Ezra 1 (IRVK)

1 ಪರ್ಷಿಯ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಯೆಹೋವನು ತಾನು ಯೆರೆಮೀಯನ ಮುಖಾಂತರ ಹೇಳಿಸಿದ ವಾಕ್ಯವನ್ನು ನೆರವೇರಿಸುವುದಕ್ಕಾಗಿ ಆ ಪರ್ಷಿಯ ರಾಜನಾದ ಕೋರೆಷನ ಮನಸ್ಸನ್ನು ಪ್ರೇರೇಪಿಸಿದನು. 2 ಅವನು ತನ್ನ ರಾಜ್ಯದಲ್ಲೆಲ್ಲಾ ಡಂಗುರದಿಂದಲೂ, ಪತ್ರಗಳಿಂದಲೂ, “ಪರ್ಷಿಯ ರಾಜನಾದ ಕೋರೆಷನೆಂಬ ನನ್ನ ಮಾತನ್ನು ಕೇಳಿರಿ. ಪರಲೋಕದೇವರಾದ ಯೆಹೋವನು ನನಗೆ ಭೂಲೋಕದ ಎಲ್ಲಾ ರಾಜ್ಯಗಳನ್ನೂ ಕೊಟ್ಟು, ತನಗೋಸ್ಕರ ಯೆಹೂದ ದೇಶದ ಯೆರೂಸಲೇಮಿನಲ್ಲಿ ಆಲಯವನ್ನು ಕಟ್ಟಿಸಬೇಕು ಎಂದು ಆಜ್ಞಾಪಿಸಿದ್ದಾನೆ. 3 ನಿಮ್ಮಲ್ಲಿ ಯಾರು ಆತನ ಪ್ರಜೆಗಳಾಗಿರುತ್ತಾರೋ, ಅವರು ಯೆಹೂದ ದೇಶದ ಯೆರೂಸಲೇಮಿಗೆ ಹೋಗಿ ಅಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವನಿಗೋಸ್ಕರ ಆಲಯವನ್ನು ಕಟ್ಟಲಿ. ಅವರ ದೇವರು ಅವರ ಸಂಗಡ ಇರಲಿ. 4 ಸೆರೆಯವರಲ್ಲಿ ಉಳಿದವರು ಯಾವ ಊರುಗಳಲ್ಲಿ ಪ್ರವಾಸಿಗಳಾಗಿರುತ್ತಾರೋ ಆ ಊರುಗಳವರು ಯೆರೂಸಲೇಮಿನ ದೇವಾಲಯಕ್ಕೋಸ್ಕರ ಕಾಣಿಕೆಗಳನ್ನಲ್ಲದೆ ಬೆಳ್ಳಿಬಂಗಾರ, ಸರಕು, ಪಶು ಇವುಗಳನ್ನೂ ಕೊಟ್ಟು ಅವರಿಗೆ ಸಹಾಯ ಮಾಡಲಿ” ಎಂದು ಪ್ರಕಟಿಸಿದನು. 