1 Kings 11 (BOKCV2)

1 ಅರಸನಾದ ಸೊಲೊಮೋನನು ಫರೋಹನ ಮಗಳನ್ನಲ್ಲದೆ ಮೋವಾಬ್ಯರ, ಅಮ್ಮೋನ್ಯರ, ಎದೋಮ್ಯರ, ಸೀದೋನ್ಯರ, ಹಿತ್ತಿಯರ ಸ್ತ್ರೀಯರನ್ನೂ ಪ್ರೀತಿಮಾಡಿದನು. 2 ಈ ಜನಾಂಗಗಳನ್ನು ಕುರಿತು ಯೆಹೋವ ದೇವರು ಇಸ್ರಾಯೇಲರಿಗೆ, “ನೀವು ಅವರ ಬಳಿಗೆ ಪ್ರವೇಶಿಸಬಾರದು. ಅವರು ನಿಶ್ಚಯವಾಗಿ ನಿಮ್ಮ ಹೃದಯವನ್ನು ತಮ್ಮ ದೇವರುಗಳ ಕಡೆಗೆ ತಿರುಗಿಸುವರು,” ಎಂದು ಹೇಳಿದ್ದರು. ಆದರೆ ಸೊಲೊಮೋನನು ಪ್ರೀತಿಯಲ್ಲಿ ಇವರನ್ನು ಅಂಟಿಕೊಂಡನು. 3 ಅವನಿಗೆ ರಾಜಪುತ್ರಿಯರಾದ ಏಳು ನೂರು ಮಂದಿ ಪತ್ನಿಯರೂ, ಮುನ್ನೂರು ಮಂದಿ ಉಪಪತ್ನಿಯರೂ ಇದ್ದರು. ಅವನ ಪತ್ನಿಯರು ಅವನನ್ನು ದಾರಿ ತಪ್ಪಿಸಿದರು. 4 ಸೊಲೊಮೋನನು ಮುದುಕನಾದ ಕಾಲದಲ್ಲಿ ಅವನ ಪತ್ನಿಯರು ಅನ್ಯದೇವರುಗಳ ಕಡೆಗೆ ಅವನ ಹೃದಯವನ್ನು ತಿರುಗಿಸಿದರು. ಅವನ ಹೃದಯವು ತನ್ನ ತಂದೆ ದಾವೀದನ ಹೃದಯದ ಹಾಗೆ ತನ್ನ ದೇವರಾದ ಯೆಹೋವ ದೇವರ ಸಂಗಡ ಪರಿಪೂರ್ಣವಾಗಿ ಇರಲಿಲ್ಲ. 5 ಸೊಲೊಮೋನನು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಅಮ್ಮೋನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾಲಿಸಿದನು. 6 ಸೊಲೊಮೋನನು ತನ್ನ ತಂದೆ ದಾವೀದನ ಹಾಗೆ ಯೆಹೋವ ದೇವರನ್ನು ಪೂರ್ಣವಾಗಿ ಹಿಂಬಾಲಿಸದೆ ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. 7 ಆಗ ಸೊಲೊಮೋನನು ಮೋವಾಬಿನ ಅಸಹ್ಯಕರವಾದ ಕೆಮೋಷಿಗೋಸ್ಕರವೂ, ಅಮ್ಮೋನ್ಯರ ಅಸಹ್ಯಕರವಾದ ಮೋಲೆಕನಿಗೋಸ್ಕರವೂ ಯೆರೂಸಲೇಮಿನ ಪೂರ್ವದಲ್ಲಿರುವ ಬೆಟ್ಟದಲ್ಲಿ ಎತ್ತರವಾದ ಸ್ಥಳವನ್ನು ಕಟ್ಟಿಸಿದನು. 