Hosea 9 (IRVK)
1 ಇಸ್ರಾಯೇಲೇ, ಇತರ ಜನಾಂಗಗಳಂತೆ ಮಿತಿಮೀರಿ ಉಲ್ಲಾಸಿಸಬೇಡ.ನೀನು ನಿನ್ನ ದೇವರನ್ನು ಬಿಟ್ಟು ವ್ಯಭಿಚಾರ ನಡೆಸಿದ್ದಿ;ಎಲ್ಲಾ ಕಣಗಳಲ್ಲಿನ ಫಲವನ್ನು ಅದರ ಪ್ರತಿಫಲವನ್ನಾಗಿ ಆಶಿಸಿದ್ದಿ. 2 ಕಣವೂ, ದ್ರಾಕ್ಷಿಯ ತೊಟ್ಟಿಯೂ ನಿನ್ನ ಜನರಿಗೆ ಜೀವನ ಆಧಾರವಾಗುವುದಿಲ್ಲ;ಹೊಸ ದ್ರಾಕ್ಷಾರಸದ ನಿರೀಕ್ಷೆಯು ಅವರಿಗೆ ವ್ಯರ್ಥವಾಗಿ ಹೋಗುವುದು. 3 ಅವರು ಯೆಹೋವನ ದೇಶದಲ್ಲಿ ಇನ್ನು ವಾಸಿಸರು.ಎಫ್ರಾಯೀಮ್ಯರು ಐಗುಪ್ತಕ್ಕೆ ಹಿಂದಿರುಗುವರು,ಅಶ್ಶೂರದಲ್ಲಿ ಅವರು ಹೊಲಸಾದ ಆಹಾರವನ್ನು ತಿನ್ನುವರು. 4 ಯೆಹೋವನಿಗೆ ದ್ರಾಕ್ಷಾರಸವನ್ನು ನೈವೇದ್ಯವಾಗಿ ಸುರಿಯರು,ಅವರ ಯಜ್ಞಗಳು ಆತನಿಗೆ ಮೆಚ್ಚಿಕೆಯಾಗುವುದಿಲ್ಲ.ಅವರ ಆಹಾರವು ಸತ್ತವರ ಮನೆಯ ಆಹಾರದಂತಿರುವುದು;ಅದನ್ನು ತಿನ್ನುವವರೆಲ್ಲರೂ ಅಶುದ್ಧರಾಗುವರು,ಅದು ಅವರ ಹೊಟ್ಟೆತುಂಬುವುದಕ್ಕೆ ಮಾತ್ರ ಅನುಕೂಲವಾಗುವುದು,ಅದು ಯೆಹೋವನ ಆಲಯಕ್ಕೆ ಬರಲು ಯೋಗ್ಯವಲ್ಲ. 5 ನೀವು ಹಬ್ಬದ ದಿನದಲ್ಲಿ, ಯೆಹೋವನ ಮಹೋತ್ಸವ ದಿನದಲ್ಲಿ ಏನು ಮಾಡುವಿರಿ? 6 ಆಹಾ, ಅವರು ವಿನಾಶದ ದೇಶವನ್ನು ಬಿಟ್ಟುಹೋಗುವರು;ಐಗುಪ್ತವು ಅವರಿಗೆ ಸ್ಮಶಾನವಾಗುವುದು, ಮೋಫ್ ಪಟ್ಟಣವು ಅವರನ್ನು ಹೂಣಿಡುವುದು;ಅವರ ಇಷ್ಟದ ಬೆಳ್ಳಿಯ ಒಡವೆಗಳು ಮುಳ್ಳು ಪೊದೆಗಳ ಪಾಲಾಗುವವು;ಮುಳ್ಳುಗಿಡಗಳು ಅವರ ಗುಡಾರಗಳಲ್ಲಿ ಹುಟ್ಟಿಕೊಳ್ಳುವವು. 7 ದಂಡನೆಯ ದಿನಗಳು ಹತ್ತಿರವಾಗಿದೆ, ಮುಯ್ಯಿತೀರಿಸುವ ದಿನಗಳು ಸಮೀಪಿಸಿವೆ.ಅದು ಇಸ್ರಾಯೇಲಿನ ಅನುಭವಕ್ಕೆ ಬಂದೇ ಬರುವವು;ಇಸ್ರಾಯೇಲೇ, ನಿನ್ನ ಅಧರ್ಮವು ಬಹಳವಾಗಿರುವುದರಿಂದಲೂ, ವಿರೋಧವು ಹೆಚ್ಚಾಗಿರುವುದರಿಂದಲೂ,“ಪ್ರವಾದಿಯು ಮೂರ್ಖನು ಮತ್ತು ದೇವರಾತ್ಮ ಪ್ರೇರಿತನು ಹುಚ್ಚನು” ಅಂದುಕೊಳ್ಳುತ್ತೀ. 8 ಎಫ್ರಾಯೀಮು ನನ್ನ ದೇವರ ವಿಷಯವಾಗಿ ಹೊಂಚು ಹಾಕುತ್ತದೆ;ಪ್ರವಾದಿಯ ಮಾರ್ಗಗಳಲ್ಲೆಲ್ಲಾ ಬೇಟೆಗಾರನ ಬಲೆಯು ಒಡ್ಡಿದೆ,ಅವನ ದೇವರ ಆಲಯದಲ್ಲಿಯೂ ಶತ್ರುವಿನ ವಿರೋಧವು ಕಾದಿದೆ. 9 ಪೂರ್ವದಲ್ಲಿ ಗಿಬ್ಯದವರು ಕೆಡಿಸಿಕೊಂಡಂತೆ ಎಫ್ರಾಯೀಮ್ಯರು ತಮ್ಮನ್ನು ತೀರಾ ಕೆಡಿಸಿಕೊಂಡಿದ್ದಾರೆ.ದೇವರು ಅವರ ಅಧರ್ಮವನ್ನು ಜ್ಞಾಪಕಕ್ಕೆ ತಂದುಕೊಂಡು ಅವರ ಪಾಪಗಳಿಗೆ ಪ್ರತಿದಂಡನೆ ಮಾಡುವನು. 