Psalms 73 (BOKCV2)
undefined ಆಸಾಫನ ಕೀರ್ತನೆ. 1 ದೇವರು ನಿಜವಾಗಿಯೂ ಇಸ್ರಾಯೇಲಿಗೂಶುದ್ಧ ಹೃದಯದವರಿಗೂ ಒಳ್ಳೆಯವರು. 2 ನನ್ನ ಪಾದಗಳು ಬಹಳಮಟ್ಟಿಗೆ ತಪ್ಪುವ ಹಾಗಿದ್ದವು.ನನ್ನ ಹೆಜ್ಜೆಗಳು ಜಾರುವುದಕ್ಕೆ ಬಹು ಸಮೀಪವಾಗಿದ್ದವು. 3 ಏಕೆಂದರೆ ನಾನು ದುಷ್ಟರ ಸೌಭಾಗ್ಯವನ್ನು ಕಂಡಾಗಮೂರ್ಖರ ಮೇಲೆ ಹೊಟ್ಟೆಕಿಚ್ಚುಪಟ್ಟೆನು. 4 ಏಕೆಂದರೆ ಅವರಿಗೆ ಹೋರಾಟಗಳು ಇಲ್ಲ.ಅವರ ದೇಹವು ಆರೋಗ್ಯಕರ ಮತ್ತು ದೃಢವಾಗಿದೆ. 5 ಇತರರ ಹಾಗೆ ಅವರಿಗೆ ಯಾವುದೇ ಹೊರೆ ಇಲ್ಲಮಾನವರಿಗೆ ತಗುಲುವ ಯಾವುದೇ ವ್ಯಾಧಿಯೂ ಅವರಿಗೆ ತಗುಲುವುದಿಲ್ಲ. 6 ಆದ್ದರಿಂದ ಗರ್ವವು ಕಂಠಮಾಲೆಯಂತೆ ಅವರನ್ನು ಸುತ್ತಿದೆ.ದಬ್ಬಾಳಿಕೆ ಅವರನ್ನು ಬಟ್ಟೆಯ ಹಾಗೆ ಮುಚ್ಚುತ್ತಿದೆ. 7 ಅವರ ಹೃದಯವು ಕೊಬ್ಬಿನಿಂದ ಉಬ್ಬಿಕೊಂಡಿರುತ್ತವೆ;ಅವರ ದುಷ್ಕಲ್ಪನೆಗಳಿಗೆ ಮಿತಿಯೇ ಇಲ್ಲ. 8 ಅವರು ಹಾಸ್ಯಮಾಡುವವರಾಗಿ ಕೇಡನ್ನೇ ಮಾತನಾಡುತ್ತಾರೆದಬ್ಬಾಳಿಕೆ ಮಾಡಲು ಗರ್ವದಿಂದ ಅವರು ಬೆದರಿಕೆ ಹಾಕುತ್ತಾರೆ. 9 ಪರಲೋಕಕ್ಕೆ ವಿರೋಧವಾಗಿ ತಮ್ಮ ಬಾಯನ್ನು ತೆರೆದಿದ್ದಾರೆ.ಭೂಲೋಕದಲ್ಲೆಲ್ಲಾ ಅವರ ಮಾತು ಮುಂದುವರೆದಿದೆ. 10 ಆದ್ದರಿಂದ ಜನರು ಅವರ ಕಡೆಗೆ ತಿರುಗುತ್ತಾರೆ.ಜನರಿಗೆ ಅವರ ಮಾತು ಬಹಳವಾಗಿ ದೊರೆಯುತ್ತದೆ. 11 ಅವರು, “ದೇವರಿಗೆ ಹೇಗೆ ಗೊತ್ತಾಗುವುದು?ಮಹೋನ್ನತನಿಗೆ ಏನಾದರೂ ತಿಳಿಯಲು ಸಾಧ್ಯವೇ?” ಎನ್ನುತ್ತಾರೆ. 12 ದುಷ್ಟರು ನಿಶ್ಚಿಂತರಾಗಿ,ಐಶ್ವರ್ಯದಲ್ಲಿ ಇವರು ಹೆಚ್ಚುತ್ತಾರೆ. 13 ನನ್ನ ಹೃದಯವನ್ನು ಶುದ್ಧ ಮಾಡಿಕೊಂಡಿದ್ದು ವ್ಯರ್ಥವೋ?ನನ್ನ ಅಂಗೈಗಳನ್ನು ನಿರಪರಾಧದಲ್ಲಿ ತೊಳೆದಿದ್ದೂ ವ್ಯರ್ಥವೋ? 14 ಏಕೆಂದರೆ ನಾನು ದಿನವೆಲ್ಲಾ ಬಾಧೆಪಡುತ್ತಿದ್ದೇನೆ.ಪ್ರತಿ ಉದಯವೂ ನನಗೆ ಹೊಸ ಶಿಕ್ಷೆಯಾಗುತ್ತಿದೆ. 