8 ಇದೇ ಪ್ರಕಾರ ತಮ್ಮ ದೇವರುಗಳಿಗೆ ಧೂಪವನ್ನು ಸುಟ್ಟು, ಬಲಿಗಳನ್ನು ಅರ್ಪಿಸುವ ತನ್ನ ಅನ್ಯಜಾತಿಯ ಸಮಸ್ತ ಪತ್ನಿಯರಿಗೋಸ್ಕರವೂ ಕಟ್ಟಿಸಿದನು. 9 ಇಸ್ರಾಯೇಲಿನ ದೇವರಾದ ಯೆಹೋವ ದೇವರು ಸೊಲೊಮೋನನಿಗೆ ಎರಡು ಸಾರಿ ಪ್ರತ್ಯಕ್ಷರಾಗಿದ್ದರೂ, ಅವನ ಹೃದಯವು ದೇವರಿಂದ ತಿರುಗಿ ಹೋದುದರಿಂದ, ಅವನ ಮೇಲೆ ಕೋಪಿಸಿಕೊಂಡಿದ್ದರು. 10 ಅನ್ಯದೇವರುಗಳ ಹಿಂದೆ ಹೋಗಬಾರದೆಂದು ಅವರು ಇದನ್ನು ಕುರಿತು ಅವನಿಗೆ ಆಜ್ಞಾಪಿಸಿದ್ದರೂ, ಅವನು, ಯೆಹೋವ ದೇವರು ಆಜ್ಞಾಪಿಸಿದ್ದನ್ನು ಕೈಗೊಳ್ಳದೆ ಹೋದನು. 11 ಆದಕಾರಣ ಯೆಹೋವ ದೇವರು ಸೊಲೊಮೋನನಿಗೆ, “ನೀನು ಹೀಗೆ ನಡೆದು ನಾನು ನಿನಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನೂ, ನನ್ನ ಕಟ್ಟಳೆಗಳನ್ನೂ ಕೈಗೊಳ್ಳದೆ ಹೋದುದರಿಂದ ನಿಶ್ಚಯವಾಗಿ ನಾನು ರಾಜ್ಯವನ್ನು ನಿನ್ನಿಂದ ಕಸಿದುಕೊಂಡು ಅದನ್ನು ನಿನ್ನ ಸೇವಕನಿಗೆ ಕೊಡುವೆನು. 12 ಆದರೆ ನಿನ್ನ ತಂದೆ ದಾವೀದನಿಗೋಸ್ಕರ ನಿನ್ನ ಕಾಲದಲ್ಲಿ ನಾನು ಇದನ್ನು ಮಾಡದೆ ನಿನ್ನ ಮಗನ ಕೈಯೊಳಗಿಂದ ಅದನ್ನು ಕಸಿದುಕೊಳ್ಳುವೆನು. 13 ಇದಲ್ಲದೆ ರಾಜ್ಯವನ್ನೆಲ್ಲಾ ನಾನು ಕಸಿದುಕೊಳ್ಳದೆ ನನ್ನ ಸೇವಕನಾದ ದಾವೀದನಿಗೋಸ್ಕರವಾಗಿಯೂ, ನಾನು ಆಯ್ದುಕೊಂಡ ಯೆರೂಸಲೇಮಿಗೋಸ್ಕರವೂ ನಿನ್ನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು,” ಎಂದರು. 14 ಆಗ ಯೆಹೋವ ದೇವರು ಎದೋಮ್ಯನಾದ ಹದದನನ್ನು ಸೊಲೊಮೋನನಿಗೆ ಎದುರಾಳಿಯಾಗಿ ಎಬ್ಬಿಸಿದರು. 15 ದಾವೀದನು ಎದೋಮಿನಲ್ಲಿರುವಾಗ ಸೇನಾಧಿಪತಿಯಾದ ಯೋವಾಬನು ಎದೋಮಿನ ಗಂಡಸರೆಲ್ಲರನ್ನು ಕೊಂದುಹಾಕಿದನು. ತರುವಾಯ ಇಸ್ರಾಯೇಲರಲ್ಲಿ ಹತರಾದವರನ್ನು ಸಮಾಧಿಮಾಡಲು ಹೋದನು. 