10 ಕಾಡಿನಲ್ಲಿ ದ್ರಾಕ್ಷಿಯ ಹಣ್ಣು ಸಿಕ್ಕಿದಂತೆ ಇಸ್ರಾಯೇಲು ನನಗೆ ಸಿಕ್ಕಿತು;ಹೊಸದಾಗಿ ಫಲಕ್ಕೆ ಬಂದ ಅಂಜೂರದ ಗಿಡದಲ್ಲಿ ಮೊದಲು ಮಾಗಿದ ಹಣ್ಣನ್ನು ಕಂಡ ಹಾಗೆ ನಿಮ್ಮ ಪೂರ್ವಿಕರನ್ನು ಕಂಡೆನು.ಆದರೆ ಅವರು ಬಾಳ್ ಪೆಗೋರಿಗೆ ಬಂದು ಬಾಳ್ ದೇವತೆಯ ಭಕ್ತರಾಗಿ ದೀಕ್ಷೆಗೊಂಡು,ತಾವು ಪ್ರೀತಿಸಿದ ದೇವತೆಯ ಹಾಗೆ ಅಸಹ್ಯರಾದರು. 11 ಎಫ್ರಾಯೀಮ್ಯರ ಮಹಿಮೆಯು ಪಕ್ಷಿಯಂತೆ ಹಾರಿಹೋಗುವುದು; ಯಾರೂ ಹೆರರು, ಗರ್ಭಿಣಿಯಾಗುವುದಿಲ್ಲ, ಗರ್ಭಧರಿಸರು. 12 ಒಂದು ವೇಳೆ ಮಕ್ಕಳನ್ನು ಹೆತ್ತು ಸಾಕಿದರೂ,ಯಾರೂ ಉಳಿಯದಂತೆ ಮಾಡಿ ಅವರಿಗೆ ಪುತ್ರ ಶೋಕವನ್ನು ಉಂಟುಮಾಡುತ್ತಲೇ ಬರುವೆನು;ಹೌದು, ನಾನು ಅವರಿಗೆ ವಿಮುಖನಾಗಲು ಅವರ ಗತಿಯನ್ನು ಏನೆಂದು ಹೇಳಲಿ! 13 ತೂರು ಹೇಗೆ ಕಾಣಿಸುತ್ತದೋ ಹಾಗೆಯೇ ಎಫ್ರಾಯೀಮು ಹುಲ್ಗಾವಲಿನಲ್ಲಿ ನೆಟ್ಟಿರುವುದಾಗಿ ಕಾಣಿಸುತ್ತದೆ;ಆದರೆ ಎಫ್ರಾಯೀಮು ತನ್ನ ಮಕ್ಕಳನ್ನು ಹತ್ಯಗೆ ಈಡಾಗುವಂತೆ ಕಳುಹಿಸುವುದು. 14 ಯೆಹೋವನೇ, ಅವರಿಗೆ ತಕ್ಕ ಗತಿಯನ್ನು ವಿಧಿಸು; ಏನು ವಿಧಿಸುತ್ತೀಯೋ?ಅವರಿಗೆ ಗರ್ಭಸ್ರಾವವನ್ನು ಮಾಡು, ಮೊಲೆಯನ್ನು ಬತ್ತಿಸು. 15 ಅವರ ದುಷ್ಟತನವು ಗಿಲ್ಗಾಲಿನಲ್ಲಿ ತುಂಬಿದೆ; ಅಲ್ಲೇ ನನ್ನ ದ್ವೇಷಕ್ಕೆ ಗುರಿಯಾಗಿದ್ದಾರೆ;ಅವರ ದುಷ್ಕೃತ್ಯಗಳ ನಿಮಿತ್ತ ನಾನು ಅವರನ್ನು ನನ್ನ ನಿವಾಸದೊಳಗಿಂದ ಓಡಿಸಿಬಿಡುವೆನು;ಅವರನ್ನು ಇನ್ನು ಪ್ರೀತಿಸೆನು; ಅವರ ಅಧಿಕಾರಿಗಳೆಲ್ಲರೂ ದ್ರೋಹಿಗಳೇ ಸರಿ. 16 ಎಫ್ರಾಯೀಮ್ಯರಿಗೆ ಘಾತವಾಗಿದೆ; ಅವರ ವಂಶಮೂಲವು ಒಣಗಿಹೋಗಿದೆ.ಅವರು ಫಲಹೀನರಾಗುವರು; ಹೌದು, ಅವರು ಮಕ್ಕಳನ್ನು ಹೆತ್ತರೂ ಅವರ ಗರ್ಭದ ಪ್ರಿಯಫಲವನ್ನು ಸಾಯಿಸುವೆನು. 17 ನನ್ನ ದೇವರು ಅವರನ್ನು ತಳ್ಳಿಬಿಡುವನು; ಅವರು ಆತನ ಮಾತಿಗೆ ಕಿವಿಗೊಡಲಿಲ್ಲ;ಅವರಿಗೆ ಜನಾಂಗಗಳಲ್ಲಿ ಅಲೆದಾಡುವ ಗತಿಯಾಗುವುದು.
In Other Versions
Hosea 9 in the ANGEFD
Hosea 9 in the ANTPNG2D
Hosea 9 in the AS21
Hosea 9 in the BAGH
Hosea 9 in the BBPNG
Hosea 9 in the BBT1E
Hosea 9 in the BDS
Hosea 9 in the BEV
Hosea 9 in the BHAD
Hosea 9 in the BIB
Hosea 9 in the BLPT
Hosea 9 in the BNT
Hosea 9 in the BNTABOOT
Hosea 9 in the BNTLV
Hosea 9 in the BOATCB
Hosea 9 in the BOATCB2
