Jeremiah 18 (BOKCV2)
1 ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವೇನೆಂದರೆ, 2 “ನೀನು ಎದ್ದು ಕುಂಬಾರನ ಮನೆಗೆ ಇಳಿದು ಹೋಗು. ಅಲ್ಲಿ ನಿನಗೆ ನನ್ನ ವಾಕ್ಯಗಳನ್ನು ಕೊಡುತ್ತೇನೆ,” ಎಂದರು. 3 ಆಗ ನಾನು ಕುಂಬಾರನ ಮನೆಗೆ ಇಳಿದು ಹೋದೆನು. ಇಗೋ, ಅವನು ಚಕ್ರದ ಮೇಲೆ ಕೆಲಸ ಮಾಡುತ್ತಿದ್ದನು. 4 ಅವನು ಮಣ್ಣಿನಿಂದ ಮಾಡಿದ ಪಾತ್ರೆ ಕುಂಬಾರನ ಕೈಯಲ್ಲಿ ಕೆಟ್ಟು ಹೋಯಿತು. ಆಗ ಕುಂಬಾರನಿಗೆ ಒಳ್ಳೆಯದೆಂದು ತೋರುವ ಪ್ರಕಾರ, ಅದನ್ನು ಮತ್ತೊಂದು ಪಾತ್ರೆಯನ್ನಾಗಿ ಮಾಡಿದನು. 5 ಅನಂತರ ಯೆಹೋವ ದೇವರ ವಾಕ್ಯವು ನನಗೆ ಉಂಟಾಗಿ, 6 “ಈ ಇಸ್ರಾಯೇಲಿನ ಮನೆತನದವರೇ, ನಾನು ಈ ಕುಂಬಾರನ ಹಾಗೆ ನಿಮಗೆ ಮಾಡಲಾರೆನೇ, ಎಂದು ಯೆಹೋವ ದೇವರು ಅನ್ನುತ್ತಾರೆ. ಇಗೋ, ಕುಂಬಾರನ ಕೈಯಲ್ಲಿ ಮಣ್ಣು ಹೇಗೋ ಹಾಗೆಯೇ, ಓ ಇಸ್ರಾಯೇಲಿನ ಮನೆತನದವರೇ, ನನ್ನ ಕೈಯಲ್ಲಿ ನೀವು ಇದ್ದೀರಿ. 7 ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿ ಮತ್ತು ಒಂದು ರಾಜ್ಯದ ವಿಷಯವಾಗಿ ಅದನ್ನು ಕೀಳುವುದಕ್ಕೂ ಕೆಡವುದಕ್ಕೂ ನಾಶಮಾಡುವುದಕ್ಕೂ ಮಾತಾಡುತ್ತೇನೋ, 8 ನಾನು ಆ ಜನಾಂಗಕ್ಕೆ ವಿರೋಧವಾಗಿ ಮಾತನಾಡಿದ ತನ್ನ ಕೆಟ್ಟತನವನ್ನು ಬಿಟ್ಟು ತಿರುಗಿದರೆ, ನಾನು ಅದಕ್ಕೆ ಮಾಡಬೇಕೆಂದು ಯೋಚಿಸಿದ ಕೆಟ್ಟದ್ದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು. 9 ಇದಲ್ಲದೆ ಯಾವ ಕ್ಷಣದಲ್ಲಿ ನಾನು ಒಂದು ಜನಾಂಗದ ವಿಷಯವಾಗಿಯೂ ಒಂದು ರಾಜ್ಯದ ವಿಷಯವಾಗಿಯೂ ಅದನ್ನು ಕಟ್ಟುವುದಕ್ಕೂ, ನೆಡುವುದಕ್ಕೂ ಮಾತನಾಡುತ್ತೇನೋ, 10 ನನ್ನ ಸ್ವರಕ್ಕೆ ವಿಧೇಯವಾಗದೆ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದರೆ, ನಾನು ಅದಕ್ಕೆ ಉಪಕಾರ ಮಾಡುತ್ತೇನೆಂದು ಹೇಳಿದ ಒಳ್ಳೆಯದನ್ನು ಕುರಿತು ಮನಸ್ಸನ್ನು ಬದಲಾಯಿಸುವೆನು. 11 “ಹೀಗಿರುವುದರಿಂದ ಈಗ ಯೆಹೂದದ ಮನುಷ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ನೀನು ಹೇಳಬೇಕಾದದ್ದೇನೆಂದರೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ನಿಮಗೆ ವಿರೋಧವಾಗಿ ಕೆಟ್ಟದ್ದನ್ನು ಕಲ್ಪಿಸುತ್ತಾ ಇದ್ದೇನೆ. ನಿಮಗೆ ವಿರೋಧವಾಗಿ ಉಪಾಯವನ್ನು ಆಲೋಚಿಸುತ್ತಾ ಇದ್ದೇನೆ. ನಿಮ್ಮ ನಿಮ್ಮ ಕೆಟ್ಟ ಮಾರ್ಗಗಳನ್ನು ಬಿಟ್ಟು ಹಿಂದಿರುಗಿರಿ. ನಿಮ್ಮ ಮಾರ್ಗಗಳನ್ನೂ, ನಿಮ್ಮ ಕ್ರಿಯೆಗಳನ್ನೂ ಒಳ್ಳೆಯದಾಗಿ ಮಾಡಿರಿ. 