1 Kings 17 (BOKCV2)

1 ಗಿಲ್ಯಾದಿನ ಪ್ರವಾಸಿಗಳಲ್ಲಿ ತಿಷ್ಬೀಯ ಊರಿನವನಾದ ಎಲೀಯನು ಅಹಾಬನಿಗೆ, “ನಾನು ಸನ್ನಿಧಿಸೇವೆ ಮಾಡುತ್ತಿರುವ ಇಸ್ರಾಯೇಲ್ ದೇವರಾದ ಯೆಹೋವ ದೇವರ ಜೀವದಾಣೆ, ನನ್ನ ಮಾತಿನ ಪ್ರಕಾರ ಸೂಚಿಸಿದ ಹೊರತು ಇಂದಿನಿಂದ ಕೆಲವು ವರ್ಷಗಳವರೆಗೆ ಮಂಜಾಗಲಿ ಅಥವಾ ಮಳೆಯಾಗಲಿ ಬೀಳುವುದಿಲ್ಲ,” ಎಂದನು. 2 ಯೆಹೋವ ದೇವರ ಮಾತು ಅವನಿಗೆ ಉಂಟಾಗಿ, 3 “ನೀನು ಈ ಸ್ಥಳವನ್ನು ಬಿಟ್ಟು ಪೂರ್ವದಿಕ್ಕಿಗೆ ಹೋಗಿ, ಯೊರ್ದನಿಗೆ ಎದುರಿಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ಅಡಗಿಕೊಂಡಿರು. 4 ಅಲ್ಲಿ ನೀನು ಆ ಹೊಳೆಯ ನೀರನ್ನು ಕುಡಿಯುವೆ. ಅಲ್ಲಿ ನಿನಗೆ ಆಹಾರವನ್ನು ತಂದು ಕೊಡಲು ನಾನು ಕಾಗೆಗಳಿಗೆ ಆಜ್ಞಾಪಿಸಿದ್ದೇನೆ,” ಎಂದು ಹೇಳಿದನು. 5 ಅವನು ಹೋಗಿ ಯೆಹೋವ ದೇವರ ಮಾತಿನ ಹಾಗೆಯೇ ಮಾಡಿದನು. ಅವನು ಹೋಗಿ ಯೊರ್ದನಿಗೆ ಎದುರಾಗಿರುವ ಕೆರೀತ್ ಹಳ್ಳದ ಬಳಿಯಲ್ಲಿ ವಾಸವಾಗಿದ್ದನು. 6 ಕಾಗೆಗಳು ಅವನಿಗೆ ಉದಯಕಾಲದಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ, ಸಂಜೆಯಲ್ಲಿ ರೊಟ್ಟಿಯನ್ನೂ, ಮಾಂಸವನ್ನೂ ತೆಗೆದುಕೊಂಡು ಬಂದವು, ಅವನು ಆ ಹೊಳೆಯ ನೀರನ್ನು ಕುಡಿದನು. 7 ಸ್ವಲ್ಪ ಕಾಲವಾದ ಮೇಲೆ ದೇಶದಲ್ಲಿ ಮಳೆ ಇಲ್ಲದ್ದರಿಂದ ಆ ಹಳ್ಳವು ಬತ್ತಿಹೋಯಿತು. 8 ಯೆಹೋವ ದೇವರ ವಾಕ್ಯವು ಅವನಿಗೆ ಉಂಟಾಗಿ, 9 “ನೀನೆದ್ದು ಸೀದೋನಿಗೆ ಹೊಂದಿದ ಚಾರೆಪತಕ್ಕೆ ಹೋಗಿ ಅಲ್ಲಿ ವಾಸವಾಗಿರು. ನಿನ್ನನ್ನು ಸಂರಕ್ಷಣೆ ಮಾಡಲು ಅಲ್ಲಿರುವ ಒಬ್ಬ ವಿಧವೆಗೆ ಆಜ್ಞಾಪಿಸಿದ್ದೇನೆ,” ಎಂದರು. 