Deuteronomy 10 (BOKCV2)
1 ಆ ಕಾಲದಲ್ಲಿ ಯೆಹೋವ ದೇವರು ನನಗೆ, “ಮೊದಲಿನವುಗಳ ಹಾಗೆ ಎರಡು ಕಲ್ಲಿನ ಹಲಗೆಗಳನ್ನು ನೀನು ಕೆತ್ತಿಕೊಂಡು, ಬೆಟ್ಟವನ್ನೇರಿ ನನ್ನ ಬಳಿಗೆ ಬಾ. ಒಂದು ಮರದ ಮಂಜೂಷವನ್ನು ಮಾಡಿಕೊಳ್ಳಬೇಕು. 2 ಆಗ ನೀನು ಒಡೆದ ಆ ಮೊದಲಿನ ಹಲಗೆಗಳ ಮೇಲಿದ್ದ ಮಾತುಗಳನ್ನು ಈ ಹಲಗೆಗಳ ಮೇಲೆ ಬರೆಯುವೆನು. ಆಮೇಲೆ ನೀನು ಅವುಗಳನ್ನು ಮಂಜೂಷದಲ್ಲಿ ಇಡಬೇಕು,” ಎಂದು ಹೇಳಿದರು. 3 ಈ ಪ್ರಕಾರ ನಾನು ಜಾಲಿ ಮರದ ಮಂಜೂಷವನ್ನು ಮಾಡಿ, ಕಲ್ಲಿನ ಎರಡು ಹಲಗೆಗಳನ್ನು ಮುಂಚಿನವುಗಳಂತೆ ಕೆತ್ತಿ, ಆ ಎರಡು ಹಲಗೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟವನ್ನೇರಿದೆನು. 4 ಆ ಹಲಗೆಗಳ ಮೇಲೆ ಯೆಹೋವ ದೇವರು ಮುಂಚೆ ಬರೆದಿದ್ದ ಪ್ರಕಾರ ಬರೆದರು. ಅವರು ನಿಮಗೆ ಬೆಟ್ಟದಲ್ಲಿ ಬೆಂಕಿಯೊಳಗಿಂದ ಸಭೆಕೂಡಿದ ದಿವಸದಲ್ಲಿ ಹೇಳಿದ ಆ ಹತ್ತು ಆಜ್ಞೆಗಳನ್ನು ಬರೆದು ನನಗೆ ಕೊಟ್ಟರು. 5 ತರುವಾಯ ನಾನು ಬೆಟ್ಟದಿಂದ ಇಳಿದುಬಂದು, ಆ ಹಲಗೆಗಳನ್ನು ಯೆಹೋವ ದೇವರು ನನಗೆ ಆಜ್ಞಾಪಿಸಿದ ಹಾಗೆ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆನು. ಅವು ಅಲ್ಲಿಯೇ ಇರುತ್ತವೆ. 6 ಇಸ್ರಾಯೇಲರು ಯಾಕಾನನ ಮಕ್ಕಳ ಬಾವಿಗಳ ಬಳಿಯಿಂದ ಬೇರೋತದಿಂದ ಮೋಸೇರಕ್ಕೆ ಹೊರಟಾಗ, ಆರೋನನು ಅಲ್ಲಿ ಮರಣಹೊಂದಿದನು. ಅಲ್ಲೇ ಅವನನ್ನು ಹೂಳಿಟ್ಟೆವು. ಅವನ ಮಗ ಎಲಿಯಾಜರನು ಅವನ ಬದಲಿಗೆ ಯಾಜಕನಾದನು. 7 ಅಲ್ಲಿಂದ ಅವರು ಗುದ್ಗೋದಕ್ಕೂ, ಗುದ್ಗೋದದಿಂದ ನೀರಿನ ಪ್ರವಾಹಗಳುಳ್ಳ ದೇಶವಾದ ಯೊಟ್ಬಾತಕ್ಕೂ ಪ್ರಯಾಣಮಾಡಿದರು. 8 ಆ ಕಾಲದಲ್ಲಿ ಯೆಹೋವ ದೇವರು ಲೇವಿ ಗೋತ್ರವನ್ನು ದೇವರ ಒಡಂಬಡಿಕೆಯ ಮಂಜೂಷವನ್ನು ಹೊರುವುದಕ್ಕೂ, ಯೆಹೋವ ದೇವರ ಮುಂದೆ ನಿಂತುಕೊಂಡು ಅವರಿಗೆ ಸೇವೆಮಾಡಿ, ಅವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸುವುದಕ್ಕೂ ಅವರನ್ನು ನೇಮಿಸಿದರು. ಅವರು ಈ ದಿನದವರೆಗೂ ಆ ಕೆಲಸವನ್ನು ನಡೆಸುತ್ತಿದ್ದಾರೆ. 9 ಆದ್ದರಿಂದ ಲೇವಿಯರಿಗೆ ಅವರ ಸಹೋದರರ ಸಂಗಡ ಸ್ವಂತವಾದ ಭೂಸ್ವಾಸ್ತ್ಯವು ದೊರೆಯಲಿಲ್ಲ. ನಿಮ್ಮ ಯೆಹೋವ ದೇವರು ಅವರಿಗೆ ವಾಗ್ದಾನ ಮಾಡಿದಂತೆ ಯೆಹೋವ ದೇವರೇ ಅವರ ಸೊತ್ತು. 10 ಇದಲ್ಲದೆ ನಾನು ಮೊದಲಿನಂತೆ ನಲವತ್ತು ದಿವಸ ಹಗಲುರಾತ್ರಿ ಬೆಟ್ಟದಲ್ಲಿ ನಿಂತೆನು. ಯೆಹೋವ ದೇವರು ಆ ಕಾಲದಲ್ಲಿ ನನ್ನ ಪ್ರಾರ್ಥನೆಯನ್ನು ಕೇಳಿ, ನಿಮ್ಮನ್ನು ನಾಶಮಾಡುವುದಕ್ಕೆ ಇಷ್ಟಪಡಲಿಲ್ಲ. 11 ಯೆಹೋವ ದೇವರು ನನಗೆ, “ಜನರ ಮುಂದೆ ಹೋಗು, ನಾನು ಇವರ ಪಿತೃಗಳಿಗೆ ಪ್ರಮಾಣ ಮಾಡಿಕೊಟ್ಟ ದೇಶವನ್ನು ಇವರು ಸೇರಿ ಸ್ವಾಧೀನಮಾಡಿಕೊಳ್ಳಲಿ,” ಎಂದು ಆಜ್ಞಾಪಿಸಿದರು. 12 ಈಗ ಇಸ್ರಾಯೇಲರೇ, ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಟ್ಟು, ಅವರ ಎಲ್ಲಾ ಮಾರ್ಗಗಳಲ್ಲಿ ನಡೆದುಕೊಂಡು, ಅವರನ್ನು ಪ್ರೀತಿಸಿ, ನಿಮ್ಮ ದೇವರಾದ ಯೆಹೋವ ದೇವರಿಗೆ ನಿಮ್ಮ ಪೂರ್ಣಹೃದಯದಿಂದಲೂ, ನಿಮ್ಮ ಪೂರ್ಣಪ್ರಾಣದಿಂದಲೂ ಸೇವೆಮಾಡಿರಿ. 