12 ಆದರೆ ಅವರೋ ಏನೂ ಪ್ರಯೋಜನ ಇಲ್ಲ. ಏಕೆಂದರೆ ಸ್ವಂತ ಆಲೋಚನೆಗಳ ಪ್ರಕಾರ ನಡೆದುಕೊಳ್ಳುವೆವು. ನಾವೆಲ್ಲರೂ ನಮ್ಮ ದುಷ್ಟ ಹೃದಯದ ಮೊಂಡುತನವನ್ನು ಅನುಸರಿಸುತ್ತೇವೆ,’ ಎಂದರು.” 13 ಆದ್ದರಿಂದ ಯೆಹೋವ ದೇವರು ಹೇಳುವುದೇನೆಂದರೆ:“ಇತರ ಜನಾಂಗಗಳಲ್ಲಿ ವಿಚಾರಿಸಿರಿ.ಇಂಥವುಗಳನ್ನು ಯಾರು ಕೇಳಿದ್ದಾರೆ?ಇಸ್ರಾಯೇಲೆಂಬ ಕನ್ಯೆಯುಮಹಾ ಭಯಂಕರವಾದದ್ದನ್ನು ಮಾಡಿದ್ದಾಳೆ. 14 ಹೊಲದ ಬಂಡೆಯಿಂದ ಬರುವಲೆಬನೋನಿನ ಹಿಮವು ತಪ್ಪುವುದೇ?ದೂರದಿಂದ ಇಳಿದು ಹರಿಯುವತಂಪಾದ ಪ್ರವಾಹದ ನೀರು ಬತ್ತುವುದೇ? 15 ನನ್ನ ಜನರಾದರೋ ನನ್ನನ್ನು ಮರೆತುಬಿಟ್ಟಿದ್ದಾರೆ.ವ್ಯರ್ಥವಾದ ವಿಗ್ರಹಗಳಿಗೆ ಧೂಪವನ್ನರ್ಪಿಸಿದ್ದಾರೆ.ಅವು ಪುರಾತನ ಪದ್ಧತಿಯಾದ ಅವರ ಮಾರ್ಗಗಳಲ್ಲಿಅವರನ್ನು ಎಡವುವಂತೆ ಮಾಡಿ,ಮಾರ್ಗವಲ್ಲದ ಕಾಲು ದಾರಿಗಳಲ್ಲಿಅವರನ್ನು ನಡೆಯುವಂತೆ ಮಾಡಿವೆ. 16 ಹೀಗೆ ತಮ್ಮ ದೇಶವನ್ನು ಹಾಳಾಗಿಯೂ,ನಿತ್ಯವಾದ ಹಾಸ್ಯಾಸ್ಪದವಾಗಿಯೂ ಮಾಡಿದ್ದಾರೆ.ಅದನ್ನು ಹಾದುಹೋಗುವವರೆಲ್ಲರೂವಿಸ್ಮಿತರಾಗಿ ತಲೆ ಅಲ್ಲಾಡಿಸುವರು. 17 ಮೂಡಣ ಗಾಳಿಯಿಂದ ಆದ ಹಾಗೆ,ಅವರನ್ನು ಶತ್ರುವಿನ ಮುಂದೆ ಚದರಿಸುವೆನು.ಅವರ ಆಪತ್ತಿನ ದಿವಸದಲ್ಲಿ ಅವರಿಗೆಮುಖವನ್ನಲ್ಲ ಬೆನ್ನನ್ನು ತೋರಿಸುವೆನು.” 18 ಆಗ ಜನರು, “ಬನ್ನಿರಿ, ಯೆರೆಮೀಯನಿಗೆ ವಿರೋಧವಾಗಿ ಯುಕ್ತಿಯನ್ನು ಕಲ್ಪಿಸೋಣ. ಯಾಜಕನಿಂದ ನಿಯಮ ಬೋಧನೆಯೂ, ಜ್ಞಾನಿಯಿಂದ ಆಲೋಚನೆಯೂ, ಪ್ರವಾದಿಯಿಂದ ವಾಕ್ಯವೂ ನಿಂತುಹೋಗುವುದಿಲ್ಲ. ಬನ್ನಿರಿ, ನಾಲಿಗೆಯಿಂದ ಅವನನ್ನು ಆಕ್ರಮಿಸೋಣ. ಅವನ ಮಾತುಗಳಲ್ಲಿ ಒಂದನ್ನಾದರೂ ಲಕ್ಷಿಸದೆ ಇರೋಣ,” ಎಂದು ಹೇಳಿದರು. 19 ಓ ಯೆಹೋವ ದೇವರೇ, ನನಗೆ ಕಿವಿಗೊಡು.ನನ್ನ ಸಂಗಡ ವ್ಯಾಜ್ಯವಾಡುವವರ ಮಾತನ್ನು ಕೇಳು. 20 ಒಳ್ಳೆಯದಕ್ಕೆ ಬದಲಾಗಿ ಕೆಟ್ಟದ್ದನ್ನು ಸಲ್ಲಿಸಬಹುದೇ?ಏಕೆಂದರೆ, ಅವರು ನನ್ನ ಪ್ರಾಣಕ್ಕೆ ಕುಳಿಯನ್ನು ಅಗೆದಿದ್ದಾರೆ.ಅವರಿಗೋಸ್ಕರ ಒಳ್ಳೆಯದನ್ನು ಮಾತಾಡುವುದಕ್ಕೂ,ನಿನ್ನ ಉಗ್ರವನ್ನು ಅವರಿಂದ ತಿರುಗಿಸುವುದಕ್ಕೂನಾನು ನಿನ್ನ ಮುಂದೆ ನಿಂತದ್ದನ್ನು ಜ್ಞಾಪಕಮಾಡಿಕೋ. 21 ಆದ್ದರಿಂದ ಅವರ ಮಕ್ಕಳನ್ನು ಕ್ಷಾಮಕ್ಕೆ ಕೊಡು.ಖಡ್ಗದ ಬಲದಿಂದ ಅವರ ರಕ್ತವನ್ನು ಸುರಿದುಬಿಡು.