Ezra 7 (BOKCV2)

1 ಈ ಕಾರ್ಯಗಳಾದ ತರುವಾಯ ಪಾರಸಿಯ ಅರಸನಾದ ಅರ್ತಷಸ್ತನ ಆಳಿಕೆಯಲ್ಲಿ ಎಜ್ರನು ಬಾಬಿಲೋನಿನಿಂದ ಹೊರಟುಹೋದನು. ಇವನು ಸೆರಾಯನ ಮಗನು; ಇವನು ಅಜರ್ಯನ ಮಗನು; ಇವನು ಹಿಲ್ಕೀಯನ ಮಗನು; 2 ಇವನು ಶಲ್ಲೂಮನ ಮಗನು; ಇವನು ಚಾದೋಕನ ಮಗನು; ಇವನು ಅಹೀಟೂಬನ ಮಗನು; 3 ಇವನು ಅಮರ್ಯನ ಮಗನು; ಇವನು ಅಜರ್ಯನ ಮಗನು; ಇವನು ಮೆರಾಯೋತನ ಮಗನು; 4 ಇವನು ಜೆರಹ್ಯನ ಮಗನು; ಇವನು ಉಜ್ಜೀಯನ ಮಗನು; ಇವನು ಬುಕ್ಕೀಯ ಮಗನು; 5 ಇವನು ಅಬೀಷೂವನ ಮಗನು; ಇವನು ಫೀನೆಹಾಸನ ಮಗನು; ಇವನು ಎಲಿಯಾಜರನ ಮಗನು; ಇವನು ಮುಖ್ಯಯಾಜಕನಾದ ಆರೋನನ ಮಗನು. 6 ಈ ಎಜ್ರನು ಬಾಬಿಲೋನಿನಿಂದ ಬಂದನು, ಅವನು ಇಸ್ರಾಯೇಲ್ ದೇವರಾಗಿರುವ ಯೆಹೋವ ದೇವರು ಕೊಟ್ಟ ಮೋಶೆಯ ನಿಯಮದಲ್ಲಿ ಪಾಂಡಿತ್ಯ ಪಡೆದ ನಿಯಮಶಾಸ್ತ್ರಿ ಆಗಿದ್ದನು. ಅವನ ಮೇಲೆ ಅವನ ದೇವರಾಗಿರುವ ಯೆಹೋವ ದೇವರ ಕೈ ಇದ್ದುದರಿಂದ, ಅವನು ಕೇಳಿದ್ದನ್ನೆಲ್ಲಾ ಅರಸನು ಕೊಟ್ಟನು. 7 ಅವನ ಸಂಗಡ ಇಸ್ರಾಯೇಲರಲ್ಲಿಯೂ ಯಾಜಕರಲ್ಲಿಯೂ ಲೇವಿಯರಲ್ಲಿಯೂ ಹಾಡುಗಾರರಲ್ಲಿಯೂ ದ್ವಾರಪಾಲಕರಲ್ಲಿಯೂ ದೇವಾಲಯದ ಸೇವಕರಲ್ಲಿಯೂ ಕೆಲವರು ಅರಸನಾದ ಅರ್ತಷಸ್ತನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಯೆರೂಸಲೇಮಿಗೆ ಹೋದರು. 8 ಅರಸನ ಏಳನೆಯ ವರ್ಷದ, ಐದನೆಯ ತಿಂಗಳಲ್ಲಿ ಎಜ್ರನು ಯೆರೂಸಲೇಮಿಗೆ ಬಂದನು. 9 ಅವನು ಮೊದಲನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಬಾಬಿಲೋನಿನಿಂದ ಹೊರಟು, ಐದನೆಯ ತಿಂಗಳಿನ, ಮೊದಲನೆಯ ದಿವಸದಲ್ಲಿ ಯೆರೂಸಲೇಮಿಗೆ ಬಂದು ಸೇರಿದನು. ಏಕೆಂದರೆ ಅವನ ದೇವರಾದ ಯೆಹೋವ ದೇವರ ಹಸ್ತವು ಅವನ ಮೇಲಿತ್ತು. 