Deuteronomy 15 (IRVK)
1 ಪ್ರತಿ ಏಳನೆಯ ವರ್ಷದ ಕೊನೆಯಲ್ಲಿ ಸಾಲವನ್ನು ಬಿಟ್ಟುಬಿಡಬೇಕು. 2 ಹೇಗೆಂದರೆ ಯೆಹೋವನು ನೇಮಿಸಿದ ಬಿಡುಗಡೆಯ ವರ್ಷವು ಬಂತೆಂದು ಪ್ರಕಟವಾದುದರಿಂದ ಸಾಲಕೊಟ್ಟವನು ತೆಗೆದುಕೊಂಡವನಿಗೆ ಆ ಸಾಲವನ್ನು ಬಿಟ್ಟುಬಿಡಬೇಕು. ಅವನು ಸ್ವದೇಶದವನಿಗೆ ಕೊಟ್ಟ ಸಾಲವನ್ನು ಕೇಳಬಾರದು. 3 ಅನ್ಯದೇಶದವರಿಗೆ ಕೊಟ್ಟ ಸಾಲವನ್ನು ಕೇಳಿ ತೆಗೆದುಕೊಳ್ಳಬಹುದೇ ಹೊರತು ಸ್ವದೇಶದವನಿಗೆ ಕೊಟ್ಟಿರುವುನ್ನು ಕೇಳಬಾರದು. 4 ಆದರೆ ನೀವು ನಿಮ್ಮ ದೇವರಾದ ಯೆಹೋವನ ಮಾತಿಗೆ ಕಿವಿಗೊಟ್ಟು, ನಾನು ಈಗ ನಿಮಗೆ ಬೋಧಿಸುವ ಈ ಧರ್ಮೋಪದೇಶವನ್ನೆಲ್ಲಾ ಅನುಸರಿಸಿದರೆ, 5 ಯೆಹೋವನು ತಾನು ನಿಮಗೆ ಸ್ವದೇಶವಾಗಿ ಕೊಡುವ ದೇಶದಲ್ಲಿ ನೀವು ಅಭಿವೃದ್ಧಿ ಹೊಂದುವುದರಿಂದ ನಿಮ್ಮಲ್ಲಿ ಬಡವರೇ ಇರುವುದಿಲ್ಲ. 6 ನಿಮ್ಮ ದೇವರಾದ ಯೆಹೋವನು ವಾಗ್ದಾನಮಾಡಿದಂತೆ ನಿಮ್ಮನ್ನು ಅಭಿವೃದ್ಧಿಪಡಿಸುವನು. ನೀವು ಅನೇಕ ಜನಗಳಿಗೆ ಸಾಲಕೊಡುವಿರೇ ಹೊರತು ಅವರಿಂದ ಸಾಲ ತೆಗೆದುಕೊಳ್ಳುವುದಿಲ್ಲ. ನೀವು ಅನೇಕ ಜನಾಂಗಗಳ ಮೇಲೆ ದೊರೆತನ ಮಾಡುವಿರೇ ಹೊರತು ಅವರು ನಿಮ್ಮ ಮೇಲೆ ದೊರೆತನ ಮಾಡುವುದಿಲ್ಲ. 7 ನಿಮ್ಮ ದೇವರಾದ ಯೆಹೋವನು ನಿಮಗೆ ಕೊಡುವ ದೇಶದ ಯಾವ ಊರಿನಲ್ಲಾದರೂ ಸ್ವದೇಶದವನಾದ ಬಡವನು ಇದ್ದರೆ, ನೀವು ಆ ಬಡ ಸಹೋದರನಿಗೆ ಮನಸ್ಸನ್ನು ಕಠಿಣಮಾಡಿಕೊಂಡು ಅವನಿಗೆ ಸಹಾಯಮಾಡದೆ ಇರಬಾರದು. 8 ನೀವು ಕೈತೆರೆದು ಅವನಿಗೆ ಅವಶ್ಯವಾಗಿ ಬೇಕಾದದ್ದನ್ನು ಕೊಟ್ಟು ಸಹಾಯ ಮಾಡಬೇಕು. 