ಅವರ ಹೆಂಡತಿಯರು ಮಕ್ಕಳಿಲ್ಲದೆ ವಿಧವೆಯರಾಗಲಿ.ಅವರ ಗಂಡಸರು ಹತರಾಗಲಿ.ಅವರ ಯೌವನಸ್ಥರು ಯುದ್ಧದಲ್ಲಿ ಖಡ್ಗಕ್ಕೆ ತುತ್ತಾಗಲಿ. 22 ನೀನು ಅಕಸ್ಮಾತ್ತಾಗಿ ಅವರ ಮೇಲೆ ಸೈನ್ಯವನ್ನು ತರಿಸುವಾಗ,ಕೂಗು ಅವರ ಮನೆಗಳೊಳಗಿಂದ ಕೇಳ ಬರಲಿ.ಏಕೆಂದರೆ, ನನ್ನನ್ನು ಹಿಡಿಯುವುದಕ್ಕೆ ಕುಳಿ ಅಗೆದಿದ್ದಾರೆ.ನನ್ನ ಕಾಲುಗಳಿಗೆ ಉರುಲುಗಳನ್ನು ಒಡ್ಡಿದ್ದಾರೆ. 23 ಆದರೂ ಯೆಹೋವ ದೇವರೇ, ಅವರು ನನ್ನನ್ನು ಸಾಯಿಸುವುದಕ್ಕೆನನಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೆಲ್ಲಾ ನೀವು ಬಲ್ಲಿರಿ.ಅವರ ಅಕ್ರಮವನ್ನು ಮನ್ನಿಸಬೇಡಿ.ಅವರ ಪಾಪಗಳನ್ನು ನಿನ್ನ ಸನ್ನಿಧಿಯೊಳಗಿಂದ ಅಳಿಸಿಬಿಡಬೇಡಿರಿ.ಅವರು ನಿಮ್ಮ ಮುಂದೆ ಎಡವಿಬೀಳಲಿ.ನಿಮ್ಮ ಕೋಪದ ಕಾಲದಲ್ಲಿ ಅವರಿಗೆ ತಕ್ಕದ್ದನ್ನು ಮಾಡಿರಿ.
In Other Versions
Jeremiah 18 in the ANGEFD
Jeremiah 18 in the ANTPNG2D
Jeremiah 18 in the AS21
Jeremiah 18 in the BAGH
Jeremiah 18 in the BBPNG
Jeremiah 18 in the BBT1E
Jeremiah 18 in the BDS
Jeremiah 18 in the BEV
Jeremiah 18 in the BHAD
Jeremiah 18 in the BIB
Jeremiah 18 in the BLPT
Jeremiah 18 in the BNT
Jeremiah 18 in the BNTABOOT
Jeremiah 18 in the BNTLV
Jeremiah 18 in the BOATCB
Jeremiah 18 in the BOATCB2
Jeremiah 18 in the BOBCV
Jeremiah 18 in the BOCNT
Jeremiah 18 in the BOECS
Jeremiah 18 in the BOGWICC
Jeremiah 18 in the BOHCB
Jeremiah 18 in the BOHCV
Jeremiah 18 in the BOHLNT
Jeremiah 18 in the BOHNTLTAL
Jeremiah 18 in the BOICB
Jeremiah 18 in the BOILNTAP
Jeremiah 18 in the BOITCV
Jeremiah 18 in the BOKCV
Jeremiah 18 in the BOKHWOG
Jeremiah 18 in the BOKSSV
Jeremiah 18 in the BOLCB
Jeremiah 18 in the BOLCB2
Jeremiah 18 in the BOMCV
Jeremiah 18 in the BONAV
Jeremiah 18 in the BONCB
Jeremiah 18 in the BONLT
Jeremiah 18 in the BONUT2
Jeremiah 18 in the BOPLNT
