Psalms 71 (IRVK)

1 ಯೆಹೋವನೇ, ನಿನ್ನನ್ನು ಮೊರೆಹೊಕ್ಕಿದ್ದೇನೆ;ಎಂದಿಗೂ ಅವಮಾನಕ್ಕೆ ಗುರಿಮಾಡಬೇಡ. 2 ನಿನ್ನ ನೀತಿಗನುಸಾರವಾಗಿ ನನ್ನನ್ನು ಬಿಡಿಸಿ ಪಾರುಮಾಡು;ನನ್ನ ಪ್ರಾರ್ಥನೆಗೆ ಕಿವಿಗೊಟ್ಟು ಉದ್ಧರಿಸು. 3 ನಾನು ಯಾವಾಗಲೂ ಮರೆಹೋಗುವ ಆಶ್ರಯಗಿರಿಯಾಗಿರು;ನನ್ನ ರಕ್ಷಣೆಗೋಸ್ಕರ ಆಜ್ಞಾಪಿಸಿದ್ದೀಯಲ್ಲವೇ.ನೀನೇ ನನ್ನ ಬಂಡೆಯೂ, ಕೋಟೆಯೂ ಆಗಿದ್ದೀಯಲ್ಲಾ. 4 ದೇವರೇ, ನನ್ನನ್ನು ದುಷ್ಟನ ಕೈಯಿಂದಲೂ,ಅನ್ಯಾಯ ಮತ್ತು ಹಿಂಸಕನ ವಶದಿಂದಲೂ ತಪ್ಪಿಸು. 5 ಕರ್ತನಾದ ಯೆಹೋವನೇ,ಬಾಲ್ಯದಿಂದ ನನ್ನ ನಿರೀಕ್ಷೆಯೂ, ಭರವಸವೂ ನೀನಲ್ಲವೋ? 6 ನಾನು ಹುಟ್ಟಿದಂದಿನಿಂದ ನಿನ್ನನ್ನೇ ಅವಲಂಬಿಸಿಕೊಂಡಿದ್ದೇನೆ.ತಾಯಿ ಹೆತ್ತಂದಿನಿಂದ ನನ್ನ ಉದ್ಧಾರಕನು ನೀನೇ.ನಾನು ಯಾವಾಗಲೂ ಹಿಗ್ಗುತ್ತಿರುವುದು ನಿನ್ನಲ್ಲಿಯೇ. 7 ನನ್ನ ದುಸ್ಥಿತಿಯು ಅನೇಕರಿಗೆ ಒಂದು ಗುರುತಾಗಿದೆ;ಆದರೂ ನೀನು ನನಗೆ ಬಲವಾದ ಆಶ್ರಯಸ್ಥಾನವಾಗಿರುತ್ತೀ. 8 ನನ್ನ ಬಾಯಲ್ಲಿ ನಿನ್ನ ಸ್ತೋತ್ರವಲ್ಲದೆ ಮತ್ತೊಂದಿಲ್ಲ;ದಿನವೆಲ್ಲಾ ನಿನ್ನ ಘನತೆಯನ್ನು ವರ್ಣಿಸುತ್ತಿರುವೆನು. 9 ವೃದ್ಧಾಪ್ಯದಲ್ಲಿ ನನ್ನನ್ನು ಧಿಕ್ಕರಿಸಬೇಡ;ನನ್ನ ಬಲವು ಕುಂದಿದಾಗ ಕೈಬಿಡಬೇಡ. 10 ನನ್ನ ಜೀವಕ್ಕೆ ಹೊಂಚುಹಾಕುವ ವೈರಿಗಳು ಒಟ್ಟಾಗಿ ಆಲೋಚಿಸುತ್ತಾ, 11 “ದೇವರು ಅವನನ್ನು ಕೈಬಿಟ್ಟಿದ್ದಾನೆ; ಬೆನ್ನಟ್ಟಿ ಹಿಡಿಯಿರಿ;ಬಿಡಿಸುವವರು ಯಾರೂ ಇಲ್ಲ” ಎಂದು ಹೇಳಿಕೊಳ್ಳುತ್ತಾರೆ. 12 ದೇವರೇ, ದೂರವಾಗಿರಬೇಡ. ನನ್ನ ದೇವರೇ, ಬೇಗ ಸಹಾಯಮಾಡು. 13 ನನ್ನ ಪ್ರಾಣಕ್ಕೆ ಹೊಂಚು ಹಾಕುವವರು ಅಪಮಾನ ಹೊಂದಿ ನಾಶವಾಗಲಿ;ನನಗೆ ಕೇಡುಬಗೆಯುವವರನ್ನು ನಿಂದೆ, ಅಪಮಾನಗಳು ಕವಿಯಲಿ. 