2 Samuel 1 (BOKCV2)

1 ಸೌಲನ ಮರಣದ ತರುವಾಯ ದಾವೀದನು ಅಮಾಲೇಕ್ಯರನ್ನು ಸಂಹರಿಸಿ, ಚಿಕ್ಲಗಿಗೆ ತಿರುಗಿಬಂದು, ಎರಡು ದಿವಸ ಅಲ್ಲಿ ಇದ್ದ ತರುವಾಯ, 2 ಮೂರನೆಯ ದಿನದಲ್ಲಿ ಒಬ್ಬನು ತನ್ನ ವಸ್ತ್ರಗಳನ್ನು ಹರಿದುಕೊಂಡು, ತನ್ನ ತಲೆಯ ಮೇಲೆ ಮಣ್ಣು ಹಾಕಿಕೊಂಡು, ಸೌಲನ ಪಾಳೆಯದಿಂದ ಹೊರಟು ದಾವೀದನ ಬಳಿಗೆ ಬಂದು, ನೆಲದ ಮಟ್ಟಿಗೂ ಬಾಗಿ ನಮಸ್ಕರಿಸಿದನು. 3 ದಾವೀದನು ಅವನಿಗೆ, “ನೀನು ಎಲ್ಲಿಂದ ಬಂದೆ?” ಎಂದನು.ಅದಕ್ಕವನು, “ಇಸ್ರಾಯೇಲಿನ ಪಾಳೆಯದಿಂದ ತಪ್ಪಿಸಿಕೊಂಡು ಬಂದೆನು,” ಎಂದನು. 4 ದಾವೀದನು ಅವನಿಗೆ, “ನಡೆದ ವರ್ತಮಾನವೇನು? ನೀನು ನನಗೆ ತಿಳಿಸು,” ಎಂದನು.ಅವನು, “ಜನರು ಯುದ್ಧದಿಂದ ಓಡಿಹೋದರು. ಜನರಲ್ಲಿ ಅನೇಕರು ಸತ್ತರು. ಸೌಲನೂ, ಅವನ ಮಗ ಯೋನಾತಾನನೂ ಸತ್ತರು,” ಎಂದನು. 5 ದಾವೀದನು ತನಗೆ ವರ್ತಮಾನ ಹೇಳಿದ ಯುವಕನಿಗೆ, “ಸೌಲನೂ, ಅವನ ಮಗ ಯೋನಾತಾನನೂ ಸತ್ತರೆಂದು ನಿನಗೆ ಹೇಗೆ ತಿಳಿಯಿತು?” ಎಂದು ಪ್ರಶ್ನಿಸಿದನು. 6 ಆಗ ಅವನು, “ನಾನು ಅಕಸ್ಮಾತ್ತಾಗಿ ಗಿಲ್ಬೋವ ಬೆಟ್ಟಕ್ಕೆ ಹೋಗಿದ್ದೆನು. ಅಲ್ಲಿ ಸೌಲನು ತನ್ನ ಈಟಿಯನ್ನು ಊರಿಕೊಂಡು ನಿಂತಿದ್ದನು. ಆಗ ರಥಗಳೂ ರಾಹುತರೂ ಅವನನ್ನು ಹಿಂದಟ್ಟಿಕೊಂಡೇ ಇದ್ದರು. 7 ಅವನು ಹಿಂದಕ್ಕೆ ತಿರುಗಿ ನೋಡಿ, ನನ್ನನ್ನು ಕಂಡು ಕರೆದನು. ಆಗ ನಾನು, ‘ಇದ್ದೇನೆ,’ ಎಂದೆನು. 8 “ಆಗ ಅವನು, ‘ನೀನ್ಯಾರು?’ ಎಂದು ಕೇಳಿದನು.“ ‘ನಾನು ಒಬ್ಬ ಅಮಾಲೇಕ್ಯನು,’ ಎಂದು ಉತ್ತರಕೊಟ್ಟೆನು. 9 “ಅವನು ನನಗೆ, ‘ನೀನು ದಯಮಾಡಿ ನನ್ನ ಮೇಲೆ ನಿಂತು ನನ್ನನ್ನು ಕೊಂದುಹಾಕು. ಏಕೆಂದರೆ ನನ್ನ ಪ್ರಾಣವು ಇನ್ನೂ ನನ್ನಲ್ಲಿ ಪೂರ್ಣವಾಗಿರುವುದರಿಂದ ಸಂಕಟವು ನನ್ನನ್ನು ಹಿಡಿದಿದೆ,’ ಎಂದನು. 