9 ನೀವು “ಬಿಡುಗಡೆಯುಂಟಾಗುವ ಏಳನೆಯ ವರ್ಷವು ಸಮೀಪವಾಯಿತು” ಎಂಬ ನೀಚವಾದ ಆಲೋಚನೆಯನ್ನು ಮಾಡಿ, ಆ ಬಡ ಸಹೋದರನಿಗೆ ಏನೂ ಕೊಡದೆ ಇರಬಾರದು, ಎಚ್ಚರಿಕೆ! ಹಾಗೆ ಧಿಕ್ಕರಿಸಿದರೆ ಅವನು ಒಂದು ವೇಳೆ ನಿಮ್ಮ ವಿಷಯದಲ್ಲಿ ಯೆಹೋವನಿಗೆ ಮೊರೆಯಿಟ್ಟಾನು, ನೀವು ದೋಷಿಗಳಾಗಿ ಕಂಡುಬರುವಿರಿ. 10 ನೀವು ಕೊಡುವಾಗ ಬೇಸರಗೊಳ್ಳದೆ ಉದಾರವಾದ ಮನಸ್ಸಿನಿಂದಲೇ ಕೊಡಬೇಕು. ಇದರಿಂದ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಕೆಲಸಗಳಲ್ಲಿಯೂ ಮತ್ತು ಪ್ರಯತ್ನಗಳಲ್ಲಿಯೂ ನಿಮ್ಮನ್ನು ಅಭಿವೃದ್ಧಿಪಡಿಸುವನು. 11 ದೇಶದಲ್ಲಿ ಯಾವಾಗಲೂ ಬಡವರು ಇರುವರಷ್ಟೆ; ಆದುದರಿಂದ, “ನೀವು ಸ್ವದೇಶದವರಾದ ನಿಮ್ಮ ಸಹೋದರರಿಗೂ, ಬಡವರಿಗೂ ಮತ್ತು ಗತಿಯಿಲ್ಲದವರಿಗೂ ಕೈನೀಡಿ ಸಹಾಯಮಾಡಬೇಕು” ಎಂದು ನಾನು ನಿಮಗೆ ಆಜ್ಞಾಪಿಸಿದ್ದೇನೆ. 12 ಸ್ವದೇಶದವರೊಳಗೆ ಯಾವ ಇಬ್ರಿಯ ಪುರುಷನಾಗಲಿ, ಸ್ತ್ರೀಯಾಗಲಿ ನಿಮಗೆ ದಾಸರಾಗಿರುವುದಕ್ಕಾಗಿ ಮಾರಲ್ಪಡುವ ಪಕ್ಷಕ್ಕೆ, ಅಂಥವರು ಆರು ವರ್ಷಗಳವರೆಗೂ ನಿಮ್ಮ ಸೇವೆ ಮಾಡಲಿ; ಏಳನೆಯ ವರ್ಷದಲ್ಲಿ ನೀವು ಅವರನ್ನು ಬಿಡುಗಡೆ ಮಾಡಬೇಕು. 13 ಬಿಡುಗಡೆ ಮಾಡುವಾಗ ಬರಿಗೈಯಲ್ಲಿ ಕಳುಹಿಸಿಬಿಡಬಾರದು. 14 ನಿಮ್ಮ ದೇವರಾದ ಯೆಹೋವನು ನಿಮಗೆ ಅನುಗ್ರಹಿಸಿರುವ ಮೇರೆಗೆ ನಿಮಗಿರುವ ಹಿಂಡು, ದವಸ, ದ್ರಾಕ್ಷಿ ಆಲೆ ಮತ್ತು ಕಣ ಇವುಗಳಲ್ಲಿ ಉದಾರವಾಗಿ ಕೊಟ್ಟು ಕಳುಹಿಸಿಬಿಡಬೇಕು. 15 ಐಗುಪ್ತದೇಶದಲ್ಲಿ ನೀವೇ ದಾಸರಾಗಿರಲು ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಬಿಡುಗಡೆಮಾಡಿದನು ಎಂಬುದನ್ನು ಜ್ಞಾಪಕಮಾಡಿಕೊಳ್ಳಿರಿ. ಇದಕ್ಕೋಸ್ಕರವಾಗಿಯೇ ನಾನು ಈ ಆಜ್ಞೆಯನ್ನು ನಿಮಗೆ ಈಗ ಕೊಟ್ಟಿದ್ದೇನೆ. 