Zechariah 1 (BOKCV2)
1 ಪರ್ಷಿಯಾದ ಅರಸ ದಾರ್ಯಾವೆಷನ ಎರಡನೆಯ ವರ್ಷ, ಎಂಟನೆಯ ತಿಂಗಳಿನಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು: 2 “ಯೆಹೋವ ದೇವರು ನಿಮ್ಮ ಪಿತೃಗಳ ಮೇಲೆ ಬಹು ಕೋಪಗೊಂಡಿದ್ದಾರೆ. 3 ಆದ್ದರಿಂದ ನೀನು ಅವರಿಗೆ ಹೇಳತಕ್ಕದ್ದೇನೆಂದರೆ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನನ್ನ ಬಳಿಗೆ ತಿರುಗಿಕೊಳ್ಳಿರಿ,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. ಆಗ, ‘ನಾನು ನಿಮ್ಮ ಬಳಿಗೆ ತಿರುಗಿಕೊಳ್ಳುವೆನು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. 4 ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ, ನಿಮ್ಮ ಕೆಟ್ಟ ಮಾರ್ಗಗಳನ್ನೂ, ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸರ್ವಶಕ್ತರಾದ ಯೆಹೋವ ದೇವರು ಪ್ರಕಟಿಸುತ್ತಾರೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ. ನನ್ನಲ್ಲಿ ಲಕ್ಷ್ಯವಿಡಲಿಲ್ಲ ಎಂದು ಯೆಹೋವ ದೇವರು ಹೇಳುತ್ತಾರೆ. 5 ನಿಮ್ಮ ಪಿತೃಗಳೋ, ಅವರು ಎಲ್ಲಿ? ಪ್ರವಾದಿಗಳು, ಅವರು ನಿತ್ಯವಾಗಿ ಬದುಕುತ್ತಾರೋ? 6 ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿ, ನನ್ನ ವಾಕ್ಯಗಳೂ, ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿಲ್ಲವೋ?“ಆಗ ಅವರು ತಿರುಗಿಕೊಂಡು, ‘ಸೇನಾಧೀಶ್ವರ ಯೆಹೋವ ದೇವರು ನಮಗೆ ಮಾಡುವುದಕ್ಕೆ ಯೋಚಿಸಿದ ಹಾಗೆಯೇ, ನಮ್ಮ ಮಾರ್ಗಗಳ ಪ್ರಕಾರವಾಗಿಯೂ, ನಮ್ಮ ಕ್ರಿಯೆಗಳ ಪ್ರಕಾರವಾಗಿಯೂ ನಮಗೆ ಮಾಡಿದ್ದಾರೆ,’ ಎಂದು ಹೇಳಿದರು.” 7 ದಾರ್ಯಾವೆಷನ ಎರಡನೆಯ ವರ್ಷದಲ್ಲಿ, ಹನ್ನೊಂದನೆಯ ತಿಂಗಳಾದ ಶೇಬಾಟ್ ಎಂಬ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ ಯೆಹೋವ ದೇವರ ವಾಕ್ಯವು ಇದ್ದೋನನ ಮೊಮ್ಮಗನೂ, ಬೆರಕ್ಯನ ಮಗನೂ ಆದ ಜೆಕರ್ಯನೆಂಬ ಪ್ರವಾದಿಗೆ ಬಂದಿತು: 8 ರಾತ್ರಿಯಲ್ಲಿ ನನಗೆ ದರ್ಶನವಾಯಿತು. ಕೆಂಪು ಕುದುರೆಯ ಮೇಲೆ ಸವಾರಿ ಮಾಡುವ ಒಬ್ಬನು, ತಗ್ಗಿನಲ್ಲಿದ್ದ ಗಂಧದ ಗಿಡಗಳ ನಡುವೆ ನಿಂತಿದ್ದನು. ಅವನ ಹಿಂದೆ ಕೆಂಪು, ಕಂದು ಬಣ್ಣದ ಹಾಗು ಬಿಳಿಯ ಕುದುರೆಗಳು ಇದ್ದವು. 9 ಆಗ ನಾನು, “ನನ್ನ ಒಡೆಯನೇ, ಇವೇನು?” ಎಂದೆನು.ಆಗ ನನ್ನ ಸಂಗಡ ಮಾತನಾಡಿದ ದೇವದೂತನು, “ಇವೇನೆಂದು ನಿನಗೆ ತೋರಿಸುತ್ತೇನೆ,” ಎಂದನು. 10 ಆಗ ಗಂಧದ ಗಿಡಗಳ ನಡುವೆ ನಿಂತ ಮನುಷ್ಯನು, “ಇವರು ಭೂಮಿಯ ಸುತ್ತಲೂ ನಡೆದಾಡುವುದಕ್ಕೆ ಯೆಹೋವ ದೇವರಿಂದ ಕಳುಹಿಸಲಾದವರು,” ಎಂದನು. 11 ಆಗ ಅವರು ಗಂಧದ ಗಿಡಗಳ ನಡುವೆ ನಿಂತ ಯೆಹೋವ ದೇವರ ದೂತನಿಗೆ, “ಭೂಮಿಯ ಸುತ್ತಲೂ ನಡೆದಾಡಿದ್ದೇವೆ. ಇಗೋ, ಭೂಮಿಯೆಲ್ಲಾ ನಿಶ್ಚಿಂತೆಯಿಂದ ಶಾಂತವಾಗಿದೆ,” ಎಂದನು. 