2 Kings 20 (IRVK)
1 ಆ ಕಾಲದಲ್ಲಿ ಹಿಜ್ಕೀಯನನ್ನು ಮರಣಕರವಾದ ರೋಗವು ಬಾಧಿಸಿತು. ಆಗ ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನು ಅವನ ಬಳಿಗೆ ಬಂದು ಅವನಿಗೆ, “‘ನಿನ್ನ ಮನೆಯ ಕಾರ್ಯಗಳನ್ನೆಲ್ಲಾ ಕ್ರಮಪಡಿಸಿ ಸೂಕ್ತಮಾಡಿಕೋ, ನೀನು ಮರಣ ಹೊಂದುವಿ’ ಎಂದು ಯೆಹೋವನು ತಿಳಿಸಿದ್ದಾನೆ” ಎಂದು ಹೇಳಿದನು. 2 ಇದನ್ನು ಕೇಳಿದೊಡನೆ ಹಿಜ್ಕೀಯನು ಗೋಡೆಯ ಕಡೆಗೆ ತಿರುಗಿಕೊಂಡು ಯೆಹೋವನಿಗೆ ಪ್ರಾರ್ಥಿಸಿ, ಹೀಗೆ ವಿಜ್ಞಾಪಿಸಿಕೊಂಡನು. 3 “ಯೆಹೋವನೇ, ದಯವಿಟ್ಟು ನಾನು ನಂಬಿಗಸ್ತನಾಗಿಯೂ ನಿನಗೆ, ಪ್ರಾಮಾಣಿಕನಾಗಿಯೂ ಶ್ರದ್ಧೆಯಿಂದಲೂ ನಡೆದುಕೊಂಡು ನಿನ್ನ ದೃಷ್ಟಿಯಲ್ಲಿ ಒಳ್ಳೆಯವನಾಗಿದ್ದುದನ್ನು ನೆನಪುಮಾಡಿಕೋ” ಎಂದು ಹೇಳಿ ಹಿಜ್ಕೀಯನು ಬಹಳವಾಗಿ ಕಣ್ಣೀರಿಟ್ಟು ಪ್ರಾರ್ಥಿಸಿದನು. 4 ಯೆಶಾಯನು ಅರಮನೆಯ ಮಧ್ಯಪ್ರಾಕಾರವನ್ನು ದಾಟುವುದಕ್ಕೆ ಮೊದಲು ಯೆಹೋವನಿಂದ ಅಪ್ಪಣೆಯಾಯಿತು. 5 “ನೀನು ಹಿಂದಿರುಗಿ ಹೋಗಿ, ನನ್ನ ಜನಗಳ ಪ್ರಭುವಾಗಿರುವ ಹಿಜ್ಕೀಯನಿಗೆ, ‘ನಿನ್ನ ಪಿತೃವಾದ ದಾವೀದನ ದೇವರಾದ ಯೆಹೋವನು ಹೇಳಿದ್ದೇನೆಂದರೆ, ನಾನು ನಿನ್ನ ಪ್ರಾರ್ಥನೆಯನ್ನು ಕೇಳಿದ್ದೇನೆ, ನಿನ್ನ ಕಣ್ಣೀರನ್ನು ನೋಡಿದ್ದೇನೆ. ನೀನು ಗುಣಹೊಂದಿ ಮೂರನೆಯ ದಿನ ನನ್ನ ಆಲಯಕ್ಕೆ ಬರುವೆ. 6 ಇದಲ್ಲದೆ, ನಿನ್ನ ಆಯುಷ್ಯಕ್ಕೆ ಹದಿನೈದು ವರ್ಷಗಳನ್ನು ಹೆಚ್ಚಿಸಿದ್ದೇನೆ, ನಿನ್ನನ್ನೂ, ಈ ಪಟ್ಟಣವನ್ನೂ ಅಶ್ಶೂರನ ಅರಸನ ಕೈಗೆ ಬೀಳದಂತೆ ತಪ್ಪಿಸುವೆನು. ನನಗಾಗಿಯೂ, ನನ್ನ ಸೇವಕನಾದ ದಾವೀದನಿಗಾಗಿಯೂ ಈ ಪಟ್ಟಣವನ್ನು ಉಳಿಸಿ ಕಾಪಾಡುವೆನು’ ಎಂಬುದಾಗಿ ನಿನ್ನ ಪೂರ್ವಿಕನಾದ ದಾವೀದನ ದೇವರಾಗಿರುವ ಯೆಹೋವನು ಹೇಳುತ್ತಾನೆ ಎಂದು ತಿಳಿಸು” ಅಂದನು. 7 ಅನಂತರ ಯೆಶಾಯನು, ಒಂದು ಅಂಜೂರಹಣ್ಣನ್ನು ತೆಗೆದು ಅವನ ಗಾಯದ ಮೇಲೆ ಇಟ್ಟಾಗ ಹಿಜ್ಕೀಯನು ಗುಣಹೊಂದಿದನು. 8 ಹಿಜ್ಕೀಯನು ಯೆಶಾಯನಿಗೆ, “ಯೆಹೋವನು ನನ್ನನ್ನು ಗುಣಪಡಿಸುವನೆಂಬುವುದಕ್ಕೂ, ನಾನು ಮೂರನೆಯ ದಿನ ಆತನ ಆಲಯಕ್ಕೆ ಹೋಗುವೆನೆಂಬುವುದಕ್ಕೂ, ಇರುವ ಗುರುತು ಏನು?” ಎಂದು ಕೇಳಿದನು. 9 ಅದಕ್ಕೆ ಯೆಶಾಯನು, “ಯೆಹೋವನು ನುಡಿದಿದ್ದನ್ನು ನೆರವೇರಿಸುವನು ಎಂಬುದಕ್ಕೆ ಯೆಹೋವನಿಂದ ಉಂಟಾದ ಗುರುತು ಕೇಳುತ್ತಿರುವೆ, ಹಾಗಾದರೆ ನೆರಳು ಹತ್ತು ಮೆಟ್ಟಲು ಮುಂದೆ ಹೋಗಬೇಕೋ? ಹಿಂದೆ ಬರಬೇಕೋ? ಹೇಳು ಹಿಂದೆ ಹೋಗಬೇಕೋ ಹೇಳು?” ಎಂದು ಕೇಳಿದನು. 10 ಅದಕ್ಕೆ ಹಿಜ್ಕೀಯನು, “ನೆರಳು ಮುಂದೆ ಹೋಗುವುದು ಸುಲಭ, ಆದುದರಿಂದ ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡು” ಎಂದು ಹೇಳಿದನು. 11 ಆಗ ಪ್ರವಾದಿಯಾದ ಯೆಶಾಯನು ಯೆಹೋವನಿಗೆ ಮೊರೆಯಿಡಲು ಆತನು ಆಹಾಜನ ಗಡಿಯಾರದ ವೇಳಾನುಸಾರ ಹತ್ತು ಮೆಟ್ಟಲು ಮುಂದೆ ಹೋಗಿದ್ದ ನೆರಳನ್ನು ಹತ್ತು ಮೆಟ್ಟಲು ಹಿಂದೆ ಬರುವಂತೆ ಮಾಡಿದನು. 