16 ಒಂದು ವೇಳೆ ಆ ದಾಸನು ನಿಮ್ಮ ಬಳಿಯಲ್ಲಿ ಸುಖವಾಗಿದ್ದು, ನಿಮ್ಮನ್ನೂ ಮತ್ತು ನಿಮ್ಮ ಮನೆಯವರನ್ನೂ ಪ್ರೀತಿಸಿ, ತಾನು ಬಿಡುಗಡೆಯಾಗಿ ಹೋಗುವುದಿಲ್ಲ ಎಂದು ಹೇಳುವ ಪಕ್ಷಕ್ಕೆ, 17 ನೀವು ದಬ್ಬಳದಿಂದ ಅವನ ಕಿವಿಯನ್ನು ಚುಚ್ಚಿ, ಕದಕ್ಕೆ ಸಿಕ್ಕಿಸಬೇಕು. ಆ ದಿನದಿಂದ ಅವನು ನಿಮಗೆ ಶಾಶ್ವತ ದಾಸನಾಗಿರಬೇಕು. ಅದೇ ರೀತಿಯಾಗಿ ದಾಸಿಯರ ವಿಷಯದಲ್ಲಿಯೂ ನಡೆದುಕೊಳ್ಳಬೇಕು. 18 ದಾಸನನ್ನು ಬಿಡುಗಡೆಮಾಡುವುದು ಕಷ್ಟವೆಂದು ಹೇಳಿಕೊಳ್ಳಬಾರದು. ಅವನು ಆರು ವರ್ಷಗಳು ನಿಮ್ಮ ದಾಸನಾಗಿದ್ದು ಕೂಲಿಯಾಳಿಗಿಂತ ಎರಡರಷ್ಟು ಪ್ರಯೋಜನವನ್ನು ಉಂಟುಮಾಡಿದನಲ್ಲಾ. ನೀವು ಹೀಗೆ ನಡೆದುಕೊಂಡರೆ ನಿಮ್ಮ ದೇವರಾದ ಯೆಹೋವನು ನಿಮ್ಮ ಎಲ್ಲಾ ಪ್ರಯತ್ನಗಳನ್ನು ಸಫಲಗೊಳಿಸುವನು. 19 ದನಗಳಲ್ಲಿಯೂ ಮತ್ತು ಆಡುಕುರಿಗಳಲ್ಲಿಯೂ ಚೊಚ್ಚಲಾದ ಗಂಡನ್ನು ನಿಮ್ಮ ದೇವರಾದ ಯೆಹೋವನಿಗಾಗಿ ಪ್ರತಿಷ್ಠಿಸಬೇಕು. ಚೊಚ್ಚಲಾದ ಹೋರಿಯಿಂದ ಕೆಲಸಮಾಡಿಸಬಾರದು; ಚೊಚ್ಚಲಾದ ಕುರಿಯ ಉಣ್ಣೆಯನ್ನು ಕತ್ತರಿಸಬಾರದು. 20 ಪ್ರತಿ ವರ್ಷದಲ್ಲಿ ನೀವೂ ಮತ್ತು ನಿಮ್ಮ ಮನೆಯವರೂ ಅವುಗಳನ್ನು ನಿಮ್ಮ ದೇವರಾದ ಯೆಹೋವನು ಆರಿಸಿಕೊಳ್ಳುವ ಸ್ಥಳದಲ್ಲಿ ಆತನ ಸನ್ನಿಧಿಯಲ್ಲೇ ಕೊಯಿದು ತಿನ್ನಬೇಕು. 21 ಅದು ಕುಂಟಾಗಿ, ಕುರುಡಾಗಿ ಇಲ್ಲವೆ ಬೇರೆ ವಿಧದಿಂದ ವಿರೂಪವಾಗಿದ್ದರೆ ಅದನ್ನು ನಿಮ್ಮ ದೇವರಾದ ಯೆಹೋವನಿಗೆ ಸಮರ್ಪಿಸಬಾರದು. 22 ಅದನ್ನು ನಿಮ್ಮ ಊರಲ್ಲೇ ತಿನ್ನಬೇಕು. ಶುದ್ಧರೂ ಮತ್ತು ಅಶುದ್ಧರೂ ಜಿಂಕೆ ದುಪ್ಪಿಗಳ ಮಾಂಸವನ್ನು ತಿನ್ನುವ ಪ್ರಕಾರ ಇವುಗಳನ್ನೂ ತಿನ್ನಬಹುದು. 23 ನೀವು ರಕ್ತವನ್ನು ಮಾತ್ರ ಊಟಮಾಡಬಾರದು; ಅದನ್ನು ನೀರಿನಂತೆ ಭೂಮಿಯ ಮೇಲೆ ಸುರಿದುಬಿಡಬೇಕು.
