Deuteronomy 19 (BOKCV2)

1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ದೇಶದ ಜನಾಂಗಗಳನ್ನು ದೇವರು ತೆಗೆದುಹಾಕಿದ ತರುವಾಯ, ನೀವು ದೇಶವನ್ನು ಸ್ವಾಧೀನಮಾಡಿಕೊಂಡು ಅದರ ಪಟ್ಟಣಗಳಲ್ಲಿಯೂ ಮನೆಗಳಲ್ಲಿಯೂ ವಾಸಮಾಡುವಿರಿ. 2 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ನಿಮ್ಮ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿಮಗಾಗಿ ಪ್ರತ್ಯೇಕಿಸಬೇಕು. 3 ಕೈತಪ್ಪಿ ಕೊಲೆ ಮಾಡುವವರೆಲ್ಲರೂ ಅಲ್ಲಿಗೆ ಓಡಿಹೋಗುವುದಕ್ಕೆ ಅನುಕೂಲವಾಗುವಂತೆ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದ ಮೇರೆಯನ್ನು ಮೂರು ಭಾಗಮಾಡಿ, ಅವುಗಳ ಮಾರ್ಗವನ್ನು ಸಿದ್ಧಮಾಡಿಕೊಳ್ಳಬೇಕು. 4 ಬದುಕಿ ಉಳಿಯಲು ಅಲ್ಲಿ ಓಡಿಹೋಗತಕ್ಕ ಕೊಲೆಪಾತಕನ ವಿವರವೇನೆಂದರೆ, ತಿಳಿಯದೆ ಇಲ್ಲವೆ ಪೂರ್ವ ಕಲ್ಪಿತ ಹಗೆ ಮಾಡದೆ, ತನ್ನ ನೆರೆಯವನನ್ನು ಹೊಡೆದವನೇ. 5 ಉದಾಹರಣೆಗೆ: ಒಬ್ಬ ವ್ಯಕ್ತಿ ಕಟ್ಟಿಗೆಯನ್ನು ಕಡಿಯಲು ಮತ್ತೊಬ್ಬನ ಜೊತೆಯಲ್ಲಿ ಅಡವಿಗೆ ಹೋದನೆಂದು ಇಟ್ಟುಕೊಳ್ಳೋಣ. ಅಲ್ಲಿ ಒಂದು ಮರವನ್ನು ಕೊಡಲಿಯಿಂದ ಹೊಡೆಯುತ್ತಿರುವಾಗ, ಕೊಡಲಿ ಕಾವಿನಿಂದ ಜಾರಿ, ಆ ಮತ್ತೊಬ್ಬನಿಗೆ ತಗಲಿ ಅವನು ಸತ್ತರೆ, ಹೊಡೆದವನು ಆ ನಗರಗಳಲ್ಲಿ ಒಂದಕ್ಕೆ ಓಡಿಹೋಗಿ ಬದುಕಿಕೊಳ್ಳಬಹುದು. 6 ಸತ್ತವನಲ್ಲಿ ಅವನಿಗೆ ಮೊದಲಿನಿಂದಲೂ ದ್ವೇಷವಿರಲಿಲ್ಲ. ಆದ್ದರಿಂದ ಅವನು ಮರಣಶಿಕ್ಷೆಗೆ ಪಾತ್ರನಲ್ಲ. ಆದರೂ ಹತ್ಯೆ ಮಾಡಿದವನಿಗೆ ಮುಯ್ಯಿ ತೀರಿಸುವ ಹಂಗುಳ್ಳ ಸಮೀಪ ಬಂಧು ಕೋಪದಿಂದ ಉರಿಯುತ್ತಾ, ಅವನನ್ನು ಹಿಂದಟ್ಟಬಹುದು. ಮಾರ್ಗದ ಮಧ್ಯದಲ್ಲೇ ಅವನನ್ನು ಹಿಡಿದು ಕೊಂದು ಹಾಕಬಹುದು. 7 ಈ ಕಾರಣದಿಂದಲೇ ನೀವು ಆ ಮೂರು ಆಶ್ರಯಪಟ್ಟಣಗಳನ್ನು ಗೊತ್ತು ಮಾಡಬೇಕೆಂದು ಆಜ್ಞಾಪಿಸಿದ್ದೇನೆ. 8 ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದಂತೆ ನಿಮ್ಮ ಮೇರೆಯನ್ನು ವಿಸ್ತಾರಮಾಡಿ, ನಿಮ್ಮ ಪಿತೃಗಳಿಗೆ ಕೊಡುವುದಾಗಿ ಹೇಳಿದ ದೇಶವನ್ನೆಲ್ಲಾ ನಿಮಗೆ ಕೊಡುವರು. 9 ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಆಜ್ಞೆಯನ್ನೆಲ್ಲಾ ನೀವು ಕಾಪಾಡಿ ಕೈಗೊಳ್ಳಬೇಕು. ನಿಮ್ಮ ದೇವರಾದ ಯೆಹೋವ ದೇವರನ್ನು ಪ್ರೀತಿಸಿ, ಅವರ ಮಾರ್ಗಗಳಲ್ಲಿ ಯಾವಾಗಲೂ ನಡೆದರೆ ನೀವು ಈ ಮೂರು ಪಟ್ಟಣಗಳ ಜೊತೆಗೆ ಇನ್ನೂ ಮೂರು ಪಟ್ಟಣಗಳನ್ನು ಕೂಡಿಸಬೇಕು. 