16 ಯೋವಾಬನು ಎದೋಮಿನಲ್ಲಿರುವ ಗಂಡಸರೆಲ್ಲರನ್ನು ಸಂಹರಿಸುವವರೆಗೂ ಇಸ್ರಾಯೇಲಿನ ಸಮಸ್ತ ಸೈನ್ಯದ ಸಂಗಡ ಅಲ್ಲಿ ಆರು ತಿಂಗಳು ಇದ್ದನು. 17 ಆದರೆ ಆ ಸಮಯದಲ್ಲಿ ಇನ್ನೂ ಬಾಲಕನಾದ ಹದಾದನು ತನ್ನ ತಂದೆಯ ಕೆಲವು ಸೇವಕರಾದ ಎದೋಮ್ಯರ ಸಂಗಡ ಈಜಿಪ್ಟಿಗೆ ಓಡಿಹೋಗಬೇಕೆಂದು ಹೊರಟನು. 18 ಮಿದ್ಯಾನನ್ನು ಬಿಟ್ಟು ಪಾರಾನಿಗೆ ಬಂದು ಅಲ್ಲಿಂದ ಮನುಷ್ಯರನ್ನು ತೆಗೆದುಕೊಂಡು ಈಜಿಪ್ಟಿನಲ್ಲಿ ಪ್ರವೇಶಿಸಿ ಈಜಿಪ್ಟಿನ ಅರಸನಾದ ಫರೋಹನ ಬಳಿಗೆ ಬಂದರು. ಫರೋಹನು ಹದದನಿಗೆ ಮನೆಯನ್ನು, ಆಹಾರವನ್ನು ಮತ್ತು ಭೂಮಿಯನ್ನು ಕೊಟ್ಟನು. 19 ಇದಲ್ಲದೆ ಫರೋಹನು ಹದದನನ್ನು ಬಹಳವಾಗಿ ಮೆಚ್ಚಿಕೊಂಡನು. ಫರೋಹನು ತನ್ನ ಹೆಂಡತಿಯೂ ರಾಣಿಯೂ ಆದ ತಪ್ನೆಸ್ ಎಂಬವಳ ಸಹೋದರಿಯನ್ನು ಅವನಿಗೆ ಮದುವೆ ಮಾಡಿಕೊಟ್ಟನು. 20 ತಪ್ನೆಸ್ ಸಹೋದರಿಯು ಅವನಿಗೆ ಗೆನುಬತ್ ಎಂಬ ಮಗನನ್ನು ಹೆತ್ತಳು. ತಪ್ನೆಸ್ ಇವನನ್ನು ಫರೋಹನ ಮನೆಯಲ್ಲಿ ಬೆಳೆಸಿದಳು. ಗೆನುಬತನು ಫರೋಹನ ಮನೆಯಲ್ಲಿ ಫರೋಹನ ಮಕ್ಕಳ ಸಂಗಡ ಇದ್ದನು. 21 ಆದರೆ ದಾವೀದನು ಮರಣ ಹೊಂದಿದನೆಂದೂ, ಸೇನಾಧಿಪತಿಯಾದ ಯೋವಾಬನು ಸತ್ತು ಹೋದನೆಂದೂ, ಹದದನು ಈಜಿಪ್ಟಿನಲ್ಲಿ ಕೇಳಿದಾಗ, ಹದದನು ಫರೋಹನಿಗೆ, “ನಾನು ನನ್ನ ದೇಶಕ್ಕೆ ಹೋಗುವಹಾಗೆ ನನ್ನನ್ನು ಕಳುಹಿಸು,” ಎಂದನು. 22 ಫರೋಹನು ಅವನಿಗೆ, “ನೀನು ನಿನ್ನ ದೇಶಕ್ಕೆ ಹೋಗಬೇಕೆನ್ನುವ ಹಾಗೆ ನಿನಗೆ ನನ್ನ ಸಂಗಡ ಇರುವಾಗ ಏನು ಕೊರತೆಯಾಯಿತು?” ಎಂದು ಕೇಳಿದನು.ಅವನು, “ಏನೂ ಇಲ್ಲ, ಆದರೆ ನಾನು ಅಲ್ಲಿಗೆ ಹೋಗಲು ಅಪ್ಪಣೆಯಾಗಬೇಕು,” ಎಂದನು. 