Exodus 1 (IRVK)
1 ಯಾಕೋಬನೊಂದಿಗೆ ಐಗುಪ್ತದೇಶಕ್ಕೆ ತಮ್ಮತಮ್ಮ ಮನೆಯವರ ಸಂಗಡ ಬಂದ ಇಸ್ರಾಯೇಲರ ಮಕ್ಕಳ ಹೆಸರುಗಳು: 2 ರೂಬೇನ್, ಸಿಮೆಯೋನ್, ಲೇವಿ, ಯೆಹೂದ, 3 ಇಸ್ಸಾಕಾರ್, ಜೆಬುಲೂನ್ ಮತ್ತು ಬೆನ್ಯಾಮೀನ್, 4 ದಾನ್, ಗಾದ್, ನಫ್ತಾಲಿ ಮತ್ತು ಆಶೇರ್. 5 ಯಾಕೋಬನ ಎಲ್ಲಾ ಸಂತತಿಯವರು ಒಟ್ಟು ಎಪ್ಪತ್ತು ಮಂದಿ. ಆದರೆ ಯೋಸೇಫನು ಮೊದಲೇ ಐಗುಪ್ತದೇಶದಲ್ಲಿದ್ದನು. 6 ಆ ನಂತರ ಯೋಸೇಫನೂ, ಅವನ ಅಣ್ಣತಮ್ಮಂದಿರೂ, ಆ ಸಂತತಿಯವರೆಲ್ಲರೂ ಮರಣ ಹೊಂದಿದರು. 7 ಆದರೆ ಇಸ್ರಾಯೇಲರ ಮಕ್ಕಳು ಅತ್ಯಧಿಕವಾಗಿ ಅಭಿವೃದ್ಧಿಯಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಬೆಳೆದು ಬಲ ಹೊಂದಿದರು. ಆ ದೇಶವು ಅವರಿಂದ ತುಂಬಿಹೋಯಿತು. 8 ತರುವಾಯ ಯೋಸೇಫನನ್ನು ಅರಿಯದ ಹೊಸ ಅರಸನು ಐಗುಪ್ತದೇಶದ ಆಳ್ವಿಕೆಗೆ ಬಂದನು. 9 ಅರಸನು ತನ್ನ ಜನರಿಗೆ, “ಇಸ್ರಾಯೇಲರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಮತ್ತು ನಮಗಿಂತ ಬಹಳ ಬಲಶಾಲಿಗಳೂ ಆಗಿದ್ದಾರೆ ನೋಡಿರಿ. 10 ನಮಗೆ ಯುದ್ಧವೇನಾದರೂ ಸಂಭವಿಸಿದರೆ ಅವರು ನಮ್ಮ ಶತ್ರುಗಳೊಂದಿಗೆ ಸೇರಿಕೊಂಡು, ನಮಗೆ ವಿರುದ್ಧವಾಗಿ ಹೋರಾಡಿ ದೇಶವನ್ನು ಬಿಟ್ಟುಹೋದಾರು. ಆದ್ದರಿಂದ ಅವರು ನಮ್ಮ ದೇಶವನ್ನು ಬಿಟ್ಟು ಹೋಗದಂತೆ ನಾವು ಉಪಾಯ ಮಾಡೋಣ” ಎಂದು ಹೇಳಿ 11 ಅವರನ್ನು ಬಿಟ್ಟೀ ಕೆಲಸಗಳಿಂದ ಪೀಡಿಸುವುದಕ್ಕಾಗಿ, ಬಿಟ್ಟೀಕೆಲಸ ಮಾಡಿಸುವ ಅಧಿಕಾರಿಗಳನ್ನು ಅವರ ಮೇಲೆ ಇರಿಸಿದನು. ಅವರು ಫರೋಹನನಿಗೆ ಪಿತೋಮ್ ಮತ್ತು ರಾಮ್ಸೇಸ್ ಎಂಬ ಉಗ್ರಾಣ ಪಟ್ಟಣಗಳನ್ನು ಕಟ್ಟಿಸಿದನು. 12 ಐಗುಪ್ತರು ಇಸ್ರಾಯೇಲರನ್ನು ಉಪದ್ರವಪಡಿಸಿದಷ್ಟೂ, ಅವರು ಬಹಳವಾಗಿ ಹೆಚ್ಚಿ ಹರಡಿಕೊಂಡಿದ್ದರಿಂದ ಐಗುಪ್ತರು ಇಸ್ರಾಯೇಲರ ವಿಷಯದಲ್ಲಿ ಬಹಳ ಹೆದರಿಕೆಯುಳ್ಳವರಾದರು. 13 ಐಗುಪ್ತರು ಇಸ್ರಾಯೇಲರಿಂದ ಕ್ರೂರವಾಗಿ ಸೇವೆಮಾಡಿಸಿಕೊಂಡರು. 