10 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ನಿರಪರಾಧಿಗೆ ಮರಣಶಿಕ್ಷೆಯಾಗಬಾರದು, ಅಂಥವನಿಗೆ ಮರಣಶಿಕ್ಷೆಯಾದರೆ ಆ ರಕ್ತಾಪರಾಧ ನಿಮ್ಮದಾಗಿಯೇ ಇರುವುದು. 11 ಆದರೆ ಒಬ್ಬನು ತನ್ನ ನೆರೆಯವನನ್ನು ದ್ವೇಷಿಸಿ ಹೊಂಚು ಹಾಕಿ, ಅವನಿಗೆ ವಿರೋಧವಾಗಿ ಎದ್ದು, ಅವನನ್ನು ಸಾಯುವವರೆಗೂ ಹೊಡೆದು ಕೊಂದುಹಾಕಿ ಈ ಪಟ್ಟಣಗಳಿಗೆ ಓಡಿಹೋದರೆ, 12 ಆ ಪಟ್ಟಣದ ಹಿರಿಯರು ಅವನನ್ನು ಅಲ್ಲಿಂದ ಹಿಡಿದು ತರಿಸಿ, ಅವನಿಗೆ ಮರಣದಂಡನೆಯಾಗುವಂತೆ ಸೇಡು ತೀರಿಸಿಕೊಳ್ಳುವವನ ಕೈಗೆ ಅವನನ್ನು ಒಪ್ಪಿಸಬೇಕು. 13 ನೀವು ಅವನ ಮೇಲೆ ದಯೆ ತೋರಬಾರದು. ನಿಮಗೆ ಒಳ್ಳೆಯದಾಗುವಂತೆ ನಿರಪರಾಧಿಯ ಪ್ರಾಣವನ್ನು ತೆಗೆದವನು ಇಸ್ರಾಯೇಲರಲ್ಲಿ ಉಳಿಯದಂತೆ ತೆಗೆದುಹಾಕಬೇಕು. 14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಮಾಡಿಕೊಳ್ಳುವುದಕ್ಕೆ ಕೊಡುವ ದೇಶದೊಳಗೆ ನೀವು ಹೊಂದುವ ಸೊತ್ತಿನಲ್ಲಿ ಹಿರಿಯರು ಇಟ್ಟಂಥ ನಿಮ್ಮ ನೆರೆಯವನ ಮೇರೆಯನ್ನು ಸರಿಸಬಾರದು. 15 ಯಾವ ಅಕ್ರಮದ ನಿಮಿತ್ತವೂ, ಅಥವಾ ಪಾಪದ ನಿಮಿತ್ತವೂ ಒಬ್ಬ ಮನುಷ್ಯನಿಗೆ ವಿರೋಧವಾಗಿ ಒಬ್ಬ ಸಾಕ್ಷಿ ನಿಂತುಕೊಳ್ಳಬಾರದು. ಇಬ್ಬರು ಸಾಕ್ಷಿಗಳ ಇಲ್ಲವೆ ಮೂವರು ಸಾಕ್ಷಿಗಳ ಮಾತಿನಿಂದ ವಿಷಯವು ಸ್ಥಿರವಾಗುವುದು. 16 ಸುಳ್ಳುಸಾಕ್ಷಿಯವನು ಒಬ್ಬ ಮನುಷ್ಯನ ಮೇಲೆ ಅವನಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಕೊಡುವುದಕ್ಕೆ ಎದ್ದರೆ, 17 ವ್ಯಾಜ್ಯವಾಡುವ ಆ ಇಬ್ಬರು ಮನುಷ್ಯರು ಯೆಹೋವ ದೇವರ ಮುಂದೆಯೂ ಆ ದಿನಗಳಲ್ಲಿರುವ ಯಾಜಕರ ಹಾಗು ನ್ಯಾಯಾಧಿಪತಿಗಳ ಮುಂದೆಯೂ ನಿಂತುಕೊಳ್ಳಬೇಕು. 18 ನ್ಯಾಯಾಧಿಪತಿಗಳು ಕೂಲಂಕಷವಾಗಿ ವಿಚಾರಣೆ ಮಾಡಬೇಕು. ಆಗ ಇಗೋ, ಆ ಸಾಕ್ಷಿಯು ಸುಳ್ಳುಸಾಕ್ಷಿಯಾಗಿದ್ದರೆ, ಅಂದರೆ ಅವನು ತನ್ನ ಸಹೋದರನ ಮೇಲೆ ಸುಳ್ಳು ಹೇಳಿದ್ದರೆ, 19 ಅವನು ತನ್ನ ಸಹೋದರನಿಗೆ ಮಾಡುವುದಕ್ಕೆ ಯೋಚಿಸಿದ ಪ್ರಕಾರವೇ ಅವನಿಗೆ ಶಿಕ್ಷೆ ಕೊಡಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. 20 ಆಗ ಉಳಿದವರು ಕೇಳಿ ಭಯಪಟ್ಟು, ಆ ದುಷ್ಟಕೃತ್ಯವನ್ನು ಇನ್ನು ಮುಂದೆ ನಿಮ್ಮ ಮಧ್ಯದಲ್ಲಿ ಮಾಡದಿರುವರು. 21 ನೀವು ಅಂಥವರಿಗೆ ಕರುಣೆ ತೋರಿಸಬಾರದು, ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ, ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು, ಕೈಗೆ ಕೈ, ಕಾಲಿಗೆ ಪ್ರತಿಯಾಗಿ ಕಾಲನ್ನು ಅವನಿಂದ ತೆಗೆದುಬಿಡಬೇಕು.

