Deuteronomy 13 (IRVK)

1 ಯಾವ ಪ್ರವಾದಿಯಾಗಲಿ ಅಥವಾ ಕನಸುಗಾರನೇ ಆಗಲಿ ನಿಮ್ಮ ಮಧ್ಯದಲ್ಲಿ ಬಂದು, ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತೋರಿಸಿ, 2 “ಈ ದೇವತೆಗಳನ್ನು ಅವಲಂಬಿಸಿ ಅವುಗಳನ್ನು ಸೇವಿಸೋಣ” ಎಂದು ಬೋಧಿಸುತ್ತಾ, ಆ ಬೋಧನೆಯನ್ನು ಸ್ಥಾಪಿಸುವುದಕ್ಕೆ ಒಂದು ಅದ್ಭುತವನ್ನಾಗಲಿ ಅಥವಾ ಮಹತ್ಕಾರ್ಯವನ್ನಾಗಲಿ ತೋರಿಸಿಕೊಡುತ್ತೇನೆಂದು ಹೇಳಿ ಅವನು ಹೇಳಿದಂತೆಯೇ ನಡೆದರೂ ನೀವು ಅವನ ಮಾತಿಗೆ ಕಿವಿಗೊಡಬಾರದು. 3 ಏಕೆಂದರೆ ನಿಮ್ಮ ದೇವರಾದ ಯೆಹೋವನು, “ಇವರು ಸಂಪೂರ್ಣ ಹೃದಯದಿಂದಲೂ ಮತ್ತು ಸಂಪೂರ್ಣ ಮನಸ್ಸಿನಿಂದಲೂ ತನ್ನನ್ನೇ ಪ್ರೀತಿಸುವವರು ಹೌದೋ ಅಲ್ಲವೋ” ಎಂಬುದನ್ನು ತಿಳಿದುಕೊಳ್ಳುವುದಕ್ಕೆ ನಿಮ್ಮನ್ನು ಪರೀಕ್ಷಿಸುತ್ತಾನೆ. 4 ಆತನು ಹೇಳುವ ಮಾರ್ಗದಲ್ಲೇ ನೀವು ನಡೆದು, ಆತನಲ್ಲಿಯೇ ಭಯಭಕ್ತಿಯುಳ್ಳವರಾಗಿ, ಆತನ ಆಜ್ಞೆಗಳನ್ನೇ ಅನುಸರಿಸಿ, ಆತನಿಗೇ ವಿಧೇಯರಾಗಿ, ಆತನನ್ನೇ ಸೇವಿಸುತ್ತಾ ಹೊಂದಿಕೊಂಡಿರಬೇಕು. 5 ಆ ಪ್ರವಾದಿಗೆ ಅಥವಾ ಆ ಕನಸುಗಾರನಿಗೆ ಮರಣ ಶಿಕ್ಷೆಯಾಗಬೇಕು. ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನಿಗೆ ವಿರುದ್ಧವಾಗಿ ಅವನು ದ್ರೋಹದ ಮಾತುಗಳನ್ನಾಡಿ, ನಿಮ್ಮ ದೇವರಾದ ಯೆಹೋವನು ಹೇಳಿದ ಮಾರ್ಗದಿಂದ ನಿಮ್ಮನ್ನು ತಪ್ಪಿಸಬೇಕೆಂದಿದ್ದನಲ್ಲಾ. ಅವನನ್ನು ಕೊಲ್ಲಿಸಿ, ಆ ದುಷ್ಟತ್ವವನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು. 6 ಒಡಹುಟ್ಟಿದ ಅಣ್ಣತಮ್ಮಂದಿರಾಗಲಿ, ಮಗನಾಗಲಿ, ಮಗಳಾಗಲಿ, ಪ್ರಾಣಪ್ರಿಯಳಾದ ಹೆಂಡತಿಯಾಗಲಿ, ಆಪ್ತಮಿತ್ರನಾಗಲಿ ಇತರ ದೇವರುಗಳನ್ನು ತೋರಿಸಿ, “ನಿಮಗೂ ನಿಮ್ಮ ಪೂರ್ವಿಕರಿಗೂ ಗೊತ್ತಿಲ್ಲದ ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ರಹಸ್ಯವಾಗಿ ಆಕರ್ಷಿಸಿ, ನಿಮಗೆ ಬೋಧಿಸಿದರೆ, 7 ಆ ದೇವರುಗಳು ಹತ್ತಿರವಿರುವ ಜನಾಂಗಗಳ ದೇವರುಗಳಾದರೂ, ದೂರವಾದವರ ದೇವರುಗಳಾದರೂ, ಭೂಲೋಕದ ಯಾವ ಭಾಗದವರ ದೇವರುಗಳಾದರೂ 8 ನೀವು ಸಮ್ಮತಿಸಲೂ ಬಾರದು ಮತ್ತು ಕಿವಿಗೊಡಲೂಬಾರದು. ಅವನನ್ನು ಕನಿಕರಿಸಲೂಬಾರದು, ತಪ್ಪಿಸಲೂಬಾರದು, ಬಚ್ಚಿಡಲೂಬಾರದು ಅವನನ್ನು ಕೊಲ್ಲಿಸಲೇಬೇಕು. 