1 Samuel 8 (BOKCV2)

1 ಸಮುಯೇಲನು ವೃದ್ಧನಾದಾಗ ತನ್ನ ಪುತ್ರರನ್ನು ಇಸ್ರಾಯೇಲಿಗೆ ನ್ಯಾಯಾಧಿಪತಿಗಳನ್ನಾಗಿ ಮಾಡಿದನು. 2 ಅವನ ಚೊಚ್ಚಲ ಮಗನ ಹೆಸರು ಯೋಯೇಲ್, ಅವನ ಎರಡನೆಯ ಮಗನ ಹೆಸರು ಅಬೀಯ. ಇವರು ಬೇರ್ಷೆಬದಲ್ಲಿ ನ್ಯಾಯಾಧಿಪತಿಗಳಾಗಿದ್ದರು. 3 ಆದರೆ ಅವರು ಸಮುಯೇಲನ ಮಾರ್ಗದಲ್ಲಿ ನಡೆಯದೆ, ಅಪ್ರಾಮಾಣಿಕತೆಯಿಂದ ಹಣ ಸಂಪಾದಿಸಿ, ಲಂಚವನ್ನು ತೆಗೆದುಕೊಂಡು, ನ್ಯಾಯವನ್ನು ತಪ್ಪಿಸುತ್ತಿದ್ದರು. 4 ಆಗ ಇಸ್ರಾಯೇಲ್ ಹಿರಿಯರೆಲ್ಲರೂ ಕೂಡಿಕೊಂಡು, ರಾಮದಲ್ಲಿರುವ ಸಮುಯೇಲನ ಬಳಿಗೆ ಬಂದು ಅವನಿಗೆ, 5 “ನೀನು ವೃದ್ಧನಾದೆ, ನಿನ್ನ ಮಕ್ಕಳು ನಿನ್ನ ಮಾರ್ಗದಲ್ಲಿ ನಡೆಯುವುದಿಲ್ಲ. ಈಗ ಎಲ್ಲ ರಾಷ್ಟ್ರಗಳ ಹಾಗೆ ನಮಗೆ ನ್ಯಾಯತೀರಿಸುವುದಕ್ಕೆ ಒಬ್ಬ ಅರಸನನ್ನು ನೇಮಿಸು,” ಎಂದರು. 6 “ನಮಗೆ ನ್ಯಾಯತೀರಿಸುವ ಒಬ್ಬ ಅರಸನನ್ನು ನೇಮಿಸು,” ಎಂದು ಅವರು ಹೇಳಿದ್ದು ಸಮುಯೇಲನಿಗೆ ಕೆಟ್ಟದ್ದಾಗಿ ಕಾಣಿಸಿತು. ಅವನು ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು. 7 ಆಗ ಯೆಹೋವ ದೇವರು ಸಮುಯೇಲನಿಗೆ, “ಜನರು ನಿನಗೆ ಹೇಳಿದ್ದೆಲ್ಲದರಲ್ಲಿ ಅವರ ಮಾತು ಕೇಳು. ಏಕೆಂದರೆ ಅವರು ನಿನ್ನನ್ನು ತಿರಸ್ಕಾರ ಮಾಡಿಲ್ಲ. ನಾನು ಅವರನ್ನು ಆಳದ ಹಾಗೆ ನನ್ನನ್ನೇ ತಿರಸ್ಕಾರಮಾಡಿದ್ದಾರೆ. 8 ನಾನು ಅವರನ್ನು ಈಜಿಪ್ಟಿನಿಂದ ಬರಮಾಡಿದ ದಿನವು ಮೊದಲುಗೊಂಡು ಈ ದಿನದವರೆಗೂ ಅವರು ನನ್ನನ್ನು ಬಿಟ್ಟು, ಅನ್ಯದೇವರುಗಳನ್ನು ಸೇವಿಸಿ, ಮಾಡಿದ ಸಮಸ್ತ ಕೃತ್ಯಗಳ ಪ್ರಕಾರ ನಿನಗೂ ಮಾಡುತ್ತಾರೆ. 9 ಈಗ ಅವರ ಮಾತನ್ನು ಕೇಳು. ಆದರೆ ನೀನು ಅವರಿಗೆ ಕಟ್ಟಳೆಯನ್ನು ಕೊಟ್ಟು, ಅವರನ್ನು ಆಳುವ ಅರಸನ ಅಧಿಕಾರವು ಎಂಥದ್ದೆಂಬುದನ್ನು ತಿಳಿಸು,” ಎಂದನು. 10 ಆಗ ಸಮುಯೇಲನು ಒಬ್ಬ ಅರಸನನ್ನು ಕೇಳಿದ ಜನರಿಗೆ ಯೆಹೋವ ದೇವರ ವಾಕ್ಯಗಳನ್ನೆಲ್ಲಾ ಹೇಳಿದನು. 11 ಅವನು, “ನಿಮ್ಮನ್ನು ಆಳುವ ಅರಸನ ಅಧಿಕಾರವು ಏನೆಂದರೆ, ಅವನು ನಿಮ್ಮ ಪುತ್ರರನ್ನು ತನ್ನ ರಥಗಳಿಗೋಸ್ಕರ ಸಾರಥಿಗಳನ್ನಾಗಿಯೂ ಕುದುರೆ ಸವಾರರನ್ನಾಗಿಯೂ ತೆಗೆದುಕೊಳ್ಳುವನು. ಕೆಲವರು ಅವನ ರಥಗಳ ಮುಂದೆ ಓಡುವರು. 