Deuteronomy 15 (BOKCV2)

1 ಪ್ರತಿ ಏಳು ವರ್ಷಗಳ ಅಂತ್ಯದಲ್ಲಿ ಎಲ್ಲರ ಸಾಲಗಳನ್ನೂ ಮನ್ನಾಮಾಡಬೇಕು. 2 ನೀವು ಮಾಡಬೇಕಾದ ಕ್ರಮವೇನೆಂದರೆ: ಸಾಲ ಕೊಟ್ಟವರೆಲ್ಲರೂ ತಮ್ಮ ನೆರೆಯವರಾದ ಇಸ್ರಾಯೇಲರಿಗೆ ಕೊಟ್ಟ ಸಾಲವನ್ನು ಬಿಟ್ಟುಬಿಡಬೇಕು. ಅದು ಯೆಹೋವ ದೇವರ ಬಿಡುಗಡೆಯ ವರ್ಷ ಎಂದು ಪ್ರಕಟವಾಗಿರುವುದರಿಂದ ತನ್ನ ನೆರೆಯವನಿಂದಲೂ, ತನ್ನ ಸಹೋದರನಿಂದಲೂ ಸಾಲವನ್ನು ಕೇಳಬಾರದು. 3 ಅನ್ಯದೇಶದವರಿಂದ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದು. ಆದರೆ ಸ್ವದೇಶದವನಾದ ನಿಮ್ಮ ಸಹೋದರರು ಕೊಡಬೇಕಾದ ಸಾಲವನ್ನು ನೀವು ಮನ್ನಾಮಾಡಬೇಕು. 4 ಏಕೆಂದರೆ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸ್ವಾಧೀನಪಡಿಸಿಕೊಳ್ಳುವುದಕ್ಕೆ ಸೊತ್ತಾಗಿ ಕೊಡುವ ದೇಶದಲ್ಲಿ ಯೆಹೋವ ದೇವರು ನಿಮ್ಮನ್ನು ಬಹಳವಾಗಿ ಆಶೀರ್ವದಿಸುವರು. ಹೀಗಾಗಿ ನಿಮ್ಮಲ್ಲಿ ಬಡವರೇ ಇರುವುದಿಲ್ಲ. 5 ನೀವು ನಿಮ್ಮ ದೇವರಾದ ಯೆಹೋವ ದೇವರ ವಾಕ್ಯವನ್ನು ಎಚ್ಚರಿಕೆಯಿಂದ ಕೇಳಿ, ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಈ ಎಲ್ಲಾ ಆಜ್ಞೆಯನ್ನು ಕಾಪಾಡಿ ನಡೆಯಿರಿ. 6 ನಿಶ್ಚಯವಾಗಿ ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ವಾಗ್ದಾನ ಮಾಡಿದಂತೆ ನಿನ್ನನ್ನು ಆಶೀರ್ವದಿಸುವರು. ನೀವು ಸಾಲ ತೆಗೆದುಕೊಳ್ಳದೆ ಅನೇಕ ಜನಾಂಗಗಳಿಗೆ ಸಾಲ ಕೊಡುವಿರಿ. ಅನೇಕ ಜನಾಂಗಗಳನ್ನು ಆಳುವಿರಿ, ಅವರು ನಿಮ್ಮನ್ನು ಆಳುವುದಿಲ್ಲ. 7 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಡುವ ನಿಮ್ಮ ದೇಶದಲ್ಲಿ, ನಿಮ್ಮ ಸಹೋದರರಲ್ಲಿ ಬಡವರು ಇದ್ದರೆ, ನಿಮ್ಮ ಹೃದಯವನ್ನು ಕಠಿಣ ಮಾಡಿಕೊಳ್ಳಬೇಡಿರಿ. ನಿಮ್ಮ ಕೈಯನ್ನು ನಿಮ್ಮ ಬಡ ಸಹೋದರರಿಗೆ ಮುಚ್ಚಿಕೊಳ್ಳಬೇಡಿರಿ. 