Exodus 37 (BOKCV2)

1 ಬೆಚಲಯೇಲನು ಜಾಲಿ ಮರದಿಂದ ಸುಮಾರು ಒಂದು ಮೀಟರ್ ಉದ್ದ ಮತ್ತು ಅರವತ್ತೆಂಟು ಸೆಂಟಿಮೀಟರ್ ಅಗಲ ಮತ್ತು ಎತ್ತರವಾಗಿರುವ ಮಂಜೂಷವನ್ನು ಮಾಡಿದನು. 2 ಅದನ್ನು ಶುದ್ಧ ಬಂಗಾರದಿಂದ ಒಳಗೂ ಹೊರಗೂ ಹೊದಿಸಿ, ಅದರ ಸುತ್ತಲೂ ಬಂಗಾರದ ತೋರಣವನ್ನು ಮಾಡಿದನು. 3 ಅದರ ನಾಲ್ಕು ಬಂಗಾರದ ಬಳೆಗಳನ್ನು ಎರಕಹೊಯಿಸಿ ಅದರ ನಾಲ್ಕು ಮೂಲೆಗಳಲ್ಲಿ ಎಂದರೆ ಒಂದು ಕಡೆಯಲ್ಲಿ ಎರಡು ಬಳೆಗಳನ್ನು ಮತ್ತೊಂದು ಕಡೆಯಲ್ಲಿ ಎರಡು ಬಳೆಗಳನ್ನು ಇರಿಸಿದನು. 4 ಆಮೇಲೆ ಜಾಲಿ ಮರದ ಕೋಲುಗಳನ್ನು ಮಾಡಿಸಿ, ಅವುಗಳಿಗೆ ಬಂಗಾರದಿಂದ ಹೊದಿಸಬೇಕು. 5 ಮಂಜೂಷವನ್ನು ಹೊರುವುದಕ್ಕಾಗಿ ಕೋಲುಗಳನ್ನು ಮಂಜೂಷದ ಎರಡು ಕಡೆಗಳಲ್ಲಿರುವ ಬಳೆಗಳಲ್ಲಿ ಸೇರಿಸಿದನು. 6 ಇದಲ್ಲದೆ ಸುಮಾರು ನೂರಹತ್ತು ಸೆಂಟಿಮೀಟರ್ ಉದ್ದವೂ ಎಪ್ಪತ್ತು ಸೆಂಟಿಮೀಟರ್ ಅಗಲವೂ ಇರುವ ಕರುಣಾಸನವನ್ನು ಶುದ್ಧ ಬಂಗಾರದಿಂದ ಮಾಡಿದನು. 7 ಅವನು ಕರುಣಾಸನದ ಎರಡು ತುದಿಗಳಲ್ಲಿ ಎರಡು ಬಂಗಾರದಿಂದ ಕೆರೂಬಿಗಳನ್ನು ನಕಾಸಿ ಕೆಲಸದಿಂದ ಮಾಡಿದನು. 8 ಒಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಇನ್ನೊಂದು ಬದಿಯ ಕೊನೆಯಲ್ಲಿ ಒಂದು ಕೆರೂಬಿಯನ್ನೂ ಮಾಡಿದನು. ಹೀಗೆ ಕರುಣಾಸನದ ಎರಡೂ ಬದಿಗಳಲ್ಲಿ ಕೆರೂಬಿಯನ್ನು ಮಾಡಿದನು. 9 ಆ ಕೆರೂಬಿಗಳು ತಮ್ಮ ರೆಕ್ಕೆಗಳನ್ನು ಮೇಲಕ್ಕೆ ಚಾಚಿರುವಂತೆಯೂ ಕರುಣಾಸನವನ್ನು ತಮ್ಮ ರೆಕ್ಕೆಗಳಿಂದ ಮುಚ್ಚುವಂತೆಯೂ ಇದ್ದವು. ಕೆರೂಬಿಗಳ ಮುಖಗಳು ಎದುರುಬದುರಾಗಿ ಕರುಣಾಸನವನ್ನು ನೋಡುತ್ತಿದ್ದವು. 10 ಸುಮಾರು ತೊಂಬತ್ತು ಸೆಂಟಿಮೀಟರ್ ಉದ್ದ, ನಲವತ್ತೈದು ಸೆಂಟಿಮೀಟರ್ ಅಗಲ ಮತ್ತು ಅರವತ್ತೆಂಟು ಸೆಂಟಿಮೀಟರ್ ಎತ್ತರ ಇರುವ ಮೇಜನ್ನು ಜಾಲಿ ಮರದಿಂದ ಮಾಡಿದನು. 