1 Samuel 21 (IRVK)

1 ದಾವೀದನು ನೋಬ್ ಊರಲ್ಲಿದ್ದ ಯಾಜಕನಾದ ಅಹೀಮೆಲೆಕನ ಬಳಿಗೆ ಬಂದನು. ಅಹೀಮೆಲೆಕನು ದಾವೀದನನ್ನು ಭಯಭಕ್ತಿಯಿಂದ ಎದುರುಗೊಂಡು, “ನಿನ್ನ ಜೊತೆಯಲ್ಲಿ ಒಬ್ಬನಾದರೂ ಇಲ್ಲವಲ್ಲಾ, ನೀನು ಒಬ್ಬನೇ ಬಂದದ್ದೇಕೆ?” ಎಂದು ಅವನನ್ನು ಕೇಳಿದನು. 2 ಅವನು, “ಅರಸನು ಒಂದು ಕೆಲಸವನ್ನು ಆಜ್ಞಾಪಿಸಿ, ಇದನ್ನು ಯಾರಿಗೂ ತಿಳಿಸಬಾರದೆಂದು ನನ್ನನ್ನು ಕಳುಹಿಸಿದ್ದಾನೆ. ನನ್ನ ಆಳುಗಳು ಇಂಥಿಂಥ ಸ್ಥಳದಲ್ಲಿ ನನ್ನನ್ನು ಸಂಧಿಸಬೇಕೆಂದು ಗೊತ್ತುಮಾಡಿದ್ದಾನೆ. 3 ಈಗ ನಿನ್ನ ಕೈಯಲ್ಲಿ ಏನಾದರೂ ಉಂಟೋ? ನಾಲ್ಕೈದು ರೊಟ್ಟಿಗಳಾದರೂ, ಬೇರೆ ಯಾವ ಆಹಾರಪದಾರ್ಥವಾದರೂ ಇದ್ದರೆ ನನಗೆ ಕೊಟ್ಟುಬಿಡು” ಎಂದನು. 4 ಯಾಜಕನು ದಾವೀದನಿಗೆ, “ನನ್ನ ಬಳಿಯಲ್ಲಿ ಮೀಸಲು ರೊಟ್ಟಿಗಳು ಹೊರತು ಬೇರೆ ರೊಟ್ಟಿಗಳಿಲ್ಲ. ನಿನ್ನ ಆಳುಗಳು ಸ್ತ್ರೀಸಂಗ ಬಿಟ್ಟವರಾಗಿದ್ದರೆ ಅವುಗಳನ್ನು ಕೊಡಬಹುದು” ಎಂದನು. 5 ದಾವೀದನು, “ನಮ್ಮ ಎಲ್ಲಾ ಯುದ್ಧ ಪ್ರಯಾಣಗಳಲ್ಲಿ ಸ್ತ್ರೀಸಂಗವನ್ನು ನಿಷೇಧಮಾಡುವಂತೆ ಈಗಲೂ ಮಾಡಿದ್ದೇವೆ. ನಾವು ಸಾಧಾರಣ ಕಾರ್ಯಕ್ಕೆ ಹೊರಟಾಗಲೂ ಆಳುಗಳು, ಸಾಮಾನುಗಳು ಪರಿಶುದ್ಧವಾಗಿರುತ್ತವೆ. ಈ ದಿನದಲ್ಲಿ ಅವು ಎಷ್ಟೋ ಹೆಚ್ಚಾಗಿ ಪರಿಶುದ್ಧವಾಗಿರುತ್ತದಲ್ಲವೇ” ಎಂದು ಉತ್ತರ ಕೊಟ್ಟನು 6 ಬಿಸಿರೊಟ್ಟಿಗಳನ್ನು ಅರ್ಪಿಸಿದ ಆ ದಿನಗಳಲ್ಲಿ ಯೆಹೋವನ ಸನ್ನಿಧಿಯಿಂದ ತೆಗೆಯಲ್ಪಟ್ಟ ನೈವೇದ್ಯವಾದ ಮೊದಲ ರೊಟ್ಟಿಗಳ ಹೊರತು ಅಲ್ಲಿ ಬೇರೆ ರೊಟ್ಟಿಗಳು ಇರಲಿಲ್ಲವಾದ್ದರಿಂದ, ಯಾಜಕನು ಆ ಪರಿಶುದ್ಧವಾದ ರೊಟ್ಟಿಗಳನ್ನೇ ಕೊಟ್ಟುಬಿಟ್ಟನು. 7 ಅದೇ ದಿನ ಸೌಲನ ಪಶುಪಾಲರಲ್ಲಿ ಪ್ರಧಾನನಾದ ದೋಯೇಗನೆಂಬ ಎದೋಮ್ಯನು ಯೆಹೋವನ ಆಲಯದಲ್ಲಿ ಉಳಿದುಕೊಂಡಿದ್ದನು. 