12 ಅವನು ಸಾವಿರ ಜನಕ್ಕೆ ಅಧಿಪತಿಗಳಾಗಿಯೂ ಐವತ್ತು ಜನಕ್ಕೆ ಅಧಿಪತಿಗಳಾಗಿಯೂ, ತನ್ನ ಭೂಮಿಯನ್ನು ಊಳುವವರಾಗಿಯೂ ತನ್ನ ಪೈರನ್ನು ಕೊಯ್ಯುವವರಾಗಿಯೂ ತನ್ನ ಯುದ್ಧದ ಆಯುಧಗಳನ್ನು ಹಾಗು ತನ್ನ ರಥಸಾಮಗ್ರಿಗಳನ್ನು ಮಾಡುವವರಾಗಿಯೂ ನೇಮಿಸುವನು. 13 ಇದಲ್ಲದೆ ಅವನು ನಿಮ್ಮ ಪುತ್ರಿಯರನ್ನು ತೈಲಗಾರ್ತಿಗಳಾಗಿಯೂ, ಅಡುಗೆ ಮಾಡುವವರಾಗಿಯೂ ರೊಟ್ಟಿ ಸುಡುವವರಾಗಿಯೂ ಇಟ್ಟುಕೊಳ್ಳುವನು. 14 ಅವನು ಉತ್ತಮವಾದ ನಿಮ್ಮ ಹೊಲಗಳನ್ನೂ, ನಿಮ್ಮ ದ್ರಾಕ್ಷಿತೋಟಗಳನ್ನೂ, ನಿಮ್ಮ ಓಲಿವ್ ಮರದ ತೋಪುಗಳನ್ನೂ ತೆಗೆದುಕೊಂಡು ತನ್ನ ಸೇವಕರಿಗೆ ಕೊಡುವನು. 15 ನಿಮ್ಮ ಧಾನ್ಯಗಳಲ್ಲಿಯೂ, ನಿಮ್ಮ ದ್ರಾಕ್ಷಿ ಫಲಗಳಲ್ಲಿಯೂ ಹತ್ತರಲ್ಲಿ ಒಂದು ಪಾಲನ್ನು ತೆಗೆದುಕೊಂಡು, ತನ್ನ ಅಧಿಕಾರಿಗಳಿಗೂ, ತನ್ನ ಸೇವಕರಿಗೂ ಕೊಡುವನು. 16 ನಿಮ್ಮ ದಾಸರನ್ನೂ, ನಿಮ್ಮ ದಾಸಿಯರನ್ನೂ, ನಿಮ್ಮ ಉತ್ತಮ ಪ್ರಾಯಸ್ಥರನ್ನೂ, ನಿಮ್ಮ ಕತ್ತೆಗಳನ್ನೂ ತೆಗೆದುಕೊಂಡು ತನ್ನ ಕೆಲಸಕ್ಕೆ ಇಡುವನು. 17 ಇದಲ್ಲದೆ ಅವನು ನಿಮ್ಮ ಕುರಿಗಳಲ್ಲಿ ಹತ್ತರಲ್ಲಿ ಒಂದನ್ನು ಆಯ್ದುಕೊಳ್ಳುವನು. ನೀವು ಅವನಿಗೆ ದಾಸರಾಗುವಿರಿ. 18 ನೀವು ನಿಮಗೆ ಆಯ್ದುಕೊಂಡ ನಿಮ್ಮ ಅರಸನ ನಿಮಿತ್ತ ಆ ದಿವಸದಲ್ಲಿ ಕೂಗುವಿರಿ, ಆದರೆ ಆ ದಿವಸದಲ್ಲಿ ಯೆಹೋವ ದೇವರು ನಿಮಗೆ ಕಿವಿಗೊಡುವುದಿಲ್ಲ,” ಎಂದನು. 19 ಆದರೂ ಜನರು ಸಮುಯೇಲನ ಮಾತನ್ನು ಕೇಳಲೊಲ್ಲದೆ, ಅವರು, “ಹಾಗಲ್ಲ, ನಮ್ಮ ಮೇಲೆ ಅರಸನು ಇರಬೇಕು. 20 ನಾವು ಸಕಲ ರಾಷ್ಟ್ರಗಳ ಹಾಗೆ ಇರಬೇಕು. ನಮ್ಮ ಅರಸನು ನಮಗೆ ನ್ಯಾಯತೀರಿಸುವನು. ಅವನು ನಮ್ಮ ಮುಂದೆ ಹೊರಟು, ನಮ್ಮ ಪರವಾಗಿ ಯುದ್ಧಗಳನ್ನು ನಡೆಸುವನು,” ಎಂದರು. 21 ಸಮುಯೇಲನು ಜನರ ಮಾತುಗಳನ್ನೆಲ್ಲಾ ಕೇಳಿ ಅವುಗಳನ್ನು ಯೆಹೋವ ದೇವರಿಗೆ ಹೇಳಿದನು. 22 ಯೆಹೋವ ದೇವರು ಸಮುಯೇಲನಿಗೆ, “ಅವರ ಮಾತನ್ನು ಕೇಳಿ ಅವರಿಗೆ ಅರಸನನ್ನು ನೇಮಿಸು,” ಎಂದರು.ಆಗ ಸಮುಯೇಲನು ಇಸ್ರಾಯೇಲ್ ಜನರಿಗೆ, “ನಿಮ್ಮ ನಿಮ್ಮ ಪಟ್ಟಣಗಳಿಗೆ ಹೋಗಿರಿ,” ಎಂದನು.