23 ಇದಲ್ಲದೆ ದೇವರು ಮತ್ತೊಬ್ಬ ಶತ್ರುವನ್ನು ಸೊಲೊಮೋನನ ಮೇಲೆ ಎಬ್ಬಿಸಿದರು. ಅವನು ಚೋಬದ ಅರಸನಾದ ತನ್ನ ಯಜಮಾನನಾಗಿರುವ ಹದದೆಜೆರನನ್ನು ಬಿಟ್ಟು ಓಡಿ ಹೋದ ಎಲ್ಯಾದಾವನ ಮಗನಾದ ರೆಜೋನನು. 24 ದಾವೀದನು ಚೋಬದ ಜನರನ್ನು ಸಂಹರಿಸುವಾಗ ಇವನು ಜನರನ್ನು ತನ್ನ ಬಳಿಯಲ್ಲಿ ಕೂಡಿಸಿಕೊಂಡು ಒಂದು ಗುಂಪಿಗೆ ಅಧಿಪತಿಯಾಗಿ ಅವರ ಸಂಗಡ ದಮಸ್ಕಕ್ಕೆ ಹೋಗಿ ಅಲ್ಲಿ ವಾಸಿಸಿ, ಅರಸನಾದನು. 25 ಹದದನು ಮಾಡಿದ ಕೇಡಿಗೆ ಹೊರತಾಗಿ ಇವನು ಸೊಲೊಮೋನನ ದಿವಸಗಳಲ್ಲೆಲ್ಲಾ ಇಸ್ರಾಯೇಲಿಗೆ ಶತ್ರುವಾಗಿದ್ದನು. ಅವನು ಇಸ್ರಾಯೇಲನ್ನು ಹಗೆಮಾಡಿ, ಅರಾಮ್ ದೇಶವನ್ನು ಆಳುತ್ತಾ ಇದ್ದನು. 26 ಇದಲ್ಲದೆ, ಅರಸನಾದ ಸೊಲೊಮೋನನಿಗೆ ವಿರೋಧವಾಗಿ ದಂಗೆ ಎದ್ದವರಲ್ಲಿ ಅವನ ಸೇವಕನೂ ಚರೇದ ಪಟ್ಟಣದ ಎಫ್ರಾಯೀಮ್ಯನಾದ ನೆಬಾಟನ ಮಗ ಯಾರೊಬ್ಬಾಮನು ಇದ್ದನು, ಚೆರೂಯಳೆಂಬ ವಿಧವೆಯು ಅವನ ತಾಯಿಯು. 27 ಅವನು ಅರಸನಿಗೆ ವಿರೋಧವಾಗಿ ದಂಗೆಯೆದ್ದ ಕಾರಣವೇನೆಂದರೆ, ಸೊಲೊಮೋನನು ಮಿಲ್ಲೋ ಕೋಟೆಯನ್ನು ಕಟ್ಟಿಸಿ, ತನ್ನ ತಂದೆಯಾದ ದಾವೀದನ ಪಟ್ಟಣದಲ್ಲಿ ಬಿದ್ದುಹೋದವುಗಳನ್ನು ಕಟ್ಟಿಸುತ್ತಿರುವಾಗ, 28 ಯಾರೊಬ್ಬಾಮನು ಪರಾಕ್ರಮಶಾಲಿಯಾಗಿರುವುದರಿಂದ ಸೊಲೊಮೋನನು ಈ ಪ್ರಾಯಸ್ಥನು ಕೆಲಸಮಾಡತಕ್ಕವನೆಂದು ಕಂಡು, ಯೋಸೇಫನ ಗೋತ್ರದ ಸಮಸ್ತ ಆಳುಗಳ ಮೇಲೆ ಅವನನ್ನು ಅಧಿಪತಿಯಾಗಿಟ್ಟನು. 29 ಆ ಕಾಲದಲ್ಲಿ, ಯಾರೊಬ್ಬಾಮನು ಯೆರೂಸಲೇಮಿನೊಳಗಿಂದ ಹೊರಟು ಹೋಗುವಾಗ, ಶೀಲೋವಿನವನಾದ ಅಹೀಯನೆಂಬ ಪ್ರವಾದಿಯು ಅವನನ್ನು ಹಾದಿಯಲ್ಲಿ ಕಂಡನು. ಅವನು ಹೊಸ ಕಂಬಳಿಯನ್ನು ಹೊದ್ದುಕೊಂಡಿದ್ದನು. ಅವರಿಬ್ಬರೂ ಹೊಲದಲ್ಲಿ ಒಂಟಿಯಾಗಿದ್ದರು. 