2 Kings 15 (BOKCV2)

1 ಇಸ್ರಾಯೇಲಿನ ಅರಸನಾದ ಯಾರೊಬ್ಬಾಮನ ಆಳ್ವಿಕೆಯ ಇಪ್ಪತ್ತೇಳನೆಯ ವರ್ಷದಲ್ಲಿ, ಯೆಹೂದದ ಅರಸನಾಗಿರುವ ಅಮಚ್ಯನ ಮಗ ಅಜರ್ಯನು ಆಳಲು ಆರಂಭಿಸಿದನು. 2 ಅವನು ಅರಸನಾದಾಗ, ಹದಿನಾರು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಐವತ್ತೆರಡು ವರ್ಷ ಆಳಿದನು. ಅವನ ತಾಯಿಯ ಹೆಸರು ಯೆಕೊಲ್ಯಳು, ಅವಳು ಯೆರೂಸಲೇಮಿನವಳು. 3 ಅವನು ತನ್ನ ತಂದೆಯಾದ ಅಮಚ್ಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. 4 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. 5 ಯೆಹೋವ ದೇವರು ಅರಸನನ್ನು ಮರಣದ ದಿವಸದವರೆಗೂ ಕುಷ್ಠರೋಗದಿಂದ ಬಾಧಿಸಿದ್ದರಿಂದ, ಅವನು ಪ್ರತ್ಯೇಕವಾದ ಮನೆಯಲ್ಲಿ ವಾಸವಾಗಿದ್ದನು. ಅರಸನ ಮಗ ಯೋತಾಮನು ರಾಜಗೃಹಾಧಿಪತ್ಯವನ್ನು ಮತ್ತು ಪ್ರಜಾಪಾಲನೆಯನ್ನೂ ನೋಡಿಕೊಳ್ಳುತ್ತಿದ್ದನು. 6 ಅಜರ್ಯನ ಇತರ ಕ್ರಿಯೆಗಳನ್ನು ಅವನು ಮಾಡಿದ ಸಮಸ್ತವನ್ನು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 7 ಅಜರ್ಯನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಬಳಿಯಲ್ಲಿ ಸಮಾಧಿಮಾಡಿದರು. ಅವನಿಗೆ ಬದಲಾಗಿ ಅವನ ಮಗನಾದ ಯೋತಾಮನು ಅರಸನಾದನು. 8 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೆಂಟನೆಯ ವರ್ಷದಲ್ಲಿ ಯಾರೊಬ್ಬಾಮನ ಮಗನಾದ ಜೆಕರ್ಯನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾದನು. ಅವನು ಆರು ತಿಂಗಳು ಆಳಿದನು. 9 ಅವನು ತನ್ನ ಪಿತೃಗಳು ಮಾಡಿದ ಪ್ರಕಾರ, ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. 10 ಯಾಬೇಷನ ಮಗ ಶಲ್ಲೂಮನು ಜೆಕರ್ಯನ ಮೇಲೆ ಒಳಸಂಚುಮಾಡಿ, ಜನರ ಮುಂದೆ ಅವನನ್ನು ಹೊಡೆದು, ಕೊಂದುಹಾಕಿ, ಅವನಿಗೆ ಬದಲಾಗಿ ಅರಸನಾದನು. 