In Other Versions

1 Samuel 8 in the ANGEFD

1 Samuel 8 in the ANTPNG2D

1 Samuel 8 in the AS21

1 Samuel 8 in the BAGH

1 Samuel 8 in the BBPNG

1 Samuel 8 in the BBT1E

1 Samuel 8 in the BDS

1 Samuel 8 in the BEV

1 Samuel 8 in the BHAD

1 Samuel 8 in the BIB

1 Samuel 8 in the BLPT

1 Samuel 8 in the BNT

1 Samuel 8 in the BNTABOOT

1 Samuel 8 in the BNTLV

1 Samuel 8 in the BOATCB

1 Samuel 8 in the BOATCB2

1 Samuel 8 in the BOBCV

1 Samuel 8 in the BOCNT

1 Samuel 8 in the BOECS

1 Samuel 8 in the BOGWICC

1 Samuel 8 in the BOHCB

1 Samuel 8 in the BOHCV

1 Samuel 8 in the BOHLNT

1 Samuel 8 in the BOHNTLTAL

1 Samuel 8 in the BOICB

1 Samuel 8 in the BOILNTAP

1 Samuel 8 in the BOITCV

1 Samuel 8 in the BOKCV

1 Samuel 8 in the BOKHWOG

1 Samuel 8 in the BOKSSV

1 Samuel 8 in the BOLCB

1 Samuel 8 in the BOLCB2

1 Samuel 8 in the BOMCV

1 Samuel 8 in the BONAV

1 Samuel 8 in the BONCB

1 Samuel 8 in the BONLT

1 Samuel 8 in the BONUT2

1 Samuel 8 in the BOPLNT

1 Samuel 8 in the BOSCB

1 Samuel 8 in the BOSNC

1 Samuel 8 in the BOTLNT

1 Samuel 8 in the BOVCB

1 Samuel 8 in the BOYCB

1 Samuel 8 in the BPBB

1 Samuel 8 in the BPH

1 Samuel 8 in the BSB

1 Samuel 8 in the CCB

1 Samuel 8 in the CUV

1 Samuel 8 in the CUVS

1 Samuel 8 in the DBT

1 Samuel 8 in the DGDNT

1 Samuel 8 in the DHNT

1 Samuel 8 in the DNT

1 Samuel 8 in the ELBE

1 Samuel 8 in the EMTV

1 Samuel 8 in the ESV

1 Samuel 8 in the FBV

1 Samuel 8 in the FEB

1 Samuel 8 in the GGMNT

1 Samuel 8 in the GNT

1 Samuel 8 in the HARY

1 Samuel 8 in the HNT

1 Samuel 8 in the IRVA

1 Samuel 8 in the IRVB

1 Samuel 8 in the IRVG

1 Samuel 8 in the IRVH

1 Samuel 8 in the IRVK

1 Samuel 8 in the IRVM

1 Samuel 8 in the IRVM2

1 Samuel 8 in the IRVO

1 Samuel 8 in the IRVP

1 Samuel 8 in the IRVT

1 Samuel 8 in the IRVT2

1 Samuel 8 in the IRVU

1 Samuel 8 in the ISVN

1 Samuel 8 in the JSNT

1 Samuel 8 in the KAPI

1 Samuel 8 in the KBT1ETNIK

1 Samuel 8 in the KBV

1 Samuel 8 in the KJV

