1 Chronicles 15 (IRVK)

1 ದಾವೀದನು ತನ್ನ ನಗರದಲ್ಲಿ ತನಗೋಸ್ಕರ ಮನೆಗಳನ್ನು ಕಟ್ಟಿಸಿದ್ದಲ್ಲದೆ ದೇವರ ಮಂಜೂಷಕ್ಕಾಗಿಯೂ ಸ್ಥಳವನ್ನು ಸಿದ್ಧಮಾಡಿ ಗುಡಾರವನ್ನು ಹಾಕಿಸಿದನು. 2 ಆ ಕಾಲದಲ್ಲಿ ದಾವೀದನು, “ಲೇವಿಯರ ಹೊರತಾಗಿ ಯಾರೂ ಮಂಜೂಷವನ್ನು ಹೊರಬಾರದು, ಅದನ್ನು ಹೊರುವುದಕ್ಕೂ, ಸದಾಕಾಲ ತನ್ನ ಸೇವೆಮಾಡುವುದಕ್ಕೂ ಯೆಹೋವನು ಅವರನ್ನೇ ಆರಿಸಿಕೊಂಡಿದ್ದಾನೆ” ಎಂದು ಹೇಳಿದನು. 3 ಅನಂತರ ದಾವೀದನು ಯೆಹೋವನ ಮಂಜೂಷವನ್ನು ತಾನು ಸಿದ್ಧಮಾಡಿದ ಸ್ಥಳಕ್ಕೆ ತರುವುದಕ್ಕೋಸ್ಕರ ಎಲ್ಲಾ ಇಸ್ರಾಯೇಲರನ್ನು ಯೆರೂಸಲೇಮಿಗೆ ಕರೆಯಿಸಿದನು. 4 ದಾವೀದನು ಕರೆಯಿಸಿದ ಆರೋನನ ವಂಶದವರು, ಲೇವಿಯರು, 5 ಕೆಹಾತ್ಯರಲ್ಲಿ ಊರೀಯೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರಿಪ್ಪತ್ತು ಜನರು, 6 ಮೆರಾರೀಯರಲ್ಲಿ ಅಸಾಯನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಇನ್ನೂರಿಪ್ಪತ್ತು ಜನರು, 7 ಗೇರ್ಷೋಮ್ಯರಲ್ಲಿ ಯೋವೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರಮೂವತ್ತು ಜನರು, 8 ಎಲೀಚಾಫಾನ್ಯರಲ್ಲಿ ಶೆಮಾಯನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಇನ್ನೂರು ಜನರು, 9 ಹೆಬ್ರೋನ್ಯರಲ್ಲಿ ಎಲೀಯೇಲನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ಎಂಭತ್ತು ಜನರು 10 ಉಜ್ಜೀಯೇಲ್ಯರಲ್ಲಿ ಅಮ್ಮೀನಾದಾಬನೆಂಬ ಪ್ರಧಾನನೂ ಮತ್ತು ಅವನ ಕುಟುಂಬದ ನೂರ ಹನ್ನೆರಡು ಜನರೊಂದಿಗೆ ಬಂದನು. 11 ಆ ಮೇಲೆ ದಾವೀದನು ಚಾದೋಕ್, ಎಬ್ಯಾತಾರ್ ಎಂಬ ಯಾಜಕರನ್ನೂ, ಊರೀಯೇಲ್, ಅಸಾಯ, ಯೋವೇಲ್, ಶೆಮಾಯ, ಎಲೀಯೇಲ್ ಮತ್ತು ಅಮ್ಮೀನಾದಾಬ್ ಎಂಬ ಲೇವಿಯರನ್ನು ಕರೆದು ಅವರಿಗೆ, “ಲೇವಿಯರಲ್ಲಿ ಗೋತ್ರಪ್ರಧಾನರಾದ ನೀವು, 12 ನಿಮ್ಮ ಸಹೋದರರೂ ನಿಮ್ಮನ್ನು ಶುದ್ಧಿಪಡಿಸಿಕೊಂಡು, ಇಸ್ರಾಯೇಲರ ದೇವರಾದ ಯೆಹೋವನ ಮಂಜೂಷವನ್ನು ನಾನು ಸಿದ್ಧಮಾಡಿದ ಸ್ಥಳಕ್ಕೆ ತೆಗೆದುಕೊಂಡು ಬನ್ನಿರಿ. 