11 ಆಮೇಲೆ ಅದನ್ನು ಶುದ್ಧ ಬಂಗಾರದಿಂದ ಹೊದಿಸಿ, ಸುತ್ತಲೂ ಬಂಗಾರದ ತೋರಣ ಕಟ್ಟಿದನು. 12 ಸುತ್ತಲೂ ಅಂಗೈ ಅಗಲದ ಅಡ್ಡಪಟ್ಟಿಯನ್ನು ಮಾಡಿಸಿ, ಅಂಚಿನ ಸುತ್ತಲೂ ಬಂಗಾರದ ತೋರಣವನ್ನು ಕಟ್ಟಿದರು. 13 ಮೇಜಿಗೆ ಬಂಗಾರದ ನಾಲ್ಕು ಬಳೆಗಳನ್ನು ಎರಕ ಹೊಯ್ದು, ಅವುಗಳನ್ನು ಅದರ ನಾಲ್ಕು ಕಾಲುಗಳಲ್ಲಿರುವ ನಾಲ್ಕು ಮೂಲೆಗಳಿಗೆ ಜೋಡಿಸಿದರು. 14 ಮೇಜನ್ನು ಹೊತ್ತುಕೊಂಡು ಹೋಗಲು ಕೋಲುಗಳನ್ನು ಮಾಡಿ, ಈ ಬಳೆಗಳನ್ನು ಅಡ್ಡಪಟ್ಟಿಗೆ ಸಮೀಪದಲ್ಲಿ ಕೂಡಿಸಿದರು. 15 ಮೇಜನ್ನು ಹೊತ್ತುಕೊಂಡು ಹೋಗುವವರಿಗಾಗಿ ಜಾಲಿ ಮರದಿಂದ ಕೋಲುಗಳನ್ನು ಮಾಡಿ, ಅವುಗಳಿಗೆ ಬಂಗಾರದಿಂದ ಹೊದಿಸಲಾಯಿತು. 16 ಮೇಜಿನ ಮೇಲೆ ಇಡಬೇಕಾದ ಉಪಕರಣಗಳನ್ನು ಅಂದರೆ ಹರಿವಾಣ, ಧೂಪಾರತಿಗಳು, ಹೂಜೆಗಳು, ಪಾನದ್ರವ್ಯಗಳ ಅರ್ಪಣೆಗಾಗಿ ಬೇಕಾಗುವ ಬಟ್ಟಲುಗಳನ್ನು ಶುದ್ಧ ಬಂಗಾರದಿಂದ ಮಾಡಿದರು. 17 ಚೊಕ್ಕ ಬಂಗಾರದಿಂದ ದೀಪಸ್ತಂಭವನ್ನು ಮಾಡಿದರು. ಅದರ ಬುಡವನ್ನೂ ಕಂಬವನ್ನೂ ನಕಾಸಿ ಕೆಲಸದಿಂದ ಮಾಡಿದರು. ದೀಪಸ್ತಂಭದ ಬುಡದಿಂದಲೇ ಅಖಂಡವಾಗಿ ಪುಷ್ಪದ ಗೊಂಚಲುಗಳಂತೆಯೂ ಹಣತೆಗಳಂತೆಯೂ ಮೊಗ್ಗುಗಳಂತೆಯೂ ಇದ್ದವು. 18 ಆ ದೀಪಸ್ತಂಭದಿಂದ ಆರು ಕೊಂಬೆಗಳು ಹೊರ ಬಂದಿದ್ದವು. ಅಂದರೆ ಒಂದು ಭಾಗದಿಂದ ಮೂರು ಕೊಂಬೆಗಳೂ ಮತ್ತೊಂದು ಭಾಗದಿಂದ ಮೂರು ಕೊಂಬೆಗಳೂ ಹೊರಗೆ ಬಂದಿದ್ದವು. 19 ಒಂದು ಕೊಂಬೆಯಲ್ಲಿ ಬಾದಾಮಿ ಪುಷ್ಟದಂತಿರುವ ಮೂರು ಹಣತೆಗಳು, ಮೊಗ್ಗು ಪುಷ್ಟಗಳಿದ್ದವು ಮತ್ತು ಮತ್ತೊಂದು ಕೊಂಬೆಯಲ್ಲಿ ಬಾದಾಮಿಯ ಪುಷ್ಟವಿದ್ದ ಮೂರು ಹಣತೆಗಳು ಮೊಗ್ಗು ಪುಷ್ಟಗಳಿದ್ದವು. ಈ ಪ್ರಕಾರ ದೀಪಸ್ತಂಭದಿಂದ ಹೊರಗೆ ಬರುವ ಆರು ಕೊಂಬೆಗಳಲ್ಲಿಯೂ ಇದ್ದವು. 