1 Samuel 18 (IRVK)
1 ದಾವೀದನು ಸೌಲನೊಡನೆ ಮಾತನಾಡಿ ಮುಗಿಸಿದ ಮೇಲೆ ಯೋನಾತಾನನ ಪ್ರಾಣವು ದಾವೀದನ ಪ್ರಾಣದೊಡನೆ ಒಂದಾಯಿತು. ಅವನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸತೊಡಗಿದನು. 2 ಆ ದಿನದಿಂದ ಸೌಲನು ದಾವೀದನನ್ನು ಅವನ ತಂದೆಯ ಮನೆಗೆ ಹೋಗಗೊಡದೇ, ತನ್ನ ಬಳಿಯಲ್ಲೇ ಇಟ್ಟುಕೊಂಡನು. 3 ಯೋನಾತಾನನು ದಾವೀದನನ್ನು ತನ್ನ ಪ್ರಾಣದಂತೆಯೇ ಪ್ರೀತಿಸಿದ್ದರಿಂದ ಅವನೊಡನೆ ಸ್ನೇಹದ ಒಪ್ಪಂದ ಮಾಡಿಕೊಂಡನು. 4 ಇದಲ್ಲದೆ ಅವನು ತನ್ನ ಮೈಮೇಲಿದ್ದ ನಿಲುವಂಗಿಯನ್ನು ತನ್ನ ಯುದ್ಧವಸ್ತ್ರಗಳನ್ನು, ಕತ್ತಿ, ಬಿಲ್ಲು, ನಡುಕಟ್ಟುಗಳನ್ನೂ ದಾವೀದನಿಗೆ ಕೊಟ್ಟನು. 5 ದಾವೀದನಾದರೋ ಸೌಲನು ಎಲ್ಲಿಗೆ ಕಳುಹಿಸಿದರೂ ಹೋಗಿ ಎಲ್ಲವನ್ನು ವಿವೇಕದಿಂದ ನಡೆಸುತ್ತಿದ್ದನು. ಸೌಲನು ಇವನನ್ನು ಸೇನಾಧಿಪತಿಯನ್ನಾಗಿ ನೇಮಿಸಿದನು. ಇದು ಅವನ ಸೇವಕರಿಗೂ, ಎಲ್ಲಾ ಜನರಿಗೂ ಮೆಚ್ಚಿಗೆಯಾಯಿತು. 6 ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ, ಸರ್ವಜನರೊಡನೆ ಹಿಂದಿರುಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರೂ ಹೊರಗೆ ಬಂದು ದಮ್ಮಡಿತಾಳಗಳನ್ನು ಹಿಡಿದು, ಸಂತೋಷದಿಂದ ಹಾಡುತ್ತಾ, ಕುಣಿಯುತ್ತಾ, ಅರಸನಾದ ಸೌಲನನ್ನು ಎದುರುಗೊಂಡರು. 7 ಅವರು ಹಾಡುತ್ತಾ, ಕೊಂಡಾಡುತ್ತಾ,“ಸೌಲನು ಸಾವಿರ ಶತ್ರುಗಳನ್ನು ಕೊಂದನು.ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು” ಎಂದು ಹಾಡಿದರು. 8 ಈ ಮಾತುಗಳ ದೆಸೆಯಿಂದ ಸೌಲನಿಗೆ ಬಹು ಅಸೂಯೆ ಉಂಟಾಗಿ ದಾವೀದನ ಮೇಲೆ ಕೋಪಗೊಂಡನು. ಅವನು “ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನೆಂದೂ, ನಾನು ಸಾವಿರಾರು ಶತ್ರುಗಳನ್ನು ಕೊಂದೆನೆಂದೂ ಹಾಡುತ್ತಾರಲ್ಲಾ, ರಾಜತ್ವದ ಹೊರತು ಅವನಿಗೆ ಇನ್ನೇನು ಕಡಿಮೆಯಾಯಿತು” ಅಂದುಕೊಂಡು 9 ಅಂದಿನಿಂದ ಅವನು ದಾವೀದನನ್ನು ಸಂಶಯದಿಂದ ನೋಡುತ್ತಿದ್ದನು. 10 ಮರುದಿನ ದೇವರಿಂದ ಕಳುಹಿಸಲ್ಪಟ್ಟ ದುರಾತ್ಮವು ಸೌಲನ ಮೇಲೆ ಬಂದದ್ದರಿಂದ ಅವನು ಬುದ್ಧಿಗೆಟ್ಟು ಮನೆಯೊಳಗೆ ಕೂಗುತ್ತಿದ್ದನು. ಅವನ ಕೈಯಲ್ಲಿ ಒಂದು ಈಟಿ ಇತ್ತು. ದಾವೀದನು ವಾಡಿಕೆಯ ಪ್ರಕಾರ ಕಿನ್ನರಿಯನ್ನು ನುಡಿಸುತ್ತಾ ಇದ್ದನು. 11 ಆಗ ಸೌಲನು ದಾವೀದನನ್ನು ಗೋಡೆಗೆ ಸೇರಿಕೊಳ್ಳುವ ಹಾಗೆ ತಿವಿಯುವೆನು ಎಂದುಕೊಂಡು ಈಟಿಯನ್ನು ಎಸೆದನು. ದಾವೀದನು ಎರಡು ಸಾರಿ ತಪ್ಪಿಸಿಕೊಂಡನು. 