Daniel 10 (BOKCV2)
1 ಪಾರಸಿಯ ಅರಸ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದಲ್ಲಿ ಬೇಲ್ತೆಶಚ್ಚರನೆಂಬ ದಾನಿಯೇಲನಿಗೆ ಒಂದು ಪ್ರಕಟಣೆಯಾಯಿತು. ಅದರ ಸಂದೇಶವು ಸತ್ಯವಾದದ್ದು. ಅದು ಮಹಾ ಯುದ್ಧ ವಿಷಯವಾಗಿದೆ. ಸಂದೇಶದ ಅರ್ಥವು ಅವನಿಗೆ ಒಂದು ದರ್ಶನದಲ್ಲಿ ಬಂದಿತು. 2 ಆ ಸಮಯದಲ್ಲಿ ದಾನಿಯೇಲನೆಂಬ ನಾನು, ಮೂರು ವಾರಗಳವರೆಗೂ ದುಃಖಪಡುತ್ತಿದ್ದೆನು. 3 ಆ ಮೂರು ವಾರಗಳು ಕಳೆಯುವವರೆಗೂ, ನಾನು ರುಚಿಕರವಾದ ರೊಟ್ಟಿಯನ್ನು ತಿನ್ನಲಿಲ್ಲ. ಮಾಂಸವನ್ನಾದರೂ, ದ್ರಾಕ್ಷಾರಸವನ್ನಾದರೂ ನನ್ನ ಬಾಯಿಗೆ ಮುಟ್ಟಿಸಲಿಲ್ಲ. ನಾನು ಎಣ್ಣೆಯನ್ನು ಹಚ್ಚಿಕೊಳ್ಳಲೇ ಇಲ್ಲ. 4 ಮೊದಲನೆಯ ತಿಂಗಳಿನ ಇಪ್ಪತ್ತನಾಲ್ಕನೆಯ ದಿನದಲ್ಲಿ, ನಾನು ಟೈಗ್ರಿಸ್ ಎಂಬ ಮಹಾನದಿಯ ದಡದ ಮೇಲೆ ಇರುವಾಗ, 5 ನಾನು ನನ್ನ ಕಣ್ಣುಗಳನ್ನೆತ್ತಿ ಮೇಲಕ್ಕೆ ನೋಡಿದೆನು. ಆಗ, ನಾರುಮಡಿಯನ್ನು ಧರಿಸಿದ್ದ ಒಬ್ಬ ಮನುಷ್ಯನನ್ನು ಕಂಡೆನು. ಆತನ ನಡುವು ಊಫಜಿನ ಅತ್ಯುತ್ತಮ ಬಂಗಾರದಿಂದ ಬಿಗಿದಿತ್ತು. 6 ಆತನ ದೇಹವು ಪೀತರತ್ನದ ಹಾಗೆಯೂ, ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ, ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ; ಆತನ ಮಾತುಗಳ ಶಬ್ದವು, ಜನಸಮೂಹದ ಸಪ್ಪಳದ ಹಾಗೆಯೂ ಇದ್ದವು. 7 ದಾನಿಯೇಲನೆಂಬ ನಾನು ಒಬ್ಬನೇ ಆ ದರ್ಶನವನ್ನು ನೋಡಿದೆನು. ನನ್ನ ಸಂಗಡವಿದ್ದ ಜನರು ಆ ದರ್ಶನವನ್ನು ನೋಡಲಿಲ್ಲ. ಆದರೆ ಅವರು ಭಯಭ್ರಾಂತರಾಗಿ ಓಡಿಹೋಗಿ ಅಡಗಿಕೊಂಡರು. 