14 ಮಣ್ಣಿನ ಕೆಲಸದಲ್ಲಿಯೂ, ಇಟ್ಟಿಗೆಮಾಡುವ ಕೆಲಸದಲ್ಲಿಯೂ, ವ್ಯವಸಾಯದ ಎಲ್ಲಾ ವಿಧವಾದ ಕೆಲಸದಲ್ಲಿಯೂ ಕಠಿಣವಾಗಿ ದುಡಿಸಿಕೊಂಡು ಅವರ ಜೀವಿತವನ್ನೇ ಬೇಸರಪಡಿಸಿದರು. ಐಗುಪ್ತರು ಇಸ್ರಾಯೇಲರಿಂದ ಮಾಡಿಸಿದ ಎಲ್ಲಾ ಕೆಲಸಗಳು ಬಹಳ ಕಠಿಣವಾಗಿದ್ದವು. 15 ಇದಲ್ಲದೆ ಐಗುಪ್ತ ದೇಶದ ಅರಸನು “ಶಿಪ್ರಾ” ಮತ್ತು “ಪೂಗಾ” ಎಂಬ ಹೆಸರಿನ ಇಬ್ರಿಯ ಸೂಲಗಿತ್ತಿಯರೊಂದಿಗೆ ಮಾತನಾಡಿದನು. 16 ಅವನು ಅವರಿಗೆ, “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವ ಮಗುವು ಗಂಡು ಮಗುವಾಗಿದ್ದರೆ ಕೊಂದುಹಾಕಿರಿ, ಹೆಣ್ಣಾಗಿದ್ದರೆ ಬದುಕಲು ಬಿಡಿ” ಎಂದು ಹೇಳಿದನು. 17 ಆದರೆ ಸೂಲಗಿತ್ತಿಯರು ದೇವರಿಗೆ ಭಯಪಟ್ಟು ಐಗುಪ್ತರ ಅರಸನ ಮಾತಿನಂತೆ ಮಾಡದೆ ಗಂಡು ಮಕ್ಕಳನ್ನು ಜೀವದಿಂದ ಉಳಿಸಿದರು. 18 ಆಗ ಐಗುಪ್ತದ ಅರಸನು ಸೂಲಗಿತ್ತಿಯರನ್ನು ಕರೆಯಿಸಿ, “ನೀವು ಅವರ ಗಂಡು ಮಕ್ಕಳನ್ನು ಉಳಿಸಿದ್ದೇನು? ಹೀಗೆ ಯಾಕೆ ಮಾಡಿದಿರಿ?” ಎಂದು ಕೇಳಿದನು. 19 ಸೂಲಗಿತ್ತಿಯರು ಫರೋಹನಿಗೆ, “ಇಬ್ರಿಯರ ಸ್ತ್ರೀಯರು ಐಗುಪ್ತ ಸ್ತ್ರೀಯರಂತೆ ಅಲ್ಲ, ಅವರು ಬಹು ಚುರುಕು ಬುದ್ಧಿಯವರು. ಸೂಲಗಿತ್ತಿಯು ಅವರ ಹತ್ತಿರ ಬರುವುದಕ್ಕೆ ಮೊದಲೇ ಮಗುವನ್ನು ಹೆರುತ್ತಿದ್ದರು” ಎಂದು ಹೇಳಿದರು. 20 ಆದ್ದರಿಂದ ದೇವರು ಆ ಸೂಲಗಿತ್ತಿಯರಿಗೆ ಒಳ್ಳೆಯದನ್ನು ಮಾಡಿದನು. ಇದರಿಂದ ಇಸ್ರಾಯೇಲ್ ಜನರು ಹೆಚ್ಚಾಗಿ ಬಹಳ ಬಲಗೊಂಡರು. 21 ಸೂಲಗಿತ್ತಿಯರು ದೇವರಿಗೆ ಭಯಪಟ್ಟಿದ್ದರಿಂದ, ಆತನು ಅವರಿಗೆ ವಂಶಾಭಿವೃದ್ಧಿಯನ್ನು ಅನುಗ್ರಹಿಸಿದನು. ಇಸ್ರಾಯೇಲರು ಹೆಚ್ಚಿ ಬಲಗೊಂಡರು. 22 ತರುವಾಯ ಫರೋಹನು ತನ್ನ ಜನರಿಗೆ, “ಇಬ್ರಿಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಯಲ್ಲಿ ಹಾಕಬೇಕು, ಹೆಣ್ಣುಕೂಸುಗಳನ್ನೆಲ್ಲಾ ಉಳಿಸಬೇಕು” ಎಂದು ಆಜ್ಞೆ ಮಾಡಿದನು.
