Ezekiel 31 (BOKCV2)
1 ಹನ್ನೊಂದನೆಯ ವರ್ಷದ, ಮೂರನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು: 2 “ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನೊಂದಿಗೂ ಮತ್ತು ಅವನ ಸಮೂಹದೊಂದಿಗೂ ಮಾತನಾಡಿ,“ ‘ನೀನು ನಿನ್ನ ದೊಡ್ಡಸ್ತಿಕೆಯಲ್ಲಿ ಯಾರಿಗೆ ಸಮಾನವಾಗಿರುವೆ? 3 ಅಸ್ಸೀರಿಯವು ಲೆಬನೋನಿನ ಸುಂದರವಾದ ಕೊಂಬೆಗಳುಳ್ಳ ದೇವದಾರು ಆಗಿದೆ.ಅದರ ನೆರಳು ದಟ್ಟವಾಗಿದೆ, ಬಹಳ ಎತ್ತರವಾಗಿದೆ,ಅದರ ತುದಿಯು ದಟ್ಟವಾದ ಕೊಂಬೆಗಳ ನಡುವೆಯಿತ್ತು. 4 ಅದನ್ನು ಜಲಪ್ರವಾಹಗಳು ಬೆಳೆಸಿದವು,ಆಳವಾದ ಬುಗ್ಗೆಗಳು ಅದನ್ನು ಎತ್ತರಕ್ಕೆ ಬೆಳೆಸಿದವು.ಅವುಗಳ ತೊರೆಗಳು ಅದರ ಬುಡದ ಸುತ್ತಲೂಹರಿದು ತಮ್ಮ ಕಾಲುವೆಗಳನ್ನುಹೊಲದ ಎಲ್ಲಾ ಮರಗಳಿಗೆ ಕಳುಹಿಸಿದವು. 5 ಆದ್ದರಿಂದ ಅದರ ಎತ್ತರವುಬಯಲಿನ ಎಲ್ಲಾ ಮರಗಳಿಗಿಂತ ಎತ್ತರವಾಗಿತ್ತು.ಅದು ಹಬ್ಬಿದ್ದುದರಿಂದ ಮತ್ತು ಹೆಚ್ಚು ನೀರಿನ ದೆಸೆಯಿಂದಅದರ ಕೊಂಬೆಗಳು ಅಧಿಕವಾದವು;ಅದರ ರೆಂಬೆಗಳು ಉದ್ದವಾದವು. 6 ಅದರ ಕೊಂಬೆಗಳಲ್ಲಿ ಆಕಾಶದಎಲ್ಲಾ ಪಕ್ಷಿಗಳು ತಮ್ಮ ಗೂಡುಗಳನ್ನು ಮಾಡಿದವು.ಅದರ ರೆಂಬೆಗಳ ಕೆಳಗೆ ಬಯಲಿನಎಲ್ಲಾ ಮೃಗಗಳು ಮರಿಗಳಿಗೆ ಜನ್ಮ ಕೊಟ್ಟವು.ಅದರ ಕೆಳಗೆ ನೆರಳಿನಲ್ಲಿಎಲ್ಲಾ ಮಹಾಜನಾಂಗಗಳು ವಾಸಮಾಡಿದವು. 7 ಹೀಗೆ ಅದರ ತನ್ನ ದೊಡ್ಡಸ್ತಿಕೆಯಲ್ಲಿತನ್ನ ನೀಳವಾದ ಕೊಂಬೆಗಳಿಂದ ಸುಂದರವಾಗಿತ್ತು.ಏಕೆಂದರೆ ಅದರ ಬೇರು ಸಾಕಷ್ಟುನೀರಿನ ಆಸರೆ ಪಡೆದಿತ್ತು. 8 ದೇವರ ತೋಟದ ದೇವದಾರುಗಳುಅದನ್ನು ಮರೆಮಾಡಲಿಲ್ಲ.ತುರಾಯಿ ಮರಗಳುಅದರ ಕೊಂಬೆಗಳಿಗೆ ಸಮವಾಗಲಿಲ್ಲ.ಆಲದ ಮರಗಳುಅದರ ರೆಂಬೆಗಳಷ್ಟೂ ಇಲ್ಲ.ಆ ದೇವರ ತೋಟದ ಯಾವುದೇ ಮರವುಇದರ ಸೌಂದರ್ಯಕ್ಕೆ ಸಮವಾಗಿಲ್ಲ. 9 ನಾನು ಅದನ್ನು ಅದರ ಕೊಂಬೆಗಳಸಮೂಹದಿಂದ ಸುಂದರಗೊಳಿಸಿದೆನು.ಅದರಿಂದ ದೇವರ ತೋಟದಲ್ಲಿನ ಏದೆನಿನ ಮರಗಳೆಲ್ಲಾಅದರ ಮೇಲೆ ಹೊಟ್ಟೆಕಿಚ್ಚು ಪಟ್ಟವು. 10 “ ‘ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಅವನು ಎತ್ತರವಾಗಿ ಬೆಳೆದು ತನ್ನ ತುದಿ ಮೋಡಗಳನ್ನು ಮುಟ್ಟುವಷ್ಟು ನೀಳವಾಗಿದ್ದುದರ ಬಗ್ಗೆ ಗರ್ವಪಟ್ಟನು. 11 ಆದ್ದರಿಂದ ನಾನು ಅವನನ್ನು ಜನಾಂಗಗಳಲ್ಲಿ ಶೂರನಾದ ಒಬ್ಬನ ಕೈಗೆ ಕೊಟ್ಟಿದ್ದೇನೆ. ಇವನು ನಿಶ್ಚಯವಾಗಿ ಅದನ್ನು ದಂಡಿಸುತ್ತಾನೆ ಅದರ ದುಷ್ಟತ್ವದ ನಿಮಿತ್ತ ನಾನು ಅದನ್ನು ತಳ್ಳಿಹಾಕಿದ್ದೇನೆ. 12 ಜನಾಂಗಗಳಲ್ಲಿ ಭಯಂಕರವಾದ ವಿದೇಶಿಯರು ಅದನ್ನು ಕಡಿದುಹಾಕುವರು. ಎಲ್ಲಾ ಬೆಟ್ಟಗಳ ಮೇಲೆಯೂ ತಗ್ಗುಗಳಲ್ಲಿಯೂ ಅದರ ಕೊಂಬೆಗಳು ಬೀಳುವುವು. ದೇಶದ ಹಳ್ಳಗಳಲ್ಲೆಲ್ಲಾ ಅದರ ರೆಂಬೆಗಳು ಮುರಿದು ಹೋಗುವುವು. ಭೂಮಿಯ ಜನಗಳೆಲ್ಲಾ ಅದರ ನೆರಳಿನಿಂದ ದೂರ ಸರಿದು ಅದನ್ನು ಬಿಟ್ಟುಬಿಡುವರು. 