In Other Versions

Deuteronomy 19 in the ANGEFD

Deuteronomy 19 in the ANTPNG2D

Deuteronomy 19 in the AS21

Deuteronomy 19 in the BAGH

Deuteronomy 19 in the BBPNG

Deuteronomy 19 in the BBT1E

Deuteronomy 19 in the BDS

Deuteronomy 19 in the BEV

Deuteronomy 19 in the BHAD

Deuteronomy 19 in the BIB

Deuteronomy 19 in the BLPT

Deuteronomy 19 in the BNT

Deuteronomy 19 in the BNTABOOT

Deuteronomy 19 in the BNTLV

Deuteronomy 19 in the BOATCB

Deuteronomy 19 in the BOATCB2

Deuteronomy 19 in the BOBCV

Deuteronomy 19 in the BOCNT

Deuteronomy 19 in the BOECS

Deuteronomy 19 in the BOGWICC

Deuteronomy 19 in the BOHCB

Deuteronomy 19 in the BOHCV

Deuteronomy 19 in the BOHLNT

Deuteronomy 19 in the BOHNTLTAL

Deuteronomy 19 in the BOICB

Deuteronomy 19 in the BOILNTAP

Deuteronomy 19 in the BOITCV

Deuteronomy 19 in the BOKCV

Deuteronomy 19 in the BOKHWOG

Deuteronomy 19 in the BOKSSV

Deuteronomy 19 in the BOLCB

Deuteronomy 19 in the BOLCB2

Deuteronomy 19 in the BOMCV

Deuteronomy 19 in the BONAV

Deuteronomy 19 in the BONCB

Deuteronomy 19 in the BONLT

Deuteronomy 19 in the BONUT2

Deuteronomy 19 in the BOPLNT

Deuteronomy 19 in the BOSCB

Deuteronomy 19 in the BOSNC

Deuteronomy 19 in the BOTLNT

Deuteronomy 19 in the BOVCB

Deuteronomy 19 in the BOYCB

Deuteronomy 19 in the BPBB

Deuteronomy 19 in the BPH

Deuteronomy 19 in the BSB

Deuteronomy 19 in the CCB

Deuteronomy 19 in the CUV

Deuteronomy 19 in the CUVS

Deuteronomy 19 in the DBT

Deuteronomy 19 in the DGDNT

Deuteronomy 19 in the DHNT

Deuteronomy 19 in the DNT

Deuteronomy 19 in the ELBE

Deuteronomy 19 in the EMTV

Deuteronomy 19 in the ESV

Deuteronomy 19 in the FBV

Deuteronomy 19 in the FEB

Deuteronomy 19 in the GGMNT

Deuteronomy 19 in the GNT

Deuteronomy 19 in the HARY

Deuteronomy 19 in the HNT

Deuteronomy 19 in the IRVA

Deuteronomy 19 in the IRVB

Deuteronomy 19 in the IRVG

Deuteronomy 19 in the IRVH

Deuteronomy 19 in the IRVK

Deuteronomy 19 in the IRVM

Deuteronomy 19 in the IRVM2

Deuteronomy 19 in the IRVO

Deuteronomy 19 in the IRVP

Deuteronomy 19 in the IRVT

Deuteronomy 19 in the IRVT2

Deuteronomy 19 in the IRVU

Deuteronomy 19 in the ISVN

Deuteronomy 19 in the JSNT

Deuteronomy 19 in the KAPI

Deuteronomy 19 in the KBT1ETNIK

Deuteronomy 19 in the KBV

Deuteronomy 19 in the KJV