10 ಏಕೆಂದರೆ ಎಜ್ರನು ಯೆಹೋವ ದೇವರ ನಿಯಮವನ್ನು ಅಭ್ಯಾಸ ಮಾಡುವುದಕ್ಕೂ ಅದನ್ನು ಕೈಗೊಂಡು ನಡೆಯುವುದಕ್ಕೂ ಇಸ್ರಾಯೇಲರಿಗೆ ಅದರ ತೀರ್ಪುಗಳನ್ನು ಹಾಗೂ ನಿಯಮಗಳನ್ನು ಬೋಧಿಸುವುದಕ್ಕೂ ತನ್ನನ್ನು ಪ್ರತಿಷ್ಠಿಸಿಕೊಂಡಿದ್ದನು. 11 ಯಾಜಕನು, ನಿಯಮಶಾಸ್ತ್ರಿಯು ಹಾಗೂ ಇಸ್ರಾಯೇಲರಿಗೆ ಕೊಡಲಾದ ಯೆಹೋವ ದೇವರ ಆಜ್ಞಾಸೂತ್ರಗಳಲ್ಲಿ ವಿದ್ವಾಂಸನೂ ಆದ ಎಜ್ರನಿಗೆ ಅರಸನಾದ ಅರ್ತಷಸ್ತನು ಕೊಟ್ಟ ಪತ್ರದ ನಕಲು ಇದು: 12 ರಾಜಾಧಿರಾಜನಾದ ಅರ್ತಷಸ್ತನು,ಯಾಜಕನೂ, ಪರಲೋಕ ದೇವರ ನಿಯಮದಲ್ಲಿ ಪ್ರವೀಣನೂ ಆದ ಎಜ್ರನಿಗೆ,ವಂದನೆಗಳು. 13 ನನ್ನ ರಾಜ್ಯದಲ್ಲಿರುವ ಇಸ್ರಾಯೇಲರಲ್ಲಿ, ಯಾಜಕರಲ್ಲಿ ಹಾಗು ಲೇವಿಯರಲ್ಲಿ ಯಾರಿಗೆ ಯೆರೂಸಲೇಮಿಗೆ ಹೋಗುವುದಕ್ಕೆ ಮನಸ್ಸಿದೆಯೋ, ಅವರೆಲ್ಲರು ನಿನ್ನೊಂದಿಗೆ ಹೋಗಬಹುದೆಂದು ಅಪ್ಪಣೆ ಮಾಡುತ್ತೇನೆ. 14 ನೀನು ಹೋಗಿ ಯೆಹೂದದವರ ಮತ್ತು ಯೆರೂಸಲೇಮಿನವರ ಆಚರಣೆಯು ನಿನ್ನ ಕೈಯಲ್ಲಿರುವ ನಿನ್ನ ದೇವರ ನಿಯಮ ಗ್ರಂಥಕ್ಕೆ ಅನುಗುಣವಾಗಿ ಇದೆಯೋ, ಇಲ್ಲವೋ ವಿಮರ್ಶೆ ಮಾಡಬೇಕು. 15 ಅರಸನು ಮತ್ತು ಅವನ ಮಂತ್ರಿಗಳು ಯೆರೂಸಲೇಮಿನಲ್ಲಿ ವಾಸಿಸುತ್ತಿರುವ ಇಸ್ರಾಯೇಲ್ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದ ಬೆಳ್ಳಿಬಂಗಾರವನ್ನು, 16 ಬಾಬಿಲೋನ್ ಸಂಸ್ಥಾನದಲ್ಲಿ ಸಿಕ್ಕುವ ಬೆಳ್ಳಿಬಂಗಾರವನ್ನು ಹಾಗು ಇಸ್ರಾಯೇಲ್ ಜನ ಸಾಮಾನ್ಯರೂ, ಯಾಜಕರೂ, ಯೆರೂಸಲೇಮಿನಲ್ಲಿರುವ ತಮ್ಮ ದೇವರ ಆಲಯಕ್ಕಾಗಿ ಸ್ವಂತ ಇಚ್ಛೆಯಿಂದ ಕೊಡುವ ಕಾಣಿಕೆಗಳನ್ನು ಅಲ್ಲಿಗೆ ಒಪ್ಪಿಸಬೇಕು. ಹೀಗೆಂದು ತಿಳಿಸಿ, ನಾನೂ ಮತ್ತು ನನ್ನ ಏಳುಮಂದಿ ಮಂತ್ರಿಗಳೂ ನಿನ್ನನ್ನು ಕಳುಹಿಸುತ್ತಿದ್ದೇವೆ. 