10 “ಆದ್ದರಿಂದ ಅವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು, ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ತೋಳಿನಲ್ಲಿದ್ದ ಬಳೆಯನ್ನೂ ತೆಗೆದುಕೊಂಡು, ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದಿದ್ದೇನೆ,” ಎಂದನು. 11 ಆಗ ದಾವೀದನೂ, ಅವನ ಸಂಗಡ ಇದ್ದ ಸಮಸ್ತ ಜನರೂ ತಮ್ಮ ವಸ್ತ್ರಗಳನ್ನು ಹರಿದುಕೊಂಡು, 12 ಸೌಲನೂ, ಅವನ ಮಗನಾದ ಯೋನಾತಾನನೂ ಇಸ್ರಾಯೇಲಿನ ಮನೆಯವರೂ ಯೆಹೋವ ದೇವರ ಜನರೂ ಖಡ್ಗದಿಂದ ಬಿದ್ದ ಕಾರಣ, ಅವರಿಗೋಸ್ಕರ ಗೋಳಾಡಿ ಅತ್ತು, ಅಸ್ತಮಾನದವರೆಗೂ ಉಪವಾಸವಾಗಿದ್ದರು. 13 ದಾವೀದನು ತನಗೆ ವರ್ತಮಾನ ತಿಳಿಸಿದ ಯುವಕನನ್ನು, “ನೀನು ಎಲ್ಲಿಯವನು?” ಎಂದು ಕೇಳಿದನು.ಅವನು, “ನಾನು ವಿದೇಶಿಯ ಮಗನಾದ ಅಮಾಲೇಕ್ಯನು,” ಎಂದನು. 14 ಆಗ ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಸಂಹರಿಸಲು ನಿನ್ನ ಕೈ ಎತ್ತುವುದಕ್ಕೆ ಯಾಕೆ ಭಯಪಡಲಿಲ್ಲ?” ಎಂದು ಕೇಳಿದನು. 15 ಯುವಕರಲ್ಲಿ ಒಬ್ಬನನ್ನು ಕರೆದು, “ನೀನು ಇವನನ್ನು ಕೊಲ್ಲು,” ಎಂದನು. ಹಾಗೆಯೇ ಅವನು ಅವನನ್ನು ಹೊಡೆದು ಕೊಂದನು. 16 ದಾವೀದನು ಅವನಿಗೆ, “ಯೆಹೋವ ದೇವರ ಅಭಿಷಿಕ್ತನನ್ನು ಕೊಂದುಹಾಕಿದೆನೆಂದು ನಿನ್ನ ಬಾಯಿ ನಿನಗೆ ವಿರೋಧವಾಗಿ ಸಾಕ್ಷಿ ಹೇಳಿದ್ದರಿಂದ, ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರಲಿ,” ಎಂದನು. 17 ಆಗ ದಾವೀದನು ಸೌಲನ ಮೇಲೆಯೂ, ಅವನ ಮಗ ಯೋನಾತಾನನ ಮೇಲೆಯೂ ಶೋಕದಿಂದ ಈ ಗೀತೆ ಹಾಡಿ ಗೋಳಾಡಿದನು. 18 ಇದಲ್ಲದೆ ದಾವೀದನು ಬಿಲ್ಲೆ ಎಂಬ ಗೀತೆಯನ್ನು ಯೆಹೂದ್ಯರಿಗೆ ಕಲಿಸಬೇಕೆಂದು ಹೇಳಿದನು. ಇದು ಯಾಷಾರನ ಗ್ರಂಥದಲ್ಲಿ ಬರೆಯಲಾಗಿದೆ: 19 “ಇಸ್ರಾಯೇಲೇ, ನಿನ್ನ ಮಹಿಮೆಯು ನಿನ್ನ ಬೆಟ್ಟಗಳ ಮೇಲೆ ಕೊಲೆಯಾಗಿ ಬಿದ್ದಿದೆ.