2 Samuel 5 (IRVK)
1 ಅನಂತರ ಇಸ್ರಾಯೇಲರ ಎಲ್ಲಾ ಕುಲಗಳವರು ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು ಅವನಿಗೆ, “ನಾವು ನಿನ್ನ ರಕ್ತಸಂಬಂಧಿಗಳಾಗಿದ್ದೇವೆ, 2 ಹಿಂದಿನ ದಿನಗಳಲ್ಲಿ ಅಂದರೆ, ಸೌಲನ ಆಡಳಿತದಲ್ಲಿ, ಇಸ್ರಾಯೇಲರ ದಳಾಧಿಪತಿಯಾಗಿ ಹೋಗುತ್ತಾ ಬರುತ್ತಾ ಇದ್ದವನು ನೀನೇ. ನಿನ್ನನ್ನು ಕುರಿತು ಯೆಹೋವನು, ‘ನೀನು ನನ್ನ ಪ್ರಜೆಗಳಾದ ಇಸ್ರಾಯೇಲರ ನಾಯಕನೂ ಪಾಲಕನೂ ಆಗಿರುವಿಯೆಂದು ಹೇಳಿದ್ದಾನೆ’” ಅಂದರು. 3 ಹೆಬ್ರೋನಿನಲ್ಲಿದ್ದ ಅರಸನಾದ ದಾವೀದನು ತನ್ನ ಬಳಿಗೆ ಬಂದಿದ್ದ ಇಸ್ರಾಯೇಲರ ಹಿರಿಯರೆಲ್ಲರೊಡನೆ ಅಲ್ಲಿಯೇ ಯೆಹೋವನ ಸನ್ನಿಧಿಯಲ್ಲಿ ಒಡಂಬಡಿಕೆ ಮಾಡಿಕೊಂಡನು. ಅವರು ದಾವೀದನನ್ನು ಅಭಿಷೇಕಿಸಿ, ಇಸ್ರಾಯೇಲರ ಅರಸನನ್ನಾಗಿ ಮಾಡಿದರು. 4 ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು. 5 ಅವನು ಹೆಬ್ರೋನಿನಲ್ಲಿದ್ದು ಯೆಹೂದ ಕುಲವೊಂದನ್ನೇ ಆಳಿದ್ದು ಏಳು ವರ್ಷ ಆರು ತಿಂಗಳು. ಯೆರೂಸಲೇಮಿನಲ್ಲಿದ್ದು ಯೆಹೂದ್ಯರನ್ನು ಮತ್ತು ಎಲ್ಲಾ ಇಸ್ರಾಯೇಲರನ್ನು ಆಳಿದ್ದು ಮೂವತ್ತು ಮೂರು ವರ್ಷಗಳು. 6 ದಾವೀದನು ತನ್ನ ಜನರನ್ನು ಕರೆದುಕೊಂಡು ಯೆರೂಸಲೇಮಿನಲ್ಲಿದ್ದ ದೇಶದ ಮೂಲನಿವಾಸಿಗಳಾದ ಯೆಬೂಸಿಯರಿಗೆ ವಿರೋಧವಾಗಿ ಹೊರಟನು. ಅವರು ಇವನು ಒಳಗೆ ಬರುವುದಿಲ್ಲವೆಂದು ತಿಳಿದು ದಾವೀದನಿಗೆ, “ನೀನು ಒಳಗೆ ಬರಲಾರೆ, ಕುರುಡರು ಕುಂಟರು ಇವರೇ ನಿನ್ನನ್ನು ಅಟ್ಟಿಬಿಡುವರು” ಎಂದು ಹೇಳಿದರು. 7 ಅದರೂ ದಾವೀದನು ದಾವೀದನಗರ ಎನ್ನಿಸಿಕೊಳ್ಳುವ ಚೀಯೋನಿನ ಕೋಟೆಯನ್ನು ಸ್ವಾಧೀನಪಡಿಸಿಕೊಂಡನು. 8 ಆ ದಿನ ದಾವೀದನು, “ಯೆಬೂಸಿಯರನ್ನು ಜಯಿಸಬೇಕೆಂದಿರುವವನು, ಜಲದ್ವಾರದ ಮೂಲಕ ಹತ್ತಿ ಹೋಗಿ, ನನ್ನನ್ನು ದ್ವೇಷಿಸುವ ಕುರುಡರನ್ನು ಮತ್ತು ಕುಂಟರನ್ನು ಕಂದಕದಲ್ಲಿ ನಾಶಪಡಿಸಬೇಕು” ಎಂದು ಹೇಳಿದನು. ಆದುದರಿಂದ “ಕುರುಡರೂ ಕುಂಟರೂ ಅರಮನೆಯ ಒಳಗೆ ಬರಲಾಗದು” ಎಂಬ ಗಾದೆಯುಂಟು. 9 ದಾವೀದನು ಆ ಕೋಟೆಗೆ ದಾವೀದ ನಗರವೆಂದು ಹೆಸರಿಟ್ಟು ಅಲ್ಲೇ ವಾಸಿಸುತ್ತಾ, ಅದರ ಸುತ್ತಲೂ ಮಿಲ್ಲೋವಿನಿಂದ ಪ್ರಾರಂಭಿಸಿ, ಒಳಗಣ ಪೌಳಿಗೋಡೆಯನ್ನು ಕಟ್ಟಿಸಿದನು. 