Deuteronomy 21 (BOKCV2)
1 ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ದೇಶದಲ್ಲಿ ಹತನಾದ ಒಬ್ಬ ವ್ಯಕ್ತಿಯ ಶವವು ಹೊಲದಲ್ಲಿ ಬಿದ್ದಿರುವುದನ್ನು ನೀವು ಕಂಡಾಗ ಮತ್ತು ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ, 2 ನಿಮ್ಮ ಹಿರಿಯರೂ ನ್ಯಾಯಾಧಿಪತಿಗಳೂ ಹೊರಗೆ ಹೋಗಿ, ಆ ಹತನಾದವನ ಸುತ್ತಲಿರುವ ಪಟ್ಟಣಗಳಲ್ಲಿ ಯಾವುದು ಹತ್ತಿರವೆಂದು ತಿಳಿದುಕೊಳ್ಳಲು ಅಳತೆಮಾಡಬೇಕು. 3 ಹತನಾದವನಿಗೆ ಸಮೀಪವಾದ ಊರು ಯಾವುದೋ, ಆ ಊರಿನ ಹಿರಿಯರು ಇನ್ನೂ ಕೆಲಸ ಮಾಡದಂಥ, ನೊಗ ಎಳೆಯದಂಥ, ಒಂದು ಕಡಸನ್ನು ತೆಗೆದುಕೊಳ್ಳಬೇಕು. 4 ಆಮೇಲೆ ಆ ಊರಿನ ಹಿರಿಯರು ಆ ಕಡಸನ್ನು ನಿತ್ಯ ಹರಿಯುವ ಹಳ್ಳದ ಬಳಿಗೆ ಬೇಸಾಯವಾಗದಂಥ, ಬೀಜ ಹಾಕದಂಥ ಸ್ಥಳಕ್ಕೆ ತೆಗೆದುಕೊಂಡುಹೋಗಿ, ಅಲ್ಲಿ ಹಳ್ಳದಲ್ಲಿ ಕಡಸನ್ನು ವಧಿಸಬೇಕು. 5 ಲೇವಿಯ ಪುತ್ರರಾದ ಯಾಜಕರು ಹತ್ತಿರ ಇರಬೇಕು. ಏಕೆಂದರೆ ಅವರನ್ನೇ ನಿಮ್ಮ ದೇವರಾದ ಯೆಹೋವ ದೇವರು ತಮ್ಮ ಸೇವೆ ಮಾಡುವುದಕ್ಕೂ ಯೆಹೋವ ದೇವರ ಹೆಸರಿನಲ್ಲಿ ಆಶೀರ್ವಾದ ಕೊಡುವುದಕ್ಕೂ ಎಲ್ಲಾ ವಿವಾದ ಹೊಡೆದಾಟಗಳ ವಿಷಯದಲ್ಲಿ ತೀರ್ಮಾನಿಸುವುದಕ್ಕೂ ಆಯ್ದುಕೊಂಡಿದ್ದಾರೆ. 6 ಆಮೇಲೆ ಹತನಾದವನ ಶವಕ್ಕೆ ಸಮೀಪವಾಗಿರುವ ಆ ಊರಿನ ಹಿರಿಯರೆಲ್ಲರೂ ತಗ್ಗಿನಲ್ಲಿ ವಧಿಸಿದ ಕಡಸಿನ ಮೇಲೆ ಕೈಗಳನ್ನು ತೊಳೆದುಕೊಳ್ಳಬೇಕು. 7 ಅನಂತರ, “ನಮ್ಮ ಕೈಗಳು ಈ ರಕ್ತವನ್ನು ಚೆಲ್ಲಲಿಲ್ಲ. ನಮ್ಮ ಕಣ್ಣುಗಳು ನಡೆದದ್ದನ್ನು ನೋಡಲಿಲ್ಲ. 8 ಯೆಹೋವ ದೇವರೇ, ನೀವು ವಿಮೋಚಿಸಿದ ನಿಮ್ಮ ಜನರಾದ ಇಸ್ರಾಯೇಲರಿಗೆ ಕರುಣೆ ಹೊದಿಸಿರಿ. ನಿಮ್ಮ ಜನರಾದ ಇಸ್ರಾಯೇಲರ ಮೇಲೆ ನಿರ್ದೋಷವಾದ ರಕ್ತಾಪರಾಧವನ್ನು ಹೊರಿಸಬೇಡಿರಿ,” ಎಂದು ಹೇಳಬೇಕು. ಆ ರಕ್ತಾಪರಾಧವು ಅವರಿಗೆ ಮುಚ್ಚಲಾಗುವುದು. 9 ಈ ಪ್ರಕಾರ ನೀವು ಯೆಹೋವ ದೇವರ ಮುಂದೆ ಸರಿಯಾದದ್ದನ್ನು ಮಾಡಿದರೆ, ರಕ್ತಾಪರಾಧವನ್ನು ನಿಮ್ಮಲ್ಲಿಂದ ತೆಗೆದುಹಾಕುವಿರಿ. 10 ನೀವು ಶತ್ರುಗಳ ವಿರುದ್ಧ ಯುದ್ಧಮಾಡಿ, ನಿಮ್ಮ ದೇವರಾದ ಯೆಹೋವ ದೇವರಿಂದ, ನೀವು ಅವರನ್ನು ಸೋಲಿಸಿದರೆ, 11 ಸೆರೆ ಹಿಡಿದವರಲ್ಲಿ ಒಬ್ಬ ಸುಂದರ ಸ್ತ್ರೀಯನ್ನು ನಿಮ್ಮಲ್ಲಿ ಯಾರಾದರೂ ಕಂಡು ಇಷ್ಟಪಟ್ಟರೆ, ಅವಳನ್ನು ಮದುವೆ ಮಾಡಿಕೊಳ್ಳಬಹುದು. 