In Other Versions
Deuteronomy 15 in the ANGEFD
Deuteronomy 15 in the ANTPNG2D
Deuteronomy 15 in the AS21
Deuteronomy 15 in the BAGH
Deuteronomy 15 in the BBPNG
Deuteronomy 15 in the BBT1E
Deuteronomy 15 in the BDS
Deuteronomy 15 in the BEV
Deuteronomy 15 in the BHAD
Deuteronomy 15 in the BIB
Deuteronomy 15 in the BLPT
Deuteronomy 15 in the BNT
Deuteronomy 15 in the BNTABOOT
Deuteronomy 15 in the BNTLV
Deuteronomy 15 in the BOATCB
Deuteronomy 15 in the BOATCB2
Deuteronomy 15 in the BOBCV
Deuteronomy 15 in the BOCNT
Deuteronomy 15 in the BOECS
Deuteronomy 15 in the BOGWICC
Deuteronomy 15 in the BOHCB
Deuteronomy 15 in the BOHCV
Deuteronomy 15 in the BOHLNT
Deuteronomy 15 in the BOHNTLTAL
Deuteronomy 15 in the BOICB
Deuteronomy 15 in the BOILNTAP
Deuteronomy 15 in the BOITCV
Deuteronomy 15 in the BOKCV
Deuteronomy 15 in the BOKCV2
Deuteronomy 15 in the BOKHWOG
Deuteronomy 15 in the BOKSSV
Deuteronomy 15 in the BOLCB
Deuteronomy 15 in the BOLCB2
Deuteronomy 15 in the BOMCV
Deuteronomy 15 in the BONAV
Deuteronomy 15 in the BONCB
Deuteronomy 15 in the BONLT
Deuteronomy 15 in the BONUT2
Deuteronomy 15 in the BOPLNT
Deuteronomy 15 in the BOSCB
Deuteronomy 15 in the BOSNC
Deuteronomy 15 in the BOTLNT
Deuteronomy 15 in the BOVCB
Deuteronomy 15 in the BOYCB
Deuteronomy 15 in the BPBB
Deuteronomy 15 in the BPH
Deuteronomy 15 in the BSB
Deuteronomy 15 in the CCB
Deuteronomy 15 in the CUV
Deuteronomy 15 in the CUVS
Deuteronomy 15 in the DBT
Deuteronomy 15 in the DGDNT
Deuteronomy 15 in the DHNT
Deuteronomy 15 in the DNT
Deuteronomy 15 in the ELBE
Deuteronomy 15 in the EMTV
Deuteronomy 15 in the ESV
Deuteronomy 15 in the FBV
Deuteronomy 15 in the FEB
Deuteronomy 15 in the GGMNT
Deuteronomy 15 in the GNT
Deuteronomy 15 in the HARY
Deuteronomy 15 in the HNT
Deuteronomy 15 in the IRVA
Deuteronomy 15 in the IRVB
Deuteronomy 15 in the IRVG
Deuteronomy 15 in the IRVH
Deuteronomy 15 in the IRVM
Deuteronomy 15 in the IRVM2
Deuteronomy 15 in the IRVO
Deuteronomy 15 in the IRVP
Deuteronomy 15 in the IRVT
Deuteronomy 15 in the IRVT2
Deuteronomy 15 in the IRVU
Deuteronomy 15 in the ISVN
Deuteronomy 15 in the JSNT
Deuteronomy 15 in the KAPI
Deuteronomy 15 in the KBT1ETNIK
Deuteronomy 15 in the KBV
Deuteronomy 15 in the KJV
