1 Samuel 24 (IRVK)
1 ಸೌಲನು ಫಿಲಿಷ್ಟಿಯರನ್ನು ಓಡಿಸಿ ಹಿಂದಿರುಗಿದಾಗ ದಾವೀದನು ಏಂಗೆದಿಯ ಅರಣ್ಯದಲ್ಲಿ ಇದ್ದಾನೆಂದು ಅವನಿಗೆ ತಿಳಿದುಬಂದಿತು. 2 ಆಗ ಅವನು ಎಲ್ಲಾ ಇಸ್ರಾಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹುಡುಕುವುದಕ್ಕೋಸ್ಕರ ಹೊರಟನು. 3 ಅವನು ಮಾರ್ಗದಲ್ಲಿ ಕುರಿಹಟ್ಟಿಗಳ ಬಳಿಯಲ್ಲಿ ಒಂದು ಗವಿಯನ್ನು ಕಂಡು ಶೌಚಕ್ಕೋಸ್ಕರ ಅದರೊಳಗೆ ಪ್ರವೇಶಿಸಿದನು. ದಾವೀದನೂ ಅವನ ಜನರೂ ಅದೇ ಗವಿಯ ಹಿಂಭಾಗದಲ್ಲಿ ಅಡಗಿಕೊಂಡಿದ್ದರು. 4 ಜನರು ದಾವೀದನಿಗೆ “ನಿನ್ನ ಶತ್ರುವನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು, ಆಗ ನೀನು ಅವನನ್ನು ಮನಸ್ಸಿಗೆ ಬಂದಂತೆ ನಡೆಸಬಹುದು ಎಂದು ಯೆಹೋವನು ನಿನಗೆ ಹೇಳಿದ ಮಾತು ನೆರವೇರುವ ದಿನ ಇದೇ” ಅಂದಾಗ ಅವನೆದ್ದು ಮೆಲ್ಲನೆ ಹೋಗಿ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡನು. 5 ಅನಂತರ ಸೌಲನ ನಿಲುವಂಗಿಯ ತುದಿಯನ್ನು ಕತ್ತರಿಸಿದ್ದಕ್ಕಾಗಿ ಅವನ ಮನಸ್ಸಾಕ್ಷಿಯು ಅವನನ್ನು ಚುಚ್ಚತೊಡಗಿತು. 6 ಅವನು ತನ್ನ ಜನರಿಗೆ, “ಅವನು ಯೆಹೋವನಿಂದ ಅಭಿಷೇಕಿಸಲ್ಪಟ್ಟವನೂ, ನನ್ನ ಒಡೆಯನೂ ಆಗಿದ್ದಾನೆ. ನಾನು ನಿಮ್ಮ ಮಾತು ಕೇಳಿ ಯೆಹೋವನ ಅಭಿಷಿಕ್ತನಿಗೆ ವಿರೋಧವಾಗಿ ಕೈಯೆತ್ತದಂತೆ ಯೆಹೋವನೇ ನನಗೆ ಅಡ್ಡಿ ಮಾಡಲಿ” ಎಂದು ಹೇಳಿದನು 7 ಈ ಮಾತುಗಳಿಂದ ಅವನು ಸೌಲನಿಗೆ ವಿರೋಧವಾಗಿ ಏಳದಂತೆ ತನ್ನ ಜನರನ್ನು ತಡೆದನು. ಸೌಲನು ಗವಿಯಿಂದ ಹೊರಗೆ ಬಂದು ಸ್ವಲ್ಪ ಮುಂದೆ ಹೋದ ಮೇಲೆ 8 ದಾವೀದನೂ ಹೊರಗೆ ಬಂದು, “ಅರಸನೇ ನನ್ನ ಒಡೆಯನೇ” ಎಂದು ಅವನನ್ನು ಕೂಗಿದನು. ಸೌಲನು ಹಿಂದಿರುಗಿ ನೋಡಲು ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿ, 9 “ದಾವೀದನು ನಿನಗೆ ಕೇಡುಮಾಡಬೇಕೆಂದಿರುತ್ತಾನೆಂದು ಹೇಳುವವರ ಮಾತಿಗೆ ನೀನೇಕೆ ಕಿವಿಗೊಡುತ್ತೀ? 10 ಈ ಹೊತ್ತು ಯೆಹೋವನು ಗವಿಯಲ್ಲಿ ನಿನ್ನನ್ನು ನನ್ನ ಕೈಗೆ ಒಪ್ಪಿಸಿಕೊಟ್ಟಿದ್ದಾನೆಂಬುದು ಈಗ ನಿನಗೆ ಗೊತ್ತಾಯಿತಲ್ಲವೋ? ನಿನ್ನನ್ನು ಕೊಂದುಬಿಡಬೇಕೆಂದು ಕೆಲವರು ನನಗೆ ಹೇಳಿದರು. ಆದರೆ ನಾನು ಅವರಿಗೆ, ‘ಯೆಹೋವನ ಅಭಿಷಿಕ್ತನಾದ ನನ್ನ ಒಡೆಯನ ಮೇಲೆ ಕೈಹಾಕುವುದಿಲ್ಲ’ ಎಂದು ಹೇಳಿ ನಿನ್ನನ್ನು ಉಳಿಸಿದೆನು. 11 ನನ್ನ ತಂದೆಯೇ, ಇಗೋ ನೋಡು, ನನ್ನ ಕೈಯಲ್ಲಿ ನಿನ್ನ ನಿಲುವಂಗಿಯ ತುಂಡು ಇದೆ. ನಾನು ನಿನ್ನನ್ನು ಕೊಲ್ಲದೆ, ನಿನ್ನ ನಿಲುವಂಗಿಯ ತುದಿಯನ್ನು ಕತ್ತರಿಸಿಕೊಂಡೆನಷ್ಟೇ ಇದರಿಂದ ನನ್ನಲ್ಲಿ ಯಾವ ದೋಷವೂ ಅಪರಾಧವೂ ಇರುವುದಿಲ್ಲ. ನಾನು ನಿನಗೆ ವಿರೋಧವಾಗಿ ದ್ರೋಹಮಾಡಲಿಲ್ಲ ಎಂದು ತಿಳಿದುಕೋ. ಆದರೂ ನೀನು ನನ್ನ ಪ್ರಾಣಕ್ಕೆ ಹೊಂಚು ಹಾಕುತ್ತಿರುವಿಯಲ್ಲಾ. 