Hosea 9 in the BOBCV
Hosea 9 in the BOCNT
Hosea 9 in the BOECS
Hosea 9 in the BOGWICC
Hosea 9 in the BOHCB
Hosea 9 in the BOHCV
Hosea 9 in the BOHLNT
Hosea 9 in the BOHNTLTAL
Hosea 9 in the BOICB
Hosea 9 in the BOILNTAP
Hosea 9 in the BOITCV
Hosea 9 in the BOKCV
Hosea 9 in the BOKCV2
Hosea 9 in the BOKHWOG
Hosea 9 in the BOKSSV
Hosea 9 in the BOLCB
Hosea 9 in the BOLCB2
Hosea 9 in the BOMCV
Hosea 9 in the BONAV
Hosea 9 in the BONCB
Hosea 9 in the BONLT
Hosea 9 in the BONUT2
Hosea 9 in the BOPLNT
Hosea 9 in the BOSCB
Hosea 9 in the BOSNC
Hosea 9 in the BOTLNT
Hosea 9 in the BOVCB
Hosea 9 in the BOYCB
Hosea 9 in the BPBB
Hosea 9 in the BPH
Hosea 9 in the BSB
Hosea 9 in the CCB
Hosea 9 in the CUV
Hosea 9 in the CUVS
Hosea 9 in the DBT
Hosea 9 in the DGDNT
Hosea 9 in the DHNT
Hosea 9 in the DNT
Hosea 9 in the ELBE
Hosea 9 in the EMTV
Hosea 9 in the ESV
Hosea 9 in the FBV
Hosea 9 in the FEB
Hosea 9 in the GGMNT
Hosea 9 in the GNT
Hosea 9 in the HARY
Hosea 9 in the HNT
Hosea 9 in the IRVA
Hosea 9 in the IRVB
Hosea 9 in the IRVG
Hosea 9 in the IRVH
Hosea 9 in the IRVM
Hosea 9 in the IRVM2
Hosea 9 in the IRVO
Hosea 9 in the IRVP
Hosea 9 in the IRVT
Hosea 9 in the IRVT2
Hosea 9 in the IRVU
Hosea 9 in the ISVN
Hosea 9 in the JSNT
Hosea 9 in the KAPI
Hosea 9 in the KBT1ETNIK
Hosea 9 in the KBV
Hosea 9 in the KJV
Hosea 9 in the KNFD
Hosea 9 in the LBA
Hosea 9 in the LBLA
Hosea 9 in the LNT
Hosea 9 in the LSV
Hosea 9 in the MAAL
Hosea 9 in the MBV
Hosea 9 in the MBV2
Hosea 9 in the MHNT