Deuteronomy 15 in the KNFD
Deuteronomy 15 in the LBA
Deuteronomy 15 in the LBLA
Deuteronomy 15 in the LNT
Deuteronomy 15 in the LSV
Deuteronomy 15 in the MAAL
Deuteronomy 15 in the MBV
Deuteronomy 15 in the MBV2
Deuteronomy 15 in the MHNT
Deuteronomy 15 in the MKNFD
Deuteronomy 15 in the MNG
Deuteronomy 15 in the MNT
Deuteronomy 15 in the MNT2
Deuteronomy 15 in the MRS1T
Deuteronomy 15 in the NAA
Deuteronomy 15 in the NASB
Deuteronomy 15 in the NBLA
Deuteronomy 15 in the NBS
Deuteronomy 15 in the NBVTP
Deuteronomy 15 in the NET2
Deuteronomy 15 in the NIV11
Deuteronomy 15 in the NNT
Deuteronomy 15 in the NNT2
Deuteronomy 15 in the NNT3
Deuteronomy 15 in the PDDPT
Deuteronomy 15 in the PFNT
Deuteronomy 15 in the RMNT
Deuteronomy 15 in the SBIAS
Deuteronomy 15 in the SBIBS
Deuteronomy 15 in the SBIBS2
Deuteronomy 15 in the SBICS
Deuteronomy 15 in the SBIDS
Deuteronomy 15 in the SBIGS
Deuteronomy 15 in the SBIHS
Deuteronomy 15 in the SBIIS
Deuteronomy 15 in the SBIIS2
Deuteronomy 15 in the SBIIS3
Deuteronomy 15 in the SBIKS
Deuteronomy 15 in the SBIKS2
Deuteronomy 15 in the SBIMS
Deuteronomy 15 in the SBIOS
Deuteronomy 15 in the SBIPS
Deuteronomy 15 in the SBISS
Deuteronomy 15 in the SBITS
Deuteronomy 15 in the SBITS2
Deuteronomy 15 in the SBITS3
Deuteronomy 15 in the SBITS4
Deuteronomy 15 in the SBIUS
Deuteronomy 15 in the SBIVS
Deuteronomy 15 in the SBT
Deuteronomy 15 in the SBT1E
Deuteronomy 15 in the SCHL
Deuteronomy 15 in the SNT
Deuteronomy 15 in the SUSU
Deuteronomy 15 in the SUSU2
Deuteronomy 15 in the SYNO
Deuteronomy 15 in the TBIAOTANT
Deuteronomy 15 in the TBT1E
Deuteronomy 15 in the TBT1E2
Deuteronomy 15 in the TFTIP
Deuteronomy 15 in the TFTU
Deuteronomy 15 in the TGNTATF3T
Deuteronomy 15 in the THAI
Deuteronomy 15 in the TNFD
Deuteronomy 15 in the TNT
Deuteronomy 15 in the TNTIK
Deuteronomy 15 in the TNTIL
Deuteronomy 15 in the TNTIN
Deuteronomy 15 in the TNTIP
Deuteronomy 15 in the TNTIZ
Deuteronomy 15 in the TOMA
Deuteronomy 15 in the TTENT
Deuteronomy 15 in the UBG
Deuteronomy 15 in the UGV
Deuteronomy 15 in the UGV2
Deuteronomy 15 in the UGV3
Deuteronomy 15 in the VBL
Deuteronomy 15 in the VDCC
Deuteronomy 15 in the YALU
Deuteronomy 15 in the YAPE
Deuteronomy 15 in the YBVTP
Deuteronomy 15 in the ZBP