12 ಯೆಹೋವನು ಸೌಲನನ್ನು ಬಿಟ್ಟು ದಾವೀದನ ಸಂಗಡ ಇದ್ದುದರಿಂದ ಸೌಲನು ದಾವೀದನಿಗೆ ಭಯಪಟ್ಟು, 13 ಅವನನ್ನು ತನ್ನ ಸಾನ್ನಿಧ್ಯಸೇವೆಯಿಂದ ತಪ್ಪಿಸಿ, ಸೈನ್ಯದಲ್ಲಿ ಸಹಸ್ರಾಧಿಪತಿಯನ್ನಾಗಿ ನೇಮಿಸಿದನು. ಹೀಗೆ ದಾವೀದನು ಜನರ ಸಂಗಡ ಹೋಗುತ್ತಾ ಬರುತ್ತಾ ಇದ್ದನು. 14 ಯೆಹೋವನು ಅವನ ಸಂಗಡ ಇದ್ದದರಿಂದ ದಾವೀದನು ಎಲ್ಲಾ ಕಾರ್ಯಗಳನ್ನು ವಿವೇಕದಿಂದ ನಡೆಸುತ್ತಿದ್ದನು. 15 ಇದನ್ನು ನೋಡಿ ಸೌಲನು ದಾವೀದನಿಗೆ ಬಹಳವಾಗಿ ಹೆದರಿಕೊಂಡನು. 16 ಆದರೆ ಇಸ್ರಾಯೇಲರೂ, ಯೆಹೂದ್ಯರೂ ತಮ್ಮ ಸಂಗಡ ಹೋಗುತ್ತಾ ಬರುತ್ತಾ ಇದ್ದ ದಾವೀದನನ್ನು ಬಹಳವಾಗಿ ಪ್ರೀತಿಸುತ್ತಿದ್ದರು. 17 ಒಂದು ದಿನ ಸೌಲನು, ಇವನು ನನ್ನ ಕೈಯಿಂದಲ್ಲ ಫಿಲಿಷ್ಟಿಯರ ಕೈಯಿಂದ ಸಾಯಲಿ ಎಂದು ಆಲೋಚಿಸಿಕೊಂಡು ದಾವೀದನಿಗೆ, “ನನ್ನ ವೀರನಾಗಿ ಹೋಗಿ ಯೆಹೋವನ ಯುದ್ಧಗಳನ್ನು ನಡಿಸು. ನಾನು ನನ್ನ ಹಿರೀ ಮಗಳಾದ ಮೇರಬಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ” ಅಂದನು. 18 ಅದಕ್ಕೆ ದಾವೀದನು “ಅರಸನ ಅಳಿಯನಾಗುವುದಕ್ಕೆ ನಾನು ಎಷ್ಟರವನು? ಇಸ್ರಾಯೇಲರಲ್ಲಿ ನನ್ನ ತಂದೆಯ ಕುಟುಂಬವೂ ಸಮಾನವೇ?” ಎಂದನು. 19 ಸೌಲನು ತನ್ನ ಮಗಳಾದ ಮೇರಬಳನ್ನು ದಾವೀದನಿಗೆ ಕೊಡತಕ್ಕ ಕಾಲ ಬಂದಾಗ ಅವನು ಅವಳನ್ನು ಮೆಹೋಲದ ಅದ್ರೀಯೇಲ ಎಂಬವನಿಗೆ ಮದುವೆಮಾಡಿ ಕೊಟ್ಟನು. 20 ಸೌಲನ ಮಗಳಾದ ಮೀಕಲಳು ದಾವೀದನನ್ನು ಪ್ರೀತಿಸಿದಳು. ಇದು ಸೌಲನಿಗೆ ತಿಳಿದಾಗ ಅವನಿಗೆ ಸಂತೋಷವಾಯಿತು. 21 ಅವಳು ದಾವೀದನಿಗೆ ಉರಲಾಗಿರುವಂತೆಯೂ, ಅವನು ಫಿಲಿಷ್ಟಿಯರ ಕೈಗೆ ಸಿಕ್ಕಿಬೀಳುವಂತೆಯೂ ಇವಳನ್ನು ಅವನಿಗೆ ಕೊಡುವೆನು ಅಂದುಕೊಂಡು ಅವನಿಗೆ, “ನೀನು ನನ್ನ ಅಳಿಯನಾಗುವುದಕ್ಕೆ ಈಗ ಎರಡನೆಯ ಸಂದರ್ಭವುಂಟಾಯಿತು” ಎಂದು ಹೇಳಿದನು. 22 ಅವನು ತನ್ನ ಸೇವಕರಿಗೆ, “ನೀವು ದಾವೀದನಿಗೆ ಗುಪ್ತವಾಗಿ, ‘ಅರಸನಿಗೆ ನಿನ್ನನ್ನು ಒಲಿಯುತ್ತಾನೆ, ಅವನ ಸೇವಕರು ನಿನ್ನನ್ನು ಪ್ರೀತಿಸುತ್ತಾರೆ. ನೀನು ಅರಸನ ಅಳಿಯನಾಗು’ ಎಂದು ಹೇಳಿರಿ” ಅಂದನು. 23 ಆ ಸೇವಕರು ದಾವೀದನಿಗೆ ಹಾಗೆಯೇ ಹೇಳಿದಾಗ ಅವನು, “ಅರಸನ ಅಳಿಯನಾಗುವುದು ಸಾಧಾರಣವಾದ ಸಂಗತಿಯೆಂದು ನೆನಸುತ್ತೀರೋ? ನಾನು ದರಿದ್ರನೂ, ಅಲ್ಪನೂ ಆಗಿರುತ್ತೆನಲ್ಲಾ” ಎಂದು ಉತ್ತರ ಕೊಟ್ಟನು. 24 ಸೇವಕರು ದಾವೀದನ ಮಾತುಗಳನ್ನು ಸೌಲನಿಗೆ ತಿಳಿಸಿದರು. 