14 ನಾನಂತೂ ನಿರೀಕ್ಷಿಸಿಕೊಂಡೇ ಇರುವೆನು;ನಿನ್ನನ್ನು ಅಧಿಕಾಧಿಕವಾಗಿ ಹೊಗಳುತ್ತಿರುವೆನು. 15 ನನ್ನ ಬಾಯಿ ನಿನ್ನ ನೀತಿಯನ್ನು, ರಕ್ಷಣೆಯನ್ನು ಹಗಲೆಲ್ಲಾ ವರ್ಣಿಸುತ್ತಿರುವುದು;ಆದರೂ ಅವುಗಳ ವಿವರಣೆ ನನಗೆ ಅಸಾಧ್ಯ. 16 ಕರ್ತನಾದ ಯೆಹೋವನೇ, ನಾನು ನಿನ್ನ ಮಹತ್ತರವಾದ ಕೃತ್ಯಗಳನ್ನು ಸ್ಮರಿಸುವವನಾಗಿನಿನ್ನೊಬ್ಬನ ನೀತಿಯನ್ನೇ ಪ್ರಕಟಪಡಿಸುವೆನು. 17 ದೇವರೇ, ನೀನು ಬಾಲ್ಯದಿಂದಲೂ ನನ್ನನ್ನು ಉಪದೇಶಿಸುತ್ತಾ ಬಂದಿದ್ದಿ.ನಾನು ನಿನ್ನ ಅದ್ಭುತಕೃತ್ಯಗಳನ್ನು ಇಂದಿನ ವರೆಗೂ ಪ್ರಚುರಪಡಿಸುತ್ತಿದ್ದೇನೆ. 18 ದೇವರೇ, ನಾನು ನರೆಯ ಮುದುಕನಾದಾಗಲೂ ಕೈಬಿಡಬೇಡ;ಆಗ ಮುಂದಿನ ತಲೆಯವರಿಗೆ ನಿನ್ನ ಭುಜಬಲವನ್ನು ಸಾರುವೆನು,ತಲತಲಾಂತರದವರಿಗೆಲ್ಲಾ ನಿನ್ನ ಪ್ರತಾಪವನ್ನು ಪ್ರಕಟಿಸುವೆನು. 19 ದೇವರೇ, ನಿನ್ನ ನೀತಿಯು ಆಕಾಶವನ್ನು ನಿಲುಕುವಷ್ಟು ಮಹೋನ್ನತವಾಗಿದೆ.ಮಹತ್ತರವಾದ ಕೃತ್ಯಗಳನ್ನು ನಡೆಸಿದ ದೇವರೇ, ನಿನಗೆ ಸಮಾನರು ಯಾರು? 20 ನಮ್ಮನ್ನು ಅನೇಕ ಕಷ್ಟನಷ್ಟಗಳಿಗೆ ಗುರಿಮಾಡಿದ ನೀನೇ ಪುನಃ ಉಜ್ಜೀವಿಸಮಾಡು;ನಮ್ಮನ್ನು ಭೂಮಿಯ ಅಧೋಭಾಗದಿಂದ ಮೇಲೆತ್ತು. 21 ನನ್ನ ಗೌರವವನ್ನು ಹೆಚ್ಚಿಸು;ನನಗೆ ಅಭಿಮುಖನಾಗಿ ಸಂತೈಸು. 22 ನನ್ನ ದೇವರೇ, ನಿನ್ನ ಸತ್ಯತೆಯನ್ನು ಸ್ಮರಿಸುವೆನು;ಸ್ವರಮಂಡಲದಿಂದ ನಿನ್ನನ್ನು ಸಂಕೀರ್ತಿಸುವೆನು.ಇಸ್ರಾಯೇಲರ ಪರಿಶುದ್ಧ ದೇವರು,ಕಿನ್ನರಿಯನ್ನು ನುಡಿಸುತ್ತಾ ನಿನ್ನನ್ನು ಭಜಿಸುವೆನು. 23 ನನ್ನ ತುಟಿಗಳೂ ಮತ್ತು ನೀನು ರಕ್ಷಿಸಿದ ನನ್ನ ಪ್ರಾಣವೂನಿನ್ನನ್ನು ಹಾಡಿಹರಸುವವು. 24 ನನ್ನ ಕೇಡಿಗೆ ಪ್ರಯತ್ನಿಸಿದವರು ಆಶಾಭಂಗಪಟ್ಟು ಅಪಮಾನ ಹೊಂದಿದ್ದಾರೆ.ಆದುದರಿಂದ ನನ್ನ ನಾಲಿಗೆಯು ದಿನವೆಲ್ಲಾ ನಿನ್ನ ನೀತಿಸಾಧನೆಯನ್ನು ವರ್ಣಿಸುತ್ತಿರುವುದು.