8 ದಾವೀದನು ಅಹೀಮೆಲೆಕನನ್ನು, “ಅರಸನ ಕಾರ್ಯವು ತುರ್ತಾದ್ದರಿಂದ ಕತ್ತಿಯನ್ನಾಗಲಿ, ಬೇರೆ ಆಯುಧವನ್ನಾಗಲಿ ತೆಗೆದುಕೊಂಡು ಬರಲಿಲ್ಲ, ನಿನ್ನ ಬಳಿಯಲ್ಲಿ ಬರ್ಜಿಯಾಗಲಿ ಕತ್ತಿಯಾಗಲಿ ಇಲ್ಲವೋ?” ಎಂದು ಕೇಳಿದನು. 9 ಅವನು, “ನೀನು ಏಲಾ ತಗ್ಗಿನಲ್ಲಿ ಕೊಂದು ಹಾಕಿದ ಫಿಲಿಷ್ಟಿಯನಾದ ಗೊಲ್ಯಾತನ ಕತ್ತಿಯು ಒಂದು ಬಟ್ಟೆಯಲ್ಲಿ ಸುತ್ತಲ್ಪಟ್ಟು, ಏಫೋದಿನ ಹಿಂದೆ ಇಡಲ್ಪಟ್ಟಿದೆ. ಬೇಕಾದರೆ ಅದನ್ನು ತೆಗೆದುಕೊ. ಅದರ ಹೊರತು ನನ್ನ ಬಳಿಯಲ್ಲಿ ಬೇರೊಂದಿಲ್ಲ” ಎಂದು ಉತ್ತರಕೊಟ್ಟನು. ದಾವೀದನು, “ಅದಕ್ಕೆ ಸಮಾನವಾದದ್ದು ಮತ್ತೊಂದಿಲ್ಲ. ಅದನ್ನೇ ಕೊಡು” ಎಂದು ಹೇಳಿ ತೆಗೆದುಕೊಂಡನು. 10 ದಾವೀದನನು ಸೌಲನ ಭಯದಿಂದ ಅದೇ ದಿನ ಗತ್ ಊರಿನ ಅರಸನಾದ ಆಕೀಷನ ಬಳಿಗೆ ಓಡಿಹೋದನು. 11 ಆಕೀಷನ ಸೇವಕರು, “ಸೌಲನು ಸಾವಿರಾರು ಶತ್ರುಗಳನ್ನು ಕೊಂದನು, ದಾವೀದನು ಹತ್ತು ಸಾವಿರಾರು ಶತ್ರುಗಳನ್ನು ಕೊಂದನು ಎಂಬುದಾಗಿ ಸ್ತ್ರೀಯರು ಕುಣಿಯುತ್ತಾ ಹಾಡಿದ್ದು ಇವನ ಕುರಿತಲ್ಲವೋ?” ಎಂದು ಮಾತನಾಡಿಕೊಂಡರು. 12 ದಾವೀದನು ಈ ಮಾತುಗಳನ್ನು ಕೇಳುತ್ತಲೇ ಗತ್ ಊರಿನ ಅರಸನಾದ ಆಕೀಷನಿಗೆ ಬಹಳವಾಗಿ ಹೆದರಿ, 13 ಅವನ ಸೇವಕರ ಮುಂದೆ ತನ್ನ ಬುದ್ಧಿಯನ್ನು ಮಾರ್ಪಡಿಸಿಕೊಂಡು, ಗಡ್ಡದ ಮೇಲೆಲ್ಲಾ ಜೊಲ್ಲು ಸುರಿಸುತ್ತಾ, ಬಾಗಿಲುಗಳನ್ನು ಕೆರೆಯುತ್ತಾ, ತನ್ನನ್ನು ಹುಚ್ಚನಂತೆ ನಟಿಸಿದನು. 14 ಆಗ ಆಕೀಷನು ತನ್ನ ಸೇವಕರಿಗೆ, “ಈ ಮನುಷ್ಯನು ಹುಚ್ಚನೆಂದು ನಿಮಗೆ ಕಾಣುವುದಿಲ್ಲವೋ, ಇವನನ್ನು ನನ್ನ ಹತ್ತಿರ ಯಾಕೆ ಕರೆತಂದಿರಿ? 15 ನನ್ನ ಬಳಿಯಲ್ಲಿ ಹುಚ್ಚರು ಕಡಿಮೆಯೆಂದು ನೆನಸಿ ನನ್ನನ್ನು ಬೇಸರಗೊಳಿಸುವುದಕ್ಕಾಗಿ ಇವನನ್ನು ಕರೆತಂದಿರೋ? ಇಂಥವನೂ ನನ್ನ ಮನೆಗೆ ಬರಬೇಕೋ?” ಅಂದನು.

