Nehemiah 1 (IRVK)
1 ಹಕಲ್ಯನ ಮಗನಾದ ನೆಹೆಮೀಯನ ಚರಿತ್ರೆ: ಇಪ್ಪತ್ತನೆಯ ವರ್ಷದ ಮಾರ್ಗಶಿರ್ಷ ಮಾಸದಲ್ಲಿ ನಾನು ಶೂಷನ್ ಪಟ್ಟಣದ ಅರಮನೆಯಲ್ಲಿದ್ದಾಗ, 2 ನನ್ನ ಸಹೋದರಲ್ಲಿ ಒಬ್ಬನಾದ ಹನಾನೀಯನೂ, ಬೇರೆ ಕೆಲವರು ಯೆಹೂದ ಜನರೊಂದಿಗೆ, ನನ್ನ ಬಳಿಗೆ ಬಂದರು. ಸೆರೆಯಾಳುಗಳಾಗಿ ಹೋಗಿದ್ದವರಲ್ಲಿ ಕೆಲವು ಯೆಹೂದ್ಯರು ತಪ್ಪಿಸಿಕೊಂಡು ನನ್ನ ಬಳಿಗೆ ಬಂದಾಗ ಯೆರೂಸಲೇಮಿನ ಸಮಾಚಾರವನ್ನು ನಾನು ಅವರ ಹತ್ತಿರ ವಿಚಾರಿಸಿದೆನು. 3 ಅವರು ನನಗೆ, “ಸೆರೆಯವರೊಳಗಿಂದ ತಪ್ಪಿಸಿಕೊಂಡು ಬಂದು ಆ ಸಂಸ್ಥಾನದಲ್ಲಿ ವಾಸಿಸುತ್ತಿರುವವರು ಮಹಾ ಕಷ್ಟನಿಂದೆಗಳಿಗೆ ಒಳಗಾಗಿದ್ದಾರೆ; ಯೆರೂಸಲೇಮಿನ ಪೌಳಿಗೋಡೆಯು ಕೆಡವಲ್ಪಟ್ಟಿದೆ; ಅದರ ಬಾಗಿಲುಗಳು ಬೆಂಕಿಯಿಂದ ಸುಡಲ್ಪಟ್ಟಿವೆ” ಎಂದು ಹೇಳಿದರು. 4 ನಾನು ಈ ವರ್ತಮಾನವನ್ನು ಕೇಳಿದ ಕ್ಷಣವೇ ನೆಲದ ಮೇಲೆ ಬಿದ್ದು ಅತ್ತೆನು; ಹಲವು ದಿನಗಳವರೆಗೂ ಶೋಕಿಸುತ್ತಾ ಉಪವಾಸವಾಗಿದ್ದು ಪರಲೋಕದ ದೇವರ ಮುಂದೆ ವಿಜ್ಞಾಪನೆ ಮಾಡುತ್ತಾ ಇದ್ದೆನು. 5 ಆ ವಿಜ್ಞಾಪನೆಗಳಲ್ಲಿ ನಾನು, “ಯೆಹೋವನೇ, ಮಹೋನ್ನತನೂ, ಭಯಭಕ್ತಿಗೂ ಪಾತ್ರನಾಗಿರುವ ಪರಲೋಕದ ದೇವರೇ, ನಿನ್ನನ್ನು ಪ್ರೀತಿಸಿ ನಿನ್ನ ಆಜ್ಞೆಗಳನ್ನು ಅನುಸರಿಸುವವರಿಗೆ ಮಾಡಿದ ಕೃಪಾವಾಗ್ದಾನಗಳನ್ನು ನೆರವೇರಿಸುವವನೇ, 6 ಕೃಪೆಮಾಡಿ ನನ್ನ ಮೊರೆಗೆ ಕಿವಿಗೊಡು, ನನ್ನನ್ನು ಕಟಾಕ್ಷಿಸು, ನಿನ್ನ ಸೇವಕನ ಪ್ರಾರ್ಥನೆಯನ್ನು ಲಾಲಿಸಬೇಕು. ನಾನು ಈಗ ಹಗಲಿರುಳೂ ನಿನ್ನ ಸನ್ನಿಧಿಯಲ್ಲಿ ನಿನ್ನ ಸೇವಕರಾದ ಇಸ್ರಾಯೇಲರಿಗಾಗಿ ಪ್ರಾರ್ಥಿಸುತ್ತಾ ಅವರು ನಿನಗೆ ವಿರುದ್ಧವಾಗಿ ಮಾಡಿದ ಪಾಪಗಳನ್ನು ಅರಿಕೆ ಮಾಡುತ್ತಾ ಇದ್ದೇನೆ; ನಾನೂ, ನನ್ನ ಪೂರ್ವಿಕರೂ ಆ ಪಾಪಗಳಲ್ಲಿ ಪಾಲುಗಾರರಾಗಿದ್ದೇವೆ. 7 ನಾವು ನಿನಗೆ ದ್ರೋಹಿಗಳಾಗಿ ನಡೆಯುತ್ತಾ ಬಂದೆವು; ನೀನು ನಿನ್ನ ಸೇವಕನಾದ ಮೋಶೆಯ ಮುಖಾಂತರ ಕೊಟ್ಟ ಆಜ್ಞಾವಿಧಿನ್ಯಾಯಗಳನ್ನು ನಾವು ಕೈಗೊಳ್ಳಲಿಲ್ಲ. 8 ಆದರೂ, ನಿನ್ನ ಸೇವಕನಾದ ಮೋಶೆಗೆ ಹೇಳಿದ ಮಾತನ್ನು ನೆನಪಿಸಿಕೊಳ್ಳಿರಿ; ‘ನೀವು ಅವಿಧೇಯರಾಗಿ ನಡೆಯುವುದಾದರೆ ನಾನು ನಿಮ್ಮನ್ನು ಜನಾಂಗಗಳ ಮದ್ಯ ಚದುರಿಸಿಬಿಡುವೆನು; 9 ನನಗೆ ಅಭಿಮುಖರಾಗಿ ನನ್ನ ಆಜ್ಞೆಗಳನ್ನು ಅನುಸರಿಸಿ ನಡೆಯುವುದಾದರೆ ನಿಮ್ಮ ಜನರು ಆಕಾಶದ ಕೊನೆಯವರೆಗೆ ಒಯ್ಯಲ್ಪಟ್ಟರೂ ನಾನು ಅವರನ್ನು ಅಲ್ಲಿಂದ ಕೂಡಿಸಿ, ನನ್ನ ನಾಮಸ್ಥಾಪನೆಗೋಸ್ಕರ ಆರಿಸಿದ ಸ್ಥಳಕ್ಕೆ ಮತ್ತೆ ಬರಮಾಡುವೆನು’ ಎಂದು ಹೇಳಿರುವೆಯಲ್ಲಾ; ಆ ಮಾತನ್ನು ನೆನಪು ಮಾಡಿಕೊಳ್ಳಿರಿ. 10 “ಅವರು ನಿನ್ನ ಸೇವಕರೂ, ನೀನು ನಿನ್ನ ಮಹಾಶಕ್ತಿ, ಭುಜಪರಾಕ್ರಮಗಳಿಂದ ವಿಮೋಚಿಸಿದ ನಿನ್ನ ಪ್ರಜೆಗಳೂ ಆಗಿರುತ್ತಾರಲ್ಲಾ. 11 ಯೆಹೋವನೇ, ಕೃಪೆಮಾಡು; ನಿನ್ನ ಸೇವಕನಾದ ನನ್ನ ಪ್ರಾರ್ಥನೆಗೂ, ನಿನ್ನ ನಾಮ ಸ್ಮರಣೆಯಲ್ಲಿ ಆನಂದಿಸುವ ನಿನ್ನ ಭಕ್ತರ ಪ್ರಾರ್ಥನೆಗೂ ಕಿವಿಗೊಡು. ನಿನ್ನ ಸೇವಕನು ಈಹೊತ್ತು ಈ ಮನುಷ್ಯನ ದಯೆಗೆ ಪಾತ್ರನಾಗಿ ಸಫಲನಾಗುವಂತೆ ಅನುಗ್ರಹಿಸಬೇಕು” ಎಂದು ಪ್ರಾರ್ಥಿಸಿದೆನು.