20 ದೀಪಸ್ತಂಭದಲ್ಲಿಯೇ ಬಾದಾಮಿ ಹೂವುಗಳಂತೆಯೂ ಮೊಗ್ಗುಗಳಂತೆಯೂ ಅದಕ್ಕೊಂದು ಪುಷ್ಪದ ಆಕಾರದಲ್ಲಿ ನಾಲ್ಕು ಹಣತೆಗಳು ಇದ್ದವು. 21 ದೀಪಸ್ತಂಭದಿಂದ ಹೊರಬರುವ ಒಂದು ಮೊಗ್ಗು ಮೊದಲ ಜೋಡಿ ಕೊಂಬೆಗಳ ಅಡಿಯಲ್ಲಿತ್ತು, ಎರಡನೇ ಮೊಗ್ಗು ಎರಡನೇ ಜೋಡಿಯ ಅಡಿಯಲ್ಲಿ ಮತ್ತು ಮೂರನೆಯ ಮೊಗ್ಗು ಮೂರನೆಯ ಜೋಡಿಯ ಅಡಿಯಲ್ಲಿ ಹೀಗೆ ಆರು ಕೊಂಬೆಗಳಿದ್ದವು. 22 ಅದರ ಮೊಗ್ಗುಗಳೂ ಕೊಂಬೆಗಳೂ ಅದರಿಂದಲೇ ಬಂದಿದ್ದವು. ದೀಪಸ್ತಂಭವನ್ನೆಲ್ಲಾ ಶುದ್ಧ ಬಂಗಾರದ ಒಂದೇ ಅಚ್ಚಿನಲ್ಲಿ ಬರೆದ ಕಲಾಕೃತಿಯಾಗಿತ್ತು. 23 ಅವರು ಏಳು ದೀಪಗಳನ್ನೂ ಕುಡಿ ಕತ್ತರಿಸುವ ಕತ್ತರಿಗಳನ್ನೂ ಬೂದಿಯ ಪಾತ್ರೆಗಳನ್ನೂ ಶುದ್ಧ ಬಂಗಾರದಿಂದಲೇ ಮಾಡಿದರು. 24 ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಒಂದು ತಲಾಂತು ಶುದ್ಧ ಬಂಗಾರದಿಂದ ಮಾಡಿದರು. 25 ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಿದರು. ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿತ್ತು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಲಾಗಿತ್ತು. 26 ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿದರು. ಅದರ ಸುತ್ತಲೂ ಬಂಗಾರದ ಗೋಟನ್ನು ಕಟ್ಟಿಸಿದರು. 27 ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಿದರು, ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಿದರು. 28 ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಿದರು. 29 ಅನಂತರ ಅವರು ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮತ್ತು ಪರಿಮಳ ದ್ರವ್ಯದಿಂದ ಶುದ್ಧವಾದ ಧೂಪವನ್ನು ತಯಾರಿಸಿದರು.