10 ಹಾಗೆಯೇ ಅವನೆದ್ದು ಚಾರೆಪತಕ್ಕೆ ಹೋಗಿ, ಪಟ್ಟಣದ ಬಾಗಿಲ ಬಳಿಗೆ ಬಂದಾಗ, ಅಲ್ಲಿ ಒಬ್ಬ ವಿಧವೆಯು ಕಟ್ಟಿಗೆಗಳನ್ನು ಆರಿಸಿಕೊಳ್ಳುತ್ತಾ ಇದ್ದಳು. ಅವನು ಅವಳನ್ನು ಕರೆದು, “ನೀನು ದಯಮಾಡಿ ನನಗೆ ಕುಡಿಯುವುದಕ್ಕೆ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ತೆಗೆದುಕೊಂಡು ಬಾ,” ಎಂದನು. 11 ಅವಳು ತೆಗೆದುಕೊಂಡು ಬರಲು ಹೋಗುತ್ತಿರುವಾಗ ಅವನು ಅವಳನ್ನು ಕರೆದು, “ನೀನು ದಯಮಾಡಿ ನಿನ್ನ ಕೈಯಲ್ಲಿ ರೊಟ್ಟಿಯ ತುಂಡನ್ನು ನನಗೆ ತೆಗೆದುಕೊಂಡು ಬಾ,” ಎಂದನು. 12 ಅದಕ್ಕೆ ಅವಳು, “ನಿನ್ನ ದೇವರಾದ ಯೆಹೋವ ದೇವರಾಣೆ, ಮಡಕೆಯಲ್ಲಿ ಒಂದು ಹಿಡಿ ಹಿಟ್ಟೂ, ಕುಡಿಕೆಯಲ್ಲಿ ಸ್ವಲ್ಪ ಎಣ್ಣೆಯ ಹೊರತಾಗಿ ನನಗೆ ಬೇರೇನೂ ಇಲ್ಲ. ನಾನೂ, ನನ್ನ ಪುತ್ರನೂ ಅದನ್ನು ತಿಂದು ಸತ್ತು ಹೋಗುವಹಾಗೆ ಅದನ್ನು ನನಗೂ, ಅವನಿಗೂ ಸಿದ್ಧಮಾಡಲು ಎರಡು ಕಟ್ಟಿಗೆಗಳನ್ನು ಕೂಡಿಸಿಕೊಂಡಿದ್ದೇನೆ,” ಎಂದಳು. 13 ಆಗ ಎಲೀಯನು ಅವಳಿಗೆ, “ಭಯಪಡಬೇಡ, ನೀನು ಹೇಳಿದ ಪ್ರಕಾರವೇ ಮಾಡು. ಆದರೆ ಮೊದಲು ಅದರಲ್ಲಿ ನನಗೆ ಒಂದು ಚಿಕ್ಕ ರೊಟ್ಟಿಮಾಡಿ, ನನ್ನ ಬಳಿಗೆ ತೆಗೆದುಕೊಂಡು ಬಾ. ತರುವಾಯ ನಿನಗೂ, ನಿನ್ನ ಮಗನಿಗೂ ಸಿದ್ಧಮಾಡಿಕೋ. 14 ಏಕೆಂದರೆ, ‘ಯೆಹೋವ ದೇವರು ಭೂಮಿಯ ಮೇಲೆ ಮಳೆಯನ್ನು ಕೊಡುವವರೆಗೂ ಮಡಕೆಯಲ್ಲಿರುವ ಹಿಟ್ಟು ತೀರುವುದಿಲ್ಲ. ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯುವುದಿಲ್ಲ,’ ಎಂದು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುತ್ತಾರೆ,” ಎಂದನು. 15 ಆಗ ಅವಳು ಹೋಗಿ ಎಲೀಯನ ಮಾತಿನ ಹಾಗೆಯೇ ಮಾಡಿದಳು. ಎಲೀಯನಿಗೂ, ಮಹಿಳೆಗೂ, ಆಕೆಯ ಮಗನಿಗೂ ಪ್ರತಿದಿನ ಸಾಕಾಗುವಷ್ಟು ಆಹಾರವಿತ್ತು. 16 ಯೆಹೋವ ದೇವರು ಎಲೀಯನ ಮುಖಾಂತರ ಹೇಳಿದ ವಾಕ್ಯದ ಪ್ರಕಾರವೇ ಮಡಕೆಯಲ್ಲಿರುವ ಹಿಟ್ಟು ತೀರದೆ, ಕುಡಿಕೆಯಲ್ಲಿರುವ ಎಣ್ಣೆಯು ಮುಗಿಯದೆ ಇತ್ತು. 