25 ಆಗ ಅವನು ಅವರಿಗೆ, “ನೀವು ಹೋಗಿ ದಾವೀದನಿಗೆ, ‘ಅರಸನು ತೆರವನ್ನು ಅಪೇಕ್ಷಿಸುವುದಿಲ್ಲ. ತನ್ನ ಶತ್ರುಗಳಾದ ಫಿಲಿಷ್ಟಿಯರಿಗೆ ಮುಯ್ಯಿತೀರಿಸಿ ಅವರಲ್ಲಿನ ನೂರು ಮಂದಿಯ ಮುಂದೊಗಲನ್ನು ತಂದುಕೊಡಬೇಕು ಅನ್ನುತ್ತಾನೆ’ ಎಂದು ಹೇಳಿರಿ” ಎಂದು ಆಜ್ಞಾಪಿಸಿದನು. ದಾವೀದನನ್ನು ಫಿಲಿಷ್ಟಿಯರಿಂದ ಕೊಲ್ಲಿಸಬೇಕೆಂಬುದೇ ಅವನ ಉದ್ದೇಶವಾಗಿತ್ತು. 26 ಸೇವಕರು ದಾವೀದನಿಗೆ ಈ ಮಾತುಗಳನ್ನು ತಿಳಿಸಿದಾಗ ಅವನು ಅರಸನ ಅಳಿಯನಾಗುವುದಕ್ಕೆ ಒಪ್ಪಿದನು. ನೇಮಕವಾದ ದಿನಗಳು ಮುಗಿಯುವ ಮೊದಲೇ, 27 ದಾವೀದನು ತನ್ನ ಸೇವಕರೊಡನೆ ಹೊರಟು, ಫಿಲಿಷ್ಟಿಯರ ದೇಶಕ್ಕೆ ಹೋಗಿ, ಅಲ್ಲಿನ ಇನ್ನೂರು ಜನರನ್ನು ಕೊಂದು, ಮುಂದೊಗಲುಗಳನ್ನು ತಂದು, ಅರಸನ ಅಳಿಯನಾಗುವುದಕ್ಕೋಸ್ಕರ ಅವುಗಳನ್ನು ಪೂರ್ಣವಾಗಿ ಅವನಿಗೆ ಒಪ್ಪಿಸಿದನು. ಆಗ ಸೌಲನು ತನ್ನ ಮಗಳಾದ ಮೀಕಲಳನ್ನು ಅವನಿಗೆ ಮದುವೆಮಾಡಿಕೊಟ್ಟನು. 28 ಮೀಕಲಳು ಅವನನ್ನು ಬಹಳವಾಗಿ ಪ್ರೀತಿಸುವವಳಾದಳು. ಯೆಹೋವನು ದಾವೀದನ ಸಂಗಡ ಇದ್ದಾನೆಂದು, 29 ಸೌಲನು ತಿಳಿದು ಅವನಿಗೆ ಮತ್ತಷ್ಟು ಹೆದರುವವನಾಗಿ ಅವನ ನಿತ್ಯವೈರಿಯಾದನು. 30 ಫಿಲಿಷ್ಟಿಯ ಪ್ರಭುಗಳು ಯುದ್ಧಕ್ಕೆ ಬಂದಾಗೆಲ್ಲಾ ಸೌಲನ ಸೇನಾಧಿಪತಿಗಳಲ್ಲಿ ದಾವೀದನೇ ಹೆಚ್ಚು ಪ್ರಭಾವಶಾಲಿಯಾಗಿ ಬರುತ್ತಿದ್ದುದರಿಂದ ಅವನ ಹೆಸರು ಬಹು ಸುಪ್ರಸಿದ್ಧವಾಯಿತು.
In Other Versions
1 Samuel 18 in the ANGEFD
1 Samuel 18 in the ANTPNG2D
1 Samuel 18 in the AS21
1 Samuel 18 in the BAGH
1 Samuel 18 in the BBPNG
1 Samuel 18 in the BBT1E
1 Samuel 18 in the BDS
1 Samuel 18 in the BEV
1 Samuel 18 in the BHAD
1 Samuel 18 in the BIB
1 Samuel 18 in the BLPT
1 Samuel 18 in the BNT
1 Samuel 18 in the BNTABOOT
1 Samuel 18 in the BNTLV
1 Samuel 18 in the BOATCB
1 Samuel 18 in the BOATCB2
1 Samuel 18 in the BOBCV
1 Samuel 18 in the BOCNT
1 Samuel 18 in the BOECS
1 Samuel 18 in the BOGWICC
1 Samuel 18 in the BOHCB
1 Samuel 18 in the BOHCV
1 Samuel 18 in the BOHLNT
1 Samuel 18 in the BOHNTLTAL
1 Samuel 18 in the BOICB
1 Samuel 18 in the BOILNTAP
1 Samuel 18 in the BOITCV
1 Samuel 18 in the BOKCV
1 Samuel 18 in the BOKCV2
1 Samuel 18 in the BOKHWOG
1 Samuel 18 in the BOKSSV