13 ನಾನು ಈ ಹೊತ್ತು ನಿಮ್ಮ ಮೇಲಿಗಾಗಿ ನಿಮಗೆ ಆಜ್ಞಾಪಿಸುವ ಯೆಹೋವ ದೇವರ ಆಜ್ಞೆಗಳನ್ನೂ ಅವರ ನಿಮಯಗಳನ್ನೂ ಕಾಪಾಡುವುದೇ ಹೊರತು, ಮತ್ತೇನೂ ನಮ್ಮ ದೇವರಾಗಿರುವ ಯೆಹೋವ ದೇವರು ನಿಮ್ಮಿಂದ ಕೇಳುತ್ತಾರೆ? 14 ಆಕಾಶವೂ ಉನ್ನತಾಕಾಶವೂ ಭೂಮಿಯೂ ಅದರಲ್ಲಿರುವಂಥಾದ್ದೆಲ್ಲವೂ ನಿಮ್ಮ ದೇವರಾಗಿರುವ ಯೆಹೋವ ದೇವರವುಗಳೇ. 15 ನಿಮ್ಮ ಪಿತೃಗಳ ಮೇಲೆ ಯೆಹೋವ ದೇವರು ತಾವೇ ಮನಸ್ಸಿಟ್ಟು, ಅವರನ್ನು ಪ್ರೀತಿಸಿ, ಅವರ ಸಂತಾನವಾಗಿರುವ ನಿಮ್ಮನ್ನು ಈ ಹೊತ್ತು ಇರುವ ಪ್ರಕಾರ ಎಲ್ಲಾ ಜನರೊಳಗಿಂದ ಆರಿಸಿಕೊಂಡರು. 16 ಹೀಗಿರುವುದರಿಂದ ನಿಮ್ಮ ಹೃದಯದ ಸುನ್ನತಿ ಮಾಡಿಕೊಳ್ಳಿರಿ. ಇನ್ನು ಮೇಲೆ ಹಟಮಾರಿಗಳಾಗಿರಬೇಡಿರಿ. 17 ಏಕೆಂದರೆ ನಿಮ್ಮ ದೇವರಾಗಿರುವ ಯೆಹೋವ ದೇವರು ದೇವರುಗಳ ದೇವರು, ಕರ್ತರ ಕರ್ತರು, ದೇವಾಧಿದೇವರು, ಪರಾಕ್ರಮಿಯೂ, ಭಯಭಕ್ತಿಗೆ ಪಾತ್ರರೂ ಆಗಿದ್ದಾರೆ. ಅವರು ಮುಖದಾಕ್ಷಿಣ್ಯ ನೋಡುವುದಿಲ್ಲ. ಲಂಚ ತೆಗೆದುಕೊಳ್ಳುವುದಿಲ್ಲ. 18 ಅವರು ತಂದೆ ಇಲ್ಲದವರಿಗೂ, ವಿಧವೆಯರಿಗೂ ನ್ಯಾಯ ದೊರಕಿಸುತ್ತಾರೆ. ಪರದೇಶಿಯರನ್ನು ಪ್ರೀತಿಸಿ ಅನ್ನ, ವಸ್ತ್ರ ಕೊಡುತ್ತಾರೆ. 19 ಹೀಗಿರುವುದರಿಂದ ನೀವು ಪರದೇಶಿಯರನ್ನು ಪ್ರೀತಿಸಿರಿ. ಏಕೆಂದರೆ ನೀವು ಈಜಿಪ್ಟಿನಲ್ಲಿ ಪರದೇಶಿಗಳಾಗಿದ್ದೀರಿ. 20 ನೀವು ನಿಮ್ಮ ದೇವರಾದ ಯೆಹೋವ ದೇವರಿಗೆ ಭಯಪಡಬೇಕು. ಅವರ ಸೇವೆಮಾಡಿ ಅವರಿಗೆ ಅಂಟಿಕೊಂಡು, ಅವರ ಹೆಸರಿನಲ್ಲಿ ಪ್ರಮಾಣಮಾಡಬೇಕು. 21 ನೀವು ನೋಡಿದ ಆ ಮಹಾ ಭಯಂಕರವಾದ ಕಾರ್ಯಗಳನ್ನು ನಿಮಗೆ ಮಾಡಿದ ಅವರೇ ನಿಮ್ಮ ಸ್ತೋತ್ರವು. ಅವರೇ ನಿಮ್ಮ ದೇವರು. 22 ಎಪ್ಪತ್ತು ಮಂದಿಯಾಗಿ ನಿಮ್ಮ ಪಿತೃಗಳು ಈಜಿಪ್ಟಿಗೆ ಇಳಿದು ಹೋದರು. ಈಗ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡಿದ್ದಾರೆ.
In Other Versions
Deuteronomy 10 in the ANGEFD
Deuteronomy 10 in the ANTPNG2D
Deuteronomy 10 in the AS21
Deuteronomy 10 in the BAGH
Deuteronomy 10 in the BBPNG
Deuteronomy 10 in the BBT1E
Deuteronomy 10 in the BDS
Deuteronomy 10 in the BEV
Deuteronomy 10 in the BHAD
Deuteronomy 10 in the BIB
Deuteronomy 10 in the BLPT
Deuteronomy 10 in the BNT
Deuteronomy 10 in the BNTABOOT
Deuteronomy 10 in the BNTLV
Deuteronomy 10 in the BOATCB
Deuteronomy 10 in the BOATCB2
Deuteronomy 10 in the BOBCV
Deuteronomy 10 in the BOCNT
Deuteronomy 10 in the BOECS
Deuteronomy 10 in the BOGWICC
Deuteronomy 10 in the BOHCB
Deuteronomy 10 in the BOHCV
Deuteronomy 10 in the BOHLNT
Deuteronomy 10 in the BOHNTLTAL