13 ಕೆಳಗೆ ಬಿದ್ದ ಮರದ ಮೇಲೆ ಆಕಾಶದ ಪಕ್ಷಿಗಳೆಲ್ಲಾ ಕೂತುಕೊಳ್ಳುವುವು. ಎಲ್ಲಾ ಕಾಡುಮೃಗಗಳು ಅದರ ರೆಂಬೆಗಳ ಬಳಿಯಲ್ಲಿರುವುವು. 14 ನೀರಾವರಿಯ ಯಾವ ಮರಗಳು ತಮ್ಮ ಎತ್ತರವನ್ನು ಹೆಚ್ಚಿಸಿಕೊಂಡು ತಮ್ಮ ತುದಿಯನ್ನು ಮೋಡಗಳಿಗೆ ತಗುಲಿಸದೆ ಇರುವುದರಿಂದ ನೀರನ್ನು ಹೀರುತ್ತಲಿರುವ ದೊಡ್ಡ ದೊಡ್ಡ ಮರಗಳು ಎತ್ತರವಾಗಿ ಚಾಚಿಕೊಳ್ಳದೆ ಇರಲೆಂದು ಹೀಗಾಯಿತು, ಅವೆಲ್ಲಾ ಮರಣದ ಪಾಲಾಗುವುವು. ಅವುಗಳಿಗೆ ಅಧೋಲೋಕವೇ ಗತಿಯಾಗುವುದು, ಪಾತಾಳಕ್ಕೆ ಇಳಿದು ಹೋದ ಮನುಷ್ಯ ಜನ್ಮದವರ ಬಳಿಗೆ ಒಂದೇ ಗುಂಪಾಗಿ ಸೇರುವುವು. 15 “ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅದು ಸಮಾಧಿಗೆ ಇಳಿದ ದಿನದಲ್ಲಿ ನಾನು ಆಳವಾದ ಬುಗ್ಗೆಗಳನ್ನು ದುಃಖದಿಂದ ಮುಚ್ಚಿದೆನು; ನಾನು ಅದರ ಪ್ರವಾಹವನ್ನು ತಡೆಹಿಡಿದೆನು. ಮಹಾಜಲವನ್ನು ನಿಲ್ಲಿಸಿದೆನು. ನಾನು ಲೆಬನೋನನ್ನು ಸಹ ಅವನಿಗೋಸ್ಕರ ಗೋಳಿಡುವಂತೆ ಮಾಡಿದೆನು. ಬಯಲಿನ ಮರಗಳೆಲ್ಲಾ ಕುಗ್ಗಿಹೋದವು. 16 ನಾನು ಅದನ್ನು ಕುಳಿಗೆ ಇಳಿಯುವವರ ಜೊತೆಗೆ ಸೇರಿಸಬೇಕೆಂದು ಪಾತಾಳಕ್ಕೆ ತಳ್ಳಿಬಿಟ್ಟಾಗ ಅದು ಬಿದ್ದ ಶಬ್ದಕ್ಕೆ ಸಕಲ ಜನಾಂಗಗಳು ನಡುಗಿದವು. ಅಧೋಲೋಕದ ಪಾಲಾದ ಏದೆನಿನ ಎಲ್ಲಾ ಮರಗಳು, ಲೆಬನೋನಿನ ಉತ್ತಮೋತ್ತಮವಾದ ವೃಕ್ಷಗಳು, ನೀರು ಕುಡಿಯುವುವುಗಳೆಲ್ಲಾ ಕೆಳಗಿನ ಸೀಮೆಯಲ್ಲಿ ಸಂತೈಸಿಕೊಂಡವು. 17 ಇದಲ್ಲದೆ, ಅದಕ್ಕೆ ತೋಳಬಲವಾಗಿ ಜನಾಂಗಗಳ ಮಧ್ಯೆ ಅದರ ನೆರಳನ್ನು ಆಶ್ರಯಿಸಿದವರು, ಅದರೊಂದಿಗೆ ಪಾತಾಳಕ್ಕಿಳಿದು, ಖಡ್ಗಹತರ ಜೊತೆಗೆ ಸೇರಿದರು. 18 “ ‘ನೀನು ಹೀಗೆ ಘನತೆಯಿಂದಲೂ ದೊಡ್ಡಸ್ತಿಕೆಯಿಂದಲೂ ಏದೆನಿನ ಯಾವ ಮರಗಳಿಗೆ ಸಮನಾಗಿರುವೆ? ಆದರೂ ನೀನು ಏದೆನಿನ ಮರಗಳ ಸಂಗಡ ಭೂಮಿಯ ಕೆಳಭಾಗಗಳಿಗೆ ದೂಡಿದವನಾಗುವೆ. ಸುನ್ನತಿಯಿಲ್ಲದವರ ಮಧ್ಯದಲ್ಲಿ ಖಡ್ಗದಿಂದ ಹತರಾದವರ ಸಂಗಡ ಮಲಗುವೆ.“ ‘ಇದೇ ಫರೋಹನನೂ ಅವನ ಎಲ್ಲಾ ಜನಸಮೂಹವೂ ಆಗಿವೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ”
In Other Versions
Ezekiel 31 in the ANGEFD
Ezekiel 31 in the ANTPNG2D
Ezekiel 31 in the AS21
Ezekiel 31 in the BAGH
Ezekiel 31 in the BBPNG
Ezekiel 31 in the BBT1E
Ezekiel 31 in the BDS
Ezekiel 31 in the BEV
Ezekiel 31 in the BHAD
Ezekiel 31 in the BIB
Ezekiel 31 in the BLPT
Ezekiel 31 in the BNT
Ezekiel 31 in the BNTABOOT
Ezekiel 31 in the BNTLV
Ezekiel 31 in the BOATCB