Jeremiah 18 in the BOSCB
Jeremiah 18 in the BOSNC
Jeremiah 18 in the BOTLNT
Jeremiah 18 in the BOVCB
Jeremiah 18 in the BOYCB
Jeremiah 18 in the BPBB
Jeremiah 18 in the BPH
Jeremiah 18 in the BSB
Jeremiah 18 in the CCB
Jeremiah 18 in the CUV
Jeremiah 18 in the CUVS
Jeremiah 18 in the DBT
Jeremiah 18 in the DGDNT
Jeremiah 18 in the DHNT
Jeremiah 18 in the DNT
Jeremiah 18 in the ELBE
Jeremiah 18 in the EMTV
Jeremiah 18 in the ESV
Jeremiah 18 in the FBV
Jeremiah 18 in the FEB
Jeremiah 18 in the GGMNT
Jeremiah 18 in the GNT
Jeremiah 18 in the HARY
Jeremiah 18 in the HNT
Jeremiah 18 in the IRVA
Jeremiah 18 in the IRVB
Jeremiah 18 in the IRVG
Jeremiah 18 in the IRVH
Jeremiah 18 in the IRVK
Jeremiah 18 in the IRVM
Jeremiah 18 in the IRVM2
Jeremiah 18 in the IRVO
Jeremiah 18 in the IRVP
Jeremiah 18 in the IRVT
Jeremiah 18 in the IRVT2
Jeremiah 18 in the IRVU
Jeremiah 18 in the ISVN
Jeremiah 18 in the JSNT
Jeremiah 18 in the KAPI
Jeremiah 18 in the KBT1ETNIK
Jeremiah 18 in the KBV
Jeremiah 18 in the KJV
Jeremiah 18 in the KNFD
Jeremiah 18 in the LBA
Jeremiah 18 in the LBLA
Jeremiah 18 in the LNT
Jeremiah 18 in the LSV
Jeremiah 18 in the MAAL
Jeremiah 18 in the MBV
Jeremiah 18 in the MBV2
Jeremiah 18 in the MHNT
Jeremiah 18 in the MKNFD
Jeremiah 18 in the MNG
Jeremiah 18 in the MNT
Jeremiah 18 in the MNT2
Jeremiah 18 in the MRS1T
Jeremiah 18 in the NAA
Jeremiah 18 in the NASB
Jeremiah 18 in the NBLA
Jeremiah 18 in the NBS
Jeremiah 18 in the NBVTP
Jeremiah 18 in the NET2
Jeremiah 18 in the NIV11