1 Samuel 18 in the BOLCB
1 Samuel 18 in the BOLCB2
1 Samuel 18 in the BOMCV
1 Samuel 18 in the BONAV
1 Samuel 18 in the BONCB
1 Samuel 18 in the BONLT
1 Samuel 18 in the BONUT2
1 Samuel 18 in the BOPLNT
1 Samuel 18 in the BOSCB
1 Samuel 18 in the BOSNC
1 Samuel 18 in the BOTLNT
1 Samuel 18 in the BOVCB
1 Samuel 18 in the BOYCB
1 Samuel 18 in the BPBB
1 Samuel 18 in the BPH
1 Samuel 18 in the BSB
1 Samuel 18 in the CCB
1 Samuel 18 in the CUV
1 Samuel 18 in the CUVS
1 Samuel 18 in the DBT
1 Samuel 18 in the DGDNT
1 Samuel 18 in the DHNT
1 Samuel 18 in the DNT
1 Samuel 18 in the ELBE
1 Samuel 18 in the EMTV
1 Samuel 18 in the ESV
1 Samuel 18 in the FBV
1 Samuel 18 in the FEB
1 Samuel 18 in the GGMNT
1 Samuel 18 in the GNT
1 Samuel 18 in the HARY
1 Samuel 18 in the HNT
1 Samuel 18 in the IRVA
1 Samuel 18 in the IRVB
1 Samuel 18 in the IRVG
1 Samuel 18 in the IRVH
1 Samuel 18 in the IRVM
1 Samuel 18 in the IRVM2
1 Samuel 18 in the IRVO
1 Samuel 18 in the IRVP
1 Samuel 18 in the IRVT
1 Samuel 18 in the IRVT2
1 Samuel 18 in the IRVU
1 Samuel 18 in the ISVN
1 Samuel 18 in the JSNT
1 Samuel 18 in the KAPI
1 Samuel 18 in the KBT1ETNIK
1 Samuel 18 in the KBV
1 Samuel 18 in the KJV
1 Samuel 18 in the KNFD
1 Samuel 18 in the LBA
1 Samuel 18 in the LBLA
1 Samuel 18 in the LNT
1 Samuel 18 in the LSV
1 Samuel 18 in the MAAL
1 Samuel 18 in the MBV
1 Samuel 18 in the MBV2
1 Samuel 18 in the MHNT
1 Samuel 18 in the MKNFD
1 Samuel 18 in the MNG
1 Samuel 18 in the MNT
1 Samuel 18 in the MNT2
1 Samuel 18 in the MRS1T
1 Samuel 18 in the NAA
1 Samuel 18 in the NASB
1 Samuel 18 in the NBLA