5 ಆಗ ಯೆಹೂದ ಮತ್ತು ಬೆನ್ಯಾಮೀನ್ ಗೋತ್ರ ಪ್ರಧಾನರಲ್ಲಿಯೂ, ಯಾಜಕರಲ್ಲಿಯೂ ಮತ್ತು ಲೇವಿಯರಲ್ಲಿಯೂ ದೇವಪ್ರೇರಣೆಗೆ ಒಳಗಾದವರೆಲ್ಲರೂ ಯೆರೂಸಲೇಮಿನಲ್ಲಿ ಯೆಹೋವನಿಗೋಸ್ಕರ ಆಲಯವನ್ನು ಕಟ್ಟುವುದಕ್ಕಾಗಿ ಹೊರಟುಹೋದರು. 6 ಅವರ ನೆರೆಯವರೆಲ್ಲರೂ ಕಾಣಿಕೆಗಳನ್ನು ಕೊಟ್ಟಿದ್ದಲ್ಲದೆ ಅವರಿಗೆ ಬೆಳ್ಳಿಯ ಸಾಮಾನು, ಬಂಗಾರ, ಸರಕು, ಪಶು, ಶ್ರೇಷ್ಠವಸ್ತು ಇವುಗಳನ್ನೂ ಕೊಟ್ಟು ಸಹಾಯಮಾಡಿದರು. 7 ಅಲ್ಲಿಂದ ನೆಬೂಕದ್ನೆಚ್ಚರನು ಯೆರೂಸಲೇಮಿನಿಂದ ಕೊಳ್ಳೆಯಾಗಿ ತಂದು ತನ್ನ ದೇವರ ಗುಡಿಯಲ್ಲಿ ಇಟ್ಟಿದ್ದ ಯೆಹೋವನ ಆಲಯದ ಸಾಮಾನುಗಳನ್ನು ಪರ್ಷಿಯ ರಾಜನಾದ ಕೋರೆಷನು ಅಲ್ಲಿಂದ ತೆಗೆಸಿದನು. 8 ಅವನು ಅವುಗಳನ್ನು ಖಜಾನೆಯ ಅಧಿಕಾರಿಯಾದ ಮಿತ್ರದಾತನಿಗೆ ಒಪ್ಪಿಸಿದನು. ಇವನು ಅವುಗಳನ್ನು ಯೆಹೂದದ ಪ್ರಭುವಾಗಿರುವ ಶೆಷ್ಬಚ್ಚರನಿಗೆ ಲೆಕ್ಕಮಾಡಿ ಕೊಟ್ಟನು. 9 ಆ ಸಾಮಾನುಗಳ ಲೆಕ್ಕ: ಬಂಗಾರದ ಬೋಗುಣಿಗಳು ಮೂವತ್ತು; ಬೆಳ್ಳಿಯ ಬೋಗುಣಿಗಳು ಒಂದು ಸಾವಿರ; ಕತ್ತಿಗಳು ಇಪ್ಪತ್ತೊಂಭತ್ತು; 10 ಚಿನ್ನದ ಬಟ್ಟಲುಗಳು ಮೂವತ್ತು; ಎರಡನೆಯ ದರ್ಜೆಯ ಬೆಳ್ಳಿಯ ಬಟ್ಟಲುಗಳು ನಾನೂರಹತ್ತು ಮತ್ತು ಇತರ ಪಾತ್ರೆಗಳು ಒಂದು ಸಾವಿರ. 11 ಬೆಳ್ಳಿಬಂಗಾರದ ಎಲ್ಲಾ ಸಾಮಾನುಗಳ ಒಟ್ಟು ಸಂಖ್ಯೆಯು ಐದು ಸಾವಿರದ ನಾನೂರು. ಶೆಷ್ಬಚ್ಚರನು ಸೆರೆಯಲ್ಲಿದ್ದವರನ್ನು ಬಾಬಿಲೋನಿನಿಂದ ಯೆರೂಸಲೇಮಿಗೆ ಕರೆದುಕೊಂಡು ಬಂದಾಗ ಈ ಎಲ್ಲಾ ಸಾಮಾನುಗಳನ್ನು ತೆಗೆದುಕೊಂಡು ಬಂದನು.