12 ಯೆಹೋವನೇ ನಮ್ಮಿಬ್ಬರ ಮಧ್ಯೆ ವ್ಯಾಜ್ಯವನ್ನು ತೀರಿಸಲಿ. ಆತನೇ ನನಗೋಸ್ಕರ ನಿನಗೆ ಮುಯ್ಯಿ ತೀರಿಸಲಿ. ನಾನಂತೂ ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ. 13 ‘ಕೆಟ್ಟವರಿಂದಲೇ ಕೆಡುಕು’ ಎಂಬುದಾಗಿ ಹಿರಿಯರ ಗಾದೆಯುಂಟಷ್ಟೆ. ನಾನು ನಿನಗೆ ವಿರೋಧವಾಗಿ ಕೈಯೆತ್ತುವುದಿಲ್ಲ. 14 ಇಸ್ರಾಯೇಲರ ಅರಸನೇ ಯಾರನ್ನು ಹಿಂಬಾಲಿಸಿ ಹೊರಟಿರುವೇ? ಯಾರನ್ನು ಹಿಡಿಯಬೇಕೆಂದಿರುತ್ತೀ? ಸತ್ತ ನಾಯಿಯನ್ನೋ? ಒಂದು ಬಡ ನೊಣವನ್ನೋ?. 15 ಯೆಹೋವನು ನ್ಯಾಯಾಧಿಪತಿಯಾಗಿ ನಮ್ಮಿಬ್ಬರ ವ್ಯಾಜ್ಯವನ್ನು ತೀರಿಸಲಿ. ಆತನೇ ನೋಡಿ ನನಗೋಸ್ಕರ ವಾದಿಸಿ ನನ್ನನ್ನು ನಿನ್ನ ಕೈಯಿಂದ ತಪ್ಪಿಸಲಿ” ಎಂದು ಹೇಳಿದನು. 16 ದಾವೀದನ ಮಾತುಗಳು ಮುಗಿದ ನಂತರ ಸೌಲನು, “ದಾವೀದನೇ, ನನ್ನ ಮಗನೇ, ಇದು ನಿನ್ನ ಸ್ವರವೋ?” ಅಂದು ಗಟ್ಟಿಯಾಗಿ ಅತ್ತನು. 17 ಇದಲ್ಲದೆ ಅವನು ದಾವೀದನಿಗೆ, “ನೀನು ನನಗಿಂತ ನೀತಿವಂತನೂ. ನಾನು ನಿನಗೆ ಕೇಡುಮಾಡಿದರೂ ನೀನು ನನಗೆ ಒಳ್ಳೆಯದನ್ನೇ ಮಾಡಿದಿ. 18 ಯೆಹೋವನು ನನ್ನನ್ನು ನಿನ್ನ ಕೈಗೆ ಒಪ್ಪಿಸಿಕೊಟ್ಟರೂ ನೀನು ನನ್ನನ್ನು ಕೊಲ್ಲಲಿಲ್ಲ. ಇದರಿಂದ ನೀನು ನನಗೆ ಹಿತವನ್ನೇ ಮಾಡುವಂಥವನೆಂಬುದು ಈ ಹೊತ್ತು ಪ್ರಕಟವಾಯಿತು. 19 ಯಾವನಾದರೂ ತನ್ನ ಕೈಗೆ ಸಿಕ್ಕಿದ ವೈರಿಯನ್ನು ಸುಕ್ಷೇಮದಿಂದ ಕಳುಹಿಸಿಬಿಡುವನೋ? ನೀನು ಈ ಹೊತ್ತು ನನಗೆ ಉಪಕಾರಮಾಡಿದ್ದಕ್ಕಾಗಿ ಯೆಹೋವನು ನಿನಗೆ ಉಪಕಾರ ಮಾಡಲಿ. 20 ಕೇಳು, ನೀನು ಹೇಗೂ ಅರಸನಾಗುವಿ ಎಂದೂ ಇಸ್ರಾಯೇಲ್ ರಾಜ್ಯವು ನಿನ್ನಿಂದ ಸ್ಥಿರವಾಗುವುದೆಂದು ಬಲ್ಲೆನು. 21 ಹೀಗಿರುವುದರಿಂದ ನೀನು ನನ್ನ ಸಂತಾನವನ್ನು ನಿರ್ಮೂಲಮಾಡುವುದಿಲ್ಲವೆಂದೂ, ನಮ್ಮ ಕುಲದಿಂದ ನನ್ನ ಹೆಸರನ್ನು ತೆಗೆದುಹಾಕುವುದಿಲ್ಲವೆಂದೂ ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡು” ಎಂದು ಬೇಡಿಕೊಂಡ ಹಾಗೆ ದಾವೀದನು ಪ್ರಮಾಣಮಾಡಿದನು. 22 ಅನಂತರ ಸೌಲನು ತನ್ನ ಮನೆಗೆ ಹೊರಟನು. ದಾವೀದನು ತನ್ನ ಜನರೊಡನೆ ಆಶ್ರಯಗಿರಿಗೆ ಹೋದನು.
In Other Versions
1 Samuel 24 in the ANGEFD
1 Samuel 24 in the ANTPNG2D
1 Samuel 24 in the AS21
1 Samuel 24 in the BAGH
1 Samuel 24 in the BBPNG
1 Samuel 24 in the BBT1E
1 Samuel 24 in the BDS
1 Samuel 24 in the BEV
1 Samuel 24 in the BHAD
1 Samuel 24 in the BIB
1 Samuel 24 in the BLPT
1 Samuel 24 in the BNT
1 Samuel 24 in the BNTABOOT
1 Samuel 24 in the BNTLV
1 Samuel 24 in the BOATCB
1 Samuel 24 in the BOATCB2
1 Samuel 24 in the BOBCV
1 Samuel 24 in the BOCNT