8 ನಿಮ್ಮ ಕೈಯನ್ನು ಅವನಿಗೆ ವಿಶಾಲವಾಗಿ ತೆರೆಯಬೇಕು. ಅವನಿಗೆ ಅಗತ್ಯವಾದಷ್ಟು ಕೊಡಬೇಕು. 9 “ಸಾಲ ಬಿಡುಗಡೆಯ ವರ್ಷವಾದ ಏಳನೆಯ ವರ್ಷವು ಸಮೀಪವಾಯಿತು,” ಎಂಬ ದುಷ್ಟ ಆಲೋಚನೆ ನಿಮ್ಮ ಹೃದಯದಲ್ಲಿ ಹುಟ್ಟಿ, ನಿಮ್ಮ ಬಡ ಸಹೋದರನ ಮೇಲೆ ಕಠಿಣವಾಗಿ, ನೀವು ಅವನಿಗೆ ಏನೂ ಕೊಡದೆ ಇರಬೇಡಿರಿ. ಅವನು ನಿಮಗೆ ವಿರೋಧವಾಗಿ ಯೆಹೋವ ದೇವರಿಗೆ ಮೊರೆ ಇಟ್ಟಾಗ, ನಿಮ್ಮಲ್ಲಿ ಅಪರಾಧ ಉಂಟಾಗದಂತೆ ನೋಡಿಕೊಳ್ಳಿರಿ. 10 ಕೊಡುವಾಗ ಬೇಸರಗೊಳ್ಳದೇ ಉದಾರಮನಸ್ಸಿನಿಂದ ಕೊಡಿರಿ. ಏಕೆಂದರೆ ಇದಕ್ಕೋಸ್ಕರವೇ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ, ನೀವು ಕೈಹಾಕುವುದೆಲ್ಲದರಲ್ಲಿಯೂ ಆಶೀರ್ವದಿಸುವರು. 11 ಏಕೆಂದರೆ ಬಡವರು ದೇಶದಲ್ಲಿ ಇಲ್ಲದೆ ಹೋಗುವುದಿಲ್ಲ. ಆದ್ದರಿಂದ ನಿಮ್ಮ ಸಹೋದರರಿಗೂ, ನಿಮ್ಮ ನಾಡಿನ ದರಿದ್ರರಿಗೂ, ಬಡವರಿಗೂ ನಿಮ್ಮ ಕೈಯನ್ನು ವಿಶಾಲವಾಗಿ ತೆರೆಯಬೇಕೆಂದು ನಾನು ನಿಮಗೆ ಆಜ್ಞಾಪಿಸುತ್ತೇನೆ. 12 ನಿಮ್ಮ ಸಹೋದರನಾದ ಹಿಬ್ರಿಯನಾಗಲಿ, ಒಬ್ಬ ಹಿಬ್ರಿಯ ಸ್ತ್ರೀಯಾಗಲಿ ನಿಮಗೆ ಗುಲಾಮರಾಗಿ, ಆರು ವರ್ಷ ನಿಮಗೆ ಮಾರಾಟವಾಗಿದ್ದರೆ ಮತ್ತು ಸೇವೆ ಮಾಡಿದ್ದರೆ, ಏಳನೆಯ ವರ್ಷದಲ್ಲಿ ಅವರನ್ನು ಬಿಡುಗಡೆ ಮಾಡಿ ಕಳುಹಿಸಿಬಿಡಿರಿ. 13 ಹಾಗೆ ಬಿಟ್ಟುಬಿಡುವಾಗ ಬರೀ ಕೈಯಲ್ಲಿ ಕಳುಹಿಸಬಾರದು. 14 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಆಶೀರ್ವಾದವಾಗಿ ಕೊಟ್ಟದ್ದರಲ್ಲಿ ಅಂದರೆ ನಿಮ್ಮ ಕುರಿಮಂದೆಯಿಂದಲೂ ಕಣದಿಂದಲೂ ದ್ರಾಕ್ಷಿ ಆಲೆಯದಿಂದಲೂ ಅವರಿಗೆ ಧಾರಾಳವಾಗಿ ಕೊಟ್ಟುಕಳುಹಿಸಬೇಕು. 15 ನೀವು ಈಜಿಪ್ಟ್ ದೇಶದಲ್ಲಿ ದಾಸರಾಗಿದ್ದಿರಿ ಎಂದೂ, ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ವಿಮೋಚಿಸಿದರೆಂದೂ ಜ್ಞಾಪಕಮಾಡಿಕೊಳ್ಳಿರಿ. ಆದ್ದರಿಂದ ನಾನು ಈ ಹೊತ್ತು ಇದನ್ನು ನಿಮಗೆ ಆಜ್ಞಾಪಿಸುತ್ತೇನೆ. 