10 ಸೇನಾಧೀಶ್ವರನಾದ ಯೆಹೋವ ದೇವರು ಅವನ ಸಂಗಡ ಇದ್ದುದರಿಂದ ಅವನು ಆಧಿಕ ಪ್ರಬಲಗೊಳ್ಳುತ್ತಾ ಬಂದನು. 11 ತೂರಿನ ಅರಸನಾದ ಹೀರಾಮನು ದಾವೀದನಿಗೆ ದೂತರನ್ನೂ, ದೇವದಾರುಮರಗಳನ್ನೂ, ಬಡಗಿಯವರನ್ನೂ ಶಿಲ್ಪಿಗಳನ್ನೂ ಕಳುಹಿಸಲು ಅವರು ದಾವೀದನಿಗೋಸ್ಕರ ಅರಮನೆಯನ್ನು ಕಟ್ಟಿದರು. 12 ಇದರಿಂದ ದಾವೀದನು, “ಯೆಹೋವನು ನನ್ನನ್ನು ಇಸ್ರಾಯೇಲರ ರಾಜನನ್ನಾಗಿ ಸ್ಥಿರಪಡಿಸಿ, ತನ್ನ ಪ್ರಜೆಗಳಾದ ಇಸ್ರಾಯೇಲರ ನಿಮಿತ್ತವಾಗಿ ನನ್ನ ರಾಜ್ಯವನ್ನು ವೃದ್ಧಿಪಡಿಸಿದ್ದಾನೆ” ಎಂದು ತಿಳಿದುಕೊಂಡನು. 13 ದಾವೀದನು ಹೆಬ್ರೋನಿನಿಂದ ಯೆರೂಸಲೇಮಿಗೆ ಬಂದ ಮೇಲೆ ಅಲ್ಲಿಯೂ ಅನೇಕ ಸ್ತ್ರೀಯರನ್ನು ಪತ್ನಿಯರನ್ನಾಗಿಯೂ ಮತ್ತು ಉಪಪತ್ನಿಯರನ್ನಾಗಿಯೂ ಮಾಡಿಕೊಂಡಿದ್ದರಿಂದ ಅವನಿಗೆ ಇನ್ನೂ ಕೆಲವು ಮಂದಿ ಗಂಡು ಹೆಣ್ಣು ಮಕ್ಕಳು ಹುಟ್ಟಿದರು. 14 ಅಲ್ಲಿ ಅವನಿಗೆ ಹುಟ್ಟಿದ ಮಕ್ಕಳ ಹೆಸರುಗಳು: ಶಮ್ಮೂವ, ಶೋಬಾಬ್, ನಾತಾನ್, ಸೊಲೊಮೋನ್, 15 ಇಬ್ಹಾರ್, ಎಲೀಷೂವ, ನೆಫೆಗ್, ಯಾಫೀಯ, 16 ಎಲೀಷಾಮ, ಎಲ್ಯಾದ ಮತ್ತು ಎಲೀಫೆಲೆಟ್. 17 ಇಸ್ರಾಯೇಲರು ದಾವೀದನನ್ನು ಅಭಿಷೇಕಿಸಿ, ತಮ್ಮ ಅರಸನನ್ನಾಗಿ ಮಾಡಿಕೊಂಡರೆಂಬ ವರ್ತಮಾನವು ಫಿಲಿಷ್ಟಿಯರಿಗೆ ತಲುಪಿದಾಗ ಅವರು ಅವನನ್ನು ಸೆರೆಹಿಡಿಯುವುದಕ್ಕೆ ಹೊರಟರು. ದಾವೀದನು ಇದನ್ನು ಕೇಳಿ ದುರ್ಗಕ್ಕೆ ಹೋದನು. 18 ಫಿಲಿಷ್ಟಿಯರು ದೇಶದೊಳಗೆ ನುಗ್ಗಿ ರೆಫಾಯೀಮ್ ತಗ್ಗಿಗೆ ಬಂದು ಅಲ್ಲಿ ಪಾಳೆಯಮಾಡಿಕೊಂಡಿದ್ದರು. 19 ಅದನ್ನು ತಿಳಿದು ದಾವೀದನು ಯೆಹೋವನನ್ನು, “ನಾನು ಫಿಲಿಷ್ಟಿಯರಿಗೆ ವಿರೋಧವಾಗಿ ಹೋಗಬಹುದೋ? ಅವರನ್ನು ನನ್ನ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿದನು. ಅದಕ್ಕೆ ಯೆಹೋವನು, “ಹೋಗು ನಾನು ಹೇಗೂ ಅವರನ್ನು ನಿನ್ನ ಕೈಗೆ ಒಪ್ಪಿಸಿಕೊಡುವೆನು” ಎಂದು ಉತ್ತರಕೊಟ್ಟನು. 20 ಆಗ ಅವನು ಹೋಗಿ ಅವರನ್ನು ಸೋಲಿಸಿ, “ಯೆಹೋವನು ಕಟ್ಟೆ ಒಡೆದ ಪ್ರವಾಹದಂತೆ ತನ್ನ ಶತ್ರುಗಳ ಮೇಲೆ ಬಿದ್ದು, ಅವರನ್ನು ನನ್ನ ಕಣ್ಣ ಮುಂದೆಯೇ ನಾಶಮಾಡಿದ್ದಾನೆ” ಎಂದು ಹೇಳಿ ಆ ಯುದ್ಧ ಸ್ಥಳಕ್ಕೆ “ಬಾಳ್ ಪೆರಾಚೀಮ್” ಎಂದು ಹೆಸರಿಟ್ಟನು. 21 ಫಿಲಿಷ್ಟಿಯರು ಅಲ್ಲಿ ಬಿಟ್ಟು ಹೋಗಿದ್ದ ವಿಗ್ರಹಗಳನ್ನು ದಾವೀದನೂ ಅವನ ಜನರೂ ತೆಗೆದುಕೊಂಡು ಬಂದರು. 