1 Samuel 18 in the NBS
1 Samuel 18 in the NBVTP
1 Samuel 18 in the NET2
1 Samuel 18 in the NIV11
1 Samuel 18 in the NNT
1 Samuel 18 in the NNT2
1 Samuel 18 in the NNT3
1 Samuel 18 in the PDDPT
1 Samuel 18 in the PFNT
1 Samuel 18 in the RMNT
1 Samuel 18 in the SBIAS
1 Samuel 18 in the SBIBS
1 Samuel 18 in the SBIBS2
1 Samuel 18 in the SBICS
1 Samuel 18 in the SBIDS
1 Samuel 18 in the SBIGS
1 Samuel 18 in the SBIHS
1 Samuel 18 in the SBIIS
1 Samuel 18 in the SBIIS2
1 Samuel 18 in the SBIIS3
1 Samuel 18 in the SBIKS
1 Samuel 18 in the SBIKS2
1 Samuel 18 in the SBIMS
1 Samuel 18 in the SBIOS
1 Samuel 18 in the SBIPS
1 Samuel 18 in the SBISS
1 Samuel 18 in the SBITS
1 Samuel 18 in the SBITS2
1 Samuel 18 in the SBITS3
1 Samuel 18 in the SBITS4
1 Samuel 18 in the SBIUS
1 Samuel 18 in the SBIVS
1 Samuel 18 in the SBT
1 Samuel 18 in the SBT1E
1 Samuel 18 in the SCHL
1 Samuel 18 in the SNT
1 Samuel 18 in the SUSU
1 Samuel 18 in the SUSU2
1 Samuel 18 in the SYNO
1 Samuel 18 in the TBIAOTANT
1 Samuel 18 in the TBT1E
1 Samuel 18 in the TBT1E2
1 Samuel 18 in the TFTIP
1 Samuel 18 in the TFTU
1 Samuel 18 in the TGNTATF3T
1 Samuel 18 in the THAI
1 Samuel 18 in the TNFD
1 Samuel 18 in the TNT
1 Samuel 18 in the TNTIK
1 Samuel 18 in the TNTIL
1 Samuel 18 in the TNTIN
1 Samuel 18 in the TNTIP
1 Samuel 18 in the TNTIZ
1 Samuel 18 in the TOMA
1 Samuel 18 in the TTENT
1 Samuel 18 in the UBG
1 Samuel 18 in the UGV
1 Samuel 18 in the UGV2
1 Samuel 18 in the UGV3
1 Samuel 18 in the VBL
1 Samuel 18 in the VDCC
1 Samuel 18 in the YALU
1 Samuel 18 in the YAPE
1 Samuel 18 in the YBVTP
1 Samuel 18 in the ZBP