12 ಅವಳು ತಲೆ ಕ್ಷೌರಮಾಡಿಸಿಕೊಂಡು, ಉಗುರುಗಳನ್ನು ಕತ್ತರಿಸಿಕೊಂಡು, 13 ಸೆರೆಯ ಬಟ್ಟೆಗಳನ್ನು ತೆಗೆದಿಟ್ಟು, ಅವನ ಮನೆಯಲ್ಲಿ ಒಂದು ತಿಂಗಳವರೆಗೆ ತನ್ನ ತಾಯಿ ತಂದೆಯರನ್ನು ಸ್ಮರಿಸಿ ಹಂಬಲಿಸಲಿ. ಆಮೇಲೆ ಅವನು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬಹುದು. 14 ತರುವಾಯ ಅವಳು ಅವನಿಗೆ ಇಷ್ಟವಾಗದೆ ಹೋದರೆ, ಅವನು ಅವಳನ್ನು ಅವಳು ಬಯಸಿದ ಸ್ಥಳಕ್ಕೆ ಕಳುಹಿಸಿಬಿಡಬೇಕು. ಅವಳನ್ನು ಅವಮಾನಪಡಿಸಿದ್ದರಿಂದ ದಾಸತ್ವಕ್ಕೆ ಮಾರಲೂಬಾರದು, ದಾಸಿಯಂತೆ ನಡೆಸಲೂಬಾರದು. 15 ಒಬ್ಬ ಮನುಷ್ಯನಿಗೆ ಇಬ್ಬರು ಹೆಂಡತಿಯರಿದ್ದು, ಒಬ್ಬಳನ್ನು ಪ್ರೀತಿಸುತ್ತಲೂ, ಮತ್ತೊಬ್ಬಳನ್ನು ದ್ವೇಷಿಸುತ್ತಲೂ ಇದ್ದರೆ, ಅವರಿಬ್ಬರೂ ಅವನಿಗೆ ಮಕ್ಕಳನ್ನು ಹೆತ್ತಿರುವಲ್ಲಿ, ಚೊಚ್ಚಲು ಮಗನು ತಿರಸ್ಕಾರ ಹೊಂದುತ್ತಿರುವ ಹೆಂಡತಿಯಲ್ಲಿಯೇ ಹುಟ್ಟಿದ್ದರೆ, 16 ಅವನು ತನ್ನ ಪುತ್ರರಿಗೆ ತನ್ನ ಆಸ್ತಿಯನ್ನು ಹಂಚಿ ಕೊಡುವಾಗ, ತಾನು ಪ್ರೀತಿಮಾಡದ ಹೆಂಡತಿಯ ಚೊಚ್ಚಲ ಮಗನಿಗೆ ಬದಲಾಗಿ ಅವನು ಪ್ರೀತಿಸುವವಳ ಮಗನನ್ನು ಹಿರಿಯನೆಂದು ಮಾಡಕೂಡದು. 17 ಅವನು ಪ್ರೀತಿಮಾಡದವಳ ಮಗನಿಗೆ ತನ್ನ ಬಳಿಯಲ್ಲಿರುವ ಎಲ್ಲವುಗಳಲ್ಲಿ ಎರಡು ಪಾಲುಗಳನ್ನು ಕೊಟ್ಟು, ಅವನೇ ಜೇಷ್ಠ ಪುತ್ರನೆಂದು ಒಪ್ಪಿಕೊಳ್ಳಬೇಕು. ಏಕೆಂದರೆ ಅವನೇ ಅವನ ಪ್ರಥಮ ಫಲ. ಅವನಿಗೆ ಜೇಷ್ಠ ಪುತ್ರನ ಹಕ್ಕು ಉಂಟು. 18 ಒಬ್ಬ ಮನುಷ್ಯನಿಗೆ ಮೊಂಡನೂ, ತಿರುಗಿ ಬೀಳುವವನೂ ಆದ ಮಗನಿದ್ದರೆ, ಅವನು ತಂದೆತಾಯಿಯ ಮಾತನ್ನೂ ಕೇಳದೆ, ಅವರು ಅವನನ್ನು ಶಿಸ್ತುಪಡಿಸಲು ಹೇಳುವ ಮಾತನ್ನೂ ಕೇಳದೆ ಹೋದರೆ, 19 ಅವನ ತಂದೆತಾಯಿಗಳು ಅವನನ್ನು ಹಿಡಿದು, ಪಟ್ಟಣದ ಹಿರಿಯರ ಬಳಿಗೂ ಅವನ ಊರಿನ ಬಾಗಿಲಿನ ಬಳಿಗೂ ತಂದು, 20 ಪಟ್ಟಣದ ಹಿರಿಯರಿಗೆ, “ಈ ನಮ್ಮ ಮಗನು ಮೊಂಡನೂ, ತಿರುಗಿ ಬೀಳುವವನೂ, ನಮ್ಮ ಮಾತು ಕೇಳದವನೂ, ಹೊಟ್ಟೆ ಬಾಕನೂ, ಕುಡುಕನೂ ಆಗಿದ್ದಾನೆ,” ಎಂದು ಹೇಳಬೇಕು. 21 ಆಗ ಅವನ ಪಟ್ಟಣದ ಜನರೆಲ್ಲರೂ ಅವನು ಸಾಯುವಂತೆ ಅವನ ಮೇಲೆ ಕಲ್ಲೆಸೆಯಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು. ಇಸ್ರಾಯೇಲರಲ್ಲಿ ಇದನ್ನು ಕೇಳಿ ಭಯಪಡುವರು. 22 ಒಬ್ಬನು ಮರಣದಂಡನೆಗೆ ಯೋಗ್ಯವಾದ ಅಪರಾಧ ಮಾಡಿದ್ದರಿಂದ, ನೀವು ಅವನಿಗೆ ಮರಣದಂಡನೆಯನ್ನು ವಿಧಿಸಿ, ಅವನ ಶವವನ್ನು ಮರಕ್ಕೆ ತೂಗುಹಾಕಿದ್ದಾದರೆ, 23 ಅವನ ಶವ ರಾತ್ರಿಯಲ್ಲಿ ಮರದ ಮೇಲಿರಬಾರದು. ಅವನನ್ನು ಅದೇ ದಿವಸದಲ್ಲಿ ಹೂಣಬೇಕು. ಏಕೆಂದರೆ ಮರಕ್ಕೆ ತೂಗಹಾಕಲಾದವನು ದೇವರ ಶಾಪವನ್ನು ಹೊಂದಿದವನು. ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಸೊತ್ತಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