13 ನೀವು ಮೊದಲನೆಯ ಸಾರಿ ಇರಲಿಲ್ಲವಾದುದರಿಂದ ನಮ್ಮ ದೇವರಾದ ಯೆಹೋವನು ತನ್ನ ಸನ್ನಿಧಿಗೆ ಧರ್ಮವಿಧಿ ವಿರೋಧವಾಗಿ ನಮ್ಮಲ್ಲಿಗೆ ಬಂದ ಒಬ್ಬನನ್ನು ಸಂಹರಿಸಿದನು” ಎಂದು ಹೇಳಿದನು. 14 ಆಗ ಯಾಜಕರೂ ಮತ್ತು ಲೇವಿಯರೂ ಇಸ್ರಾಯೇಲರ ದೇವರಾದ ಯೆಹೋವನ ಮಂಜೂಷವನ್ನು ತರುವುದಕ್ಕೋಸ್ಕರ ತಮ್ಮನ್ನು ಶುದ್ಧಪಡಿಸಿಕೊಂಡರು. 15 ಮೋಶೆಯ ಮುಖಾಂತರವಾಗಿ ಕೊಡಲ್ಪಟ್ಟ ಯೆಹೋವನ ಆಜ್ಞಾನುಸಾರವಾಗಿ ಲೇವಿಯರು ದೇವರ ಮಂಜೂಷವನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆದರು. 16 ಆಗ ದಾವೀದನು ಲೇವಿಯರ ಪ್ರಧಾನರಿಗೆ, “ಗಾಯಕರಾದ ನಿಮ್ಮ ಸಹೋದರರನ್ನು ಸ್ವರಮಂಡಲ, ಕಿನ್ನರಿ, ತಾಳ ಮೊದಲಾದ ವಾದ್ಯಗಳಿಂದ ಉತ್ಸಾಹಧ್ವನಿ ಮಾಡುವುದಕ್ಕಾಗಿ ನೇಮಿಸಿರಿ” ಎಂದು ಆಜ್ಞಾಪಿಸಿದನು. 17 ಆಗ ಅವರು ಯೋವೇಲನ ಮಗನಾದ ಹೇಮಾನ್, ಅವನ ಗೋತ್ರಬಂಧುವೂ ಬೆರೆಕ್ಯನ ಮಗನೂ ಆದ ಆಸಾಫ್, ತಮ್ಮ ಸಹೋದರರಾದ ಮೆರಾರೀಯರ ಕುಟುಂಬಕ್ಕೆ ಸೇರಿದ ಕೂಷಾಯನ ಮಗನಾದ ಏತಾನ್ ಎಂಬುವರನ್ನಲ್ಲದೆ, 18 ತಮ್ಮ ಸಹೋದರರೊಳಗೆ ಎರಡನೆಯ ದರ್ಜೆಯವರಾದ ಜೆಕರ್ಯ, ಬೇನ್, ಯಾಜೀಯೇಲ್ ಶೆಮೀರಾಮೋತ್, ಯೆಹೀಯೇಲ್, ಉನ್ನೀ, ಎಲೀಯಾಬ್, ಬೆನಾಯ, ಮಾಸೇಯ, ಮತ್ತಿತ್ಯ ಎಲೀಫೆಲೇಹು, ಮಿಕ್ನೇಯ ದ್ವಾರಪಾಲಕರಾದ ಓಬೇದೆದೋಮ ಮತ್ತು ಯೆಗೀಯೇಲ್ ಇವರನ್ನು ನೇಮಿಸಿದನು. 19 ಗಾಯಕರಾದ ಹೇಮಾನ್, ಆಸಾಫ್ ಮತ್ತು ಏತಾನರು ಗಟ್ಟಿಯಾಗಿ ಕಂಚಿನ ತಾಳಗಳನ್ನು ಬಾರಿಸಿವವರು. 20 ಜೆಕರ್ಯ, ಅಜೀಯೇಲ್, ಶೆಮೀರಾಮೋತ್, ಯೆಹೀಯೇಲ್,, ಉನ್ನೀ, ಎಲೀಯಾಬ್, ಮಾಸೇಯ ಮತ್ತು ಬೆನಾಯ ಎಂಬುವವರು ತಾರಕಸ್ಥಾಯಿಯ ಸ್ವರಮಂಡಲಗಳನ್ನು ಬಾರಿಸುವವರು. 21 ಮತ್ತಿತ್ಯ, ಎಲೀಫೆಲೇಹು, ಮಿಕ್ನೇಯ, ದ್ವಾರಪಾಲಕರಾದ ಓಬೇದೆದೋಮ ಯೆಗೀಯೇಲರು ಅಹಜ್ಯ ಎಂಬವರು ಗಾಯಕ ನಾಯಕರಾಗಿದ್ದು ಮಂದರಸ್ಥಾಯಿಯ ಕಿನ್ನರಿಗಳನ್ನು ನುಡಿಸುವವರನ್ನು ನೆಮಿಸಿಕೊಂಡನು. 