30 ಆಗ ಅಹೀಯನು ತನ್ನ ಮೇಲೆ ಇರುವ ಹೊಸ ಕಂಬಳಿಯನ್ನು ತೆಗೆದುಕೊಂಡು ಅದನ್ನು ಹನ್ನೆರಡು ತುಂಡುಗಳಾಗಿ ಹರಿದು, 31 ಯಾರೊಬ್ಬಾಮನಿಗೆ ಈ ಹತ್ತು ತುಂಡುಗಳನ್ನು ನೀನು ತೆಗೆದುಕೋ. ಇಸ್ರಾಯೇಲಿನ ದೇವರಾದ ಯೆಹೋವ ದೇವರು, “ಇಗೋ, ನಾನು ಸೊಲೊಮೋನನ ಕೈಯಿಂದ ರಾಜ್ಯವನ್ನು ಹರಿದು ತೆಗೆದುಕೊಂಡು, ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. 32 ಆದರೆ, ನನ್ನ ಸೇವಕ ದಾವೀದನಿಗೋಸ್ಕರವೂ, ಇಸ್ರಾಯೇಲಿನ ಸಮಸ್ತ ಗೋತ್ರಗಳಿಂದ ನಾನು ಆಯ್ದುಕೊಂಡ ಪಟ್ಟಣವಾದ ಯೆರೂಸಲೇಮಿಗೋಸ್ಕರವೂ ಅವನಿಗೆ ಒಂದು ಗೋತ್ರ ಇರುವುದು. 33 ಏಕೆಂದರೆ ಅವನ ತಂದೆಯಾದ ದಾವೀದನ ಹಾಗೆ ನನ್ನ ಕಟ್ಟಳೆಗಳನ್ನೂ, ನನ್ನ ನ್ಯಾಯಗಳನ್ನೂ ಕೈಗೊಳ್ಳುವುದಕ್ಕೂ, ನನ್ನ ದೃಷ್ಟಿಗೆ ಮೆಚ್ಚಿಕೆಯಾದದ್ದನ್ನು ಮಾಡುವುದಕ್ಕೂ, ಸೊಲೊಮೋನನೂ ಅವನ ಮನೆಯವರೂ ನನ್ನ ಮಾರ್ಗಗಳಲ್ಲಿ ನಡೆಯದೆ, ನನ್ನನ್ನು ಬಿಟ್ಟು ಸೀದೋನ್ಯರ ದೇವತೆಯಾದ ಅಷ್ಟೋರೆತಳನ್ನೂ, ಮೋವಾಬ್ಯರ ದೇವರಾದ ಕೆಮೋಷನ್ನೂ, ಅಮ್ಮೋನಿಯರ ದೇವರಾದ ಮಿಲ್ಕೋಮನ್ನೂ ಆರಾಧಿಸಿದ್ದಾರೆ. 34 “ ‘ಆದರೂ ನನ್ನ ಆಜ್ಞೆಗಳನ್ನೂ, ನನ್ನ ತೀರ್ಪುಗಳನ್ನೂ ಕೈಗೊಂಡದ್ದರಿಂದ, ನಾನು ಆಯ್ದು ತೆಗೆದುಕೊಂಡ ನನ್ನ ಸೇವಕನಾದ ದಾವೀದನಿಗೋಸ್ಕರ ನಾನು ಅವನ ಕೈಯಿಂದ ರಾಜ್ಯವನ್ನೆಲ್ಲಾ ತೆಗೆದುಕೊಳ್ಳದೆ, ಅವನ ಜೀವಮಾನದ ಸಕಲ ದಿವಸಗಳಲ್ಲಿ ಅವನನ್ನು ಪ್ರಭುವಾಗಿ ಇರಿಸುವೆನು. 35 ಆದರೆ ನಾನು ಅವನ ಮಗನ ಕೈಯಿಂದ ರಾಜ್ಯವನ್ನು ತೆಗೆದುಕೊಂಡು, ಅದರಲ್ಲಿ ಹತ್ತು ಗೋತ್ರಗಳನ್ನು ನಿನಗೆ ಕೊಡುವೆನು. 36 ಅಲ್ಲಿ ನನ್ನ ಹೆಸರನ್ನಿಡಲು ನಾನು ಆದುಕೊಂಡ ಪಟ್ಟಣವಾದ ಯೆರೂಸಲೇಮಿನಲ್ಲಿ ನನ್ನ ಮುಂದೆ ನನ್ನ ಸೇವಕನಾದ ದಾವೀದನಿಗೆ ಎಂದಿಗೂ ಬೆಳಕು ಆರಿಹೋಗದ ಹಾಗೆ, ಅವನ ಮಗನಿಗೆ ಒಂದು ಗೋತ್ರವನ್ನು ಕೊಡುವೆನು. 