In Other Versions

1 Samuel 21 in the ANGEFD

1 Samuel 21 in the ANTPNG2D

1 Samuel 21 in the AS21

1 Samuel 21 in the BAGH

1 Samuel 21 in the BBPNG

1 Samuel 21 in the BBT1E

1 Samuel 21 in the BDS

1 Samuel 21 in the BEV

1 Samuel 21 in the BHAD

1 Samuel 21 in the BIB

1 Samuel 21 in the BLPT

1 Samuel 21 in the BNT

1 Samuel 21 in the BNTABOOT

1 Samuel 21 in the BNTLV

1 Samuel 21 in the BOATCB

1 Samuel 21 in the BOATCB2

1 Samuel 21 in the BOBCV

1 Samuel 21 in the BOCNT

1 Samuel 21 in the BOECS

1 Samuel 21 in the BOGWICC

1 Samuel 21 in the BOHCB

1 Samuel 21 in the BOHCV

1 Samuel 21 in the BOHLNT

1 Samuel 21 in the BOHNTLTAL

1 Samuel 21 in the BOICB

1 Samuel 21 in the BOILNTAP

1 Samuel 21 in the BOITCV

1 Samuel 21 in the BOKCV

1 Samuel 21 in the BOKCV2

1 Samuel 21 in the BOKHWOG

1 Samuel 21 in the BOKSSV

1 Samuel 21 in the BOLCB

1 Samuel 21 in the BOLCB2

1 Samuel 21 in the BOMCV

1 Samuel 21 in the BONAV

1 Samuel 21 in the BONCB

1 Samuel 21 in the BONLT

1 Samuel 21 in the BONUT2

1 Samuel 21 in the BOPLNT

1 Samuel 21 in the BOSCB

1 Samuel 21 in the BOSNC

1 Samuel 21 in the BOTLNT

1 Samuel 21 in the BOVCB

1 Samuel 21 in the BOYCB

1 Samuel 21 in the BPBB

1 Samuel 21 in the BPH

1 Samuel 21 in the BSB

1 Samuel 21 in the CCB

1 Samuel 21 in the CUV

1 Samuel 21 in the CUVS

1 Samuel 21 in the DBT

1 Samuel 21 in the DGDNT

1 Samuel 21 in the DHNT

1 Samuel 21 in the DNT

1 Samuel 21 in the ELBE

1 Samuel 21 in the EMTV

1 Samuel 21 in the ESV

1 Samuel 21 in the FBV

1 Samuel 21 in the FEB

1 Samuel 21 in the GGMNT

1 Samuel 21 in the GNT

1 Samuel 21 in the HARY

1 Samuel 21 in the HNT

1 Samuel 21 in the IRVA

1 Samuel 21 in the IRVB

1 Samuel 21 in the IRVG

1 Samuel 21 in the IRVH

1 Samuel 21 in the IRVM

1 Samuel 21 in the IRVM2

1 Samuel 21 in the IRVO

1 Samuel 21 in the IRVP

1 Samuel 21 in the IRVT

1 Samuel 21 in the IRVT2

1 Samuel 21 in the IRVU

1 Samuel 21 in the ISVN

1 Samuel 21 in the JSNT

1 Samuel 21 in the KAPI

1 Samuel 21 in the KBT1ETNIK

1 Samuel 21 in the KBV

1 Samuel 21 in the KJV