16 ಒಂದು ವೇಳೆ ಆ ಗುಲಾಮನು, ನಿಮ್ಮನ್ನೂ, ನಿಮ್ಮ ಮನೆಯನ್ನೂ ಪ್ರೀತಿಸುವುದರಿಂದಲೂ, ನಿಮ್ಮ ಬಳಿ ಸುಖವಾಗಿರುವುದರಿಂದಲೂ, “ನಾನು ಬಿಡುಗಡೆಯಾಗಿ ಹೋಗುವುದಕ್ಕೆ ಮನಸ್ಸಿಲ್ಲ,” ಎಂದು ಹೇಳಿದರೆ, 17 ನೀವು ದಬ್ಬಳವನ್ನು ತೆಗೆದುಕೊಂಡು ಅವನ ಕಿವಿಯನ್ನು ಬಾಗಿಲಿಗೆ ತಗಲಿಸಿ ಚುಚ್ಚಬೇಕು. ಆಗ ಅವನು ನಿತ್ಯವಾಗಿ ನಿಮ್ಮ ದಾಸನಾಗಿರುವನು. ನಿಮ್ಮ ದಾಸಿಗೂ ಹಾಗೆಯೇ ಮಾಡಬೇಕು. 18 ಒಬ್ಬ ಗುಲಾಮನನ್ನು ನಿಮ್ಮಿಂದ ಬಿಡುಗಡೆಯಾಗಿ ಕಳುಹಿಸುವುದು ನಿಮಗೆ ಕಷ್ಟವೆಂದು ಹೇಳಿಕೊಳ್ಳಬಾರದು. ಏಕೆಂದರೆ ಅವನು ಆರು ವರ್ಷ ನಿಮ್ಮ ದಾಸನಾಗಿದ್ದದರಿಂದ ಸಂಬಳದ ಸೇವಕನಿಗಿಂತ ಎರಡಷ್ಟಾಗಿದ್ದನು. ಹೀಗೆ ನಿಮ್ಮ ದೇವರಾದ ಯೆಹೋವ ದೇವರು ನೀವು ಮಾಡುವುದೆಲ್ಲದರಲ್ಲಿಯೂ ನಿಮ್ಮನ್ನು ಆಶೀರ್ವದಿಸುವರು. 19 ನಿಮ್ಮ ದನಕುರಿಗಳಲ್ಲಿ ಹುಟ್ಟುವ ಚೊಚ್ಚಲು ಗಂಡುಗಳನ್ನೆಲ್ಲಾ ನಿಮ್ಮ ದೇವರಾದ ಯೆಹೋವ ದೇವರಿಗೆ ಪ್ರತಿಷ್ಠಿಸಬೇಕು. ನಿಮ್ಮ ಹೋರಿಯ ಚೊಚ್ಚಲಿನಿಂದ ನೀವು ಕೆಲಸ ಮಾಡಿಸಬಾರದು. ನಿಮ್ಮ ಕುರಿಯ ಚೊಚ್ಚಲಲ್ಲಿ ಉಣ್ಣೆ ಕತ್ತರಿಸಬಾರದು. 20 ನಿಮ್ಮ ದೇವರಾದ ಯೆಹೋವ ದೇವರ ಮುಂದೆ ಯೆಹೋವ ದೇವರು ಆಯ್ದುಕೊಳ್ಳುವ ಸ್ಥಳದಲ್ಲಿ ನೀವು ನಿಮ್ಮ ಮನೆಯವರ ಸಹಿತವಾಗಿ ಅವುಗಳಿಂದ ಪ್ರತಿವರ್ಷ ಮಾಂಸಾಹಾರವಾಗಿರಬೇಕು. 21 ಅದರಲ್ಲಿ ಏನಾದರೂ ಊನವಿದ್ದರೆ ಅಂದರೆ, ಅದು ಕುಂಟಾಗಲಿ, ಕುರುಡಾಗಲಿ ಏನಾದರೂ ಕೆಟ್ಟ ಊನವುಳ್ಳದ್ದಾಗಿದ್ದರೆ, ಅದನ್ನು ನಿಮ್ಮ ದೇವರಾದ ಯೆಹೋವ ದೇವರಿಗೆ ಅರ್ಪಿಸಬಾರದು. 22 ಅದನ್ನು ನಿಮ್ಮ ಊರಲ್ಲಿ ಮಾಂಸಾಹಾರವಾಗಿರಲಿ. ಆಚಾರವಾಗಿ ಶುದ್ಧರೂ, ಅಶುದ್ಧರೂ ಕೂಡ ಅದನ್ನು ಕಡವೆ ಜಿಂಕೆಗಳನ್ನು ಮಾಂಸಾಹಾರವಾಗಿ ಮಾಡಿಕೊಂಡ ಹಾಗೆ ತಿನ್ನಬಹುದು. 23 ಅದರ ರಕ್ತವನ್ನು ಮಾತ್ರ ಭುಜಿಸಬಾರದು, ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.

