದರೆ ಗೌರವವನ್ನು ಸಲ್ಲಿಸಿರಿ. 8 ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಸಾಲವೇ ಹೊರತು ನಿಮಗೆ ಬೇರೆ ಯಾವ ಸಾಲವೂ ಇರಬಾರದು. ಏಕೆಂದರೆ ಮತ್ತೊಬ್ಬರನ್ನು ಪ್ರೀತಿಸುವವನು ಮೋಶೆಯ ನಿಯಮವನ್ನೇ ನೆರವೇರಿಸಿದ್ದಾನೆ. 9 ಏಕೆಂದರೆ, “ವ್ಯಭಿಚಾರ ಮಾಡಬೇಡ, ಕೊಲೆ ಮಾಡಬೇಡ, ಕದಿಯಬೇಡ, ದುರಾಶೆ ಪಡಬೇಡ,” ಎನ್ನುವ ಹಾಗೂ ಇತರ ಯಾವ ಆಜ್ಞೆಗಳೇ ಇರಲಿ ಅವೆಲ್ಲವೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು,” ಎಂಬ ಒಂದೇ ಮಾತಿನಲ್ಲಿವೆ. 10 ಪ್ರೀತಿಯು ತನ್ನ ನೆರೆಯವನಿಗೆ ಹಾನಿ ಮಾಡುವುದಿಲ್ಲ. ಆದ್ದರಿಂದ ಪ್ರೀತಿಯು ನಿಯಮದ ನೆರವೇರಿಕೆಯಾಗಿರುತ್ತದೆ. 11 ಈಗಿನ ಕಾಲವನ್ನು ತಿಳಿದು ಇದನ್ನೆಲ್ಲಾ ಮಾಡಿರಿ. ನೀವು ನಿದ್ರೆಯಿಂದ ಎಚ್ಚರಗೊಳ್ಳುವ ಗಳಿಗೆಯಾಗಿದೆ. ಏಕೆಂದರೆ, ನಮ್ಮ ರಕ್ಷಣೆಯು ನಾವು ಮೊದಲು ವಿಶ್ವಾಸವಿಟ್ಟಿದಕ್ಕಿಂತ ಈಗ ಹತ್ತಿರವಾಗಿರುತ್ತದೆ. 12 ರಾತ್ರಿಯು ಬಹಳಷ್ಟು ಕಳೆದು ಹಗಲು ಸಮೀಪಿಸಿದೆ. ಆದ್ದರಿಂದ ನಾವು ಕತ್ತಲೆಯ ಕೃತ್ಯಗಳನ್ನು ಎಸೆದು ಬೆಳಕಿನ ಆಯುಧಗಳನ್ನು ಧರಿಸಿಕೊಳ್ಳೋಣ. 13 ಪಕ್ಷತನ ಕುಡಿಕತನಗಳಲ್ಲಾಗಲಿ, ಕಾಮವಿಲಾಸ ನಿರ್ಲಜ್ಯ ಕೃತ್ಯಗಳಲ್ಲಾಗಲಿ, ಮತ್ಸರಗಳಲ್ಲಾಗಲಿ ನಿರತರಾಗಿರದೆ ಹಗಲಿನಲ್ಲಿರುವವರಂತೆ ಸಭ್ಯತೆಯಿಂದ ನಡೆದುಕೊಳ್ಳೋಣ. 14 ಕರ್ತ ಆಗಿರುವ ಯೇಸು ಕ್ರಿಸ್ತರನ್ನು ಧರಿಸಿಕೊಳ್ಳಿರಿ. ದೈಹಿಕ ಆಶೆಗಳನ್ನು ನೆರವೇರಿಸಲು ಯೋಚಿಸಬೇಡಿರಿ.