9 ಆ ಶಿಕ್ಷೆಯನ್ನು ನಡಿಸುವಾಗ ತಪ್ಪು ಕಂಡವನೇ ಮೊದಲು ಕೈಹಾಕಬೇಕು. 10 ತರುವಾಯ ಜನರೆಲ್ಲರೂ ಕೈಹಾಕಲಿ, ದಾಸತ್ವದಲ್ಲಿದ್ದ ನಿಮ್ಮನ್ನು ಬಿಡುಗಡೆಮಾಡಿ, ಐಗುಪ್ತ ದೇಶದೊಳಗಿಂದ ಕರೆದುಕೊಂಡು ಬಂದ ನಿಮ್ಮ ದೇವರಾದ ಯೆಹೋವನ ಆಶ್ರಯದಿಂದ ಅವನು ನಿಮ್ಮನ್ನು ತಪ್ಪಿಸಬೇಕೆಂದಿದ್ದರಿಂದ ಅವನನ್ನು ಕಲ್ಲೆಸೆದು ಕೊಲ್ಲಲೇಬೇಕು. 11 ಇದನ್ನು ಇಸ್ರಾಯೇಲರೆಲ್ಲರೂ ಕೇಳಿ ಭಯಪಟ್ಟು ಅಂಥ ದುಷ್ಕಾರ್ಯವನ್ನು ಇನ್ನು ಮುಂದೆ ಮಾಡದೆ ಇರುವರು. 12 ನಿಮ್ಮ ದೇವರಾದ ಯೆಹೋವನು ನಿಮ್ಮ ನಿವಾಸಕ್ಕಾಗಿ ಕೊಡುವ ಯಾವುದಾದರೂ ಒಂದು ಊರಿನ ವಿಷಯದಲ್ಲಿ, 13 ಅಲ್ಲಿ ವಾಸವಾಗಿರುವ ಇಸ್ರಾಯೇಲರಲ್ಲಿ ಕೆಲವು ಜನ ದುಷ್ಟರು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ತಮ್ಮ ಊರಿನವರಿಗೆ ತೋರಿಸಿ, “ಆ ದೇವರುಗಳನ್ನು ಸೇವಿಸೋಣ ಬನ್ನಿರಿ” ಎಂದು ಹೇಳಿ ಅವರನ್ನು ಸನ್ಮಾರ್ಗದಿಂದ ತಪ್ಪಿಸಿದ್ದಾರೆಂಬ ಸುದ್ದಿಯನ್ನು ನೀವು ಕೇಳಿದರೆ, 14 ಆ ಸಂಗತಿಯನ್ನು ಚೆನ್ನಾಗಿ ವಿಚಾರಿಸಿ ತಿಳಿದುಕೊಳ್ಳಬೇಕು. ಅಂತಹ ಅಸಹ್ಯಕಾರ್ಯವು ಇಸ್ರಾಯೇಲರಲ್ಲಿ ನಡೆದದ್ದು 15 ನಿಜವೆಂದು ತಿಳಿದುಬಂದರೆ ಆ ಊರನ್ನು ಸಂಪೂರ್ಣವಾಗಿ ಹಾಳು ಮಾಡಿ, ಅದರಲ್ಲಿರುವ ಎಲ್ಲಾ ಜನರನ್ನೂ, ದನಗಳನ್ನೂ ಕತ್ತಿಯಿಂದ ಸಂಹರಿಸಿಡಬೇಕು. 16 ಅದರಲ್ಲಿರುವ ಎಲ್ಲಾ ಸಾಮಾನುಗಳನ್ನು ಗ್ರಾಮಮಧ್ಯದಲ್ಲಿ ಕೂಡಿಸಿ, ಊರನ್ನೂ ಅದರಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಿಮ್ಮ ದೇವರಾದ ಯೆಹೋವನಿಗೋಸ್ಕರ ಸಂಪೂರ್ಣವಾಗಿ ಸುಟ್ಟುಬಿಡಬೇಕು. ಅದು ಪುನಃ ಕಟ್ಟಲ್ಪಡದೆ ಯಾವಾಗಲೂ ಹಾಳುದಿಬ್ಬವಾಗಿರಬೇಕು. 17 “ಕೇವಲ ಯೆಹೋವನಿಗೇ ಆಗಲಿ” ಎಂದು ನೀವು ಗೊತ್ತು ಮಾಡಿದ್ದರಲ್ಲಿ ಸ್ವಲ್ಪವನ್ನಾದರೂ ತೆಗೆದುಕೊಳ್ಳಬಾರದು. ನಾನು ಈಗ ನಿಮಗೆ ಬೋಧಿಸುವ ಆತನ ಎಲ್ಲಾ ಆಜ್ಞೆಗಳನ್ನು ಕೈಕೊಂಡು ಆತನ ದೃಷ್ಟಿಗೆ ಸರಿಯಾದದ್ದನ್ನು ಮಾಡಬೇಕು. 18 ನೀವು ಹೀಗೆ ನಡೆದು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟರೆ, ಆಗ ಆತನು ತನ್ನ ರೋಷಾಗ್ನಿಯನ್ನು ಬಿಟ್ಟು ನಿಮಗೆ ದಯೆಯನ್ನು ತೋರಿಸಿ, ನಿಮ್ಮನ್ನು ಕರುಣಿಸಿ, ತಾನು ನಿಮ್ಮ ಪೂರ್ವಿಕರಿಗೆ ವಾಗ್ದಾನ ಮಾಡಿದಂತೆ ನಿಮ್ಮ ಸಂತತಿಯನ್ನು ಹೆಚ್ಚಿಸುವನು.