11 ಜೆಕರ್ಯನ ಇತರ ಕ್ರಿಯೆಗಳು ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 12 “ನಿನ್ನ ಸಂತತಿಯವರು ನಾಲ್ಕನೆಯ ತಲೆಮಾರಿನವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು,” ಎಂದು ಯೆಹೋವ ದೇವರು ಯೇಹುವಿಗೆ ಹೇಳಿದ ವಾಕ್ಯದಂತೆ ಇವೆಲ್ಲವೂ ನೆರವೇರಿತು. 13 ಯೆಹೂದದ ಅರಸನಾದ ಉಜ್ಜೀಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಯಾಬೇಷನ ಮಗ ಶಲ್ಲೂಮನು ಅರಸನಾಗಿ, ಸಮಾರ್ಯದಲ್ಲಿ ಒಂದು ತಿಂಗಳು ಆಳಿದನು. 14 ಗಾದಿಯ ಮಗ ಮೆನಹೇಮನು ತಿರ್ಚದಿಂದ ಸಮಾರ್ಯಕ್ಕೆ ಬಂದು, ಸಮಾರ್ಯದಲ್ಲಿ ಯಾಬೇಷನ ಮಗ ಶಲ್ಲೂಮನನ್ನು ಹೊಡೆದು, ಕೊಂದುಹಾಕಿ ಅವನಿಗೆ ಬದಲಾಗಿ ಅರಸನಾದನು. 15 ಶಲ್ಲೂಮನ ಇತರ ಕ್ರಿಯೆಗಳೂ ಅವನು ಮಾಡಿದ ಒಳಸಂಚೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 16 ಆ ಸಮಯದಲ್ಲಿ ಮೆನಹೇಮನು ತಿರ್ಚದಿಂದ ತಿಪ್ಸಹು ಪಟ್ಟಣಕ್ಕೆ ಹೋದಾಗ ಅಲ್ಲಿಯವರು ತಮ್ಮ ಊರುಬಾಗಿಲುಗಳನ್ನು ತನಗೆ ತೆರೆಯದೆ ಇದ್ದುದರಿಂದ ಎಲ್ಲರನ್ನೂ, ಅದರ ಮೇರೆಗಳಲ್ಲಿದ್ದವರೆಲ್ಲರನ್ನೂ ಸಂಹರಿಸಿದನು. ತಿಪ್ಸಹವನ್ನು ಹಾಳು ಮಾಡಿ, ಎಲ್ಲಾ ಗರ್ಭಿಣಿಯರ ಹೊಟ್ಟೆಗಳನ್ನು ಸೀಳಿಸಿದನು. 17 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಮೂವತ್ತೊಂಬತ್ತನೆಯ ವರ್ಷದಲ್ಲಿ ಗಾದಿಯ ಮಗ ಮೆನಹೇಮನು ಇಸ್ರಾಯೇಲರ ಅರಸನಾಗಿ ಸಮಾರ್ಯದಲ್ಲಿ ಹತ್ತು ವರ್ಷ ಆಳಿದನು. 18 ಅವನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ತನ್ನ ದಿವಸಗಳಲ್ಲೆಲ್ಲಾ ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. 19 ಅಸ್ಸೀರಿಯಾ ದೇಶದ ಅರಸನಾದ ಪೂಲನು ಇಸ್ರಾಯೇಲ್ ದೇಶದ ಮೇಲೆ ಯುದ್ಧಕ್ಕೆ ಬಂದನು. ಆಗ ಮೆನಹೇಮನು ಅವನ ಬೆಂಬಲವನ್ನು ಪಡೆಯಲು ಮತ್ತು ರಾಜ್ಯವನ್ನು ದೃಢಪಡಿಸಲು ಪೂಲನಿಗೆ ಮೂವತ್ತು ನಾಲ್ಕು ಸಾವಿರ ಕಿಲೋಗ್ರಾಂ ಬೆಳ್ಳಿಯನ್ನು ಕೊಟ್ಟನು. 