Job 29 (BOKCV2)
1 ಯೋಬನು ಮತ್ತೆ ತನ್ನ ಚರ್ಚೆಯನ್ನು ಮುಂದುವರಿಸಿ ಹೇಳಿದ್ದೇನೆಂದರೆ: 2 “ಕಳೆದುಹೋದ ತಿಂಗಳುಗಳಲ್ಲಿ ಇದ್ದಂತೆ ಈಗಲೂ ಇದ್ದರೆ ಎಷ್ಟೋ ಒಳ್ಳೆಯದು;ಆಗ ದೇವರು ನನ್ನನ್ನು ಕಾಪಾಡುತ್ತಿದ್ದರಲ್ಲವೆ? 3 ದೇವರ ದೀಪವು ನನ್ನ ತಲೆಯ ಮೇಲೆ ಬೆಳಗುತ್ತಿತ್ತು;ನಾನು ದೇವರ ಬೆಳಕಿನಿಂದ ಕತ್ತಲಲ್ಲಿ ನಡೆಯುತ್ತಿದ್ದೆ. 4 ನಾನು ನನ್ನ ಯೌವನದ ದಿವಸಗಳಲ್ಲಿದ್ದಾಗದೇವರ ಸ್ನೇಹವು ನನ್ನ ಗುಡಾರದ ಮೇಲೆ ಇರುತ್ತಿತ್ತು. 5 ಆಗ ಸರ್ವಶಕ್ತರು ನನ್ನ ಸಂಗಡ ಇರುತ್ತಿದ್ದರು;ನನ್ನ ಸುತ್ತಲೂ ನನ್ನ ಮಕ್ಕಳು ಇದ್ದರು. 6 ನನ್ನ ಹೆಜ್ಜೆಗಳನ್ನು ಮೊಸರಿನಿಂದ ತೊಳೆಯುತ್ತಾ ಇದ್ದೆನು;ಬಂಡೆಯಿಂದ ನನಗೆ ಓಲಿವ್ ಎಣ್ಣೆ ಪ್ರವಾಹವಾಗಿ ಸುರಿಸುತ್ತಿತ್ತು. 7 “ನಾನು ಪಟ್ಟಣದ ಮುಂಬಾಗಿಲಿಗೆ ಹೋದಾಗ,ಬೀದಿಯಲ್ಲಿ ನನ್ನ ಪೀಠದ ಮೇಲೆ ಕುಳಿತುಕೊಂಡಾಗ, 8 ಯುವಕರು ನನ್ನನ್ನು ನೋಡಿ ಪಕ್ಕಕ್ಕೆ ಸರಿದು ನಿಲ್ಲುತ್ತಿದ್ದರು;ವೃದ್ಧರು ಸಹ ಎದ್ದು ನಿಲ್ಲುತ್ತಿದ್ದರು. 9 ಪ್ರಧಾನರು ನುಡಿಗಳನ್ನು ಬಿಗಿ ಹಿಡಿದು,ತಮ್ಮ ಬಾಯಿಯ ಮೇಲೆ ಕೈ ಇಟ್ಟುಕೊಳ್ಳುತ್ತಿದ್ದರು. 10 ಘನವಂತರು ಮೌನ ತಾಳುತ್ತಿದ್ದರು;ಅವರ ನಾಲಿಗೆ ಅವರ ಬಾಯಿಯ ಅಂಗಳಕ್ಕೆ ಅಂಟಿರುತ್ತಿತ್ತು. 11 ಕೇಳಿದ ಕಿವಿಯು ನನ್ನನ್ನು ಹರಸುತ್ತಿತ್ತು;ನೋಡಿದವರು ನನ್ನನ್ನು ಗೌರವಿಸುತ್ತಿದ್ದರು. 12 ಏಕೆಂದರೆ ಅಂಗಲಾಚುವ ಬಡವನನ್ನೂ,ಸಹಾಯಕನಿಲ್ಲದ ಅನಾಥನನ್ನೂ ನಾನು ರಕ್ಷಿಸುವವನಾಗಿದ್ದೆನು. 13 ಸಾಯುತ್ತಿದ್ದವರ ಆಶೀರ್ವಾದವು ನನ್ನ ಮೇಲೆ ಬರುತ್ತಿತ್ತು;ವಿಧವೆಯ ಹೃದಯವು ಸಂತೋಷದಿಂದ ಹಾಡುವಂತೆ ಮಾಡುತ್ತಿದ್ದೆನು. 