In Other Versions

Romans 13 in the ANGEFD

Romans 13 in the ANTPNG2D

Romans 13 in the AS21

Romans 13 in the BAGH

Romans 13 in the BBPNG

Romans 13 in the BBT1E

Romans 13 in the BDS

Romans 13 in the BEV

Romans 13 in the BHAD

Romans 13 in the BIB

Romans 13 in the BLPT

Romans 13 in the BNT

Romans 13 in the BNTABOOT

Romans 13 in the BNTLV

Romans 13 in the BOATCB

Romans 13 in the BOATCB2

Romans 13 in the BOBCV

Romans 13 in the BOCNT

Romans 13 in the BOECS

Romans 13 in the BOGWICC

Romans 13 in the BOHCB

Romans 13 in the BOHCV

Romans 13 in the BOHLNT

Romans 13 in the BOHNTLTAL

Romans 13 in the BOICB

Romans 13 in the BOILNTAP

Romans 13 in the BOITCV

Romans 13 in the BOKCV

Romans 13 in the BOKHWOG

Romans 13 in the BOKSSV

Romans 13 in the BOLCB

Romans 13 in the BOLCB2

Romans 13 in the BOMCV

Romans 13 in the BONAV

Romans 13 in the BONCB

Romans 13 in the BONLT

Romans 13 in the BONUT2

Romans 13 in the BOPLNT

Romans 13 in the BOSCB

Romans 13 in the BOSNC

Romans 13 in the BOTLNT

Romans 13 in the BOVCB

Romans 13 in the BOYCB

Romans 13 in the BPBB

Romans 13 in the BPH

Romans 13 in the BSB

Romans 13 in the CCB

Romans 13 in the CUV

Romans 13 in the CUVS

Romans 13 in the DBT

Romans 13 in the DGDNT

Romans 13 in the DHNT

Romans 13 in the DNT

Romans 13 in the ELBE

Romans 13 in the EMTV

Romans 13 in the ESV

Romans 13 in the FBV

Romans 13 in the FEB

Romans 13 in the GGMNT

Romans 13 in the GNT

Romans 13 in the HARY

Romans 13 in the HNT

Romans 13 in the IRVA

Romans 13 in the IRVB

Romans 13 in the IRVG

Romans 13 in the IRVH

Romans 13 in the IRVK

Romans 13 in the IRVM

Romans 13 in the IRVM2

Romans 13 in the IRVO

Romans 13 in the IRVP

Romans 13 in the IRVT

Romans 13 in the IRVT2

Romans 13 in the IRVU

Romans 13 in the ISVN

Romans 13 in the JSNT

Romans 13 in the KAPI

Romans 13 in the KBT1ETNIK

Romans 13 in the KBV

Romans 13 in the KJV

Romans 13 in the KNFD

Romans 13 in the LBA

Romans 13 in the LBLA

Romans 13 in the LNT

Romans 13 in the LSV

Romans 13 in the MAAL

Romans 13 in the MBV

Romans 13 in the MBV2

Romans 13 in the MHNT

Romans 13 in the MKNFD

Romans 13 in the MNG

Romans 13 in the MNT

Romans 13 in the MNT2

Romans 13 in the MRS1T

Romans 13 in the NAA

Romans 13 in the NASB

Romans 13 in the NBLA

Romans 13 in the NBS

Romans 13 in the NBVTP

Romans 13 in the NET2

Romans 13 in the NIV11

Romans 13 in the NNT

Romans 13 in the NNT2

Romans 13 in the NNT3

Romans 13 in the PDDPT

Romans 13 in the PFNT

Romans 13 in the RMNT

Romans 13 in the SBIAS

Romans 13 in the SBIBS

Romans 13 in the SBIBS2

Romans 13 in the SBICS

Romans 13 in the SBIDS

Romans 13 in the SBIGS

Romans 13 in the SBIHS

Romans 13 in the SBIIS

Romans 13 in the SBIIS2

Romans 13 in the SBIIS3

Romans 13 in the SBIKS

Romans 13 in the SBIKS2

Romans 13 in the SBIMS

Romans 13 in the SBIOS

Romans 13 in the SBIPS

Romans 13 in the SBISS

Romans 13 in the SBITS

Romans 13 in the SBITS2

Romans 13 in the SBITS3

Romans 13 in the SBITS4

Romans 13 in the SBIUS

Romans 13 in the SBIVS

Romans 13 in the SBT

Romans 13 in the SBT1E

Romans 13 in the SCHL

Romans 13 in the SNT

Romans 13 in the SUSU

Romans 13 in the SUSU2

Romans 13 in the SYNO

Romans 13 in the TBIAOTANT

Romans 13 in the TBT1E

Romans 13 in the TBT1E2

Romans 13 in the TFTIP

Romans 13 in the TFTU

Romans 13 in the TGNTATF3T

Romans 13 in the THAI

Romans 13 in the TNFD

Romans 13 in the TNT

Romans 13 in the TNTIK

Romans 13 in the TNTIL

Romans 13 in the TNTIN

Romans 13 in the TNTIP

Romans 13 in the TNTIZ

Romans 13 in the TOMA

Romans 13 in the TTENT

Romans 13 in the UBG

Romans 13 in the UGV

Romans 13 in the UGV2

Romans 13 in the UGV3

Romans 13 in the VBL

Romans 13 in the VDCC

Romans 13 in the YALU

Romans 13 in the YAPE

Romans 13 in the YBVTP

Romans 13 in the ZBP