In Other Versions
Deuteronomy 21 in the ANGEFD
Deuteronomy 21 in the ANTPNG2D
Deuteronomy 21 in the AS21
Deuteronomy 21 in the BAGH
Deuteronomy 21 in the BBPNG
Deuteronomy 21 in the BBT1E
Deuteronomy 21 in the BDS
Deuteronomy 21 in the BEV
Deuteronomy 21 in the BHAD
Deuteronomy 21 in the BIB
Deuteronomy 21 in the BLPT
Deuteronomy 21 in the BNT
Deuteronomy 21 in the BNTABOOT
Deuteronomy 21 in the BNTLV
Deuteronomy 21 in the BOATCB
Deuteronomy 21 in the BOATCB2
Deuteronomy 21 in the BOBCV
Deuteronomy 21 in the BOCNT
Deuteronomy 21 in the BOECS
Deuteronomy 21 in the BOGWICC
Deuteronomy 21 in the BOHCB
Deuteronomy 21 in the BOHCV
Deuteronomy 21 in the BOHLNT
Deuteronomy 21 in the BOHNTLTAL
Deuteronomy 21 in the BOICB
Deuteronomy 21 in the BOILNTAP
Deuteronomy 21 in the BOITCV
Deuteronomy 21 in the BOKCV
Deuteronomy 21 in the BOKHWOG
Deuteronomy 21 in the BOKSSV
Deuteronomy 21 in the BOLCB
Deuteronomy 21 in the BOLCB2
Deuteronomy 21 in the BOMCV
Deuteronomy 21 in the BONAV
Deuteronomy 21 in the BONCB
Deuteronomy 21 in the BONLT
Deuteronomy 21 in the BONUT2
Deuteronomy 21 in the BOPLNT
Deuteronomy 21 in the BOSCB
Deuteronomy 21 in the BOSNC
Deuteronomy 21 in the BOTLNT
Deuteronomy 21 in the BOVCB
Deuteronomy 21 in the BOYCB
Deuteronomy 21 in the BPBB
Deuteronomy 21 in the BPH
Deuteronomy 21 in the BSB
Deuteronomy 21 in the CCB
Deuteronomy 21 in the CUV
Deuteronomy 21 in the CUVS