Ezekiel 31 in the BOATCB2
Ezekiel 31 in the BOBCV
Ezekiel 31 in the BOCNT
Ezekiel 31 in the BOECS
Ezekiel 31 in the BOGWICC
Ezekiel 31 in the BOHCB
Ezekiel 31 in the BOHCV
Ezekiel 31 in the BOHLNT
Ezekiel 31 in the BOHNTLTAL
Ezekiel 31 in the BOICB
Ezekiel 31 in the BOILNTAP
Ezekiel 31 in the BOITCV
Ezekiel 31 in the BOKCV
Ezekiel 31 in the BOKHWOG
Ezekiel 31 in the BOKSSV
Ezekiel 31 in the BOLCB
Ezekiel 31 in the BOLCB2
Ezekiel 31 in the BOMCV
Ezekiel 31 in the BONAV
Ezekiel 31 in the BONCB
Ezekiel 31 in the BONLT
Ezekiel 31 in the BONUT2
Ezekiel 31 in the BOPLNT
Ezekiel 31 in the BOSCB
Ezekiel 31 in the BOSNC
Ezekiel 31 in the BOTLNT
Ezekiel 31 in the BOVCB
Ezekiel 31 in the BOYCB
Ezekiel 31 in the BPBB
Ezekiel 31 in the BPH
Ezekiel 31 in the BSB
Ezekiel 31 in the CCB
Ezekiel 31 in the CUV
Ezekiel 31 in the CUVS
Ezekiel 31 in the DBT
Ezekiel 31 in the DGDNT
Ezekiel 31 in the DHNT
Ezekiel 31 in the DNT
Ezekiel 31 in the ELBE
Ezekiel 31 in the EMTV
Ezekiel 31 in the ESV
Ezekiel 31 in the FBV
Ezekiel 31 in the FEB
Ezekiel 31 in the GGMNT
Ezekiel 31 in the GNT
Ezekiel 31 in the HARY
Ezekiel 31 in the HNT
Ezekiel 31 in the IRVA
Ezekiel 31 in the IRVB
Ezekiel 31 in the IRVG
Ezekiel 31 in the IRVH
Ezekiel 31 in the IRVK
Ezekiel 31 in the IRVM
Ezekiel 31 in the IRVM2
Ezekiel 31 in the IRVO
Ezekiel 31 in the IRVP
Ezekiel 31 in the IRVT
Ezekiel 31 in the IRVT2
Ezekiel 31 in the IRVU
Ezekiel 31 in the ISVN
Ezekiel 31 in the JSNT
Ezekiel 31 in the KAPI
Ezekiel 31 in the KBT1ETNIK
Ezekiel 31 in the KBV
Ezekiel 31 in the KJV
Ezekiel 31 in the KNFD
Ezekiel 31 in the LBA
Ezekiel 31 in the LBLA
Ezekiel 31 in the LNT
Ezekiel 31 in the LSV
Ezekiel 31 in the MAAL
Ezekiel 31 in the MBV
Ezekiel 31 in the MBV2
Ezekiel 31 in the MHNT