17 ನೀನು ಈ ಹಣದಿಂದ ಹೋರಿ, ಟಗರು, ಕುರಿ, ಇವುಗಳನ್ನೂ ಮತ್ತು ಇವುಗಳೊಡನೆ ಸಮರ್ಪಣೆಯಾಗತಕ್ಕ ಧಾನ್ಯದ್ರವ್ಯ, ಪಾನದ್ರವ್ಯಗಳನ್ನೂ ಕೊಂಡುಕೊಂಡು, ಅವುಗಳನ್ನು ಯೆರೂಸಲೇಮಿನಲ್ಲಿರುವ ನಿಮ್ಮ ದೇವರ ಆಲಯದ ಬಲಿಪೀಠದ ಮೇಲೆ ಸಮರ್ಪಿಸಬೇಕು. 18 ಉಳಿದ ಬೆಳ್ಳಿಬಂಗಾರವನ್ನು, ನಿಮ್ಮ ದೇವರ ಚಿತ್ತದ ಪ್ರಕಾರ ನಿನಗೂ, ನಿನ್ನ ಸಹೋದರರಿಗೂ ಸರಿತೋರುವಂತೆ ವೆಚ್ಚ ಮಾಡಿರಿ. 19 ನಿನ್ನ ದೇವರ ಆಲಯದ ಆರಾಧನೆಗಾಗಿ ನಿನ್ನ ವಶಕ್ಕೆ ಕೊಡುವ ಸಾಮಗ್ರಿಗಳನ್ನು ಯೆರೂಸಲೇಮಿನ ದೇವರ ಸನ್ನಿಧಿಗೆ ತೆಗೆದುಕೊಂಡು ಹೋಗು. 20 ನಿನ್ನ ದೇವರ ಆಲಯಕ್ಕಾಗಿ ನೀನು ಬೇರೆ ಯಾವುದನ್ನಾದರೂ ವೆಚ್ಚಮಾಡಬೇಕಾದರೆ, ಅದನ್ನು ರಾಜ ಭಂಡಾರದಿಂದ ತೆಗೆದುಕೊಂಡು ವೆಚ್ಚಮಾಡು. 21 “ಅರ್ತಷಸ್ತ ರಾಜನಾದ ನಾನು, ಯೂಫ್ರೇಟೀಸ್ ನದಿ ಆಚೆಯ ಪ್ರಾಂತಗಳ ಭಂಡಾರ ಮುಖ್ಯಸ್ಥರಿಗೆ ಆಜ್ಞಾಪಿಸುವುದೇನೆಂದರೆ ಯಾಜಕನೂ, ಪರಲೋಕ ದೇವರ ಧರ್ಮಾಚಾರ್ಯನೂ ಆದ ಎಜ್ರನು ಕೇಳಿಕೊಳ್ಳುವುದನ್ನೆಲ್ಲಾ ನೀವು ತಪ್ಪದೆ ಕೊಡಬೇಕು. 22 3.4 ಮೆಟ್ರಿಕ್ ಟನ್ ಬೆಳ್ಳಿಯನ್ನು, 16 ಮೆಟ್ರಿಕ್ ಟನ್ ಗೋಧಿಯನ್ನು, 2,200 ಲೀಟರ್ ದ್ರಾಕ್ಷಾರಸವನ್ನು, 2,200 ಲೀಟರ್ ಎಣ್ಣೆಯನ್ನು, ಇಷ್ಟರ ಮಟ್ಟಿಗೂ ಕೊಡಬೇಕು. ಉಪ್ಪನ್ನು ಎಷ್ಟು ಬೇಕಾದರೂ ಕೊಡಬಹುದು. 23 ಅರಸನ ಮತ್ತು ಅವನ ಸಂತಾನದವರ ರಾಜ್ಯದ ಮೇಲೆ ದೇವ ಕೋಪವುಂಟಾಗದ ಹಾಗೆ, ನೀವು ಪರಲೋಕ ದೇವರ ಆಜ್ಞಾನುಸಾರ ಬೇಕಾದುದನ್ನೆಲ್ಲಾ ಯಾವ ಕೊರತೆಯೂ ಇಲ್ಲದೆ ಶ್ರದ್ಧೆಯಿಂದ ಒದಗಿಸಿಕೊಡಬೇಕು. 