Hosea 9 in the MKNFD
Hosea 9 in the MNG
Hosea 9 in the MNT
Hosea 9 in the MNT2
Hosea 9 in the MRS1T
Hosea 9 in the NAA
Hosea 9 in the NASB
Hosea 9 in the NBLA
Hosea 9 in the NBS
Hosea 9 in the NBVTP
Hosea 9 in the NET2
Hosea 9 in the NIV11
Hosea 9 in the NNT
Hosea 9 in the NNT2
Hosea 9 in the NNT3
Hosea 9 in the PDDPT
Hosea 9 in the PFNT
Hosea 9 in the RMNT
Hosea 9 in the SBIAS
Hosea 9 in the SBIBS
Hosea 9 in the SBIBS2
Hosea 9 in the SBICS
Hosea 9 in the SBIDS
Hosea 9 in the SBIGS
Hosea 9 in the SBIHS
Hosea 9 in the SBIIS
Hosea 9 in the SBIIS2
Hosea 9 in the SBIIS3
Hosea 9 in the SBIKS
Hosea 9 in the SBIKS2
Hosea 9 in the SBIMS
Hosea 9 in the SBIOS
Hosea 9 in the SBIPS
Hosea 9 in the SBISS
Hosea 9 in the SBITS
Hosea 9 in the SBITS2
Hosea 9 in the SBITS3
Hosea 9 in the SBITS4
Hosea 9 in the SBIUS
Hosea 9 in the SBIVS
Hosea 9 in the SBT
Hosea 9 in the SBT1E
Hosea 9 in the SCHL
Hosea 9 in the SNT
Hosea 9 in the SUSU
Hosea 9 in the SUSU2
Hosea 9 in the SYNO
Hosea 9 in the TBIAOTANT
Hosea 9 in the TBT1E
Hosea 9 in the TBT1E2
Hosea 9 in the TFTIP
Hosea 9 in the TFTU
Hosea 9 in the TGNTATF3T
Hosea 9 in the THAI
Hosea 9 in the TNFD
Hosea 9 in the TNT
Hosea 9 in the TNTIK
Hosea 9 in the TNTIL
Hosea 9 in the TNTIN
Hosea 9 in the TNTIP
Hosea 9 in the TNTIZ
Hosea 9 in the TOMA
Hosea 9 in the TTENT
Hosea 9 in the UBG
Hosea 9 in the UGV
Hosea 9 in the UGV2
Hosea 9 in the UGV3
Hosea 9 in the VBL
Hosea 9 in the VDCC
Hosea 9 in the YALU
Hosea 9 in the YAPE
Hosea 9 in the YBVTP
Hosea 9 in the ZBP