In Other Versions

Deuteronomy 15 in the ANGEFD

Deuteronomy 15 in the ANTPNG2D

Deuteronomy 15 in the AS21

Deuteronomy 15 in the BAGH

Deuteronomy 15 in the BBPNG

Deuteronomy 15 in the BBT1E

Deuteronomy 15 in the BDS

Deuteronomy 15 in the BEV

Deuteronomy 15 in the BHAD

Deuteronomy 15 in the BIB

Deuteronomy 15 in the BLPT

Deuteronomy 15 in the BNT

Deuteronomy 15 in the BNTABOOT

Deuteronomy 15 in the BNTLV

Deuteronomy 15 in the BOATCB

Deuteronomy 15 in the BOATCB2

Deuteronomy 15 in the BOBCV

Deuteronomy 15 in the BOCNT

Deuteronomy 15 in the BOECS

Deuteronomy 15 in the BOGWICC

Deuteronomy 15 in the BOHCB

Deuteronomy 15 in the BOHCV

Deuteronomy 15 in the BOHLNT

Deuteronomy 15 in the BOHNTLTAL

Deuteronomy 15 in the BOICB

Deuteronomy 15 in the BOILNTAP

Deuteronomy 15 in the BOITCV

Deuteronomy 15 in the BOKCV

Deuteronomy 15 in the BOKHWOG

Deuteronomy 15 in the BOKSSV

Deuteronomy 15 in the BOLCB

Deuteronomy 15 in the BOLCB2

Deuteronomy 15 in the BOMCV

Deuteronomy 15 in the BONAV

Deuteronomy 15 in the BONCB

Deuteronomy 15 in the BONLT

Deuteronomy 15 in the BONUT2

Deuteronomy 15 in the BOPLNT

Deuteronomy 15 in the BOSCB

Deuteronomy 15 in the BOSNC

Deuteronomy 15 in the BOTLNT

Deuteronomy 15 in the BOVCB

Deuteronomy 15 in the BOYCB

Deuteronomy 15 in the BPBB

Deuteronomy 15 in the BPH

Deuteronomy 15 in the BSB

Deuteronomy 15 in the CCB

Deuteronomy 15 in the CUV

Deuteronomy 15 in the CUVS

Deuteronomy 15 in the DBT

Deuteronomy 15 in the DGDNT

Deuteronomy 15 in the DHNT

Deuteronomy 15 in the DNT

Deuteronomy 15 in the ELBE

Deuteronomy 15 in the EMTV

Deuteronomy 15 in the ESV

Deuteronomy 15 in the FBV

Deuteronomy 15 in the FEB

Deuteronomy 15 in the GGMNT

Deuteronomy 15 in the GNT

Deuteronomy 15 in the HARY

Deuteronomy 15 in the HNT

Deuteronomy 15 in the IRVA

Deuteronomy 15 in the IRVB

Deuteronomy 15 in the IRVG

Deuteronomy 15 in the IRVH

Deuteronomy 15 in the IRVK

Deuteronomy 15 in the IRVM

Deuteronomy 15 in the IRVM2

Deuteronomy 15 in the IRVO

Deuteronomy 15 in the IRVP

Deuteronomy 15 in the IRVT

Deuteronomy 15 in the IRVT2

Deuteronomy 15 in the IRVU

Deuteronomy 15 in the ISVN

Deuteronomy 15 in the JSNT

Deuteronomy 15 in the KAPI

Deuteronomy 15 in the KBT1ETNIK

Deuteronomy 15 in the KBV

Deuteronomy 15 in the KJV