Deuteronomy 21 in the DBT
Deuteronomy 21 in the DGDNT
Deuteronomy 21 in the DHNT
Deuteronomy 21 in the DNT
Deuteronomy 21 in the ELBE
Deuteronomy 21 in the EMTV
Deuteronomy 21 in the ESV
Deuteronomy 21 in the FBV
Deuteronomy 21 in the FEB
Deuteronomy 21 in the GGMNT
Deuteronomy 21 in the GNT
Deuteronomy 21 in the HARY
Deuteronomy 21 in the HNT
Deuteronomy 21 in the IRVA
Deuteronomy 21 in the IRVB
Deuteronomy 21 in the IRVG
Deuteronomy 21 in the IRVH
Deuteronomy 21 in the IRVK
Deuteronomy 21 in the IRVM
Deuteronomy 21 in the IRVM2
Deuteronomy 21 in the IRVO
Deuteronomy 21 in the IRVP
Deuteronomy 21 in the IRVT
Deuteronomy 21 in the IRVT2
Deuteronomy 21 in the IRVU
Deuteronomy 21 in the ISVN
Deuteronomy 21 in the JSNT
Deuteronomy 21 in the KAPI
Deuteronomy 21 in the KBT1ETNIK
Deuteronomy 21 in the KBV
Deuteronomy 21 in the KJV
Deuteronomy 21 in the KNFD
Deuteronomy 21 in the LBA
Deuteronomy 21 in the LBLA
Deuteronomy 21 in the LNT
Deuteronomy 21 in the LSV
Deuteronomy 21 in the MAAL
Deuteronomy 21 in the MBV
Deuteronomy 21 in the MBV2
Deuteronomy 21 in the MHNT
Deuteronomy 21 in the MKNFD
Deuteronomy 21 in the MNG
Deuteronomy 21 in the MNT
Deuteronomy 21 in the MNT2
Deuteronomy 21 in the MRS1T
Deuteronomy 21 in the NAA
Deuteronomy 21 in the NASB
Deuteronomy 21 in the NBLA
Deuteronomy 21 in the NBS
Deuteronomy 21 in the NBVTP
Deuteronomy 21 in the NET2
Deuteronomy 21 in the NIV11
Deuteronomy 21 in the NNT
Deuteronomy 21 in the NNT2
Deuteronomy 21 in the NNT3
Deuteronomy 21 in the PDDPT
Deuteronomy 21 in the PFNT