12 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬೆಲಿನ ಅರಸನೂ ಆದ ಬೆರೋದಕಬಲದಾನ ಎಂಬುವವನು ಹಿಜ್ಕೀಯನು ಅಸ್ವಸ್ಥನಾಗಿದ್ದಾನೆಂದು ಕೇಳಿ, ದೂತರ ಮುಖಾಂತರವಾಗಿ ಅವನಿಗೆ ಪತ್ರವನ್ನೂ, ಬಹುಮಾನವನ್ನೂ ಕಳುಹಿಸಿದನು. 13 ಹಿಜ್ಕೀಯನು ಬಂದಂಥ ದೂತರ ಮಾತನ್ನು ಕೇಳಿ, ಅವರಿಗೆ ಬೆಳ್ಳಿಬಂಗಾರ, ಸುಗಂಧದ್ರವ್ಯ, ಪರಿಮಳತೈಲ, ಮೊದಲಾದ ಪದಾರ್ಥಗಳಿರುವ ಮನೆಯನ್ನೂ, ಆಯುಧಶಾಲೆಯನ್ನೂ, ತನ್ನ ಭಂಡಾರದಲ್ಲಿದ್ದದೆಲ್ಲವನ್ನೂ ತೋರಿಸಿದನು. ಅವನ ಅರಮನೆಯಲ್ಲಿಯೂ, ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ. 14 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನನ್ನು, “ಆ ಮನುಷ್ಯರು ಎಲ್ಲಿಯವರು? ಏನು ಹೇಳಿದರು?” ಎಂದು ಕೇಳಲು ಅವನು, “ಅವರು ಬಹು ದೂರ ದೇಶವಾದ ಬಾಬೆಲಿನಿಂದ ಬಂದವರು” ಎಂದು ಉತ್ತರ ಕೊಟ್ಟನು. 15 ಯೆಶಾಯನು ತಿರುಗಿ ಹಿಜ್ಕೀಯನನ್ನು, “ಅವರು ನಿನ್ನ ಮನೆಯಲ್ಲಿ ಏನು ನೋಡಿದರು?” ಎಂದು ಕೇಳಲು ಅವನು, “ಅರಮನೆಯಲ್ಲಿ ಇರುವುದೆಲ್ಲವನ್ನೂ ನೋಡಿದರು. ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದಿದ್ದ ಒಂದು ವಸ್ತುವು ಇರುವುದಿಲ್ಲ” ಎಂದನು. 16 ಆಗ ಯೆಶಾಯನು ಹಿಜ್ಕೀಯನಿಗೆ, “ಯೆಹೋವನ ಮಾತನ್ನು ಕೇಳು, 17 ‘ಆತನು ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವನ್ನು ಬಾಬಿಲೋನಿಗೆ ಒಯ್ಯಲ್ಪಡುವ ದಿನವು ಬರುವುದು, ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವನು ಹೇಳುತ್ತಾನೆ. 18 ಬಾಬೆಲಿನ ಅರಸನು ಬಂದು ನಿನ್ನಿಂದ ಹುಟ್ಟುವಂಥ ಮಕ್ಕಳನ್ನು ತೆಗೆದುಕೊಂಡು ಹೋಗಿ, ಅವರನ್ನು ತಮ್ಮ ಅರಮನೆಯಲ್ಲಿ ಕಂಚುಕಿಗಳನ್ನಾಗಿ ನೇಮಿಸಿಕೊಳ್ಳುವರು ಎಂದು ಯೆಹೋವನು ಅನ್ನುತ್ತಾನೆ’” ಎಂದು ಹೇಳಿದನು. 19 ಹಿಜ್ಕೀಯನು ಯೆಶಾಯನಿಗೆ, “ನೀನು ತಿಳಿಸಿದ ಯೆಹೋವನ ಮಾತು ಒಳ್ಳೆಯದಾಗಿದೆ. ನನ್ನ ಜೀವಮಾನ ಕಾಲದಲ್ಲಿ ಸಮಾಧಾನವೂ, ಭದ್ರತೆಯೂ ಇರುವುದಲ್ಲವೇ?” ಎಂದು ಕೊಂಡನು. 20 ಹಿಜ್ಕೀಯನ ಉಳಿದ ಚರಿತ್ರೆಯೂ, ಅವನ ಪರಾಕ್ರಮಕೃತ್ಯಗಳೂ, ಅವನು ಕೆರೆಕಾಲುವೆಗಳನ್ನು ಮಾಡಿಸಿ ಊರೊಳಗೆ ನೀರನ್ನು ತಂದ ವಿವರವೂ ಯೆಹೂದ ರಾಜಕಾಲವೃತ್ತಾಂತ ಪುಸ್ತಕ ಎಂಬ ಗ್ರಂಥದಲ್ಲಿ ಬರೆದಿರುತ್ತವೆ. 21 ಹಿಜ್ಕೀಯನು ಪೂರ್ವಿಕರ ಬಳಿಗೆ ಸೇರಲು ಅವನಿಗೆ ಬದಲಾಗಿ ಅವನ ಮಗನಾದ ಮನಸ್ಸೆಯು ಅರಸನಾದನು.
In Other Versions
2 Kings 20 in the ANGEFD
2 Kings 20 in the ANTPNG2D
2 Kings 20 in the AS21
2 Kings 20 in the BAGH
2 Kings 20 in the BBPNG
2 Kings 20 in the BBT1E
2 Kings 20 in the BDS
2 Kings 20 in the BEV