ಪರಾಕ್ರಮಶಾಲಿಗಳು ಹೇಗೆ ಬಿದ್ದರು! 20 “ಗತ್ ಊರಿನಲ್ಲಿ ಇದನ್ನು ತಿಳಿಸಬೇಡಿರಿ.ಅಷ್ಕೆಲೋನಿನ ಬೀದಿಗಳಲ್ಲಿ ಸಾರಬೇಡಿರಿ.ಫಿಲಿಷ್ಟಿಯರ ಪುತ್ರಿಯರು ಸಂತೋಷಪಡಬಾರದು;ಸುನ್ನತಿ ಇಲ್ಲದವರ ಪುತ್ರಿಯರು ಉತ್ಸಾಹಪಡಬಾರದು. 21 “ಗಿಲ್ಬೋವ ಬೆಟ್ಟಗಳೇ,ನಿಮ್ಮ ಮೇಲೆ ಮಂಜೂ ಮಳೆಯೂ ಬೀಳದೆ ಇರಲಿ,ನೈವೇದ್ಯಕ್ಕಾಗಿ ಫಲಿಸುವ ಹೊಲಗಳೂ ಇಲ್ಲದೆ ಹೋಗಲಿ.ಅಲ್ಲಿ ಪರಾಕ್ರಮಶಾಲಿಗಳ ಗುರಾಣಿಯೂ ಅವಮಾನಗೊಂಡು ಬಿದ್ದವು.ಸೌಲನ ಗುರಾಣಿಯೂ ಎಣ್ಣೆಯಿಂದ ಅಭಿಷಿಕ್ತನಲ್ಲದವನ ಗುರಾಣಿಯಂತೆ ಆಯಿತು. 22 “ಹತರಾದವರ ರಕ್ತದಿಂದಲೂ,ಯೋನಾತಾನನ ಬಿಲ್ಲುಹಿಂದಕ್ಕೆ ತಿರುಗಲಿಲ್ಲ.ಸೌಲನ ಖಡ್ಗ ತೃಪ್ತಿಗೊಳ್ಳದೆ ತಿರುಗಿ ಬರಲಿಲ್ಲ. 23 ಸೌಲನೂ ಯೋನಾತಾನನೂಜೀವದಿಂದಿದ್ದಾಗ ಪ್ರಿಯಕರವಾಗಿಯೂ,ಸಂತೋಷಕರವಾಗಿಯೂ ಇದ್ದರು.ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು.ಅವರು ಹದ್ದುಗಳಿಗಿಂತ ವೇಗವುಳ್ಳವರೂ, ಸಿಂಹಗಳಿಗಿಂತ ಬಲವುಳ್ಳವರೂ ಆಗಿದ್ದರು. 24 “ಇಸ್ರಾಯೇಲಿನ ಪುತ್ರಿಯರೇ,ಸೌಲನಿಗೋಸ್ಕರ ಅಳಿರಿ.ನಿಮಗೆ ರಕ್ತಾಂಬರವನ್ನು ಸಂಭ್ರಮವಾಗಿ ತೊಡಿಸಿದನಲ್ಲಾ.ನಿಮ್ಮ ಉಡುಗೆಗಳ ಮೇಲೆ ಚಿನ್ನದ ಆಭರಣಗಳನ್ನು ಧರಿಸುವಂತೆ ಮಾಡಿದನಲ್ಲಾ. 25 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ.ಯೋನಾತಾನನೇ, ನೀನು ಉನ್ನತ ಸ್ಥಳಗಳಲ್ಲಿ ಹತನಾಗಿ ಬಿದ್ದಿರುವಿ. 26 ನನ್ನ ಸಹೋದರನಾದ ಯೋನಾತಾನನೇ,ನಾನು ನಿನಗೋಸ್ಕರ ಶೋಕಿಸುತ್ತೇನೆ. ನೀನು ನನಗೆ ಬಹಳ ಮನೋಹರನಾಗಿದ್ದಿ.ನಿನ್ನ ಪ್ರೀತಿ ನನ್ನ ಮೇಲೆ ಆಶ್ಚರ್ಯಕರವಾಗಿತ್ತು.ಅದು ಸ್ತ್ರೀಯರ ಪ್ರೀತಿಗಿಂತ ಅಧಿಕವಾದದ್ದು. 27 “ಹೇಗೆ ಪರಾಕ್ರಮಶಾಲಿಗಳು ಯುದ್ಧದಲ್ಲಿ ಬಿದ್ದಿದ್ದಾರೆ.ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.”