1 Samuel 21 in the KNFD

1 Samuel 21 in the LBA

1 Samuel 21 in the LBLA

1 Samuel 21 in the LNT

1 Samuel 21 in the LSV

1 Samuel 21 in the MAAL

1 Samuel 21 in the MBV

1 Samuel 21 in the MBV2

1 Samuel 21 in the MHNT

1 Samuel 21 in the MKNFD

1 Samuel 21 in the MNG

1 Samuel 21 in the MNT

1 Samuel 21 in the MNT2

1 Samuel 21 in the MRS1T

1 Samuel 21 in the NAA

1 Samuel 21 in the NASB

1 Samuel 21 in the NBLA

1 Samuel 21 in the NBS

1 Samuel 21 in the NBVTP

1 Samuel 21 in the NET2

1 Samuel 21 in the NIV11

1 Samuel 21 in the NNT

1 Samuel 21 in the NNT2

1 Samuel 21 in the NNT3

1 Samuel 21 in the PDDPT

1 Samuel 21 in the PFNT

1 Samuel 21 in the RMNT

1 Samuel 21 in the SBIAS

1 Samuel 21 in the SBIBS

1 Samuel 21 in the SBIBS2

1 Samuel 21 in the SBICS

1 Samuel 21 in the SBIDS

1 Samuel 21 in the SBIGS

1 Samuel 21 in the SBIHS

1 Samuel 21 in the SBIIS

1 Samuel 21 in the SBIIS2

1 Samuel 21 in the SBIIS3

1 Samuel 21 in the SBIKS

1 Samuel 21 in the SBIKS2

1 Samuel 21 in the SBIMS

1 Samuel 21 in the SBIOS

1 Samuel 21 in the SBIPS

1 Samuel 21 in the SBISS

1 Samuel 21 in the SBITS

1 Samuel 21 in the SBITS2

1 Samuel 21 in the SBITS3

1 Samuel 21 in the SBITS4

1 Samuel 21 in the SBIUS

1 Samuel 21 in the SBIVS

1 Samuel 21 in the SBT

1 Samuel 21 in the SBT1E

1 Samuel 21 in the SCHL

1 Samuel 21 in the SNT

1 Samuel 21 in the SUSU

1 Samuel 21 in the SUSU2

1 Samuel 21 in the SYNO

1 Samuel 21 in the TBIAOTANT

1 Samuel 21 in the TBT1E

1 Samuel 21 in the TBT1E2

1 Samuel 21 in the TFTIP

1 Samuel 21 in the TFTU

1 Samuel 21 in the TGNTATF3T

1 Samuel 21 in the THAI

1 Samuel 21 in the TNFD

1 Samuel 21 in the TNT

1 Samuel 21 in the TNTIK

1 Samuel 21 in the TNTIL

1 Samuel 21 in the TNTIN

1 Samuel 21 in the TNTIP

1 Samuel 21 in the TNTIZ

1 Samuel 21 in the TOMA

1 Samuel 21 in the TTENT

1 Samuel 21 in the UBG

1 Samuel 21 in the UGV

1 Samuel 21 in the UGV2

1 Samuel 21 in the UGV3

1 Samuel 21 in the VBL

1 Samuel 21 in the VDCC

1 Samuel 21 in the YALU

1 Samuel 21 in the YAPE

1 Samuel 21 in the YBVTP

1 Samuel 21 in the ZBP