Deuteronomy 19 in the KNFD

Deuteronomy 19 in the LBA

Deuteronomy 19 in the LBLA

Deuteronomy 19 in the LNT

Deuteronomy 19 in the LSV

Deuteronomy 19 in the MAAL

Deuteronomy 19 in the MBV

Deuteronomy 19 in the MBV2

Deuteronomy 19 in the MHNT

Deuteronomy 19 in the MKNFD

Deuteronomy 19 in the MNG

Deuteronomy 19 in the MNT

Deuteronomy 19 in the MNT2

Deuteronomy 19 in the MRS1T

Deuteronomy 19 in the NAA

Deuteronomy 19 in the NASB

Deuteronomy 19 in the NBLA

Deuteronomy 19 in the NBS

Deuteronomy 19 in the NBVTP

Deuteronomy 19 in the NET2

Deuteronomy 19 in the NIV11

Deuteronomy 19 in the NNT

Deuteronomy 19 in the NNT2

Deuteronomy 19 in the NNT3

Deuteronomy 19 in the PDDPT

Deuteronomy 19 in the PFNT

Deuteronomy 19 in the RMNT

Deuteronomy 19 in the SBIAS

Deuteronomy 19 in the SBIBS

Deuteronomy 19 in the SBIBS2

Deuteronomy 19 in the SBICS

Deuteronomy 19 in the SBIDS

Deuteronomy 19 in the SBIGS

Deuteronomy 19 in the SBIHS

Deuteronomy 19 in the SBIIS

Deuteronomy 19 in the SBIIS2

Deuteronomy 19 in the SBIIS3

Deuteronomy 19 in the SBIKS

Deuteronomy 19 in the SBIKS2

Deuteronomy 19 in the SBIMS

Deuteronomy 19 in the SBIOS

Deuteronomy 19 in the SBIPS

Deuteronomy 19 in the SBISS

Deuteronomy 19 in the SBITS

Deuteronomy 19 in the SBITS2

Deuteronomy 19 in the SBITS3

Deuteronomy 19 in the SBITS4

Deuteronomy 19 in the SBIUS

Deuteronomy 19 in the SBIVS

Deuteronomy 19 in the SBT

Deuteronomy 19 in the SBT1E

Deuteronomy 19 in the SCHL

Deuteronomy 19 in the SNT

Deuteronomy 19 in the SUSU

Deuteronomy 19 in the SUSU2

Deuteronomy 19 in the SYNO

Deuteronomy 19 in the TBIAOTANT

Deuteronomy 19 in the TBT1E

Deuteronomy 19 in the TBT1E2

Deuteronomy 19 in the TFTIP

Deuteronomy 19 in the TFTU

Deuteronomy 19 in the TGNTATF3T

Deuteronomy 19 in the THAI

Deuteronomy 19 in the TNFD

Deuteronomy 19 in the TNT

Deuteronomy 19 in the TNTIK

Deuteronomy 19 in the TNTIL

Deuteronomy 19 in the TNTIN

Deuteronomy 19 in the TNTIP

Deuteronomy 19 in the TNTIZ

Deuteronomy 19 in the TOMA

Deuteronomy 19 in the TTENT

Deuteronomy 19 in the UBG

Deuteronomy 19 in the UGV

Deuteronomy 19 in the UGV2

Deuteronomy 19 in the UGV3

Deuteronomy 19 in the VBL

Deuteronomy 19 in the VDCC

Deuteronomy 19 in the YALU

Deuteronomy 19 in the YAPE

Deuteronomy 19 in the YBVTP

Deuteronomy 19 in the ZBP