24 ಇದಲ್ಲದೆ, ಆ ದೇವಾಲಯದ ಯಾಜಕ, ಲೇವಿಯ, ಗಾಯಕ, ದ್ವಾರಪಾಲಕ, ಚಾಕರ ಮುಂತಾದ ಸೇವಕರಲ್ಲಿ ಯಾವನಿಂದಲೂ ಶುಲ್ಕ, ತೆರಿಗೆ, ಸುಂಕ, ಇವುಗಳನ್ನು ವಸೂಲಿ ಮಾಡುವುದಕ್ಕೆ ನಿಮಗೆ ಅಧಿಕಾರವಿಲ್ಲ ಎಂಬುದು ತಿಳಿದಿರಲಿ.” 25 “ಎಜ್ರನೇ, ನಿನ್ನಲ್ಲಿರುವ ನಿನ್ನ ದೇವರ ಜ್ಞಾನಕ್ಕೆ ಅನುಸಾರವಾಗಿ ನ್ಯಾಯಾಧೀಶರನ್ನೂ, ದಂಡಾಧಿಕಾರಿಯನ್ನೂ ನೇಮಿಸು. ಅವರು ನದಿಯಾಚೆಯ ಇಸ್ರಾಯೇಲರಲ್ಲಿ, ನಿನ್ನ ದೇವರ ನಿಯಮಗಳನ್ನು ಅರಿತಿರುವವರೆಲ್ಲರ ವ್ಯಾಜ್ಯಗಳನ್ನು ತೀರಿಸಲಿ. ಅರಿಯದವರಿಗೆ ನೀನು ಅದನ್ನು ಕಲಿಸಬೇಕು. 26 ನಿನ್ನ ದೇವರಾಜ್ಞೆಯನ್ನೂ, ರಾಜಾಜ್ಞೆಯನ್ನೂ ಕೈಗೊಳ್ಳದವರಿಗೆಲ್ಲಾ ಮರಣದಂಡನೆ ವಿಧಿಸುವುದು, ಗಡಿಪಾರು ಮಾಡುವುದು, ದಂಡ ತೆರಿಸುವುದು, ಬೇಡಿ ಹಾಕುವುದು, ಈ ವಿಧವಾದ ಶಿಕ್ಷೆಯನ್ನು ತಪ್ಪದೆ ನೀಡಬೇಕು.” 27 ಆಗ ಎಜ್ರನು, “ನಮ್ಮ ತಂದೆಗಳ ದೇವರಾಗಿರುವ ಯೆಹೋವ ದೇವರು ಸ್ತುತಿಹೊಂದಲಿ! ಯೆರೂಸಲೇಮಿನಲ್ಲಿರುವ ಯೆಹೋವ ದೇವರ ಆಲಯಕ್ಕೆ ಮಹಿಮೆಯನ್ನು ತರುವಂತೆ, ಅರಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟಿದ್ದಾರೆ. 28 ಅರಸನ ಮುಂದೆಯೂ, ಅವನ ಸಲಹೆಗಾರರ ಮುಂದೆಯೂ, ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆತೋರಿಸಿದ್ದಾರೆ. ಹೀಗೆಯೇ ನನ್ನ ದೇವರಾಗಿರುವ ಯೆಹೋವ ದೇವರ ಹಸ್ತವು ನನ್ನ ಮೇಲೆ ಇದ್ದುದರಿಂದ, ನಾನು ಧೈರ್ಯಗೊಂಡು ಇಸ್ರಾಯೇಲಿನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು,” ಎಂದನು.