In Other Versions
Exodus 1 in the ANGEFD
Exodus 1 in the ANTPNG2D
Exodus 1 in the AS21
Exodus 1 in the BAGH
Exodus 1 in the BBPNG
Exodus 1 in the BBT1E
Exodus 1 in the BDS
Exodus 1 in the BEV
Exodus 1 in the BHAD
Exodus 1 in the BIB
Exodus 1 in the BLPT
Exodus 1 in the BNT
Exodus 1 in the BNTABOOT
Exodus 1 in the BNTLV
Exodus 1 in the BOATCB
Exodus 1 in the BOATCB2
Exodus 1 in the BOBCV
Exodus 1 in the BOCNT
Exodus 1 in the BOECS
Exodus 1 in the BOGWICC
Exodus 1 in the BOHCB
Exodus 1 in the BOHCV
Exodus 1 in the BOHLNT
Exodus 1 in the BOHNTLTAL
Exodus 1 in the BOICB
Exodus 1 in the BOILNTAP
Exodus 1 in the BOITCV
Exodus 1 in the BOKCV
Exodus 1 in the BOKCV2
Exodus 1 in the BOKHWOG
Exodus 1 in the BOKSSV
Exodus 1 in the BOLCB
Exodus 1 in the BOLCB2
Exodus 1 in the BOMCV
Exodus 1 in the BONAV
Exodus 1 in the BONCB
Exodus 1 in the BONLT
Exodus 1 in the BONUT2
Exodus 1 in the BOPLNT
Exodus 1 in the BOSCB
Exodus 1 in the BOSNC
Exodus 1 in the BOTLNT
Exodus 1 in the BOVCB
Exodus 1 in the BOYCB
Exodus 1 in the BPBB
Exodus 1 in the BPH
Exodus 1 in the BSB
Exodus 1 in the CCB
Exodus 1 in the CUV
Exodus 1 in the CUVS
Exodus 1 in the DBT
Exodus 1 in the DGDNT
Exodus 1 in the DHNT
Exodus 1 in the DNT
Exodus 1 in the ELBE
Exodus 1 in the EMTV
Exodus 1 in the ESV
Exodus 1 in the FBV
Exodus 1 in the FEB
Exodus 1 in the GGMNT
Exodus 1 in the GNT
Exodus 1 in the HARY
Exodus 1 in the HNT
Exodus 1 in the IRVA
Exodus 1 in the IRVB
Exodus 1 in the IRVG
Exodus 1 in the IRVH
Exodus 1 in the IRVM
Exodus 1 in the IRVM2
Exodus 1 in the IRVO
Exodus 1 in the IRVP
Exodus 1 in the IRVT
Exodus 1 in the IRVT2
Exodus 1 in the IRVU
Exodus 1 in the ISVN
Exodus 1 in the JSNT
Exodus 1 in the KAPI
Exodus 1 in the KBT1ETNIK
Exodus 1 in the KBV
Exodus 1 in the KJV
Exodus 1 in the KNFD
Exodus 1 in the LBA
Exodus 1 in the LBLA
Exodus 1 in the LNT
Exodus 1 in the LSV
Exodus 1 in the MAAL
Exodus 1 in the MBV
Exodus 1 in the MBV2
Exodus 1 in the MHNT
Exodus 1 in the MKNFD
Exodus 1 in the MNG
Exodus 1 in the MNT
Exodus 1 in the MNT2
Exodus 1 in the MRS1T
Exodus 1 in the NAA
Exodus 1 in the NASB
Exodus 1 in the NBLA
Exodus 1 in the NBS
Exodus 1 in the NBVTP
Exodus 1 in the NET2
Exodus 1 in the NIV11
Exodus 1 in the NNT
Exodus 1 in the NNT2
Exodus 1 in the NNT3
Exodus 1 in the PDDPT
Exodus 1 in the PFNT
Exodus 1 in the RMNT
Exodus 1 in the SBIAS
Exodus 1 in the SBIBS
Exodus 1 in the SBIBS2
Exodus 1 in the SBICS
Exodus 1 in the SBIDS
Exodus 1 in the SBIGS
Exodus 1 in the SBIHS
Exodus 1 in the SBIIS
Exodus 1 in the SBIIS2
Exodus 1 in the SBIIS3
Exodus 1 in the SBIKS
Exodus 1 in the SBIKS2
Exodus 1 in the SBIMS
Exodus 1 in the SBIOS
Exodus 1 in the SBIPS
Exodus 1 in the SBISS
Exodus 1 in the SBITS
Exodus 1 in the SBITS2
Exodus 1 in the SBITS3
Exodus 1 in the SBITS4
Exodus 1 in the SBIUS
Exodus 1 in the SBIVS
Exodus 1 in the SBT
Exodus 1 in the SBT1E
Exodus 1 in the SCHL
Exodus 1 in the SNT
Exodus 1 in the SUSU
Exodus 1 in the SUSU2
Exodus 1 in the SYNO
Exodus 1 in the TBIAOTANT
Exodus 1 in the TBT1E
Exodus 1 in the TBT1E2
Exodus 1 in the TFTIP
Exodus 1 in the TFTU
Exodus 1 in the TGNTATF3T
Exodus 1 in the THAI
Exodus 1 in the TNFD
Exodus 1 in the TNT
Exodus 1 in the TNTIK
Exodus 1 in the TNTIL
Exodus 1 in the TNTIN
Exodus 1 in the TNTIP
Exodus 1 in the TNTIZ
Exodus 1 in the TOMA
Exodus 1 in the TTENT
Exodus 1 in the UBG
Exodus 1 in the UGV
Exodus 1 in the UGV2
Exodus 1 in the UGV3
Exodus 1 in the VBL
Exodus 1 in the VDCC
Exodus 1 in the YALU
Exodus 1 in the YAPE
Exodus 1 in the YBVTP
Exodus 1 in the ZBP