15 ನಾನು ಈ ಪ್ರಕಾರ ಬಾಯಿತೆರೆದು ಮಾತಾಡಿದ್ದರೆ,ನಿಮ್ಮ ಪ್ರಜೆಗೆ ದ್ರೋಹಿಯಾಗುತ್ತಿದ್ದೆನು. 16 ಇದನ್ನೆಲ್ಲಾ ತಿಳಿದುಕೊಳ್ಳುವುದಕ್ಕೆ ನಾನು ಪ್ರಯತ್ನಿಸಿದಾಗ,ಅದು ನನಗೆ ಬಹಳವಾಗಿ ಕಷ್ಟಕರವಾಗಿತ್ತು. 17 ನಾನು ದೇವರ ಪರಿಶುದ್ಧ ಆಲಯಕ್ಕೆ ಬರುವವರೆಗೆ ನನಗೆ ಅರ್ಥವಾಗಲಿಲ್ಲ.ಅನಂತರ ಅವರ ಅಂತ್ಯವನ್ನು ನನಗೆ ಅರ್ಥವಾಯಿತು. 18 ನಿಶ್ಚಯವಾಗಿ ನೀವು ಜಾರುವ ಸ್ಥಳಗಳಲ್ಲಿ ಅವರನ್ನು ಬಿಟ್ಟಿದ್ದೀರಿ.ಅವರನ್ನು ದಂಡಿಸಿಬಿಡು. 19 ಕ್ಷಣಮಾತ್ರದಲ್ಲಿ ಅವರು ನಾಶವಾದರು.ಅವರು ದಿಗಿಲುಬಿದ್ದು ಸಂಪೂರ್ಣವಾಗಿ ನಾಶವಾದರು. 20 ಅವರು ನಿದ್ದೆಯಿಂದ ಎಚ್ಚರಗೊಂಡ ಕನಸಿನಂತೆ ಇರುತ್ತಾರೆ.ಯೆಹೋವ ದೇವರೇ, ನಿಮ್ಮ ದೃಷ್ಟಿಯಲ್ಲಿಅವರು ಅಲ್ಪರಾಗಿರಲಿ. 21 ನನ್ನ ಹೃದಯವು ದುಃಖಗೊಂಡು,ನನ್ನ ಆತ್ಮವು ಕಹಿಗೊಂಡಿತು. 22 ಆಗ ನಾನು ಮೂರ್ಖನಾಗಿ ಏನೂ ತಿಳಿಯದೆನಿಮ್ಮ ಮುಂದೆ ಪಶುವಿನಂತೆ ಇದ್ದೆನು. 23 ಆದರೂ ನಾನು ನಿಮ್ಮ ಸಂಗಡ ಯಾವಾಗಲೂ ಇದ್ದೇನೆ.ನೀವು ನನ್ನ ಬಲಗೈಯನ್ನು ಹಿಡಿದಿದ್ದೀರಿ. 24 ನಿಮ್ಮ ಆಲೋಚನೆಯಂತೆ ನನ್ನನ್ನು ನಡೆಸಿ,ತರುವಾಯ ಮಹಿಮೆಗೆ ನನ್ನನ್ನು ಸೇರಿಸುವಿರಿ. 25 ಪರಲೋಕದಲ್ಲಿ ನನಗೆ ನೀವಲ್ಲದೆ ಮತ್ಯಾರಿದ್ದಾರೆ?ಇಹಲೋಕದಲ್ಲಿ ನಿಮ್ಮನ್ನಲ್ಲದೆ ಇನ್ನಾರನ್ನೂ ನಾನು ಬಯಸುವುದಿಲ್ಲ. 26 ನನ್ನ ತನುಮನಗಳು ಕುಂದುತ್ತವೆ;ಆದರೆ ದೇವರು ಯುಗಯುಗಕ್ಕೂ ನನ್ನ ಹೃದಯದ ಬಲವೂ,ನನ್ನ ಪಾಲೂ ಆಗಿದ್ದಾರೆ. 27 ದೇವರೇ, ನಿಮ್ಮಿಂದ ದೂರವಾಗಿರುವವರು ನಾಶವಾಗುತ್ತಾರೆ;ನಿಮ್ಮನ್ನು ಬಿಟ್ಟು ದ್ರೋಹ ಮಾಡುವವರೆಲ್ಲರೂ ದಂಡನೆಗೆ ಗುರಿಯಾಗುವರು. 28 ನನಗಾದರೋ ದೇವರ ಸಮೀಪಕ್ಕೆ ಬರುವುದೇ ಒಳ್ಳೆಯದು.ನಿಮ್ಮ ಕ್ರಿಯೆಗಳನ್ನೆಲ್ಲಾ ಸಾರುವುದಕ್ಕೆಸಾರ್ವಭೌಮ ಯೆಹೋವ ದೇವರಲ್ಲಿ ನನ್ನ ಭರವಸೆಯನ್ನು ಇಟ್ಟಿದ್ದೇನೆ.