20 ಮೆನಹೇಮನು ಈ ಹಣವನ್ನು ಇಸ್ರಾಯೇಲಿನಿಂದ ವಸೂಲಿ ಮಾಡಿದನು. ಪ್ರತಿಯೊಬ್ಬ ಶ್ರೀಮಂತನು ಅಸ್ಸೀರಿಯದ ಅರಸನಿಗೆ ಕೊಡಬೇಕಾದ ಅರ್ಧ ಕಿಲೋಗ್ರಾಂ ಬೆಳ್ಳಿಯನ್ನು ನೀಡಬೇಕಾಗಿತ್ತು. ಆದ್ದರಿಂದ ಅಸ್ಸೀರಿಯದ ಅರಸನು ದೇಶದಲ್ಲಿ ನಿಲ್ಲದೆ ತನ್ನ ಸೈನ್ಯದೊಂದಿಗೆ ಹಿಂದಿರುಗಿ ಹೋದನು. 21 ಮೆನಹೇಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 22 ಮೆನಹೇಮನು ಮೃತನಾಗಿ ತನ್ನ ಪಿತೃಗಳ ಜೊತೆ ಸೇರಿದನು. ಅವನ ಮಗ ಪೆಕಹ್ಯನು ಅವನಿಗೆ ಬದಲಾಗಿ ಅರಸನಾದನು. 23 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೆಯ ವರ್ಷದಲ್ಲಿ ಮೆನಹೇಮನ ಮಗ ಪೆಕಹ್ಯನು ಸಮಾರ್ಯದಲ್ಲಿ ಇಸ್ರಾಯೇಲಿನ ಅರಸನಾಗಿ, ಎರಡು ವರ್ಷ ಆಳಿದನು. 24 ಪೆಕಹ್ಯನು ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆಯಲಿಲ್ಲ. 25 ಆದರೆ ಅವನ ಅಧಿಪತಿಯಾದಂಥ ರೆಮಲ್ಯನ ಮಗ ಪೆಕಹನು ಗಿಲ್ಯಾದಿನ ಐವತ್ತು ಮಂದಿಯನ್ನು ತನ್ನ ಸಂಗಡ ಕೂಡಿಸಿಕೊಂಡು ಪೆಕಹ್ಯನ ವಿರುದ್ಧ ಒಳಸಂಚುಮಾಡಿ, ಸಮಾರ್ಯದಲ್ಲಿರುವ ಅರಮನೆಯ ಗರ್ಭಗೃಹದಲ್ಲಿ ಪೆಕಹ್ಯನನ್ನು ಮತ್ತು ಅರ್ಗೋಬ್, ಅರ್ಯೇ ಎಂಬವರನ್ನು ಕೊಂದುಹಾಕಿದನು. ಅನಂತರ, ಪೆಕಹ್ಯನಿಗೆ ಬದಲಾಗಿ ಪೆಕಹನು ಅರಸನಾದನು. 26 ಪೆಕಹ್ಯನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 27 ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತೆರಡನೆಯ ವರುಷದಲ್ಲಿ ರೆಮಲ್ಯನ ಮಗ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲರ ಅರಸನಾಗಿ, ಇಪ್ಪತ್ತು ವರ್ಷ ಆಳಿದನು. 28 ಅವನು ಯೆಹೋವ ದೇವರ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಅವನು ಇಸ್ರಾಯೇಲನ್ನು ಪಾಪಮಾಡಲು ಪ್ರೇರೇಪಿಸಿದ ನೆಬಾಟನ ಮಗ ಯಾರೊಬ್ಬಾಮನ ಪಾಪಗಳನ್ನು ತೊರೆದುಬಿಡಲಿಲ್ಲ. 29 ಇಸ್ರಾಯೇಲಿನ ಅರಸನಾದ ಪೆಕಹನ ಕಾಲದಲ್ಲಿ ಅಸ್ಸೀರಿಯದ ಅರಸನಾದ ತಿಗ್ಲತ್ಪಿಲೆಸೆರನು ಬಂದು, ಇಯ್ಯೋನ್, ಆಬೇಲ್ ಬೇತ್ ಮಾಕಾ, ಯಾನೋಹ, ಕೆದೆಷ್, ಹಾಚೋರ್, ಗಿಲ್ಯಾದ್, ಗಲಿಲಾಯ ಮತ್ತು ನಫ್ತಾಲಿಯ ಎಲ್ಲಾ ಭೂಮಿಯನ್ನು ವಶಮಾಡಿಕೊಂಡು, ಜನರನ್ನು ಸೆರೆಯಾಗಿ ಅಸ್ಸೀರಿಯಾ ದೇಶಕ್ಕೆ ಒಯ್ದನು. 