22 ಫಿಲಿಷ್ಟಿಯರು ಇನ್ನೊಮ್ಮೆ ಹೊರಟು ಬಂದು ರೆಫಾಯೀಮ್ ತಗ್ಗಿನಲ್ಲಿ ಇಳಿದುಕೊಂಡರು. 23 ದಾವೀದನು ಯೆಹೋವನ ಸನ್ನಿಧಿಯಲ್ಲಿ ವಿಚಾರಿಸಿದಾಗ ಆತನು ಅವನಿಗೆ, “ನೀನು ನೇರವಾಗಿ ಹೋಗಿ ಅವರನ್ನು ಮುತ್ತಿಗೆ ಹಾಕಬೇಡ. ಅವರಿಗೆ ತಿಳಿಯದಂತೆ ಸುತ್ತಿಕೊಂಡು ಹೋಗಿ ಹಿಂಬಾಲಿಸಿ, ಬಾಕಾ ಮರಗಳಿರುವ ಕಡೆಯಿಂದ ಅವರ ಮೇಲೆ ಬೀಳು. 24 ಆ ಬಾಕಾ ಮರಗಳ ತುದಿಯಲ್ಲಿ ಹೆಜ್ಜೆಗಳ ಸಪ್ಪಳ ಕೇಳಿಸುವಾಗ ಯೆಹೋವನು ಫಿಲಿಷ್ಟಿಯರ ಸೈನ್ಯವನ್ನು ಸೋಲಿಸುವುದಕ್ಕೋಸ್ಕರ ನಿನ್ನ ಮುಂದಾಗಿ ಹೊರಟನೆಂದು ತಿಳಿದು ಅವರ ಮೇಲೆ ದಾಳಿಮಾಡು” ಎಂದನು. 25 ದಾವೀದನು ಯೆಹೋವನ ಆಜ್ಞಾನುಸಾರವಾಗಿ ಮಾಡಿ, ಫಿಲಿಷ್ಟಿಯರನ್ನು ಗೆಬದಿಂದ ಗೆಜೆರಿನವರೆಗೂ ಸಂಹರಿಸಿದನು.
In Other Versions
2 Samuel 5 in the ANGEFD
2 Samuel 5 in the ANTPNG2D
2 Samuel 5 in the AS21
2 Samuel 5 in the BAGH
2 Samuel 5 in the BBPNG
2 Samuel 5 in the BBT1E
2 Samuel 5 in the BDS
2 Samuel 5 in the BEV
2 Samuel 5 in the BHAD
2 Samuel 5 in the BIB
2 Samuel 5 in the BLPT
2 Samuel 5 in the BNT
2 Samuel 5 in the BNTABOOT
2 Samuel 5 in the BNTLV
2 Samuel 5 in the BOATCB
2 Samuel 5 in the BOATCB2
2 Samuel 5 in the BOBCV
2 Samuel 5 in the BOCNT
2 Samuel 5 in the BOECS
2 Samuel 5 in the BOGWICC
2 Samuel 5 in the BOHCB
2 Samuel 5 in the BOHCV
2 Samuel 5 in the BOHLNT
2 Samuel 5 in the BOHNTLTAL
2 Samuel 5 in the BOICB
2 Samuel 5 in the BOILNTAP
2 Samuel 5 in the BOITCV
2 Samuel 5 in the BOKCV
2 Samuel 5 in the BOKCV2
2 Samuel 5 in the BOKHWOG
2 Samuel 5 in the BOKSSV
2 Samuel 5 in the BOLCB
2 Samuel 5 in the BOLCB2
2 Samuel 5 in the BOMCV
2 Samuel 5 in the BONAV
2 Samuel 5 in the BONCB
2 Samuel 5 in the BONLT
2 Samuel 5 in the BONUT2