8 ನಾನು ಒಬ್ಬನೇ ಉಳಿದು, ಈ ಅದ್ಭುತ ದರ್ಶನವನ್ನು ನೋಡಿದೆನು. ನನ್ನಲ್ಲಿ ತ್ರಾಣವು ಇರಲಿಲ್ಲ. ನನ್ನ ಮುಖವು ನನ್ನಲ್ಲಿ ಕುಂದಿಹೋಯಿತು. ನನಗೆ ತ್ರಾಣವು ಇಲ್ಲದೆ ಹೋಯಿತು. 9 ಆದರೂ ನಾನು ಆತನ ಮಾತುಗಳ ಧ್ವನಿಯನ್ನು ಕೇಳಿದೆನು. ಆತನ ಮಾತುಗಳ ಧ್ವನಿಯನ್ನು ಕೇಳಿದಾಗ, ಮುಖ ಕೆಳಗೆಮಾಡಿ ಗಾಢನಿದ್ರೆಯಲ್ಲಿದ್ದೆನು. ನನ್ನ ಮುಖ ನೆಲದ ಕಡೆ ಇತ್ತು. 10 ಒಂದು ಕೈ ನನ್ನನ್ನು ಮುಟ್ಟಿ, ನನ್ನ ಮೊಣಕಾಲುಗಳೂ, ನನ್ನ ಅಂಗೈಗಳೂ ನಡುಗುವಂತೆ ಮಾಡಿತು. 11 ಆತನು ನನಗೆ, “ದಾನಿಯೇಲನೇ, ಅತಿ ಪ್ರಿಯನಾದ ಮನುಷ್ಯನೇ, ನಾನು ನಿನಗೆ ಹೇಳುವ ಮಾತುಗಳನ್ನು ತಿಳಿದುಕೊಂಡು ಸ್ಥಿರವಾಗಿ ನಿಲ್ಲು. ಏಕೆಂದರೆ ನಾನು ಈಗ ನಿನ್ನ ಬಳಿಗೆ ಕಳುಹಿಸಲಾಗಿದ್ದೇನೆ,” ಎಂದು ಹೇಳಿದನು. ಅವನು ಈ ಮಾತನ್ನು ಹೇಳಿದ ಮೇಲೆ, ನಾನು ನಡುಗುತ್ತಲೇ ನಿಂತೆನು. 12 ಆಗ ಅವನು ನನಗೆ, “ದಾನಿಯೇಲನೇ, ನೀನು ಭಯಪಡಬೇಡ. ಏಕೆಂದರೆ ನೀನು ತಿಳಿದುಕೊಳ್ಳುವುದಕ್ಕೂ, ನಿನ್ನ ದೇವರ ಮುಂದೆ ನಿನ್ನನ್ನು ತಗ್ಗಿಸಿಕೊಳ್ಳುವುದಕ್ಕೂ ಮನಸ್ಸಿಟ್ಟ ಮೊದಲನೆಯ ದಿನದಲ್ಲಿಯೇ ನಿನ್ನ ಪ್ರಾರ್ಥನೆಯು ದೇವರಿಗೆ ಮುಟ್ಟಿತು. ಆ ನಿನ್ನ ಮಾತುಗಳ ನಿಮಿತ್ತವಾಗಿಯೇ ನಾನು ಬಂದಿದ್ದೇನೆ. 13 ಆದರೆ ಪಾರಸಿಯ ರಾಜ್ಯದ ರಾಜಪುತ್ರನು ಇಪ್ಪತ್ತೊಂದು ದಿನ ನನ್ನನ್ನು ಎದುರಿಸಿ ನಿಂತನು. ಆದರೆ ಮುಖ್ಯ ಪ್ರಭುಗಳಲ್ಲಿ ಒಬ್ಬನಾದ ಮೀಕಾಯೇಲನು ನನ್ನ ಸಹಾಯಕ್ಕೆ ಬಂದನು. ಏಕೆಂದರೆ ನಾನು ಆ ಪಾರಸಿಯ ಅರಸನಿಂದ ತಡೆಹಿಡಿಯಲಾಗಿದ್ದೆನು. 