22 ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವ ಲೇವಿಯರಲ್ಲಿ ನಾಯಕನೂ ಆಗಿದ್ದ ಕೆನನ್ಯನು ಮಂಜೂಷ ಹೊತ್ತವರಿಗೆ ಮೇಲ್ವಿಚಾರಕನಾಗಿದ್ದನು. 23 ಬೆರೆಕ್ಯ ಮತ್ತು ಎಲ್ಕಾನ ಇವರು ಮಂಜೂಷದ ದ್ವಾರಪಾಲಕರಾಗಿದ್ದರು. 24 ಶೆಬನ್ಯ, ಯೋಷಾಫಾಟ್, ನೆತನೇಲ್, ಅಮಾಸೈ, ಜೆಕರ್ಯ, ಬೆನಾಯ ಮತ್ತು ಎಲೀಯೆಜೆರ್ ಎಂಬ ಯಾಜಕರು ತುತ್ತೂರಿಗಳನ್ನು ಊದುತ್ತಾ ದೇವ ಮಂಜೂಷದ ಮುಂದೆ ಹೋಗುವವರು. ಓಬೇದೆದೋಮ್ ಮತ್ತು ಯೆಹೀಯ ಎಂಬುವವರು ಮಂಜೂಷದ ದ್ವಾರಪಾಲಕರಾಗಿದ್ದರು. 25 ದಾವೀದನೂ ಇಸ್ರಾಯೇಲ್ಯರ ಹಿರಿಯರೂ ಮತ್ತು ಸಹಸ್ರಾಧಿಪತಿಗಳೂ ಓಬೇದೆದೋಮನ ಮನೆಯಲ್ಲಿದ್ದ ಯೆಹೋವನ ಒಡಂಬಡಿಕೆ ಮಂಜೂಷವನ್ನು ಉತ್ಸಾಹದಿಂದ ತರುತ್ತಿರುವಾಗ, 26 ಯೆಹೋವನ ಒಡಂಬಡಿಕೆ ಮಂಜೂಷವನ್ನು ಹೊತ್ತ ಲೇವಿಯರಿಗೆ ದೇವರ ಸಹಾಯ ದೊರೆತದ್ದರಿಂದ ಏಳು ಹೋರಿಗಳನ್ನೂ ಮತ್ತು ಏಳು ಟಗರುಗಳನ್ನೂ ಯಜ್ಞಮಾಡಿದರು. 27 ದಾವೀದನೂ ಮಂಜೂಷವನ್ನು ಹೊತ್ತ ಮತ್ತು ವಾದ್ಯನುಡಿಸುವ ಎಲ್ಲಾ ಲೇವಿಯರೂ, ಹೊರುವವರ ಮುಖ್ಯಸ್ಥನಾದ ಕೆನನ್ಯನೂ ನೂಲಿನ ನಿಲುವಂಗಿಗಳನ್ನು ಧರಿಸಿಕೊಂಡಿದ್ದನು. ದಾವೀದನು ಇದರ ಹೊರತಾಗಿ ನಾರಿನ ಏಫೋದನ್ನೂ ಧರಿಸಿಕೊಂಡಿದ್ದನು. 28 ಹೀಗೆ ಎಲ್ಲಾ ಇಸ್ರಾಯೇಲರು ಆನಂದ ಘೋಷಣೆಗಳಿಂದಲೂ, ಕೊಂಬು ಮತ್ತು ತುತ್ತೂರಿಗಳನ್ನು, ತಾಳ, ತಂತಿ ವಾದ್ಯಗಳ ಸಂಗೀತದಿಂದ ತಾಳಹಾಕುತ್ತಾ ಕಿನ್ನರಿ ಸ್ವರಮಂಡಲಗಳನ್ನು ನುಡಿಸುತ್ತಾ, ಯೆಹೋವನ ಒಡಂಬಡಿಕೆಯ ಮಂಜೂಷವನ್ನು ತಂದರು. 29 ಯೆಹೋವನ ಒಡಂಬಡಿಕೆ ಮಂಜೂಷವು ದಾವೀದನ ನಗರಕ್ಕೆ ಬರುತ್ತಿರುವಾಗ ಸೌಲನ ಮಗಳಾದ ಮೀಕಲಳು ಕಿಟಕಿಯಿಂದ ಇಣಿಕಿನೋಡಿ ದಾವೀದನು ಜಿಗಿಯುತ್ತಾ, ಕುಣಿಯುತ್ತಾ, ನೃತ್ಯಮಾಡುತ್ತಾ ಇರುವುದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.