Deuteronomy 10 in the BOICB
Deuteronomy 10 in the BOILNTAP
Deuteronomy 10 in the BOITCV
Deuteronomy 10 in the BOKCV
Deuteronomy 10 in the BOKHWOG
Deuteronomy 10 in the BOKSSV
Deuteronomy 10 in the BOLCB
Deuteronomy 10 in the BOLCB2
Deuteronomy 10 in the BOMCV
Deuteronomy 10 in the BONAV
Deuteronomy 10 in the BONCB
Deuteronomy 10 in the BONLT
Deuteronomy 10 in the BONUT2
Deuteronomy 10 in the BOPLNT
Deuteronomy 10 in the BOSCB
Deuteronomy 10 in the BOSNC
Deuteronomy 10 in the BOTLNT
Deuteronomy 10 in the BOVCB
Deuteronomy 10 in the BOYCB
Deuteronomy 10 in the BPBB
Deuteronomy 10 in the BPH
Deuteronomy 10 in the BSB
Deuteronomy 10 in the CCB
Deuteronomy 10 in the CUV
Deuteronomy 10 in the CUVS
Deuteronomy 10 in the DBT
Deuteronomy 10 in the DGDNT
Deuteronomy 10 in the DHNT
Deuteronomy 10 in the DNT
Deuteronomy 10 in the ELBE
Deuteronomy 10 in the EMTV
Deuteronomy 10 in the ESV
Deuteronomy 10 in the FBV
Deuteronomy 10 in the FEB
Deuteronomy 10 in the GGMNT
Deuteronomy 10 in the GNT
Deuteronomy 10 in the HARY
Deuteronomy 10 in the HNT
Deuteronomy 10 in the IRVA
Deuteronomy 10 in the IRVB
Deuteronomy 10 in the IRVG
Deuteronomy 10 in the IRVH
Deuteronomy 10 in the IRVK
Deuteronomy 10 in the IRVM
Deuteronomy 10 in the IRVM2
Deuteronomy 10 in the IRVO
Deuteronomy 10 in the IRVP
Deuteronomy 10 in the IRVT
Deuteronomy 10 in the IRVT2
Deuteronomy 10 in the IRVU
Deuteronomy 10 in the ISVN
Deuteronomy 10 in the JSNT
Deuteronomy 10 in the KAPI
Deuteronomy 10 in the KBT1ETNIK
Deuteronomy 10 in the KBV
Deuteronomy 10 in the KJV
Deuteronomy 10 in the KNFD
Deuteronomy 10 in the LBA
Deuteronomy 10 in the LBLA
Deuteronomy 10 in the LNT
Deuteronomy 10 in the LSV
Deuteronomy 10 in the MAAL
Deuteronomy 10 in the MBV
Deuteronomy 10 in the MBV2
Deuteronomy 10 in the MHNT
Deuteronomy 10 in the MKNFD
Deuteronomy 10 in the MNG
Deuteronomy 10 in the MNT
Deuteronomy 10 in the MNT2