In Other Versions

2 Samuel 1 in the ANGEFD

2 Samuel 1 in the ANTPNG2D

2 Samuel 1 in the AS21

2 Samuel 1 in the BAGH

2 Samuel 1 in the BBPNG

2 Samuel 1 in the BBT1E

2 Samuel 1 in the BDS

2 Samuel 1 in the BEV

2 Samuel 1 in the BHAD

2 Samuel 1 in the BIB

2 Samuel 1 in the BLPT

2 Samuel 1 in the BNT

2 Samuel 1 in the BNTABOOT

2 Samuel 1 in the BNTLV

2 Samuel 1 in the BOATCB

2 Samuel 1 in the BOATCB2

2 Samuel 1 in the BOBCV

2 Samuel 1 in the BOCNT

2 Samuel 1 in the BOECS

2 Samuel 1 in the BOGWICC

2 Samuel 1 in the BOHCB

2 Samuel 1 in the BOHCV

2 Samuel 1 in the BOHLNT

2 Samuel 1 in the BOHNTLTAL

2 Samuel 1 in the BOICB

2 Samuel 1 in the BOILNTAP

2 Samuel 1 in the BOITCV

2 Samuel 1 in the BOKCV

2 Samuel 1 in the BOKHWOG

2 Samuel 1 in the BOKSSV

2 Samuel 1 in the BOLCB

2 Samuel 1 in the BOLCB2

2 Samuel 1 in the BOMCV

2 Samuel 1 in the BONAV

2 Samuel 1 in the BONCB

2 Samuel 1 in the BONLT

2 Samuel 1 in the BONUT2

2 Samuel 1 in the BOPLNT

2 Samuel 1 in the BOSCB

2 Samuel 1 in the BOSNC

2 Samuel 1 in the BOTLNT

2 Samuel 1 in the BOVCB

2 Samuel 1 in the BOYCB

2 Samuel 1 in the BPBB

2 Samuel 1 in the BPH

2 Samuel 1 in the BSB

2 Samuel 1 in the CCB

2 Samuel 1 in the CUV

2 Samuel 1 in the CUVS

2 Samuel 1 in the DBT

2 Samuel 1 in the DGDNT

2 Samuel 1 in the DHNT

2 Samuel 1 in the DNT

2 Samuel 1 in the ELBE

2 Samuel 1 in the EMTV

2 Samuel 1 in the ESV

2 Samuel 1 in the FBV

2 Samuel 1 in the FEB

2 Samuel 1 in the GGMNT

2 Samuel 1 in the GNT

2 Samuel 1 in the HARY

2 Samuel 1 in the HNT

2 Samuel 1 in the IRVA

2 Samuel 1 in the IRVB

2 Samuel 1 in the IRVG

2 Samuel 1 in the IRVH

2 Samuel 1 in the IRVK

2 Samuel 1 in the IRVM

2 Samuel 1 in the IRVM2

2 Samuel 1 in the IRVO

2 Samuel 1 in the IRVP

2 Samuel 1 in the IRVT

2 Samuel 1 in the IRVT2

2 Samuel 1 in the IRVU

2 Samuel 1 in the ISVN

2 Samuel 1 in the JSNT

2 Samuel 1 in the KAPI

2 Samuel 1 in the KBT1ETNIK

2 Samuel 1 in the KBV

2 Samuel 1 in the KJV