In Other Versions

Exodus 37 in the ANGEFD

Exodus 37 in the ANTPNG2D

Exodus 37 in the AS21

Exodus 37 in the BAGH

Exodus 37 in the BBPNG

Exodus 37 in the BBT1E

Exodus 37 in the BDS

Exodus 37 in the BEV

Exodus 37 in the BHAD

Exodus 37 in the BIB

Exodus 37 in the BLPT

Exodus 37 in the BNT

Exodus 37 in the BNTABOOT

Exodus 37 in the BNTLV

Exodus 37 in the BOATCB

Exodus 37 in the BOATCB2

Exodus 37 in the BOBCV

Exodus 37 in the BOCNT

Exodus 37 in the BOECS

Exodus 37 in the BOGWICC

Exodus 37 in the BOHCB

Exodus 37 in the BOHCV

Exodus 37 in the BOHLNT

Exodus 37 in the BOHNTLTAL

Exodus 37 in the BOICB

Exodus 37 in the BOILNTAP

Exodus 37 in the BOITCV

Exodus 37 in the BOKCV

Exodus 37 in the BOKHWOG

Exodus 37 in the BOKSSV

Exodus 37 in the BOLCB

Exodus 37 in the BOLCB2

Exodus 37 in the BOMCV

Exodus 37 in the BONAV

Exodus 37 in the BONCB

Exodus 37 in the BONLT

Exodus 37 in the BONUT2

Exodus 37 in the BOPLNT

Exodus 37 in the BOSCB

Exodus 37 in the BOSNC

Exodus 37 in the BOTLNT

Exodus 37 in the BOVCB

Exodus 37 in the BOYCB

Exodus 37 in the BPBB

Exodus 37 in the BPH

Exodus 37 in the BSB

Exodus 37 in the CCB

Exodus 37 in the CUV

Exodus 37 in the CUVS

Exodus 37 in the DBT

Exodus 37 in the DGDNT

Exodus 37 in the DHNT

Exodus 37 in the DNT

Exodus 37 in the ELBE

Exodus 37 in the EMTV

Exodus 37 in the ESV

Exodus 37 in the FBV

Exodus 37 in the FEB

Exodus 37 in the GGMNT

Exodus 37 in the GNT

Exodus 37 in the HARY

Exodus 37 in the HNT

Exodus 37 in the IRVA

Exodus 37 in the IRVB

Exodus 37 in the IRVG

Exodus 37 in the IRVH

Exodus 37 in the IRVK

Exodus 37 in the IRVM

Exodus 37 in the IRVM2

Exodus 37 in the IRVO

Exodus 37 in the IRVP

Exodus 37 in the IRVT

Exodus 37 in the IRVT2

Exodus 37 in the IRVU

Exodus 37 in the ISVN

Exodus 37 in the JSNT

Exodus 37 in the KAPI

Exodus 37 in the KBT1ETNIK

Exodus 37 in the KBV

Exodus 37 in the KJV

Exodus 37 in the KNFD

Exodus 37 in the LBA

Exodus 37 in the LBLA

Exodus 37 in the LNT

Exodus 37 in the LSV

Exodus 37 in the MAAL

Exodus 37 in the MBV

Exodus 37 in the MBV2

Exodus 37 in the MHNT

Exodus 37 in the MKNFD

Exodus 37 in the MNG

Exodus 37 in the MNT

Exodus 37 in the MNT2

Exodus 37 in the MRS1T

Exodus 37 in the NAA

Exodus 37 in the NASB

Exodus 37 in the NBLA

Exodus 37 in the NBS

Exodus 37 in the NBVTP

Exodus 37 in the NET2

Exodus 37 in the NIV11

Exodus 37 in the NNT

Exodus 37 in the NNT2

Exodus 37 in the NNT3

Exodus 37 in the PDDPT

Exodus 37 in the PFNT

Exodus 37 in the RMNT

Exodus 37 in the SBIAS

Exodus 37 in the SBIBS

Exodus 37 in the SBIBS2

Exodus 37 in the SBICS

Exodus 37 in the SBIDS

Exodus 37 in the SBIGS

Exodus 37 in the SBIHS

Exodus 37 in the SBIIS

Exodus 37 in the SBIIS2

Exodus 37 in the SBIIS3

Exodus 37 in the SBIKS

Exodus 37 in the SBIKS2

Exodus 37 in the SBIMS

Exodus 37 in the SBIOS

Exodus 37 in the SBIPS

Exodus 37 in the SBISS

Exodus 37 in the SBITS

Exodus 37 in the SBITS2

Exodus 37 in the SBITS3

Exodus 37 in the SBITS4

Exodus 37 in the SBIUS

Exodus 37 in the SBIVS

Exodus 37 in the SBT

Exodus 37 in the SBT1E

Exodus 37 in the SCHL

Exodus 37 in the SNT

Exodus 37 in the SUSU

Exodus 37 in the SUSU2

Exodus 37 in the SYNO

Exodus 37 in the TBIAOTANT

Exodus 37 in the TBT1E

Exodus 37 in the TBT1E2

Exodus 37 in the TFTIP

Exodus 37 in the TFTU

Exodus 37 in the TGNTATF3T

Exodus 37 in the THAI

Exodus 37 in the TNFD

Exodus 37 in the TNT

Exodus 37 in the TNTIK

Exodus 37 in the TNTIL

Exodus 37 in the TNTIN

Exodus 37 in the TNTIP

Exodus 37 in the TNTIZ

Exodus 37 in the TOMA

Exodus 37 in the TTENT

Exodus 37 in the UBG

Exodus 37 in the UGV

Exodus 37 in the UGV2

Exodus 37 in the UGV3

Exodus 37 in the VBL

Exodus 37 in the VDCC

Exodus 37 in the YALU

Exodus 37 in the YAPE

Exodus 37 in the YBVTP

Exodus 37 in the ZBP