12 ಆಗ ಯೆಹೋವ ದೇವರ ದೂತನು ಉತ್ತರಕೊಟ್ಟು: “ಸರ್ವಶಕ್ತರಾದ ಯೆಹೋವ ದೇವರೇ, ನೀವು ಯೆರೂಸಲೇಮನ್ನೂ, ಯೆಹೂದದ ಪಟ್ಟಣಗಳನ್ನೂ ಎಷ್ಟರವರೆಗೆ ಕನಿಕರಿಸದೆ ಇರುವಿರಿ? ಅವುಗಳ ಮೇಲೆ ಈ ಎಪ್ಪತ್ತು ವರ್ಷಗಳು ಸಿಟ್ಟು ಮಾಡಿದ್ದೀರಲ್ಲವೋ?” ಎಂದನು. 13 ಆಗ ಯೆಹೋವ ದೇವರು ನನ್ನ ಸಂಗಡ ಮಾತನಾಡಿದ ದೂತನಿಗೆ ಒಳ್ಳೆಯ ಮಾತುಗಳಿಂದಲೂ, ಆದರಣೆಯ ಮಾತುಗಳಿಂದಲೂ ಉತ್ತರಕೊಟ್ಟರು. 14 ನನ್ನ ಸಂಗಡ ಮಾತನಾಡಿದ ದೂತನು ನನಗೆ, “ಇದನ್ನು ಸಾರಿ ಹೇಳು: ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಯೆರೂಸಲೇಮಿಗಾಗಿಯೂ, ಚೀಯೋನಿಗಾಗಿಯೂ ಮಹಾ ರೋಷವುಳ್ಳವನಾಗಿದ್ದೇನೆ. 15 ನಿಶ್ಚಿಂತೆಯುಳ್ಳವರಾಗಿರುವ ಇತರ ರಾಷ್ಟ್ರಗಳ ಮೇಲೆ ನಾನು ಬಹಳ ಕೋಪವಾಗಿದ್ದೇನೆ. ಆದರೆ ಯೆರೂಸಲೇಮಿನ ಮೇಲೆ ನಾನು ಸ್ವಲ್ಪ ಮಾತ್ರ ಸಿಟ್ಟುಗೊಂಡಿರಲು, ಅವರು ಸಂಕಟಕ್ಕೆ ಇನ್ನು ಹೆಚ್ಚು ಕೇಡು ಕೂಡಿಸಿದರು. 16 “ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾನೆ: ‘ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ. ನನ್ನ ಆಲಯವು ಅದರಲ್ಲಿ ಕಟ್ಟಲಾಗುವುದು. ಯೆರೂಸಲೇಮಿನ ಮೇಲೆ ಅಳತೆಯ ನೂಲು ಚಾಚಲಾಗುವುದು,’ ಎಂದು ಸರ್ವಶಕ್ತರಾದ ಯೆಹೋವ ದೇವರು ಹೇಳುತ್ತಾರೆ. 17 “ಪುನಃ ನೀನು ಸಾರಿ, ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಪಟ್ಟಣಗಳು ಇನ್ನು ಅಭಿವೃದ್ಧಿಯಾಗಿ ಹರಡುವುವು. ಯೆಹೋವ ದೇವರು ಚೀಯೋನನ್ನು ಆದರಿಸುವರು. ಯೆರೂಸಲೇಮನ್ನು ಆರಿಸಿಕೊಳ್ಳುವರು, ಎಂದು ಹೇಳಿದನು.” 18 ನಾನು ನನ್ನ ಕಣ್ಣುಗಳನ್ನು ಎತ್ತಿದಾಗ, ನಾಲ್ಕು ಕೊಂಬುಗಳನ್ನು ನೋಡಿದೆನು. 19 ಆಗ ನನ್ನ ಸಂಗಡ ಮಾತನಾಡಿದ ದೂತನಿಗೆ ನಾನು, “ಇದೇನು?” ಎಂದೆನು.ಅದಕ್ಕೆ ಅವನು ನನಗೆ ಉತ್ತರಕೊಟ್ಟು, “ಇವು ಯೆಹೂದ, ಇಸ್ರಾಯೇಲ್, ಯೆರೂಸಲೇಮನ್ನೂ ಚದರಿಸಿದ ಕೊಂಬುಗಳು,” ಎಂದನು. 20 ಆಗ ಯೆಹೋವ ದೇವರು ನನಗೆ ನಾಲ್ಕು ಕಮ್ಮಾರರನ್ನು ತೋರಿಸಿದರು. 21 ನಾನು, “ಇವರು ಏನು ಮಾಡುವುದಕ್ಕೆ ಬರುತ್ತಾರೆ?” ಎಂದೆನು.ಅದಕ್ಕೆ ಅವರು, “ಯೆಹೂದ್ಯರಲ್ಲಿ ಯಾರೂ ತಲೆಯೆತ್ತದಂತೆ ಅವುಗಳನ್ನು ಚದರಿಸುವ ಕೊಂಬುಗಳು ಅವು. ಆದರೆ ಇವರು ಯೆಹೂದ ದೇಶವನ್ನು ಚದರಿಸಬೇಕೆಂದು ತಲೆಯೆತ್ತಿದ ರಾಷ್ಟ್ರಗಳನ್ನೇ ಚದರಿಸಿ, ಅದರ ಕೊಂಬುಗಳನ್ನು ಕೆಡವಿ ಹಾಕುವುದಕ್ಕೆ ಬಂದಿದ್ದಾರೆ,” ಎಂದು ಹೇಳಿದರು.
In Other Versions
Zechariah 1 in the ANGEFD
Zechariah 1 in the ANTPNG2D
Zechariah 1 in the AS21
Zechariah 1 in the BAGH
Zechariah 1 in the BBPNG
Zechariah 1 in the BBT1E
Zechariah 1 in the BDS
Zechariah 1 in the BEV
Zechariah 1 in the BHAD
Zechariah 1 in the BIB
Zechariah 1 in the BLPT
Zechariah 1 in the BNT