14 ನಿನ್ನ ಜನರಿಗೆ ಮುಂದಿನ ದಿನಗಳಲ್ಲಿ ಏನು ಸಂಭವಿಸುವುದು ಎಂಬುದನ್ನು ತಿಳಿಸುವುದಕ್ಕೋಸ್ಕರ ನಾನೀಗ ಬಂದಿದ್ದೇನೆ. ಏಕೆಂದರೆ ದರ್ಶನವು ಮುಂದೆ ಬರಲಿಕ್ಕಿರುವ ಸಮಯವನ್ನು ಕುರಿತಾಗಿರುತ್ತದೆ,” ಎಂದನು. 15 ಅವನು ನನಗೆ ಈ ಮಾತುಗಳನ್ನು ಹೇಳುತ್ತಿದ್ದಾಗ, ನಾನು ನನ್ನ ಮುಖವನ್ನು ನೆಲದ ಕಡೆಗೆ ತಿರುಗಿಸಿ ಸುಮ್ಮನಿದ್ದೆನು. 16 ಆಗ ಮಾನವನಂತೆ ಇರುವ ಒಬ್ಬನು ನನ್ನ ತುಟಿಗಳನ್ನು ಮುಟ್ಟಿದನು. ನಾನು ಬಾಯಿತೆರೆದು ಮಾತನಾಡಿ, ನನ್ನ ಮುಂದೆ ನಿಂತಿದ್ದವನಿಗೆ, “ನನ್ನ ಒಡೆಯನೇ, ಆ ದರ್ಶನದ ನಿಮಿತ್ತ, ನನ್ನ ಸಂಕಟಗಳು ನನ್ನ ಮೇಲೆ ತಿರುಗಿಕೊಂಡಿವೆ, ನಾನು ನಿತ್ರಾಣನಾಗಿದ್ದೇನೆ. 17 ನನ್ನ ಒಡೆಯನ ದಾಸನಾದ ನನ್ನಂಥವನು ನನ್ನ ಒಡೆಯನಾದ ತಮ್ಮಂಥವರ ಸಂಗಡ ಹೇಗೆ ಮಾತಾಡಬಹುದು? ನನ್ನ ತ್ರಾಣವು ನನ್ನಲ್ಲಿ ಉಳಿಯಲಿಲ್ಲ, ಉಸಿರಾಡಿಸಲೂ ಆಗದು.” 18 ಆಮೇಲೆ ಪುನಃ ಮನುಷ್ಯನಂತಿದ್ದ ಒಬ್ಬ ನನ್ನನ್ನು ಬಲಪಡಿಸಿ, 19 “ಅತಿ ಪ್ರಿಯನೇ, ಭಯಪಡಬೇಡ, ನಿನಗೆ ಸಮಾಧಾನವಾಗಲಿ, ಬಲವಾಗಿರು, ಈಗ ಬಲಶಾಲಿಯಾಗಿರು,” ಎಂದನು.ಅವನು ನನ್ನ ಸಂಗಡ ಮಾತನಾಡಿದಾಗ ನಾನು ಬಲವನ್ನು ಹೊಂದಿ, “ನನ್ನ ಒಡೆಯನೇ ಮಾತನಾಡು, ನೀನು ನನ್ನನ್ನು ಬಲಪಡಿಸಿದ್ದೀ,” ಎಂದು ಹೇಳಿದೆನು. 20 ಅವನು, “ನಾನು ನಿನ್ನ ಹತ್ತಿರ ಬಂದ ಕಾರಣವು ನಿನಗೆ ತಿಳಿಯಿತೇ. ಈಗ ನಾನು ಪಾರಸಿಯದ ರಾಜಪುತ್ರನ ಸಂಗಡ ಯುದ್ಧಮಾಡಲು ಹಿಂದಿರುಗಬೇಕು. ನಾನು ಹೋದ ಮೇಲೆ, ಗ್ರೀಕಿನ ರಾಜಕುಮಾರನು ಬರುವನು. 21 ಆದರೆ ಸತ್ಯ ಗ್ರಂಥದಲ್ಲಿ ಲಿಖಿತವಾದದ್ದನ್ನು ಈಗ ನಿನಗೆ ತಿಳಿಸುತ್ತೇನೆ. ನಿಮ್ಮ ರಾಜಕುಮಾರನಾದ ಮೀಕಾಯೇಲನ ಹೊರತು ಮತ್ತೆ ಯಾರೂ ಅವರಿಗೆ ವಿರೋಧವಾಗಿ ನನಗೆ ಸಹಕಾರ ಕೊಡುವುದಿಲ್ಲ.”