In Other Versions
Nehemiah 1 in the ANGEFD
Nehemiah 1 in the ANTPNG2D
Nehemiah 1 in the AS21
Nehemiah 1 in the BAGH
Nehemiah 1 in the BBPNG
Nehemiah 1 in the BBT1E
Nehemiah 1 in the BDS
Nehemiah 1 in the BEV
Nehemiah 1 in the BHAD
Nehemiah 1 in the BIB
Nehemiah 1 in the BLPT
Nehemiah 1 in the BNT
Nehemiah 1 in the BNTABOOT
Nehemiah 1 in the BNTLV
Nehemiah 1 in the BOATCB
Nehemiah 1 in the BOATCB2
Nehemiah 1 in the BOBCV
Nehemiah 1 in the BOCNT
Nehemiah 1 in the BOECS
Nehemiah 1 in the BOGWICC
Nehemiah 1 in the BOHCB
Nehemiah 1 in the BOHCV
Nehemiah 1 in the BOHLNT
Nehemiah 1 in the BOHNTLTAL
Nehemiah 1 in the BOICB
Nehemiah 1 in the BOILNTAP
Nehemiah 1 in the BOITCV
Nehemiah 1 in the BOKCV
Nehemiah 1 in the BOKCV2
Nehemiah 1 in the BOKHWOG
Nehemiah 1 in the BOKSSV
Nehemiah 1 in the BOLCB
Nehemiah 1 in the BOLCB2
Nehemiah 1 in the BOMCV
Nehemiah 1 in the BONAV
Nehemiah 1 in the BONCB
Nehemiah 1 in the BONLT
Nehemiah 1 in the BONUT2
Nehemiah 1 in the BOPLNT
Nehemiah 1 in the BOSCB
Nehemiah 1 in the BOSNC
Nehemiah 1 in the BOTLNT
Nehemiah 1 in the BOVCB
Nehemiah 1 in the BOYCB
Nehemiah 1 in the BPBB
Nehemiah 1 in the BPH
Nehemiah 1 in the BSB
Nehemiah 1 in the CCB
Nehemiah 1 in the CUV
Nehemiah 1 in the CUVS
Nehemiah 1 in the DBT
Nehemiah 1 in the DGDNT
Nehemiah 1 in the DHNT
Nehemiah 1 in the DNT
Nehemiah 1 in the ELBE
Nehemiah 1 in the EMTV
Nehemiah 1 in the ESV
Nehemiah 1 in the FBV
Nehemiah 1 in the FEB
Nehemiah 1 in the GGMNT
Nehemiah 1 in the GNT
Nehemiah 1 in the HARY
Nehemiah 1 in the HNT
Nehemiah 1 in the IRVA
Nehemiah 1 in the IRVB
Nehemiah 1 in the IRVG
Nehemiah 1 in the IRVH
Nehemiah 1 in the IRVM
Nehemiah 1 in the IRVM2
Nehemiah 1 in the IRVO
Nehemiah 1 in the IRVP
Nehemiah 1 in the IRVT
Nehemiah 1 in the IRVT2
Nehemiah 1 in the IRVU
Nehemiah 1 in the ISVN
Nehemiah 1 in the JSNT
Nehemiah 1 in the KAPI
Nehemiah 1 in the KBT1ETNIK
Nehemiah 1 in the KBV
Nehemiah 1 in the KJV