17 ಸ್ವಲ್ಪ ಸಮಯದ ತರುವಾಯ, ಮನೆಯ ಯಜಮಾನಿಯಾದ ಆ ಸ್ತ್ರೀಯ ಮಗನು ಅಸ್ವಸ್ಥನಾದನು. ಕೊನೆಗೆ ರೋಗವು ಹೆಚ್ಚಾಗಿದ್ದುದರಿಂದ ಉಸಿರಾಡುವುದು ನಿಂತುಹೋಯಿತು. 18 ಆಗ ಅವಳು ಎಲೀಯನಿಗೆ, “ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವುದಕ್ಕೂ, ನನ್ನ ಮಗನು ಸಾಯುವುದಕ್ಕೂ ನನ್ನ ಬಳಿಗೆ ಬಂದಿಯೋ?” ಎಂದಳು. 19 ಅವನು ಅವಳಿಗೆ, “ನಿನ್ನ ಮಗನನ್ನು ನನಗೆ ಕೊಡು,” ಎಂದು ಹೇಳಿ, ಅವನನ್ನು ಅವಳ ಮಡಿಲಿನಿಂದ ಎತ್ತಿಕೊಂಡು, ತಾನು ವಾಸವಾಗಿದ್ದ ಮಾಳಿಗೆಯ ಕೋಣೆಗೆ ಹೋಗಿ, ಅವನನ್ನು ಮಂಚದ ಮೇಲೆ ಮಲಗಿಸಿದನು. 20 “ನನ್ನ ದೇವರಾದ ಯೆಹೋವ ದೇವರೇ, ವಿಧವೆಯ ಮಗನನ್ನು ಕೊಂದುಹಾಕುವ ಈ ದುರಂತ ಅವಳ ಮೇಲೆ ಬರಮಾಡಿದಿಯಲ್ಲಾ?” ಎಂದು ಯೆಹೋವ ದೇವರನ್ನು ಕೂಗಿ ಬೇಡಿದನು. 21 ಅವನು ಬಾಲಕನ ಮೇಲೆ ಮೂರು ಸಾರಿ ಬೋರಲು ಬಿದ್ದು, “ನನ್ನ ದೇವರಾದ ಯೆಹೋವ ದೇವರೇ, ಈ ಬಾಲಕನ ಪ್ರಾಣ ಅವನಲ್ಲಿ ತಿರುಗಿಬರಲಿ,” ಎಂದು ಯೆಹೋವ ದೇವರನ್ನು ಕೂಗಿದನು. 22 ಯೆಹೋವ ದೇವರು ಎಲೀಯನ ಪ್ರಾರ್ಥನೆಯನ್ನು ಕೇಳಿದ್ದರಿಂದ ಬಾಲಕನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರುಗಿ ಬಂತು. 23 ಆಗ ಎಲೀಯನು ಬಾಲಕನನ್ನು ಎತ್ತಿಕೊಂಡು ಉಪ್ಪರಿಗೆಯಿಂದ ಕೆಳಗಿರುವ ಮನೆಗೆ ತೆಗೆದುಕೊಂಡು ಬಂದು, ಅವನನ್ನು ಅವನ ತಾಯಿಗೆ ಕೊಟ್ಟು, “ನೋಡು, ನಿನ್ನ ಮಗನು ಜೀವದಿಂದಿದ್ದಾನೆ,” ಎಂದು ಹೇಳಿದನು. 24 ಸ್ತ್ರೀಯು ಎಲೀಯನಿಗೆ, “ನೀನು ದೇವರ ಮನುಷ್ಯನೆಂದೂ, ನಿನ್ನ ಬಾಯಲ್ಲಿರುವ ಯೆಹೋವ ದೇವರ ವಾಕ್ಯವು ಸತ್ಯವೆಂದೂ ಇದರಿಂದ ಈಗ ತಿಳಿದಿದ್ದೇನೆ,” ಎಂದಳು.