37 ಇದಲ್ಲದೆ ನಾನು ನಿನ್ನನ್ನು ತೆಗೆದುಕೊಂಡು, ನಿನ್ನ ಪ್ರಾಣವು ಇಚ್ಛಿಸುವುದೆಲ್ಲಾದರಲ್ಲಿ ಅರಸುತನವನ್ನು ನಡೆಸಿ, ಇಸ್ರಾಯೇಲಿನ ಮೇಲೆ ಅರಸನಾಗಿರುವಿ. 38 ನಾನು ನಿನಗೆ ಆಜ್ಞಾಪಿಸಿದ್ದೆಲ್ಲಾ ನೀನು ಕೇಳಿ, ನನ್ನ ಮಾರ್ಗಗಳಲ್ಲಿ ನಡೆದು, ನನ್ನ ಸೇವಕನಾದ ದಾವೀದನು ಮಾಡಿದ ಹಾಗೆ, ನನ್ನ ತೀರ್ಪುಗಳನ್ನೂ, ನನ್ನ ಆಜ್ಞೆಗಳನ್ನೂ ಕೈಗೊಂಡು, ನನ್ನ ದೃಷ್ಟಿಗೆ ಯಥಾರ್ಥವಾದದ್ದನ್ನು ಮಾಡಿದರೆ, ನಾನು ನಿನ್ನ ಸಂಗಡ ಇದ್ದು ದಾವೀದನ ಸಂತಾನದಂತೆ ನಿನ್ನ ಸಂತಾನವನ್ನೂ ಸ್ಥಿರಪಡಿಸಿ, ಇಸ್ರಾಯೇಲನ್ನು ನಿನಗೆ ಕೊಡುವೆನು. 39 ಇದಕ್ಕೋಸ್ಕರ ದಾವೀದನ ಸಂತತಿಯನ್ನು ಬಾಧಿಸುವೆನು, ಆದರೆ ನಿರಂತರವಾಗಿ ಅಲ್ಲ,’ ” ಎಂದು ಅಹೀಯನು ಹೇಳಿದನು. 40 ಇದರ ನಿಮಿತ್ತ ಸೊಲೊಮೋನನು ಯಾರೊಬ್ಬಾಮನನ್ನು ಕೊಲ್ಲಲು ಹುಡುಕಿದನು. ಆದ್ದರಿಂದ ಯಾರೊಬ್ಬಾಮನು ಎದ್ದು, ಈಜಿಪ್ಟಿನ ಅರಸನಾದ ಶೀಶಕನ ಬಳಿಗೆ ಈಜಿಪ್ಟಿಗೆ ಓಡಿಹೋಗಿ, ಸೊಲೊಮೋನನು ಸಾಯುವವರೆಗೂ ಅಲ್ಲಿ ಇದ್ದನು. 41 ಸೊಲೊಮೋನನ ಉಳಿದ ಕ್ರಿಯೆಗಳನ್ನು, ಅವನು ಮಾಡಿದ ಸಾಧನೆಗಳನ್ನು ಮತ್ತು ಅವನ ಜ್ಞಾನವನ್ನು ಕುರಿತು ಸೊಲೊಮೋನನ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತದೆ. 42 ಹೀಗೆ ಸೊಲೊಮೋನನು ಯೆರೂಸಲೇಮಿನಲ್ಲಿ ಸಮಸ್ತ ಇಸ್ರಾಯೇಲಿನ ಮೇಲೆ ನಾಲ್ವತ್ತು ವರ್ಷಗಳು ಆಳಿದನು. 43 ಸೊಲೊಮೋನನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ಅವನ ತಂದೆ ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ರೆಹಬ್ಬಾಮನು ಅವನಿಗೆ ಬದಲಾಗಿ ಅರಸನಾದನು.