In Other Versions

Ezra 7 in the ANGEFD

Ezra 7 in the ANTPNG2D

Ezra 7 in the AS21

Ezra 7 in the BAGH

Ezra 7 in the BBPNG

Ezra 7 in the BBT1E

Ezra 7 in the BDS

Ezra 7 in the BEV

Ezra 7 in the BHAD

Ezra 7 in the BIB

Ezra 7 in the BLPT

Ezra 7 in the BNT

Ezra 7 in the BNTABOOT

Ezra 7 in the BNTLV

Ezra 7 in the BOATCB

Ezra 7 in the BOATCB2

Ezra 7 in the BOBCV

Ezra 7 in the BOCNT

Ezra 7 in the BOECS

Ezra 7 in the BOGWICC

Ezra 7 in the BOHCB

Ezra 7 in the BOHCV

Ezra 7 in the BOHLNT

Ezra 7 in the BOHNTLTAL

Ezra 7 in the BOICB

Ezra 7 in the BOILNTAP

Ezra 7 in the BOITCV

Ezra 7 in the BOKCV

Ezra 7 in the BOKHWOG

Ezra 7 in the BOKSSV

Ezra 7 in the BOLCB

Ezra 7 in the BOLCB2

Ezra 7 in the BOMCV

Ezra 7 in the BONAV

Ezra 7 in the BONCB

Ezra 7 in the BONLT

Ezra 7 in the BONUT2

Ezra 7 in the BOPLNT

Ezra 7 in the BOSCB

Ezra 7 in the BOSNC

Ezra 7 in the BOTLNT

Ezra 7 in the BOVCB

Ezra 7 in the BOYCB

Ezra 7 in the BPBB

Ezra 7 in the BPH

Ezra 7 in the BSB

Ezra 7 in the CCB

Ezra 7 in the CUV

Ezra 7 in the CUVS

Ezra 7 in the DBT

Ezra 7 in the DGDNT

Ezra 7 in the DHNT

Ezra 7 in the DNT

Ezra 7 in the ELBE

Ezra 7 in the EMTV

Ezra 7 in the ESV

Ezra 7 in the FBV

Ezra 7 in the FEB

Ezra 7 in the GGMNT

Ezra 7 in the GNT

Ezra 7 in the HARY

Ezra 7 in the HNT

Ezra 7 in the IRVA

Ezra 7 in the IRVB

Ezra 7 in the IRVG

Ezra 7 in the IRVH

Ezra 7 in the IRVK

Ezra 7 in the IRVM

Ezra 7 in the IRVM2

Ezra 7 in the IRVO

Ezra 7 in the IRVP

Ezra 7 in the IRVT

Ezra 7 in the IRVT2

Ezra 7 in the IRVU

Ezra 7 in the ISVN

Ezra 7 in the JSNT

Ezra 7 in the KAPI

Ezra 7 in the KBT1ETNIK

Ezra 7 in the KBV

Ezra 7 in the KJV

Ezra 7 in the KNFD

Ezra 7 in the LBA

Ezra 7 in the LBLA

Ezra 7 in the LNT

Ezra 7 in the LSV

Ezra 7 in the MAAL

Ezra 7 in the MBV

Ezra 7 in the MBV2

Ezra 7 in the MHNT

Ezra 7 in the MKNFD

Ezra 7 in the MNG

Ezra 7 in the MNT

Ezra 7 in the MNT2

Ezra 7 in the MRS1T

Ezra 7 in the NAA

Ezra 7 in the NASB

Ezra 7 in the NBLA

Ezra 7 in the NBS

Ezra 7 in the NBVTP

Ezra 7 in the NET2

Ezra 7 in the NIV11

Ezra 7 in the NNT

Ezra 7 in the NNT2

Ezra 7 in the NNT3

Ezra 7 in the PDDPT

Ezra 7 in the PFNT

Ezra 7 in the RMNT

Ezra 7 in the SBIAS

Ezra 7 in the SBIBS

Ezra 7 in the SBIBS2

Ezra 7 in the SBICS

Ezra 7 in the SBIDS

Ezra 7 in the SBIGS

Ezra 7 in the SBIHS

Ezra 7 in the SBIIS

Ezra 7 in the SBIIS2

Ezra 7 in the SBIIS3

Ezra 7 in the SBIKS

Ezra 7 in the SBIKS2

Ezra 7 in the SBIMS

Ezra 7 in the SBIOS

Ezra 7 in the SBIPS

Ezra 7 in the SBISS

Ezra 7 in the SBITS

Ezra 7 in the SBITS2

Ezra 7 in the SBITS3

Ezra 7 in the SBITS4

Ezra 7 in the SBIUS

Ezra 7 in the SBIVS

Ezra 7 in the SBT

Ezra 7 in the SBT1E

Ezra 7 in the SCHL

Ezra 7 in the SNT

Ezra 7 in the SUSU

Ezra 7 in the SUSU2

Ezra 7 in the SYNO

Ezra 7 in the TBIAOTANT

Ezra 7 in the TBT1E

Ezra 7 in the TBT1E2

Ezra 7 in the TFTIP

Ezra 7 in the TFTU

Ezra 7 in the TGNTATF3T

Ezra 7 in the THAI

Ezra 7 in the TNFD

Ezra 7 in the TNT

Ezra 7 in the TNTIK

Ezra 7 in the TNTIL

Ezra 7 in the TNTIN

Ezra 7 in the TNTIP

Ezra 7 in the TNTIZ

Ezra 7 in the TOMA

Ezra 7 in the TTENT

Ezra 7 in the UBG

Ezra 7 in the UGV

Ezra 7 in the UGV2

Ezra 7 in the UGV3

Ezra 7 in the VBL

Ezra 7 in the VDCC

Ezra 7 in the YALU

Ezra 7 in the YAPE

Ezra 7 in the YBVTP

Ezra 7 in the ZBP