14 ನಾನು ನೀತಿಯನ್ನು ನನ್ನ ಬಟ್ಟೆಯಂತೆ ಧರಿಸಿದ್ದೆನು;ನನ್ನ ನ್ಯಾಯವು ನಿಲುವಂಗಿಯ ಹಾಗೆಯೂ ಪೇಟದ ಹಾಗೆಯೂ ಇರುತ್ತಿತ್ತು. 15 ನಾನು ಕುರುಡನಿಗೆ ಕಣ್ಣೂ,ಕುಂಟನಿಗೆ ಕಾಲೂ ಆಗಿದ್ದೆನು. 16 ದರಿದ್ರರಿಗೆ ನಾನು ತಂದೆಯಾಗಿದ್ದೆನು;ಅಪರಿಚಿತರ ವ್ಯಾಜ್ಯವನ್ನು ವಿಚಾರಿಸುತ್ತಿದ್ದೆನು. 17 ದುಷ್ಟರ ದವಡೆಗಳನ್ನು ಮುರಿಯುತ್ತಿದ್ದೆನು;ದುಷ್ಟರ ಹಲ್ಲುಗಳೊಳಗಿಂದ ಬೇಟೆಯನ್ನು ಕಿತ್ತು ಬಿಡಿಸುತ್ತಿದ್ದೆನು. 18 “ಆಗ ನಾನು, ‘ನನ್ನ ಮನೆಯಲ್ಲಿಯೇ ನಾನು ಸಾಯುವೆನು;ಮರಳಿನಂತೆ ನನ್ನ ದಿವಸಗಳು ಇರುತ್ತವೆ, 19 ನನ್ನ ಬೇರು ನೀರಿನ ಬಳಿ ಹಬ್ಬಿರುತ್ತದೆ;ರಾತ್ರಿಯಿಡಿ ನನ್ನ ಕೊಂಬೆಯ ಮೇಲೆ ಮಂಜು ಬಿದ್ದಿರುತ್ತದೆ. 20 ನನ್ನ ಘನವು ನನ್ನಲ್ಲಿ ಹೊಸದಾಗಿ ಇರುತ್ತದೆ;ನನ್ನ ಬಿಲ್ಲು ಸಹ ನನ್ನ ಕೈಯಲ್ಲಿ ಎಂದೆಂದಿಗೂ ಬಲಗೊಳ್ಳುತ್ತಾ ಇರುತ್ತದೆ,’ಎಂದೆಲ್ಲಾ ಹೇಳುತ್ತಿದ್ದೆನು. 21 “ಜನರು ನನಗೆ ಕಿವಿಗೊಟ್ಟು ಎದುರುನೋಡುತ್ತಿದ್ದರು.ನನ್ನ ಆಲೋಚನೆ ಕೇಳಲು ಮೌನವಾಗಿರುತ್ತಿದ್ದರು. 22 ನನ್ನ ಮಾತಿನ ಮೇಲೆ ಅವರು ಬೇರೆ ಮಾತನಾಡುತ್ತಿರಲಿಲ್ಲ;ನನ್ನ ನುಡಿ ಅವರ ಕಿವಿಗೆ ಬೀಳುತ್ತಿತ್ತು. 23 ಮಳೆಯಂತೆ ನನ್ನನ್ನು ಎದುರುನೋಡುತ್ತಿದ್ದರು.ಮುಂಗಾರಿನ ಮಳೆಯಹಾಗೆ ನನ್ನ ಮಾತುಗಳಲ್ಲಿ ಉಲ್ಲಾಸಿಸುತ್ತಿದ್ದರು. 24 ನಾನು ಅವರನ್ನು ನೋಡಿ ಮುಗುಳ್ನಗಿದಾಗ, ಅವರು ಅದನ್ನು ನಂಬಲಿಲ್ಲ;ನನ್ನ ಮುಖದ ಕಾಂತಿ ಅವರಿಗೆ ಅಮೂಲ್ಯವಾಗಿತ್ತು. 25 ನಾನು ಅವರ ಪ್ರಧಾನನಾಗಿ ಕೂತುಸೈನ್ಯಗಳ ನಡುವೆ ಅರಸನಂತೆ ಆಸೀನನಾಗಿದ್ದೆನು.ನಾನು ದುಃಖಿಸುವವರನ್ನು ಸಂತೈಸುವವನಾಗಿಯೂ ಇದ್ದೆನು.