30 ಇದಲ್ಲದೆ ಏಲನ ಮಗ ಹೋಶೇಯನು ರೆಮಲ್ಯನ ಮಗ ಪೆಕಹನ ವಿರುದ್ಧ ಒಳಸಂಚುಮಾಡಿ, ಇವನನ್ನು ಉಜ್ಜೀಯನ ಮಗ ಯೋತಾಮನ ಆಳ್ವಿಕೆಯ ಇಪ್ಪತ್ತನೆಯ ವರ್ಷದಲ್ಲಿ ಸಂಹರಿಸಿ, ಅವನಿಗೆ ಬದಲಾಗಿ ಅರಸನಾದನು. 31 ಪೆಕಹನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಇಸ್ರಾಯೇಲಿನ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 32 ಇಸ್ರಾಯೇಲಿನ ಅರಸನೂ, ರೆಮಲ್ಯನ ಮಗನೂ ಆದ ಪೆಕಹನ ಆಳಿಕೆಯ ಎರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಉಜ್ಜೀಯನ ಮಗ ಯೋತಾಮನು ಆಳಲು ಆರಂಭಿಸಿದನು. 33 ಯೋತಾಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಹದಿನಾರು ವರ್ಷ ಆಳಿದನು. ಚಾದೋಕನ ಮಗಳಾದ ಯೆರೂಷ ಅವನ ತಾಯಿ. 34 ಅವನು ತನ್ನ ತಂದೆಯಾದ ಉಜ್ಜೀಯನಂತೆ ಯೆಹೋವ ದೇವರ ದೃಷ್ಟಿಯಲ್ಲಿ ಒಳ್ಳೆಯದನ್ನು ಮಾಡಿದನು. 35 ಆದರೂ ಪೂಜಾಸ್ಥಳಗಳನ್ನು ತೆಗೆದುಹಾಕಲಿಲ್ಲ ಆದ್ದರಿಂದ ಜನರು ಪೂಜಾಸ್ಥಳಗಳ ಮೇಲೆ ಬಲಿಗಳನ್ನೂ ಧೂಪಗಳನ್ನೂ ಅರ್ಪಿಸುವುದನ್ನು ಮುಂದುವರೆಸಿದ್ದರು. ಯೋತಾಮನು ಯೆಹೋವ ದೇವರ ಆಲಯದ ಮೇಲಿನ ಬಾಗಿಲನ್ನು ಕಟ್ಟಿಸಿದನು. 36 ಯೋತಾಮನ ಇತರ ಕ್ರಿಯೆಗಳೂ ಅವನು ಮಾಡಿದ ಸಮಸ್ತವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ. 37 ಆ ದಿವಸಗಳಲ್ಲಿ ಯೆಹೋವ ದೇವರು ಅರಾಮಿನ ಅರಸನಾದ ರೆಚೀನನನ್ನೂ ರೆಮಲ್ಯನ ಮಗ ಪೆಕಹನನ್ನೂ ಯೆಹೂದದ ವಿರೋಧವಾಗಿ ಕಳುಹಿಸಲು ಆರಂಭಿಸಿದರು. 38 ಯೋತಾಮನು ಮೃತನಾಗಿ ತನ್ನ ಪಿತೃಗಳ ಬಳಿಗೆ ಸೇರಿದನು. ಅವನ ಶವವನ್ನು ತಂದೆಯಾದ ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನದಲ್ಲಿ ಸಮಾಧಿಮಾಡಿದರು. ಅವನ ಮಗ ಆಹಾಜನು ಅವನಿಗೆ ಬದಲಾಗಿ ಅರಸನಾದನು.