In Other Versions

1 Kings 11 in the ANGEFD

1 Kings 11 in the ANTPNG2D

1 Kings 11 in the AS21

1 Kings 11 in the BAGH

1 Kings 11 in the BBPNG

1 Kings 11 in the BBT1E

1 Kings 11 in the BDS

1 Kings 11 in the BEV

1 Kings 11 in the BHAD

1 Kings 11 in the BIB

1 Kings 11 in the BLPT

1 Kings 11 in the BNT

1 Kings 11 in the BNTABOOT

1 Kings 11 in the BNTLV

1 Kings 11 in the BOATCB

1 Kings 11 in the BOATCB2

1 Kings 11 in the BOBCV

1 Kings 11 in the BOCNT

1 Kings 11 in the BOECS

1 Kings 11 in the BOGWICC

1 Kings 11 in the BOHCB

1 Kings 11 in the BOHCV

1 Kings 11 in the BOHLNT

1 Kings 11 in the BOHNTLTAL

1 Kings 11 in the BOICB

1 Kings 11 in the BOILNTAP

1 Kings 11 in the BOITCV

1 Kings 11 in the BOKCV

1 Kings 11 in the BOKHWOG

1 Kings 11 in the BOKSSV

1 Kings 11 in the BOLCB

1 Kings 11 in the BOLCB2

1 Kings 11 in the BOMCV

1 Kings 11 in the BONAV

1 Kings 11 in the BONCB

1 Kings 11 in the BONLT

1 Kings 11 in the BONUT2

1 Kings 11 in the BOPLNT

1 Kings 11 in the BOSCB

1 Kings 11 in the BOSNC

1 Kings 11 in the BOTLNT

1 Kings 11 in the BOVCB

1 Kings 11 in the BOYCB

1 Kings 11 in the BPBB

1 Kings 11 in the BPH

1 Kings 11 in the BSB

1 Kings 11 in the CCB

1 Kings 11 in the CUV

1 Kings 11 in the CUVS

1 Kings 11 in the DBT

1 Kings 11 in the DGDNT

1 Kings 11 in the DHNT

1 Kings 11 in the DNT

1 Kings 11 in the ELBE

1 Kings 11 in the EMTV

1 Kings 11 in the ESV

1 Kings 11 in the FBV

1 Kings 11 in the FEB

1 Kings 11 in the GGMNT

1 Kings 11 in the GNT

1 Kings 11 in the HARY

1 Kings 11 in the HNT

1 Kings 11 in the IRVA

1 Kings 11 in the IRVB

1 Kings 11 in the IRVG

1 Kings 11 in the IRVH

1 Kings 11 in the IRVK

1 Kings 11 in the IRVM

1 Kings 11 in the IRVM2

1 Kings 11 in the IRVO

1 Kings 11 in the IRVP

1 Kings 11 in the IRVT

1 Kings 11 in the IRVT2

1 Kings 11 in the IRVU

1 Kings 11 in the ISVN

1 Kings 11 in the JSNT

1 Kings 11 in the KAPI

1 Kings 11 in the KBT1ETNIK

1 Kings 11 in the KBV

1 Kings 11 in the KJV