Deuteronomy 21 in the RMNT
Deuteronomy 21 in the SBIAS
Deuteronomy 21 in the SBIBS
Deuteronomy 21 in the SBIBS2
Deuteronomy 21 in the SBICS
Deuteronomy 21 in the SBIDS
Deuteronomy 21 in the SBIGS
Deuteronomy 21 in the SBIHS
Deuteronomy 21 in the SBIIS
Deuteronomy 21 in the SBIIS2
Deuteronomy 21 in the SBIIS3
Deuteronomy 21 in the SBIKS
Deuteronomy 21 in the SBIKS2
Deuteronomy 21 in the SBIMS
Deuteronomy 21 in the SBIOS
Deuteronomy 21 in the SBIPS
Deuteronomy 21 in the SBISS
Deuteronomy 21 in the SBITS
Deuteronomy 21 in the SBITS2
Deuteronomy 21 in the SBITS3
Deuteronomy 21 in the SBITS4
Deuteronomy 21 in the SBIUS
Deuteronomy 21 in the SBIVS
Deuteronomy 21 in the SBT
Deuteronomy 21 in the SBT1E
Deuteronomy 21 in the SCHL
Deuteronomy 21 in the SNT
Deuteronomy 21 in the SUSU
Deuteronomy 21 in the SUSU2
Deuteronomy 21 in the SYNO
Deuteronomy 21 in the TBIAOTANT
Deuteronomy 21 in the TBT1E
Deuteronomy 21 in the TBT1E2
Deuteronomy 21 in the TFTIP
Deuteronomy 21 in the TFTU
Deuteronomy 21 in the TGNTATF3T
Deuteronomy 21 in the THAI
Deuteronomy 21 in the TNFD
Deuteronomy 21 in the TNT
Deuteronomy 21 in the TNTIK
Deuteronomy 21 in the TNTIL
Deuteronomy 21 in the TNTIN
Deuteronomy 21 in the TNTIP
Deuteronomy 21 in the TNTIZ
Deuteronomy 21 in the TOMA
Deuteronomy 21 in the TTENT
Deuteronomy 21 in the UBG
Deuteronomy 21 in the UGV
Deuteronomy 21 in the UGV2
Deuteronomy 21 in the UGV3
Deuteronomy 21 in the VBL
Deuteronomy 21 in the VDCC
Deuteronomy 21 in the YALU
Deuteronomy 21 in the YAPE
Deuteronomy 21 in the YBVTP
Deuteronomy 21 in the ZBP