In Other Versions

2 Kings 15 in the ANGEFD

2 Kings 15 in the ANTPNG2D

2 Kings 15 in the AS21

2 Kings 15 in the BAGH

2 Kings 15 in the BBPNG

2 Kings 15 in the BBT1E

2 Kings 15 in the BDS

2 Kings 15 in the BEV

2 Kings 15 in the BHAD

2 Kings 15 in the BIB

2 Kings 15 in the BLPT

2 Kings 15 in the BNT

2 Kings 15 in the BNTABOOT

2 Kings 15 in the BNTLV

2 Kings 15 in the BOATCB

2 Kings 15 in the BOATCB2

2 Kings 15 in the BOBCV

2 Kings 15 in the BOCNT

2 Kings 15 in the BOECS

2 Kings 15 in the BOGWICC

2 Kings 15 in the BOHCB

2 Kings 15 in the BOHCV

2 Kings 15 in the BOHLNT

2 Kings 15 in the BOHNTLTAL

2 Kings 15 in the BOICB

2 Kings 15 in the BOILNTAP

2 Kings 15 in the BOITCV

2 Kings 15 in the BOKCV

2 Kings 15 in the BOKHWOG

2 Kings 15 in the BOKSSV

2 Kings 15 in the BOLCB

2 Kings 15 in the BOLCB2

2 Kings 15 in the BOMCV

2 Kings 15 in the BONAV

2 Kings 15 in the BONCB

2 Kings 15 in the BONLT

2 Kings 15 in the BONUT2

2 Kings 15 in the BOPLNT

2 Kings 15 in the BOSCB

2 Kings 15 in the BOSNC

2 Kings 15 in the BOTLNT

2 Kings 15 in the BOVCB

2 Kings 15 in the BOYCB

2 Kings 15 in the BPBB

2 Kings 15 in the BPH

2 Kings 15 in the BSB

2 Kings 15 in the CCB

2 Kings 15 in the CUV

2 Kings 15 in the CUVS

2 Kings 15 in the DBT

2 Kings 15 in the DGDNT

2 Kings 15 in the DHNT

2 Kings 15 in the DNT

2 Kings 15 in the ELBE

2 Kings 15 in the EMTV

2 Kings 15 in the ESV

2 Kings 15 in the FBV

2 Kings 15 in the FEB

2 Kings 15 in the GGMNT

2 Kings 15 in the GNT

2 Kings 15 in the HARY

2 Kings 15 in the HNT

2 Kings 15 in the IRVA

2 Kings 15 in the IRVB

2 Kings 15 in the IRVG

2 Kings 15 in the IRVH

2 Kings 15 in the IRVK

2 Kings 15 in the IRVM

2 Kings 15 in the IRVM2

2 Kings 15 in the IRVO

2 Kings 15 in the IRVP

2 Kings 15 in the IRVT

2 Kings 15 in the IRVT2

2 Kings 15 in the IRVU

2 Kings 15 in the ISVN

2 Kings 15 in the JSNT

2 Kings 15 in the KAPI

2 Kings 15 in the KBT1ETNIK

2 Kings 15 in the KBV

2 Kings 15 in the KJV

2 Kings 15 in the KNFD

2 Kings 15 in the LBA

2 Kings 15 in the LBLA

2 Kings 15 in the LNT

2 Kings 15 in the LSV

2 Kings 15 in the MAAL

2 Kings 15 in the MBV

2 Kings 15 in the MBV2

2 Kings 15 in the MHNT

2 Kings 15 in the MKNFD

2 Kings 15 in the MNG

2 Kings 15 in the MNT

2 Kings 15 in the MNT2

2 Kings 15 in the MRS1T

2 Kings 15 in the NAA

2 Kings 15 in the NASB

2 Kings 15 in the NBLA

2 Kings 15 in the NBS

2 Kings 15 in the NBVTP

2 Kings 15 in the NET2

2 Kings 15 in the NIV11

2 Kings 15 in the NNT

2 Kings 15 in the NNT2

2 Kings 15 in the NNT3

2 Kings 15 in the PDDPT

2 Kings 15 in the PFNT

2 Kings 15 in the RMNT

2 Kings 15 in the SBIAS

2 Kings 15 in the SBIBS

2 Kings 15 in the SBIBS2

2 Kings 15 in the SBICS

2 Kings 15 in the SBIDS

2 Kings 15 in the SBIGS

2 Kings 15 in the SBIHS

2 Kings 15 in the SBIIS

2 Kings 15 in the SBIIS2

2 Kings 15 in the SBIIS3

2 Kings 15 in the SBIKS

2 Kings 15 in the SBIKS2

2 Kings 15 in the SBIMS

2 Kings 15 in the SBIOS

2 Kings 15 in the SBIPS

2 Kings 15 in the SBISS

2 Kings 15 in the SBITS

2 Kings 15 in the SBITS2

2 Kings 15 in the SBITS3

2 Kings 15 in the SBITS4

2 Kings 15 in the SBIUS

2 Kings 15 in the SBIVS

2 Kings 15 in the SBT

2 Kings 15 in the SBT1E

2 Kings 15 in the SCHL

2 Kings 15 in the SNT

2 Kings 15 in the SUSU

2 Kings 15 in the SUSU2

2 Kings 15 in the SYNO

2 Kings 15 in the TBIAOTANT

2 Kings 15 in the TBT1E

2 Kings 15 in the TBT1E2

2 Kings 15 in the TFTIP

2 Kings 15 in the TFTU

2 Kings 15 in the TGNTATF3T

2 Kings 15 in the THAI

2 Kings 15 in the TNFD

2 Kings 15 in the TNT

2 Kings 15 in the TNTIK

2 Kings 15 in the TNTIL

2 Kings 15 in the TNTIN

2 Kings 15 in the TNTIP

2 Kings 15 in the TNTIZ

2 Kings 15 in the TOMA

2 Kings 15 in the TTENT

2 Kings 15 in the UBG

2 Kings 15 in the UGV

2 Kings 15 in the UGV2

2 Kings 15 in the UGV3

2 Kings 15 in the VBL

2 Kings 15 in the VDCC

2 Kings 15 in the YALU

2 Kings 15 in the YAPE

2 Kings 15 in the YBVTP

2 Kings 15 in the ZBP