2 Samuel 1 in the KNFD

2 Samuel 1 in the LBA

2 Samuel 1 in the LBLA

2 Samuel 1 in the LNT

2 Samuel 1 in the LSV

2 Samuel 1 in the MAAL

2 Samuel 1 in the MBV

2 Samuel 1 in the MBV2

2 Samuel 1 in the MHNT

2 Samuel 1 in the MKNFD

2 Samuel 1 in the MNG

2 Samuel 1 in the MNT

2 Samuel 1 in the MNT2

2 Samuel 1 in the MRS1T

2 Samuel 1 in the NAA

2 Samuel 1 in the NASB

2 Samuel 1 in the NBLA

2 Samuel 1 in the NBS

2 Samuel 1 in the NBVTP

2 Samuel 1 in the NET2

2 Samuel 1 in the NIV11

2 Samuel 1 in the NNT

2 Samuel 1 in the NNT2

2 Samuel 1 in the NNT3

2 Samuel 1 in the PDDPT

2 Samuel 1 in the PFNT

2 Samuel 1 in the RMNT

2 Samuel 1 in the SBIAS

2 Samuel 1 in the SBIBS

2 Samuel 1 in the SBIBS2

2 Samuel 1 in the SBICS

2 Samuel 1 in the SBIDS

2 Samuel 1 in the SBIGS

2 Samuel 1 in the SBIHS

2 Samuel 1 in the SBIIS

2 Samuel 1 in the SBIIS2

2 Samuel 1 in the SBIIS3

2 Samuel 1 in the SBIKS

2 Samuel 1 in the SBIKS2

2 Samuel 1 in the SBIMS

2 Samuel 1 in the SBIOS

2 Samuel 1 in the SBIPS

2 Samuel 1 in the SBISS

2 Samuel 1 in the SBITS

2 Samuel 1 in the SBITS2

2 Samuel 1 in the SBITS3

2 Samuel 1 in the SBITS4

2 Samuel 1 in the SBIUS

2 Samuel 1 in the SBIVS

2 Samuel 1 in the SBT

2 Samuel 1 in the SBT1E

2 Samuel 1 in the SCHL

2 Samuel 1 in the SNT

2 Samuel 1 in the SUSU

2 Samuel 1 in the SUSU2

2 Samuel 1 in the SYNO

2 Samuel 1 in the TBIAOTANT

2 Samuel 1 in the TBT1E

2 Samuel 1 in the TBT1E2

2 Samuel 1 in the TFTIP

2 Samuel 1 in the TFTU

2 Samuel 1 in the TGNTATF3T

2 Samuel 1 in the THAI

2 Samuel 1 in the TNFD

2 Samuel 1 in the TNT

2 Samuel 1 in the TNTIK

2 Samuel 1 in the TNTIL

2 Samuel 1 in the TNTIN

2 Samuel 1 in the TNTIP

2 Samuel 1 in the TNTIZ

2 Samuel 1 in the TOMA

2 Samuel 1 in the TTENT

2 Samuel 1 in the UBG

2 Samuel 1 in the UGV

2 Samuel 1 in the UGV2

2 Samuel 1 in the UGV3

2 Samuel 1 in the VBL

2 Samuel 1 in the VDCC

2 Samuel 1 in the YALU

2 Samuel 1 in the YAPE

2 Samuel 1 in the YBVTP

2 Samuel 1 in the ZBP