In Other Versions

Deuteronomy 13 in the ANGEFD

Deuteronomy 13 in the ANTPNG2D

Deuteronomy 13 in the AS21

Deuteronomy 13 in the BAGH

Deuteronomy 13 in the BBPNG

Deuteronomy 13 in the BBT1E

Deuteronomy 13 in the BDS

Deuteronomy 13 in the BEV

Deuteronomy 13 in the BHAD

Deuteronomy 13 in the BIB

Deuteronomy 13 in the BLPT

Deuteronomy 13 in the BNT

Deuteronomy 13 in the BNTABOOT

Deuteronomy 13 in the BNTLV

Deuteronomy 13 in the BOATCB

Deuteronomy 13 in the BOATCB2

Deuteronomy 13 in the BOBCV

Deuteronomy 13 in the BOCNT

Deuteronomy 13 in the BOECS

Deuteronomy 13 in the BOGWICC

Deuteronomy 13 in the BOHCB

Deuteronomy 13 in the BOHCV

Deuteronomy 13 in the BOHLNT

Deuteronomy 13 in the BOHNTLTAL

Deuteronomy 13 in the BOICB

Deuteronomy 13 in the BOILNTAP

Deuteronomy 13 in the BOITCV

Deuteronomy 13 in the BOKCV

Deuteronomy 13 in the BOKCV2

Deuteronomy 13 in the BOKHWOG

Deuteronomy 13 in the BOKSSV

Deuteronomy 13 in the BOLCB

Deuteronomy 13 in the BOLCB2

Deuteronomy 13 in the BOMCV

Deuteronomy 13 in the BONAV

Deuteronomy 13 in the BONCB

Deuteronomy 13 in the BONLT

Deuteronomy 13 in the BONUT2

Deuteronomy 13 in the BOPLNT

Deuteronomy 13 in the BOSCB

Deuteronomy 13 in the BOSNC

Deuteronomy 13 in the BOTLNT

Deuteronomy 13 in the BOVCB

Deuteronomy 13 in the BOYCB

Deuteronomy 13 in the BPBB

Deuteronomy 13 in the BPH

Deuteronomy 13 in the BSB

Deuteronomy 13 in the CCB

Deuteronomy 13 in the CUV

Deuteronomy 13 in the CUVS

Deuteronomy 13 in the DBT

Deuteronomy 13 in the DGDNT

Deuteronomy 13 in the DHNT

Deuteronomy 13 in the DNT

Deuteronomy 13 in the ELBE

Deuteronomy 13 in the EMTV

Deuteronomy 13 in the ESV

Deuteronomy 13 in the FBV

Deuteronomy 13 in the FEB

Deuteronomy 13 in the GGMNT

Deuteronomy 13 in the GNT

Deuteronomy 13 in the HARY

Deuteronomy 13 in the HNT

Deuteronomy 13 in the IRVA

Deuteronomy 13 in the IRVB

Deuteronomy 13 in the IRVG

Deuteronomy 13 in the IRVH

Deuteronomy 13 in the IRVM

Deuteronomy 13 in the IRVM2

Deuteronomy 13 in the IRVO

Deuteronomy 13 in the IRVP

Deuteronomy 13 in the IRVT

Deuteronomy 13 in the IRVT2

Deuteronomy 13 in the IRVU

Deuteronomy 13 in the ISVN

Deuteronomy 13 in the JSNT

Deuteronomy 13 in the KAPI

Deuteronomy 13 in the KBT1ETNIK

Deuteronomy 13 in the KBV

Deuteronomy 13 in the KJV