Nehemiah 1 in the KNFD
Nehemiah 1 in the LBA
Nehemiah 1 in the LBLA
Nehemiah 1 in the LNT
Nehemiah 1 in the LSV
Nehemiah 1 in the MAAL
Nehemiah 1 in the MBV
Nehemiah 1 in the MBV2
Nehemiah 1 in the MHNT
Nehemiah 1 in the MKNFD
Nehemiah 1 in the MNG
Nehemiah 1 in the MNT
Nehemiah 1 in the MNT2
Nehemiah 1 in the MRS1T
Nehemiah 1 in the NAA
Nehemiah 1 in the NASB
Nehemiah 1 in the NBLA
Nehemiah 1 in the NBS
Nehemiah 1 in the NBVTP
Nehemiah 1 in the NET2
Nehemiah 1 in the NIV11
Nehemiah 1 in the NNT
Nehemiah 1 in the NNT2
Nehemiah 1 in the NNT3
Nehemiah 1 in the PDDPT
Nehemiah 1 in the PFNT
Nehemiah 1 in the RMNT
Nehemiah 1 in the SBIAS
Nehemiah 1 in the SBIBS
Nehemiah 1 in the SBIBS2
Nehemiah 1 in the SBICS
Nehemiah 1 in the SBIDS
Nehemiah 1 in the SBIGS
Nehemiah 1 in the SBIHS
Nehemiah 1 in the SBIIS
Nehemiah 1 in the SBIIS2
Nehemiah 1 in the SBIIS3
Nehemiah 1 in the SBIKS
Nehemiah 1 in the SBIKS2
Nehemiah 1 in the SBIMS
Nehemiah 1 in the SBIOS
Nehemiah 1 in the SBIPS
Nehemiah 1 in the SBISS
Nehemiah 1 in the SBITS
Nehemiah 1 in the SBITS2
Nehemiah 1 in the SBITS3
Nehemiah 1 in the SBITS4
Nehemiah 1 in the SBIUS
Nehemiah 1 in the SBIVS
Nehemiah 1 in the SBT
Nehemiah 1 in the SBT1E
Nehemiah 1 in the SCHL
Nehemiah 1 in the SNT
Nehemiah 1 in the SUSU
Nehemiah 1 in the SUSU2
Nehemiah 1 in the SYNO
Nehemiah 1 in the TBIAOTANT
Nehemiah 1 in the TBT1E
Nehemiah 1 in the TBT1E2
Nehemiah 1 in the TFTIP
Nehemiah 1 in the TFTU
Nehemiah 1 in the TGNTATF3T
Nehemiah 1 in the THAI
Nehemiah 1 in the TNFD
Nehemiah 1 in the TNT
Nehemiah 1 in the TNTIK
Nehemiah 1 in the TNTIL
Nehemiah 1 in the TNTIN
Nehemiah 1 in the TNTIP
Nehemiah 1 in the TNTIZ
Nehemiah 1 in the TOMA
Nehemiah 1 in the TTENT
Nehemiah 1 in the UBG
Nehemiah 1 in the UGV
Nehemiah 1 in the UGV2
Nehemiah 1 in the UGV3
Nehemiah 1 in the VBL
Nehemiah 1 in the VDCC
Nehemiah 1 in the YALU
Nehemiah 1 in the YAPE
Nehemiah 1 in the YBVTP
Nehemiah 1 in the ZBP