In Other Versions

Ezra 1 in the ANGEFD

Ezra 1 in the ANTPNG2D

Ezra 1 in the AS21

Ezra 1 in the BAGH

Ezra 1 in the BBPNG

Ezra 1 in the BBT1E

Ezra 1 in the BDS

Ezra 1 in the BEV

Ezra 1 in the BHAD

Ezra 1 in the BIB

Ezra 1 in the BLPT

Ezra 1 in the BNT

Ezra 1 in the BNTABOOT

Ezra 1 in the BNTLV

Ezra 1 in the BOATCB

Ezra 1 in the BOATCB2

Ezra 1 in the BOBCV

Ezra 1 in the BOCNT

Ezra 1 in the BOECS

Ezra 1 in the BOGWICC

Ezra 1 in the BOHCB

Ezra 1 in the BOHCV

Ezra 1 in the BOHLNT

Ezra 1 in the BOHNTLTAL

Ezra 1 in the BOICB

Ezra 1 in the BOILNTAP

Ezra 1 in the BOITCV

Ezra 1 in the BOKCV

Ezra 1 in the BOKCV2

Ezra 1 in the BOKHWOG

Ezra 1 in the BOKSSV

Ezra 1 in the BOLCB

Ezra 1 in the BOLCB2

Ezra 1 in the BOMCV

Ezra 1 in the BONAV

Ezra 1 in the BONCB

Ezra 1 in the BONLT

Ezra 1 in the BONUT2

Ezra 1 in the BOPLNT

Ezra 1 in the BOSCB

Ezra 1 in the BOSNC

Ezra 1 in the BOTLNT

Ezra 1 in the BOVCB

Ezra 1 in the BOYCB

Ezra 1 in the BPBB

Ezra 1 in the BPH

Ezra 1 in the BSB

Ezra 1 in the CCB

Ezra 1 in the CUV

Ezra 1 in the CUVS

Ezra 1 in the DBT

Ezra 1 in the DGDNT

Ezra 1 in the DHNT

Ezra 1 in the DNT

Ezra 1 in the ELBE

Ezra 1 in the EMTV

Ezra 1 in the ESV

Ezra 1 in the FBV

Ezra 1 in the FEB

Ezra 1 in the GGMNT

Ezra 1 in the GNT

Ezra 1 in the HARY

Ezra 1 in the HNT

Ezra 1 in the IRVA

Ezra 1 in the IRVB

Ezra 1 in the IRVG

Ezra 1 in the IRVH

Ezra 1 in the IRVM

Ezra 1 in the IRVM2

Ezra 1 in the IRVO

Ezra 1 in the IRVP

Ezra 1 in the IRVT

Ezra 1 in the IRVT2

Ezra 1 in the IRVU

Ezra 1 in the ISVN

Ezra 1 in the JSNT

Ezra 1 in the KAPI

Ezra 1 in the KBT1ETNIK

Ezra 1 in the KBV

Ezra 1 in the KJV

Ezra 1 in the KNFD

Ezra 1 in the LBA

Ezra 1 in the LBLA

Ezra 1 in the LNT

Ezra 1 in the LSV

Ezra 1 in the MAAL

Ezra 1 in the MBV

Ezra 1 in the MBV2

Ezra 1 in the MHNT

Ezra 1 in the MKNFD

Ezra 1 in the MNG

Ezra 1 in the MNT

Ezra 1 in the MNT2

Ezra 1 in the MRS1T

Ezra 1 in the NAA

Ezra 1 in the NASB

Ezra 1 in the NBLA

Ezra 1 in the NBS

Ezra 1 in the NBVTP

Ezra 1 in the NET2

Ezra 1 in the NIV11

Ezra 1 in the NNT

Ezra 1 in the NNT2

Ezra 1 in the NNT3

Ezra 1 in the PDDPT

Ezra 1 in the PFNT

Ezra 1 in the RMNT

Ezra 1 in the SBIAS

Ezra 1 in the SBIBS

Ezra 1 in the SBIBS2

Ezra 1 in the SBICS

Ezra 1 in the SBIDS

Ezra 1 in the SBIGS

Ezra 1 in the SBIHS

Ezra 1 in the SBIIS

Ezra 1 in the SBIIS2

Ezra 1 in the SBIIS3

Ezra 1 in the SBIKS

Ezra 1 in the SBIKS2

Ezra 1 in the SBIMS

Ezra 1 in the SBIOS

Ezra 1 in the SBIPS

Ezra 1 in the SBISS

Ezra 1 in the SBITS

Ezra 1 in the SBITS2

Ezra 1 in the SBITS3

Ezra 1 in the SBITS4

Ezra 1 in the SBIUS

Ezra 1 in the SBIVS

Ezra 1 in the SBT

Ezra 1 in the SBT1E

Ezra 1 in the SCHL

Ezra 1 in the SNT

Ezra 1 in the SUSU

Ezra 1 in the SUSU2

Ezra 1 in the SYNO

Ezra 1 in the TBIAOTANT

Ezra 1 in the TBT1E

Ezra 1 in the TBT1E2

Ezra 1 in the TFTIP

Ezra 1 in the TFTU

Ezra 1 in the TGNTATF3T

Ezra 1 in the THAI

Ezra 1 in the TNFD

Ezra 1 in the TNT

Ezra 1 in the TNTIK

Ezra 1 in the TNTIL

Ezra 1 in the TNTIN

Ezra 1 in the TNTIP

Ezra 1 in the TNTIZ

Ezra 1 in the TOMA

Ezra 1 in the TTENT

Ezra 1 in the UBG

Ezra 1 in the UGV

Ezra 1 in the UGV2

Ezra 1 in the UGV3

Ezra 1 in the VBL

Ezra 1 in the VDCC

Ezra 1 in the YALU

Ezra 1 in the YAPE

Ezra 1 in the YBVTP

Ezra 1 in the ZBP