In Other Versions

Psalms 71 in the ANGEFD

Psalms 71 in the ANTPNG2D

Psalms 71 in the AS21

Psalms 71 in the BAGH

Psalms 71 in the BBPNG

Psalms 71 in the BBT1E

Psalms 71 in the BDS

Psalms 71 in the BEV

Psalms 71 in the BHAD

Psalms 71 in the BIB

Psalms 71 in the BLPT

Psalms 71 in the BNT

Psalms 71 in the BNTABOOT

Psalms 71 in the BNTLV

Psalms 71 in the BOATCB

Psalms 71 in the BOATCB2

Psalms 71 in the BOBCV

Psalms 71 in the BOCNT

Psalms 71 in the BOECS

Psalms 71 in the BOGWICC

Psalms 71 in the BOHCB

Psalms 71 in the BOHCV

Psalms 71 in the BOHLNT

Psalms 71 in the BOHNTLTAL

Psalms 71 in the BOICB

Psalms 71 in the BOILNTAP

Psalms 71 in the BOITCV

Psalms 71 in the BOKCV

Psalms 71 in the BOKCV2

Psalms 71 in the BOKHWOG

Psalms 71 in the BOKSSV

Psalms 71 in the BOLCB

Psalms 71 in the BOLCB2

Psalms 71 in the BOMCV

Psalms 71 in the BONAV

Psalms 71 in the BONCB

Psalms 71 in the BONLT

Psalms 71 in the BONUT2

Psalms 71 in the BOPLNT

Psalms 71 in the BOSCB

Psalms 71 in the BOSNC

Psalms 71 in the BOTLNT

Psalms 71 in the BOVCB

Psalms 71 in the BOYCB

Psalms 71 in the BPBB

Psalms 71 in the BPH

Psalms 71 in the BSB

Psalms 71 in the CCB

Psalms 71 in the CUV

Psalms 71 in the CUVS

Psalms 71 in the DBT

Psalms 71 in the DGDNT

Psalms 71 in the DHNT

Psalms 71 in the DNT

Psalms 71 in the ELBE

Psalms 71 in the EMTV

Psalms 71 in the ESV

Psalms 71 in the FBV

Psalms 71 in the FEB

Psalms 71 in the GGMNT

Psalms 71 in the GNT

Psalms 71 in the HARY

Psalms 71 in the HNT

Psalms 71 in the IRVA

Psalms 71 in the IRVB

Psalms 71 in the IRVG

Psalms 71 in the IRVH

Psalms 71 in the IRVM

Psalms 71 in the IRVM2

Psalms 71 in the IRVO

Psalms 71 in the IRVP

Psalms 71 in the IRVT

Psalms 71 in the IRVT2

Psalms 71 in the IRVU

Psalms 71 in the ISVN

Psalms 71 in the JSNT

Psalms 71 in the KAPI

Psalms 71 in the KBT1ETNIK

Psalms 71 in the KBV

Psalms 71 in the KJV

Psalms 71 in the KNFD

Psalms 71 in the LBA

Psalms 71 in the LBLA

Psalms 71 in the LNT

Psalms 71 in the LSV

Psalms 71 in the MAAL

Psalms 71 in the MBV

Psalms 71 in the MBV2

Psalms 71 in the MHNT

Psalms 71 in the MKNFD

Psalms 71 in the MNG

Psalms 71 in the MNT

Psalms 71 in the MNT2

Psalms 71 in the MRS1T

Psalms 71 in the NAA

Psalms 71 in the NASB

Psalms 71 in the NBLA

Psalms 71 in the NBS

Psalms 71 in the NBVTP

Psalms 71 in the NET2

Psalms 71 in the NIV11

Psalms 71 in the NNT

Psalms 71 in the NNT2

Psalms 71 in the NNT3

Psalms 71 in the PDDPT

Psalms 71 in the PFNT

Psalms 71 in the RMNT

Psalms 71 in the SBIAS

Psalms 71 in the SBIBS

Psalms 71 in the SBIBS2

Psalms 71 in the SBICS

Psalms 71 in the SBIDS

Psalms 71 in the SBIGS

Psalms 71 in the SBIHS

Psalms 71 in the SBIIS

Psalms 71 in the SBIIS2

Psalms 71 in the SBIIS3

Psalms 71 in the SBIKS

Psalms 71 in the SBIKS2

Psalms 71 in the SBIMS

Psalms 71 in the SBIOS

Psalms 71 in the SBIPS

Psalms 71 in the SBISS

Psalms 71 in the SBITS

Psalms 71 in the SBITS2

Psalms 71 in the SBITS3

Psalms 71 in the SBITS4

Psalms 71 in the SBIUS

Psalms 71 in the SBIVS

Psalms 71 in the SBT

Psalms 71 in the SBT1E

Psalms 71 in the SCHL

Psalms 71 in the SNT

Psalms 71 in the SUSU

Psalms 71 in the SUSU2

Psalms 71 in the SYNO

Psalms 71 in the TBIAOTANT

Psalms 71 in the TBT1E

Psalms 71 in the TBT1E2

Psalms 71 in the TFTIP

Psalms 71 in the TFTU

Psalms 71 in the TGNTATF3T

Psalms 71 in the THAI

Psalms 71 in the TNFD

Psalms 71 in the TNT

Psalms 71 in the TNTIK

Psalms 71 in the TNTIL

Psalms 71 in the TNTIN

Psalms 71 in the TNTIP

Psalms 71 in the TNTIZ

Psalms 71 in the TOMA

Psalms 71 in the TTENT

Psalms 71 in the UBG

Psalms 71 in the UGV

Psalms 71 in the UGV2

Psalms 71 in the UGV3

Psalms 71 in the VBL

Psalms 71 in the VDCC

Psalms 71 in the YALU

Psalms 71 in the YAPE

Psalms 71 in the YBVTP

Psalms 71 in the ZBP