2 Samuel 5 in the BOPLNT
2 Samuel 5 in the BOSCB
2 Samuel 5 in the BOSNC
2 Samuel 5 in the BOTLNT
2 Samuel 5 in the BOVCB
2 Samuel 5 in the BOYCB
2 Samuel 5 in the BPBB
2 Samuel 5 in the BPH
2 Samuel 5 in the BSB
2 Samuel 5 in the CCB
2 Samuel 5 in the CUV
2 Samuel 5 in the CUVS
2 Samuel 5 in the DBT
2 Samuel 5 in the DGDNT
2 Samuel 5 in the DHNT
2 Samuel 5 in the DNT
2 Samuel 5 in the ELBE
2 Samuel 5 in the EMTV
2 Samuel 5 in the ESV
2 Samuel 5 in the FBV
2 Samuel 5 in the FEB
2 Samuel 5 in the GGMNT
2 Samuel 5 in the GNT
2 Samuel 5 in the HARY
2 Samuel 5 in the HNT
2 Samuel 5 in the IRVA
2 Samuel 5 in the IRVB
2 Samuel 5 in the IRVG
2 Samuel 5 in the IRVH
2 Samuel 5 in the IRVM
2 Samuel 5 in the IRVM2
2 Samuel 5 in the IRVO
2 Samuel 5 in the IRVP
2 Samuel 5 in the IRVT
2 Samuel 5 in the IRVT2
2 Samuel 5 in the IRVU
2 Samuel 5 in the ISVN
2 Samuel 5 in the JSNT
2 Samuel 5 in the KAPI
2 Samuel 5 in the KBT1ETNIK
2 Samuel 5 in the KBV
2 Samuel 5 in the KJV
2 Samuel 5 in the KNFD
2 Samuel 5 in the LBA
2 Samuel 5 in the LBLA
2 Samuel 5 in the LNT
2 Samuel 5 in the LSV
2 Samuel 5 in the MAAL
2 Samuel 5 in the MBV
2 Samuel 5 in the MBV2
2 Samuel 5 in the MHNT
2 Samuel 5 in the MKNFD
2 Samuel 5 in the MNG
2 Samuel 5 in the MNT
2 Samuel 5 in the MNT2
2 Samuel 5 in the MRS1T
2 Samuel 5 in the NAA
2 Samuel 5 in the NASB
2 Samuel 5 in the NBLA
2 Samuel 5 in the NBS
2 Samuel 5 in the NBVTP
2 Samuel 5 in the NET2
2 Samuel 5 in the NIV11