In Other Versions
Daniel 10 in the ANGEFD
Daniel 10 in the ANTPNG2D
Daniel 10 in the AS21
Daniel 10 in the BAGH
Daniel 10 in the BBPNG
Daniel 10 in the BBT1E
Daniel 10 in the BDS
Daniel 10 in the BEV
Daniel 10 in the BHAD
Daniel 10 in the BIB
Daniel 10 in the BLPT
Daniel 10 in the BNT
Daniel 10 in the BNTABOOT
Daniel 10 in the BNTLV
Daniel 10 in the BOATCB
Daniel 10 in the BOATCB2
Daniel 10 in the BOBCV
Daniel 10 in the BOCNT
Daniel 10 in the BOECS
Daniel 10 in the BOGWICC
Daniel 10 in the BOHCB
Daniel 10 in the BOHCV
Daniel 10 in the BOHLNT
Daniel 10 in the BOHNTLTAL
Daniel 10 in the BOICB
Daniel 10 in the BOILNTAP
Daniel 10 in the BOITCV
Daniel 10 in the BOKCV
Daniel 10 in the BOKHWOG
Daniel 10 in the BOKSSV
Daniel 10 in the BOLCB
Daniel 10 in the BOLCB2
Daniel 10 in the BOMCV
Daniel 10 in the BONAV
Daniel 10 in the BONCB
Daniel 10 in the BONLT
Daniel 10 in the BONUT2
Daniel 10 in the BOPLNT
Daniel 10 in the BOSCB
Daniel 10 in the BOSNC
Daniel 10 in the BOTLNT
Daniel 10 in the BOVCB
Daniel 10 in the BOYCB
Daniel 10 in the BPBB
Daniel 10 in the BPH
Daniel 10 in the BSB
Daniel 10 in the CCB
Daniel 10 in the CUV
Daniel 10 in the CUVS
Daniel 10 in the DBT
Daniel 10 in the DGDNT
Daniel 10 in the DHNT
Daniel 10 in the DNT
Daniel 10 in the ELBE
Daniel 10 in the EMTV
Daniel 10 in the ESV
Daniel 10 in the FBV
Daniel 10 in the FEB
Daniel 10 in the GGMNT
Daniel 10 in the GNT
Daniel 10 in the HARY
Daniel 10 in the HNT
Daniel 10 in the IRVA
Daniel 10 in the IRVB
Daniel 10 in the IRVG
Daniel 10 in the IRVH
Daniel 10 in the IRVK
Daniel 10 in the IRVM
Daniel 10 in the IRVM2
Daniel 10 in the IRVO
Daniel 10 in the IRVP
Daniel 10 in the IRVT
Daniel 10 in the IRVT2
Daniel 10 in the IRVU
Daniel 10 in the ISVN
Daniel 10 in the JSNT
Daniel 10 in the KAPI
Daniel 10 in the KBT1ETNIK
Daniel 10 in the KBV
Daniel 10 in the KJV
Daniel 10 in the KNFD
Daniel 10 in the LBA
Daniel 10 in the LBLA
Daniel 10 in the LNT
Daniel 10 in the LSV
Daniel 10 in the MAAL
Daniel 10 in the MBV
Daniel 10 in the MBV2
Daniel 10 in the MHNT
Daniel 10 in the MKNFD
Daniel 10 in the MNG
Daniel 10 in the MNT
Daniel 10 in the MNT2
Daniel 10 in the MRS1T
Daniel 10 in the NAA
Daniel 10 in the NASB
Daniel 10 in the NBLA
Daniel 10 in the NBS
Daniel 10 in the NBVTP
Daniel 10 in the NET2
Daniel 10 in the NIV11
Daniel 10 in the NNT
Daniel 10 in the NNT2
Daniel 10 in the NNT3
Daniel 10 in the PDDPT
Daniel 10 in the PFNT
Daniel 10 in the RMNT
Daniel 10 in the SBIAS
Daniel 10 in the SBIBS
Daniel 10 in the SBIBS2
Daniel 10 in the SBICS
Daniel 10 in the SBIDS
Daniel 10 in the SBIGS
Daniel 10 in the SBIHS
Daniel 10 in the SBIIS
Daniel 10 in the SBIIS2
Daniel 10 in the SBIIS3
Daniel 10 in the SBIKS
Daniel 10 in the SBIKS2
Daniel 10 in the SBIMS
Daniel 10 in the SBIOS
Daniel 10 in the SBIPS
Daniel 10 in the SBISS
Daniel 10 in the SBITS
Daniel 10 in the SBITS2
Daniel 10 in the SBITS3
Daniel 10 in the SBITS4
Daniel 10 in the SBIUS
Daniel 10 in the SBIVS
Daniel 10 in the SBT
Daniel 10 in the SBT1E
Daniel 10 in the SCHL
Daniel 10 in the SNT
Daniel 10 in the SUSU
Daniel 10 in the SUSU2
Daniel 10 in the SYNO
Daniel 10 in the TBIAOTANT
Daniel 10 in the TBT1E
Daniel 10 in the TBT1E2
Daniel 10 in the TFTIP
Daniel 10 in the TFTU
Daniel 10 in the TGNTATF3T
Daniel 10 in the THAI
Daniel 10 in the TNFD
Daniel 10 in the TNT
Daniel 10 in the TNTIK
Daniel 10 in the TNTIL
Daniel 10 in the TNTIN
Daniel 10 in the TNTIP
Daniel 10 in the TNTIZ
Daniel 10 in the TOMA
Daniel 10 in the TTENT
Daniel 10 in the UBG
Daniel 10 in the UGV
Daniel 10 in the UGV2
Daniel 10 in the UGV3
Daniel 10 in the VBL
Daniel 10 in the VDCC
Daniel 10 in the YALU
Daniel 10 in the YAPE
Daniel 10 in the YBVTP
Daniel 10 in the ZBP