Deuteronomy 15 in the KNFD

Deuteronomy 15 in the LBA

Deuteronomy 15 in the LBLA

Deuteronomy 15 in the LNT

Deuteronomy 15 in the LSV

Deuteronomy 15 in the MAAL

Deuteronomy 15 in the MBV

Deuteronomy 15 in the MBV2

Deuteronomy 15 in the MHNT

Deuteronomy 15 in the MKNFD

Deuteronomy 15 in the MNG

Deuteronomy 15 in the MNT

Deuteronomy 15 in the MNT2

Deuteronomy 15 in the MRS1T

Deuteronomy 15 in the NAA

Deuteronomy 15 in the NASB

Deuteronomy 15 in the NBLA

Deuteronomy 15 in the NBS

Deuteronomy 15 in the NBVTP

Deuteronomy 15 in the NET2

Deuteronomy 15 in the NIV11

Deuteronomy 15 in the NNT

Deuteronomy 15 in the NNT2

Deuteronomy 15 in the NNT3

Deuteronomy 15 in the PDDPT

Deuteronomy 15 in the PFNT

Deuteronomy 15 in the RMNT

Deuteronomy 15 in the SBIAS

Deuteronomy 15 in the SBIBS

Deuteronomy 15 in the SBIBS2

Deuteronomy 15 in the SBICS

Deuteronomy 15 in the SBIDS

Deuteronomy 15 in the SBIGS

Deuteronomy 15 in the SBIHS

Deuteronomy 15 in the SBIIS

Deuteronomy 15 in the SBIIS2

Deuteronomy 15 in the SBIIS3

Deuteronomy 15 in the SBIKS

Deuteronomy 15 in the SBIKS2

Deuteronomy 15 in the SBIMS

Deuteronomy 15 in the SBIOS

Deuteronomy 15 in the SBIPS

Deuteronomy 15 in the SBISS

Deuteronomy 15 in the SBITS

Deuteronomy 15 in the SBITS2

Deuteronomy 15 in the SBITS3

Deuteronomy 15 in the SBITS4

Deuteronomy 15 in the SBIUS

Deuteronomy 15 in the SBIVS

Deuteronomy 15 in the SBT

Deuteronomy 15 in the SBT1E

Deuteronomy 15 in the SCHL

Deuteronomy 15 in the SNT

Deuteronomy 15 in the SUSU

Deuteronomy 15 in the SUSU2

Deuteronomy 15 in the SYNO

Deuteronomy 15 in the TBIAOTANT

Deuteronomy 15 in the TBT1E

Deuteronomy 15 in the TBT1E2

Deuteronomy 15 in the TFTIP

Deuteronomy 15 in the TFTU

Deuteronomy 15 in the TGNTATF3T

Deuteronomy 15 in the THAI

Deuteronomy 15 in the TNFD

Deuteronomy 15 in the TNT

Deuteronomy 15 in the TNTIK

Deuteronomy 15 in the TNTIL

Deuteronomy 15 in the TNTIN

Deuteronomy 15 in the TNTIP

Deuteronomy 15 in the TNTIZ

Deuteronomy 15 in the TOMA

Deuteronomy 15 in the TTENT

Deuteronomy 15 in the UBG

Deuteronomy 15 in the UGV

Deuteronomy 15 in the UGV2

Deuteronomy 15 in the UGV3

Deuteronomy 15 in the VBL

Deuteronomy 15 in the VDCC

Deuteronomy 15 in the YALU

Deuteronomy 15 in the YAPE

Deuteronomy 15 in the YBVTP

Deuteronomy 15 in the ZBP