1 Samuel 24 in the BOECS
1 Samuel 24 in the BOGWICC
1 Samuel 24 in the BOHCB
1 Samuel 24 in the BOHCV
1 Samuel 24 in the BOHLNT
1 Samuel 24 in the BOHNTLTAL
1 Samuel 24 in the BOICB
1 Samuel 24 in the BOILNTAP
1 Samuel 24 in the BOITCV
1 Samuel 24 in the BOKCV
1 Samuel 24 in the BOKCV2
1 Samuel 24 in the BOKHWOG
1 Samuel 24 in the BOKSSV
1 Samuel 24 in the BOLCB
1 Samuel 24 in the BOLCB2
1 Samuel 24 in the BOMCV
1 Samuel 24 in the BONAV
1 Samuel 24 in the BONCB
1 Samuel 24 in the BONLT
1 Samuel 24 in the BONUT2
1 Samuel 24 in the BOPLNT
1 Samuel 24 in the BOSCB
1 Samuel 24 in the BOSNC
1 Samuel 24 in the BOTLNT
1 Samuel 24 in the BOVCB
1 Samuel 24 in the BOYCB
1 Samuel 24 in the BPBB
1 Samuel 24 in the BPH
1 Samuel 24 in the BSB
1 Samuel 24 in the CCB
1 Samuel 24 in the CUV
1 Samuel 24 in the CUVS
1 Samuel 24 in the DBT
1 Samuel 24 in the DGDNT
1 Samuel 24 in the DHNT
1 Samuel 24 in the DNT
1 Samuel 24 in the ELBE
1 Samuel 24 in the EMTV
1 Samuel 24 in the ESV
1 Samuel 24 in the FBV
1 Samuel 24 in the FEB
1 Samuel 24 in the GGMNT
1 Samuel 24 in the GNT
1 Samuel 24 in the HARY
1 Samuel 24 in the HNT
1 Samuel 24 in the IRVA
1 Samuel 24 in the IRVB
1 Samuel 24 in the IRVG
1 Samuel 24 in the IRVH
1 Samuel 24 in the IRVM
1 Samuel 24 in the IRVM2
1 Samuel 24 in the IRVO
1 Samuel 24 in the IRVP
1 Samuel 24 in the IRVT
1 Samuel 24 in the IRVT2
1 Samuel 24 in the IRVU
1 Samuel 24 in the ISVN
1 Samuel 24 in the JSNT
1 Samuel 24 in the KAPI
1 Samuel 24 in the KBT1ETNIK
1 Samuel 24 in the KBV
1 Samuel 24 in the KJV
1 Samuel 24 in the KNFD
1 Samuel 24 in the LBA
1 Samuel 24 in the LBLA
1 Samuel 24 in the LNT
1 Samuel 24 in the LSV
1 Samuel 24 in the MAAL
1 Samuel 24 in the MBV
1 Samuel 24 in the MBV2
1 Samuel 24 in the MHNT
1 Samuel 24 in the MKNFD