In Other Versions

1 Kings 17 in the ANGEFD

1 Kings 17 in the ANTPNG2D

1 Kings 17 in the AS21

1 Kings 17 in the BAGH

1 Kings 17 in the BBPNG

1 Kings 17 in the BBT1E

1 Kings 17 in the BDS

1 Kings 17 in the BEV

1 Kings 17 in the BHAD

1 Kings 17 in the BIB

1 Kings 17 in the BLPT

1 Kings 17 in the BNT

1 Kings 17 in the BNTABOOT

1 Kings 17 in the BNTLV

1 Kings 17 in the BOATCB

1 Kings 17 in the BOATCB2

1 Kings 17 in the BOBCV

1 Kings 17 in the BOCNT

1 Kings 17 in the BOECS

1 Kings 17 in the BOGWICC

1 Kings 17 in the BOHCB

1 Kings 17 in the BOHCV

1 Kings 17 in the BOHLNT

1 Kings 17 in the BOHNTLTAL

1 Kings 17 in the BOICB

1 Kings 17 in the BOILNTAP

1 Kings 17 in the BOITCV

1 Kings 17 in the BOKCV

1 Kings 17 in the BOKHWOG

1 Kings 17 in the BOKSSV

1 Kings 17 in the BOLCB

1 Kings 17 in the BOLCB2

1 Kings 17 in the BOMCV

1 Kings 17 in the BONAV

1 Kings 17 in the BONCB

1 Kings 17 in the BONLT

1 Kings 17 in the BONUT2

1 Kings 17 in the BOPLNT

1 Kings 17 in the BOSCB

1 Kings 17 in the BOSNC

1 Kings 17 in the BOTLNT

1 Kings 17 in the BOVCB

1 Kings 17 in the BOYCB

1 Kings 17 in the BPBB

1 Kings 17 in the BPH

1 Kings 17 in the BSB

1 Kings 17 in the CCB

1 Kings 17 in the CUV

1 Kings 17 in the CUVS

1 Kings 17 in the DBT

1 Kings 17 in the DGDNT

1 Kings 17 in the DHNT

1 Kings 17 in the DNT

1 Kings 17 in the ELBE

1 Kings 17 in the EMTV

1 Kings 17 in the ESV

1 Kings 17 in the FBV

1 Kings 17 in the FEB

1 Kings 17 in the GGMNT

1 Kings 17 in the GNT

1 Kings 17 in the HARY

1 Kings 17 in the HNT

1 Kings 17 in the IRVA

1 Kings 17 in the IRVB

1 Kings 17 in the IRVG

1 Kings 17 in the IRVH

1 Kings 17 in the IRVK

1 Kings 17 in the IRVM

1 Kings 17 in the IRVM2

1 Kings 17 in the IRVO

1 Kings 17 in the IRVP

1 Kings 17 in the IRVT

1 Kings 17 in the IRVT2

1 Kings 17 in the IRVU

1 Kings 17 in the ISVN

1 Kings 17 in the JSNT

1 Kings 17 in the KAPI

1 Kings 17 in the KBT1ETNIK

1 Kings 17 in the KBV

1 Kings 17 in the KJV

1 Kings 17 in the KNFD

1 Kings 17 in the LBA

1 Kings 17 in the LBLA

1 Kings 17 in the LNT

1 Kings 17 in the LSV

1 Kings 17 in the MAAL

1 Kings 17 in the MBV

1 Kings 17 in the MBV2

1 Kings 17 in the MHNT

1 Kings 17 in the MKNFD

1 Kings 17 in the MNG

1 Kings 17 in the MNT

1 Kings 17 in the MNT2

1 Kings 17 in the MRS1T

1 Kings 17 in the NAA

1 Kings 17 in the NASB

1 Kings 17 in the NBLA

1 Kings 17 in the NBS

1 Kings 17 in the NBVTP

1 Kings 17 in the NET2

1 Kings 17 in the NIV11

1 Kings 17 in the NNT

1 Kings 17 in the NNT2

1 Kings 17 in the NNT3

1 Kings 17 in the PDDPT

1 Kings 17 in the PFNT

1 Kings 17 in the RMNT

1 Kings 17 in the SBIAS

1 Kings 17 in the SBIBS

1 Kings 17 in the SBIBS2

1 Kings 17 in the SBICS

1 Kings 17 in the SBIDS

1 Kings 17 in the SBIGS

1 Kings 17 in the SBIHS

1 Kings 17 in the SBIIS

1 Kings 17 in the SBIIS2

1 Kings 17 in the SBIIS3

1 Kings 17 in the SBIKS

1 Kings 17 in the SBIKS2

1 Kings 17 in the SBIMS

1 Kings 17 in the SBIOS

1 Kings 17 in the SBIPS

1 Kings 17 in the SBISS

1 Kings 17 in the SBITS

1 Kings 17 in the SBITS2

1 Kings 17 in the SBITS3

1 Kings 17 in the SBITS4

1 Kings 17 in the SBIUS

1 Kings 17 in the SBIVS

1 Kings 17 in the SBT

1 Kings 17 in the SBT1E

1 Kings 17 in the SCHL

1 Kings 17 in the SNT

1 Kings 17 in the SUSU

1 Kings 17 in the SUSU2

1 Kings 17 in the SYNO

1 Kings 17 in the TBIAOTANT

1 Kings 17 in the TBT1E

1 Kings 17 in the TBT1E2

1 Kings 17 in the TFTIP

1 Kings 17 in the TFTU

1 Kings 17 in the TGNTATF3T

1 Kings 17 in the THAI

1 Kings 17 in the TNFD

1 Kings 17 in the TNT

1 Kings 17 in the TNTIK

1 Kings 17 in the TNTIL

1 Kings 17 in the TNTIN

1 Kings 17 in the TNTIP

1 Kings 17 in the TNTIZ

1 Kings 17 in the TOMA

1 Kings 17 in the TTENT

1 Kings 17 in the UBG

1 Kings 17 in the UGV

1 Kings 17 in the UGV2

1 Kings 17 in the UGV3

1 Kings 17 in the VBL

1 Kings 17 in the VDCC

1 Kings 17 in the YALU

1 Kings 17 in the YAPE

1 Kings 17 in the YBVTP

1 Kings 17 in the ZBP