2 Kings 20 in the BHAD
2 Kings 20 in the BIB
2 Kings 20 in the BLPT
2 Kings 20 in the BNT
2 Kings 20 in the BNTABOOT
2 Kings 20 in the BNTLV
2 Kings 20 in the BOATCB
2 Kings 20 in the BOATCB2
2 Kings 20 in the BOBCV
2 Kings 20 in the BOCNT
2 Kings 20 in the BOECS
2 Kings 20 in the BOGWICC
2 Kings 20 in the BOHCB
2 Kings 20 in the BOHCV
2 Kings 20 in the BOHLNT
2 Kings 20 in the BOHNTLTAL
2 Kings 20 in the BOICB
2 Kings 20 in the BOILNTAP
2 Kings 20 in the BOITCV
2 Kings 20 in the BOKCV
2 Kings 20 in the BOKCV2
2 Kings 20 in the BOKHWOG
2 Kings 20 in the BOKSSV
2 Kings 20 in the BOLCB
2 Kings 20 in the BOLCB2
2 Kings 20 in the BOMCV
2 Kings 20 in the BONAV
2 Kings 20 in the BONCB
2 Kings 20 in the BONLT
2 Kings 20 in the BONUT2
2 Kings 20 in the BOPLNT
2 Kings 20 in the BOSCB
2 Kings 20 in the BOSNC
2 Kings 20 in the BOTLNT
2 Kings 20 in the BOVCB
2 Kings 20 in the BOYCB
2 Kings 20 in the BPBB
2 Kings 20 in the BPH
2 Kings 20 in the BSB
2 Kings 20 in the CCB
2 Kings 20 in the CUV
2 Kings 20 in the CUVS
2 Kings 20 in the DBT
2 Kings 20 in the DGDNT
2 Kings 20 in the DHNT
2 Kings 20 in the DNT
2 Kings 20 in the ELBE
2 Kings 20 in the EMTV
2 Kings 20 in the ESV
2 Kings 20 in the FBV
2 Kings 20 in the FEB
2 Kings 20 in the GGMNT
2 Kings 20 in the GNT
2 Kings 20 in the HARY
2 Kings 20 in the HNT
2 Kings 20 in the IRVA
2 Kings 20 in the IRVB
2 Kings 20 in the IRVG
2 Kings 20 in the IRVH
2 Kings 20 in the IRVM
2 Kings 20 in the IRVM2
2 Kings 20 in the IRVO
2 Kings 20 in the IRVP
2 Kings 20 in the IRVT
2 Kings 20 in the IRVT2
2 Kings 20 in the IRVU
2 Kings 20 in the ISVN
2 Kings 20 in the JSNT
2 Kings 20 in the KAPI
2 Kings 20 in the KBT1ETNIK
2 Kings 20 in the KBV
2 Kings 20 in the KJV
2 Kings 20 in the KNFD
2 Kings 20 in the LBA
2 Kings 20 in the LBLA
2 Kings 20 in the LNT
2 Kings 20 in the LSV