Deuteronomy 13 in the KNFD

Deuteronomy 13 in the LBA

Deuteronomy 13 in the LBLA

Deuteronomy 13 in the LNT

Deuteronomy 13 in the LSV

Deuteronomy 13 in the MAAL

Deuteronomy 13 in the MBV

Deuteronomy 13 in the MBV2

Deuteronomy 13 in the MHNT

Deuteronomy 13 in the MKNFD

Deuteronomy 13 in the MNG

Deuteronomy 13 in the MNT

Deuteronomy 13 in the MNT2

Deuteronomy 13 in the MRS1T

Deuteronomy 13 in the NAA

Deuteronomy 13 in the NASB

Deuteronomy 13 in the NBLA

Deuteronomy 13 in the NBS

Deuteronomy 13 in the NBVTP

Deuteronomy 13 in the NET2

Deuteronomy 13 in the NIV11

Deuteronomy 13 in the NNT

Deuteronomy 13 in the NNT2

Deuteronomy 13 in the NNT3

Deuteronomy 13 in the PDDPT

Deuteronomy 13 in the PFNT

Deuteronomy 13 in the RMNT

Deuteronomy 13 in the SBIAS

Deuteronomy 13 in the SBIBS

Deuteronomy 13 in the SBIBS2

Deuteronomy 13 in the SBICS

Deuteronomy 13 in the SBIDS

Deuteronomy 13 in the SBIGS

Deuteronomy 13 in the SBIHS

Deuteronomy 13 in the SBIIS

Deuteronomy 13 in the SBIIS2

Deuteronomy 13 in the SBIIS3

Deuteronomy 13 in the SBIKS

Deuteronomy 13 in the SBIKS2

Deuteronomy 13 in the SBIMS

Deuteronomy 13 in the SBIOS

Deuteronomy 13 in the SBIPS

Deuteronomy 13 in the SBISS

Deuteronomy 13 in the SBITS

Deuteronomy 13 in the SBITS2

Deuteronomy 13 in the SBITS3

Deuteronomy 13 in the SBITS4

Deuteronomy 13 in the SBIUS

Deuteronomy 13 in the SBIVS

Deuteronomy 13 in the SBT

Deuteronomy 13 in the SBT1E

Deuteronomy 13 in the SCHL

Deuteronomy 13 in the SNT

Deuteronomy 13 in the SUSU

Deuteronomy 13 in the SUSU2

Deuteronomy 13 in the SYNO

Deuteronomy 13 in the TBIAOTANT

Deuteronomy 13 in the TBT1E

Deuteronomy 13 in the TBT1E2

Deuteronomy 13 in the TFTIP

Deuteronomy 13 in the TFTU

Deuteronomy 13 in the TGNTATF3T

Deuteronomy 13 in the THAI

Deuteronomy 13 in the TNFD

Deuteronomy 13 in the TNT

Deuteronomy 13 in the TNTIK

Deuteronomy 13 in the TNTIL

Deuteronomy 13 in the TNTIN

Deuteronomy 13 in the TNTIP

Deuteronomy 13 in the TNTIZ

Deuteronomy 13 in the TOMA

Deuteronomy 13 in the TTENT

Deuteronomy 13 in the UBG

Deuteronomy 13 in the UGV

Deuteronomy 13 in the UGV2

Deuteronomy 13 in the UGV3

Deuteronomy 13 in the VBL

Deuteronomy 13 in the VDCC

Deuteronomy 13 in the YALU

Deuteronomy 13 in the YAPE

Deuteronomy 13 in the YBVTP

Deuteronomy 13 in the ZBP