Psalms 23 (BOKCV2)
undefined ದಾವೀದನ ಕೀರ್ತನೆ. 1 ಯೆಹೋವ ದೇವರು ನನ್ನ ಕುರುಬ ಆಗಿದ್ದಾರೆ, ನನಗೆ ಕೊರತೆಯೇ ಇಲ್ಲ. 2 ಅವರು ಹಸಿರುಗಾವಲುಗಳಲ್ಲಿ ನನ್ನನ್ನು ವಿಶ್ರಮಿಸುವಂತೆ ಮಾಡುತ್ತಾರೆ;ಪ್ರಶಾಂತ ಜಲರಾಶಿಯ ಬಳಿಗೆ ನನ್ನನ್ನು ನಡೆಸುತ್ತಾರೆ. 3 ಅವರು ನನ್ನ ಪ್ರಾಣವನ್ನು ಚೈತನ್ಯಗೊಳಿಸುತ್ತಾರೆ.ತಮ್ಮ ಹೆಸರಿನ ನಿಮಿತ್ತನನ್ನನ್ನು ನೀತಿ ಮಾರ್ಗದಲ್ಲಿ ನಡೆಸುತ್ತಾರೆ. 4 ನಾನು ಕಾರ್ಗತ್ತಲಿನಕಣಿವೆಯಲ್ಲಿ ನಡೆಯುವಾಗಲೂ,ನೀವು ನನ್ನೊಂದಿಗಿರುವುದರಿಂದನಾನು ಕೇಡಿಗೆ ಹೆದರೆನು;ನಿಮ್ಮ ದೊಣ್ಣೆಯೂ ನಿಮ್ಮ ಕೋಲೂನನ್ನನ್ನು ಸಂತೈಸುತ್ತವೆ. 5 ನೀವು ನನ್ನ ವೈರಿಗಳ ಮುಂದೆಯೇನನಗೊಂದು ಔತಣವನ್ನು ಸಿದ್ಧಮಾಡುತ್ತೀರಿ.ನೀವು ನನ್ನ ತಲೆಗೆ ತೈಲವನ್ನು ಅಭಿಷೇಕಿಸುತ್ತೀರಿ.ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ. 6 ನಿಶ್ಚಯವಾಗಿ ಶುಭವೂ ಪ್ರೀತಿಯೂನನ್ನ ಜೀವಮಾನವೆಲ್ಲಾ ನನ್ನನ್ನು ಹಿಂಬಾಲಿಸುತ್ತವೆ;ನಾನು ಯೆಹೋವ ದೇವರ ಮನೆಯಲ್ಲಿಸದಾಕಾಲವೂ ವಾಸಿಸುವೆನು.