1 Samuel 24 in the MNG
1 Samuel 24 in the MNT
1 Samuel 24 in the MNT2
1 Samuel 24 in the MRS1T
1 Samuel 24 in the NAA
1 Samuel 24 in the NASB
1 Samuel 24 in the NBLA
1 Samuel 24 in the NBS
1 Samuel 24 in the NBVTP
1 Samuel 24 in the NET2
1 Samuel 24 in the NIV11
1 Samuel 24 in the NNT
1 Samuel 24 in the NNT2
1 Samuel 24 in the NNT3
1 Samuel 24 in the PDDPT
1 Samuel 24 in the PFNT
1 Samuel 24 in the RMNT
1 Samuel 24 in the SBIAS
1 Samuel 24 in the SBIBS
1 Samuel 24 in the SBIBS2
1 Samuel 24 in the SBICS
1 Samuel 24 in the SBIDS
1 Samuel 24 in the SBIGS
1 Samuel 24 in the SBIHS
1 Samuel 24 in the SBIIS
1 Samuel 24 in the SBIIS2
1 Samuel 24 in the SBIIS3
1 Samuel 24 in the SBIKS
1 Samuel 24 in the SBIKS2
1 Samuel 24 in the SBIMS
1 Samuel 24 in the SBIOS
1 Samuel 24 in the SBIPS
1 Samuel 24 in the SBISS
1 Samuel 24 in the SBITS
1 Samuel 24 in the SBITS2
1 Samuel 24 in the SBITS3
1 Samuel 24 in the SBITS4
1 Samuel 24 in the SBIUS
1 Samuel 24 in the SBIVS
1 Samuel 24 in the SBT
1 Samuel 24 in the SBT1E
1 Samuel 24 in the SCHL
1 Samuel 24 in the SNT
1 Samuel 24 in the SUSU
1 Samuel 24 in the SUSU2
1 Samuel 24 in the SYNO
1 Samuel 24 in the TBIAOTANT
1 Samuel 24 in the TBT1E
1 Samuel 24 in the TBT1E2
1 Samuel 24 in the TFTIP
1 Samuel 24 in the TFTU
1 Samuel 24 in the TGNTATF3T
1 Samuel 24 in the THAI
1 Samuel 24 in the TNFD
1 Samuel 24 in the TNT
1 Samuel 24 in the TNTIK
1 Samuel 24 in the TNTIL
1 Samuel 24 in the TNTIN
1 Samuel 24 in the TNTIP
1 Samuel 24 in the TNTIZ
1 Samuel 24 in the TOMA
1 Samuel 24 in the TTENT
1 Samuel 24 in the UBG
1 Samuel 24 in the UGV
1 Samuel 24 in the UGV2
1 Samuel 24 in the UGV3
1 Samuel 24 in the VBL
1 Samuel 24 in the VDCC
1 Samuel 24 in the YALU
1 Samuel 24 in the YAPE
1 Samuel 24 in the YBVTP
1 Samuel 24 in the ZBP