1 Samuel 8 in the KNFD

1 Samuel 8 in the LBA

1 Samuel 8 in the LBLA

1 Samuel 8 in the LNT

1 Samuel 8 in the LSV

1 Samuel 8 in the MAAL

1 Samuel 8 in the MBV

1 Samuel 8 in the MBV2

1 Samuel 8 in the MHNT

1 Samuel 8 in the MKNFD

1 Samuel 8 in the MNG

1 Samuel 8 in the MNT

1 Samuel 8 in the MNT2

1 Samuel 8 in the MRS1T

1 Samuel 8 in the NAA

1 Samuel 8 in the NASB

1 Samuel 8 in the NBLA

1 Samuel 8 in the NBS

1 Samuel 8 in the NBVTP

1 Samuel 8 in the NET2

1 Samuel 8 in the NIV11

1 Samuel 8 in the NNT

1 Samuel 8 in the NNT2

1 Samuel 8 in the NNT3

1 Samuel 8 in the PDDPT

1 Samuel 8 in the PFNT

1 Samuel 8 in the RMNT

1 Samuel 8 in the SBIAS

1 Samuel 8 in the SBIBS

1 Samuel 8 in the SBIBS2

1 Samuel 8 in the SBICS

1 Samuel 8 in the SBIDS

1 Samuel 8 in the SBIGS

1 Samuel 8 in the SBIHS

1 Samuel 8 in the SBIIS

1 Samuel 8 in the SBIIS2

1 Samuel 8 in the SBIIS3

1 Samuel 8 in the SBIKS

1 Samuel 8 in the SBIKS2

1 Samuel 8 in the SBIMS

1 Samuel 8 in the SBIOS

1 Samuel 8 in the SBIPS

1 Samuel 8 in the SBISS

1 Samuel 8 in the SBITS

1 Samuel 8 in the SBITS2

1 Samuel 8 in the SBITS3

1 Samuel 8 in the SBITS4

1 Samuel 8 in the SBIUS

1 Samuel 8 in the SBIVS

1 Samuel 8 in the SBT

1 Samuel 8 in the SBT1E

1 Samuel 8 in the SCHL

1 Samuel 8 in the SNT

1 Samuel 8 in the SUSU

1 Samuel 8 in the SUSU2

1 Samuel 8 in the SYNO

1 Samuel 8 in the TBIAOTANT

1 Samuel 8 in the TBT1E

1 Samuel 8 in the TBT1E2

1 Samuel 8 in the TFTIP

1 Samuel 8 in the TFTU

1 Samuel 8 in the TGNTATF3T

1 Samuel 8 in the THAI

1 Samuel 8 in the TNFD

1 Samuel 8 in the TNT

1 Samuel 8 in the TNTIK

1 Samuel 8 in the TNTIL

1 Samuel 8 in the TNTIN

1 Samuel 8 in the TNTIP

1 Samuel 8 in the TNTIZ

1 Samuel 8 in the TOMA

1 Samuel 8 in the TTENT

1 Samuel 8 in the UBG

1 Samuel 8 in the UGV

1 Samuel 8 in the UGV2

1 Samuel 8 in the UGV3

1 Samuel 8 in the VBL

1 Samuel 8 in the VDCC

1 Samuel 8 in the YALU

1 Samuel 8 in the YAPE

1 Samuel 8 in the YBVTP

1 Samuel 8 in the ZBP