1 Kings 11 in the KNFD

1 Kings 11 in the LBA

1 Kings 11 in the LBLA

1 Kings 11 in the LNT

1 Kings 11 in the LSV

1 Kings 11 in the MAAL

1 Kings 11 in the MBV

1 Kings 11 in the MBV2

1 Kings 11 in the MHNT

1 Kings 11 in the MKNFD

1 Kings 11 in the MNG

1 Kings 11 in the MNT

1 Kings 11 in the MNT2

1 Kings 11 in the MRS1T

1 Kings 11 in the NAA

1 Kings 11 in the NASB

1 Kings 11 in the NBLA

1 Kings 11 in the NBS

1 Kings 11 in the NBVTP

1 Kings 11 in the NET2

1 Kings 11 in the NIV11

1 Kings 11 in the NNT

1 Kings 11 in the NNT2

1 Kings 11 in the NNT3

1 Kings 11 in the PDDPT

1 Kings 11 in the PFNT

1 Kings 11 in the RMNT

1 Kings 11 in the SBIAS

1 Kings 11 in the SBIBS

1 Kings 11 in the SBIBS2

1 Kings 11 in the SBICS

1 Kings 11 in the SBIDS

1 Kings 11 in the SBIGS

1 Kings 11 in the SBIHS

1 Kings 11 in the SBIIS

1 Kings 11 in the SBIIS2

1 Kings 11 in the SBIIS3

1 Kings 11 in the SBIKS

1 Kings 11 in the SBIKS2

1 Kings 11 in the SBIMS

1 Kings 11 in the SBIOS

1 Kings 11 in the SBIPS

1 Kings 11 in the SBISS

1 Kings 11 in the SBITS

1 Kings 11 in the SBITS2

1 Kings 11 in the SBITS3

1 Kings 11 in the SBITS4

1 Kings 11 in the SBIUS

1 Kings 11 in the SBIVS

1 Kings 11 in the SBT

1 Kings 11 in the SBT1E

1 Kings 11 in the SCHL

1 Kings 11 in the SNT

1 Kings 11 in the SUSU

1 Kings 11 in the SUSU2

1 Kings 11 in the SYNO

1 Kings 11 in the TBIAOTANT

1 Kings 11 in the TBT1E

1 Kings 11 in the TBT1E2

1 Kings 11 in the TFTIP

1 Kings 11 in the TFTU

1 Kings 11 in the TGNTATF3T

1 Kings 11 in the THAI

1 Kings 11 in the TNFD

1 Kings 11 in the TNT

1 Kings 11 in the TNTIK

1 Kings 11 in the TNTIL

1 Kings 11 in the TNTIN

1 Kings 11 in the TNTIP

1 Kings 11 in the TNTIZ

1 Kings 11 in the TOMA

1 Kings 11 in the TTENT

1 Kings 11 in the UBG

1 Kings 11 in the UGV

1 Kings 11 in the UGV2

1 Kings 11 in the UGV3

1 Kings 11 in the VBL

1 Kings 11 in the VDCC

1 Kings 11 in the YALU

1 Kings 11 in the YAPE

1 Kings 11 in the YBVTP

1 Kings 11 in the ZBP