Zechariah 1 in the BNTABOOT
Zechariah 1 in the BNTLV
Zechariah 1 in the BOATCB
Zechariah 1 in the BOATCB2
Zechariah 1 in the BOBCV
Zechariah 1 in the BOCNT
Zechariah 1 in the BOECS
Zechariah 1 in the BOGWICC
Zechariah 1 in the BOHCB
Zechariah 1 in the BOHCV
Zechariah 1 in the BOHLNT
Zechariah 1 in the BOHNTLTAL
Zechariah 1 in the BOICB
Zechariah 1 in the BOILNTAP
Zechariah 1 in the BOITCV
Zechariah 1 in the BOKCV
Zechariah 1 in the BOKHWOG
Zechariah 1 in the BOKSSV
Zechariah 1 in the BOLCB
Zechariah 1 in the BOLCB2
Zechariah 1 in the BOMCV
Zechariah 1 in the BONAV
Zechariah 1 in the BONCB
Zechariah 1 in the BONLT
Zechariah 1 in the BONUT2
Zechariah 1 in the BOPLNT
Zechariah 1 in the BOSCB
Zechariah 1 in the BOSNC
Zechariah 1 in the BOTLNT
Zechariah 1 in the BOVCB
Zechariah 1 in the BOYCB
Zechariah 1 in the BPBB
Zechariah 1 in the BPH
Zechariah 1 in the BSB
Zechariah 1 in the CCB
Zechariah 1 in the CUV
Zechariah 1 in the CUVS
Zechariah 1 in the DBT
Zechariah 1 in the DGDNT
Zechariah 1 in the DHNT
Zechariah 1 in the DNT
Zechariah 1 in the ELBE
Zechariah 1 in the EMTV
Zechariah 1 in the ESV
Zechariah 1 in the FBV
Zechariah 1 in the FEB
Zechariah 1 in the GGMNT
Zechariah 1 in the GNT
Zechariah 1 in the HARY
Zechariah 1 in the HNT
Zechariah 1 in the IRVA
Zechariah 1 in the IRVB
Zechariah 1 in the IRVG
Zechariah 1 in the IRVH
Zechariah 1 in the IRVK
Zechariah 1 in the IRVM
Zechariah 1 in the IRVM2
Zechariah 1 in the IRVO
Zechariah 1 in the IRVP
Zechariah 1 in the IRVT
Zechariah 1 in the IRVT2
Zechariah 1 in the IRVU
Zechariah 1 in the ISVN
Zechariah 1 in the JSNT
Zechariah 1 in the KAPI
Zechariah 1 in the KBT1ETNIK
Zechariah 1 in the KBV
Zechariah 1 in the KJV
Zechariah 1 in the KNFD
Zechariah 1 in the LBA
Zechariah 1 in the LBLA
Zechariah 1 in the LNT
Zechariah 1 in the LSV
Zechariah 1 in the MAAL
Zechariah 1 in the MBV