Jeremiah 18 in the NNT
Jeremiah 18 in the NNT2
Jeremiah 18 in the NNT3
Jeremiah 18 in the PDDPT
Jeremiah 18 in the PFNT
Jeremiah 18 in the RMNT
Jeremiah 18 in the SBIAS
Jeremiah 18 in the SBIBS
Jeremiah 18 in the SBIBS2
Jeremiah 18 in the SBICS
Jeremiah 18 in the SBIDS
Jeremiah 18 in the SBIGS
Jeremiah 18 in the SBIHS
Jeremiah 18 in the SBIIS
Jeremiah 18 in the SBIIS2
Jeremiah 18 in the SBIIS3
Jeremiah 18 in the SBIKS
Jeremiah 18 in the SBIKS2
Jeremiah 18 in the SBIMS
Jeremiah 18 in the SBIOS
Jeremiah 18 in the SBIPS
Jeremiah 18 in the SBISS
Jeremiah 18 in the SBITS
Jeremiah 18 in the SBITS2
Jeremiah 18 in the SBITS3
Jeremiah 18 in the SBITS4
Jeremiah 18 in the SBIUS
Jeremiah 18 in the SBIVS
Jeremiah 18 in the SBT
Jeremiah 18 in the SBT1E
Jeremiah 18 in the SCHL
Jeremiah 18 in the SNT
Jeremiah 18 in the SUSU
Jeremiah 18 in the SUSU2
Jeremiah 18 in the SYNO
Jeremiah 18 in the TBIAOTANT
Jeremiah 18 in the TBT1E
Jeremiah 18 in the TBT1E2
Jeremiah 18 in the TFTIP
Jeremiah 18 in the TFTU
Jeremiah 18 in the TGNTATF3T
Jeremiah 18 in the THAI
Jeremiah 18 in the TNFD
Jeremiah 18 in the TNT
Jeremiah 18 in the TNTIK
Jeremiah 18 in the TNTIL
Jeremiah 18 in the TNTIN
Jeremiah 18 in the TNTIP
Jeremiah 18 in the TNTIZ
Jeremiah 18 in the TOMA
Jeremiah 18 in the TTENT
Jeremiah 18 in the UBG
Jeremiah 18 in the UGV
Jeremiah 18 in the UGV2
Jeremiah 18 in the UGV3
Jeremiah 18 in the VBL
Jeremiah 18 in the VDCC
Jeremiah 18 in the YALU
Jeremiah 18 in the YAPE
Jeremiah 18 in the YBVTP
Jeremiah 18 in the ZBP