2 Kings 20 in the MAAL
2 Kings 20 in the MBV
2 Kings 20 in the MBV2
2 Kings 20 in the MHNT
2 Kings 20 in the MKNFD
2 Kings 20 in the MNG
2 Kings 20 in the MNT
2 Kings 20 in the MNT2
2 Kings 20 in the MRS1T
2 Kings 20 in the NAA
2 Kings 20 in the NASB
2 Kings 20 in the NBLA
2 Kings 20 in the NBS
2 Kings 20 in the NBVTP
2 Kings 20 in the NET2
2 Kings 20 in the NIV11
2 Kings 20 in the NNT
2 Kings 20 in the NNT2
2 Kings 20 in the NNT3
2 Kings 20 in the PDDPT
2 Kings 20 in the PFNT
2 Kings 20 in the RMNT
2 Kings 20 in the SBIAS
2 Kings 20 in the SBIBS
2 Kings 20 in the SBIBS2
2 Kings 20 in the SBICS
2 Kings 20 in the SBIDS
2 Kings 20 in the SBIGS
2 Kings 20 in the SBIHS
2 Kings 20 in the SBIIS
2 Kings 20 in the SBIIS2
2 Kings 20 in the SBIIS3
2 Kings 20 in the SBIKS
2 Kings 20 in the SBIKS2
2 Kings 20 in the SBIMS
2 Kings 20 in the SBIOS
2 Kings 20 in the SBIPS
2 Kings 20 in the SBISS
2 Kings 20 in the SBITS
2 Kings 20 in the SBITS2
2 Kings 20 in the SBITS3
2 Kings 20 in the SBITS4
2 Kings 20 in the SBIUS
2 Kings 20 in the SBIVS
2 Kings 20 in the SBT
2 Kings 20 in the SBT1E
2 Kings 20 in the SCHL
2 Kings 20 in the SNT
2 Kings 20 in the SUSU
2 Kings 20 in the SUSU2
2 Kings 20 in the SYNO
2 Kings 20 in the TBIAOTANT
2 Kings 20 in the TBT1E
2 Kings 20 in the TBT1E2
2 Kings 20 in the TFTIP
2 Kings 20 in the TFTU
2 Kings 20 in the TGNTATF3T
2 Kings 20 in the THAI
2 Kings 20 in the TNFD
2 Kings 20 in the TNT
2 Kings 20 in the TNTIK
2 Kings 20 in the TNTIL
2 Kings 20 in the TNTIN
2 Kings 20 in the TNTIP
2 Kings 20 in the TNTIZ
2 Kings 20 in the TOMA
2 Kings 20 in the TTENT
2 Kings 20 in the UBG
2 Kings 20 in the UGV
2 Kings 20 in the UGV2
2 Kings 20 in the UGV3
2 Kings 20 in the VBL
2 Kings 20 in the VDCC
2 Kings 20 in the YALU
2 Kings 20 in the YAPE
2 Kings 20 in the YBVTP
2 Kings 20 in the ZBP