Zechariah 1 in the MBV2
Zechariah 1 in the MHNT
Zechariah 1 in the MKNFD
Zechariah 1 in the MNG
Zechariah 1 in the MNT
Zechariah 1 in the MNT2
Zechariah 1 in the MRS1T
Zechariah 1 in the NAA
Zechariah 1 in the NASB
Zechariah 1 in the NBLA
Zechariah 1 in the NBS
Zechariah 1 in the NBVTP
Zechariah 1 in the NET2
Zechariah 1 in the NIV11
Zechariah 1 in the NNT
Zechariah 1 in the NNT2
Zechariah 1 in the NNT3
Zechariah 1 in the PDDPT
Zechariah 1 in the PFNT
Zechariah 1 in the RMNT
Zechariah 1 in the SBIAS
Zechariah 1 in the SBIBS
Zechariah 1 in the SBIBS2
Zechariah 1 in the SBICS
Zechariah 1 in the SBIDS
Zechariah 1 in the SBIGS
Zechariah 1 in the SBIHS
Zechariah 1 in the SBIIS
Zechariah 1 in the SBIIS2
Zechariah 1 in the SBIIS3
Zechariah 1 in the SBIKS
Zechariah 1 in the SBIKS2
Zechariah 1 in the SBIMS
Zechariah 1 in the SBIOS
Zechariah 1 in the SBIPS
Zechariah 1 in the SBISS
Zechariah 1 in the SBITS
Zechariah 1 in the SBITS2
Zechariah 1 in the SBITS3
Zechariah 1 in the SBITS4
Zechariah 1 in the SBIUS
Zechariah 1 in the SBIVS
Zechariah 1 in the SBT
Zechariah 1 in the SBT1E
Zechariah 1 in the SCHL
Zechariah 1 in the SNT
Zechariah 1 in the SUSU
Zechariah 1 in the SUSU2
Zechariah 1 in the SYNO
Zechariah 1 in the TBIAOTANT
Zechariah 1 in the TBT1E
Zechariah 1 in the TBT1E2
Zechariah 1 in the TFTIP
Zechariah 1 in the TFTU
Zechariah 1 in the TGNTATF3T
Zechariah 1 in the THAI
Zechariah 1 in the TNFD
Zechariah 1 in the TNT
Zechariah 1 in the TNTIK
Zechariah 1 in the TNTIL
Zechariah 1 in the TNTIN
Zechariah 1 in the TNTIP
Zechariah 1 in the TNTIZ
Zechariah 1 in the TOMA
Zechariah 1 in the TTENT
Zechariah 1 in the UBG
Zechariah 1 in the UGV
Zechariah 1 in the UGV2
Zechariah 1 in the UGV3
Zechariah 1 in the VBL
Zechariah 1 in the VDCC
Zechariah 1 in the YALU
Zechariah 1 in the YAPE
Zechariah 1 in the YBVTP
Zechariah 1 in the ZBP