2 Samuel 5 in the NNT
2 Samuel 5 in the NNT2
2 Samuel 5 in the NNT3
2 Samuel 5 in the PDDPT
2 Samuel 5 in the PFNT
2 Samuel 5 in the RMNT
2 Samuel 5 in the SBIAS
2 Samuel 5 in the SBIBS
2 Samuel 5 in the SBIBS2
2 Samuel 5 in the SBICS
2 Samuel 5 in the SBIDS
2 Samuel 5 in the SBIGS
2 Samuel 5 in the SBIHS
2 Samuel 5 in the SBIIS
2 Samuel 5 in the SBIIS2
2 Samuel 5 in the SBIIS3
2 Samuel 5 in the SBIKS
2 Samuel 5 in the SBIKS2
2 Samuel 5 in the SBIMS
2 Samuel 5 in the SBIOS
2 Samuel 5 in the SBIPS
2 Samuel 5 in the SBISS
2 Samuel 5 in the SBITS
2 Samuel 5 in the SBITS2
2 Samuel 5 in the SBITS3
2 Samuel 5 in the SBITS4
2 Samuel 5 in the SBIUS
2 Samuel 5 in the SBIVS
2 Samuel 5 in the SBT
2 Samuel 5 in the SBT1E
2 Samuel 5 in the SCHL
2 Samuel 5 in the SNT
2 Samuel 5 in the SUSU
2 Samuel 5 in the SUSU2
2 Samuel 5 in the SYNO
2 Samuel 5 in the TBIAOTANT
2 Samuel 5 in the TBT1E
2 Samuel 5 in the TBT1E2
2 Samuel 5 in the TFTIP
2 Samuel 5 in the TFTU
2 Samuel 5 in the TGNTATF3T
2 Samuel 5 in the THAI
2 Samuel 5 in the TNFD
2 Samuel 5 in the TNT
2 Samuel 5 in the TNTIK
2 Samuel 5 in the TNTIL
2 Samuel 5 in the TNTIN
2 Samuel 5 in the TNTIP
2 Samuel 5 in the TNTIZ
2 Samuel 5 in the TOMA
2 Samuel 5 in the TTENT
2 Samuel 5 in the UBG
2 Samuel 5 in the UGV
2 Samuel 5 in the UGV2
2 Samuel 5 in the UGV3
2 Samuel 5 in the VBL
2 Samuel 5 in the VDCC
2 Samuel 5 in the YALU
2 Samuel 5 in the YAPE
2 Samuel 5 in the YBVTP
2 Samuel 5 in the ZBP