Ezekiel 31 in the MKNFD
Ezekiel 31 in the MNG
Ezekiel 31 in the MNT
Ezekiel 31 in the MNT2
Ezekiel 31 in the MRS1T
Ezekiel 31 in the NAA
Ezekiel 31 in the NASB
Ezekiel 31 in the NBLA
Ezekiel 31 in the NBS
Ezekiel 31 in the NBVTP
Ezekiel 31 in the NET2
Ezekiel 31 in the NIV11
Ezekiel 31 in the NNT
Ezekiel 31 in the NNT2
Ezekiel 31 in the NNT3
Ezekiel 31 in the PDDPT
Ezekiel 31 in the PFNT
Ezekiel 31 in the RMNT
Ezekiel 31 in the SBIAS
Ezekiel 31 in the SBIBS
Ezekiel 31 in the SBIBS2
Ezekiel 31 in the SBICS
Ezekiel 31 in the SBIDS
Ezekiel 31 in the SBIGS
Ezekiel 31 in the SBIHS
Ezekiel 31 in the SBIIS
Ezekiel 31 in the SBIIS2
Ezekiel 31 in the SBIIS3
Ezekiel 31 in the SBIKS
Ezekiel 31 in the SBIKS2
Ezekiel 31 in the SBIMS
Ezekiel 31 in the SBIOS
Ezekiel 31 in the SBIPS
Ezekiel 31 in the SBISS
Ezekiel 31 in the SBITS
Ezekiel 31 in the SBITS2
Ezekiel 31 in the SBITS3
Ezekiel 31 in the SBITS4
Ezekiel 31 in the SBIUS
Ezekiel 31 in the SBIVS
Ezekiel 31 in the SBT
Ezekiel 31 in the SBT1E
Ezekiel 31 in the SCHL
Ezekiel 31 in the SNT
Ezekiel 31 in the SUSU
Ezekiel 31 in the SUSU2
Ezekiel 31 in the SYNO
Ezekiel 31 in the TBIAOTANT
Ezekiel 31 in the TBT1E
Ezekiel 31 in the TBT1E2
Ezekiel 31 in the TFTIP
Ezekiel 31 in the TFTU
Ezekiel 31 in the TGNTATF3T
Ezekiel 31 in the THAI
Ezekiel 31 in the TNFD
Ezekiel 31 in the TNT
Ezekiel 31 in the TNTIK
Ezekiel 31 in the TNTIL
Ezekiel 31 in the TNTIN
Ezekiel 31 in the TNTIP
Ezekiel 31 in the TNTIZ
Ezekiel 31 in the TOMA
Ezekiel 31 in the TTENT
Ezekiel 31 in the UBG
Ezekiel 31 in the UGV
Ezekiel 31 in the UGV2
Ezekiel 31 in the UGV3
Ezekiel 31 in the VBL
Ezekiel 31 in the VDCC
Ezekiel 31 in the YALU
Ezekiel 31 in the YAPE
Ezekiel 31 in the YBVTP
Ezekiel 31 in the ZBP