Deuteronomy 10 in the MRS1T
Deuteronomy 10 in the NAA
Deuteronomy 10 in the NASB
Deuteronomy 10 in the NBLA
Deuteronomy 10 in the NBS
Deuteronomy 10 in the NBVTP
Deuteronomy 10 in the NET2
Deuteronomy 10 in the NIV11
Deuteronomy 10 in the NNT
Deuteronomy 10 in the NNT2
Deuteronomy 10 in the NNT3
Deuteronomy 10 in the PDDPT
Deuteronomy 10 in the PFNT
Deuteronomy 10 in the RMNT
Deuteronomy 10 in the SBIAS
Deuteronomy 10 in the SBIBS
Deuteronomy 10 in the SBIBS2
Deuteronomy 10 in the SBICS
Deuteronomy 10 in the SBIDS
Deuteronomy 10 in the SBIGS
Deuteronomy 10 in the SBIHS
Deuteronomy 10 in the SBIIS
Deuteronomy 10 in the SBIIS2
Deuteronomy 10 in the SBIIS3
Deuteronomy 10 in the SBIKS
Deuteronomy 10 in the SBIKS2
Deuteronomy 10 in the SBIMS
Deuteronomy 10 in the SBIOS
Deuteronomy 10 in the SBIPS
Deuteronomy 10 in the SBISS
Deuteronomy 10 in the SBITS
Deuteronomy 10 in the SBITS2
Deuteronomy 10 in the SBITS3
Deuteronomy 10 in the SBITS4
Deuteronomy 10 in the SBIUS
Deuteronomy 10 in the SBIVS
Deuteronomy 10 in the SBT
Deuteronomy 10 in the SBT1E
Deuteronomy 10 in the SCHL
Deuteronomy 10 in the SNT
Deuteronomy 10 in the SUSU
Deuteronomy 10 in the SUSU2
Deuteronomy 10 in the SYNO
Deuteronomy 10 in the TBIAOTANT
Deuteronomy 10 in the TBT1E
Deuteronomy 10 in the TBT1E2
Deuteronomy 10 in the TFTIP
Deuteronomy 10 in the TFTU
Deuteronomy 10 in the TGNTATF3T
Deuteronomy 10 in the THAI
Deuteronomy 10 in the TNFD
Deuteronomy 10 in the TNT
Deuteronomy 10 in the TNTIK
Deuteronomy 10 in the TNTIL
Deuteronomy 10 in the TNTIN
Deuteronomy 10 in the TNTIP
Deuteronomy 10 in the TNTIZ
Deuteronomy 10 in the TOMA
Deuteronomy 10 in the TTENT
Deuteronomy 10 in the UBG
Deuteronomy 10 in the UGV
Deuteronomy 10 in the UGV2
Deuteronomy 10 in the UGV3
Deuteronomy 10 in the VBL
Deuteronomy 10 in the VDCC
Deuteronomy 10 in the YALU
Deuteronomy 10 in the YAPE
Deuteronomy 10 in the YBVTP
Deuteronomy 10 in the ZBP