In Other Versions

1 Chronicles 15 in the ANGEFD

1 Chronicles 15 in the ANTPNG2D

1 Chronicles 15 in the AS21

1 Chronicles 15 in the BAGH

1 Chronicles 15 in the BBPNG

1 Chronicles 15 in the BBT1E

1 Chronicles 15 in the BDS

1 Chronicles 15 in the BEV

1 Chronicles 15 in the BHAD

1 Chronicles 15 in the BIB

1 Chronicles 15 in the BLPT

1 Chronicles 15 in the BNT

1 Chronicles 15 in the BNTABOOT

1 Chronicles 15 in the BNTLV

1 Chronicles 15 in the BOATCB

1 Chronicles 15 in the BOATCB2

1 Chronicles 15 in the BOBCV

1 Chronicles 15 in the BOCNT

1 Chronicles 15 in the BOECS

1 Chronicles 15 in the BOGWICC

1 Chronicles 15 in the BOHCB

1 Chronicles 15 in the BOHCV

1 Chronicles 15 in the BOHLNT

1 Chronicles 15 in the BOHNTLTAL

1 Chronicles 15 in the BOICB

1 Chronicles 15 in the BOILNTAP

1 Chronicles 15 in the BOITCV

1 Chronicles 15 in the BOKCV

1 Chronicles 15 in the BOKCV2

1 Chronicles 15 in the BOKHWOG

1 Chronicles 15 in the BOKSSV

1 Chronicles 15 in the BOLCB

1 Chronicles 15 in the BOLCB2

1 Chronicles 15 in the BOMCV

1 Chronicles 15 in the BONAV

1 Chronicles 15 in the BONCB

1 Chronicles 15 in the BONLT

1 Chronicles 15 in the BONUT2

1 Chronicles 15 in the BOPLNT

1 Chronicles 15 in the BOSCB

1 Chronicles 15 in the BOSNC

1 Chronicles 15 in the BOTLNT

1 Chronicles 15 in the BOVCB

1 Chronicles 15 in the BOYCB

1 Chronicles 15 in the BPBB

1 Chronicles 15 in the BPH

1 Chronicles 15 in the BSB

1 Chronicles 15 in the CCB

1 Chronicles 15 in the CUV

1 Chronicles 15 in the CUVS

1 Chronicles 15 in the DBT

1 Chronicles 15 in the DGDNT

1 Chronicles 15 in the DHNT

1 Chronicles 15 in the DNT

1 Chronicles 15 in the ELBE

1 Chronicles 15 in the EMTV

1 Chronicles 15 in the ESV

1 Chronicles 15 in the FBV

1 Chronicles 15 in the FEB

1 Chronicles 15 in the GGMNT

1 Chronicles 15 in the GNT

1 Chronicles 15 in the HARY

1 Chronicles 15 in the HNT

1 Chronicles 15 in the IRVA

1 Chronicles 15 in the IRVB

1 Chronicles 15 in the IRVG

1 Chronicles 15 in the IRVH

1 Chronicles 15 in the IRVM

1 Chronicles 15 in the IRVM2

1 Chronicles 15 in the IRVO

1 Chronicles 15 in the IRVP

1 Chronicles 15 in the IRVT

1 Chronicles 15 in the IRVT2

1 Chronicles 15 in the IRVU

1 Chronicles 15 in the ISVN

1 Chronicles 15 in the JSNT

1 Chronicles 15 in the KAPI

1 Chronicles 15 in the KBT1ETNIK

1 Chronicles 15 in the KBV

1 Chronicles 15 in the KJV

1 Chronicles 15 in the KNFD

1 Chronicles 15 in the LBA

1 Chronicles 15 in the LBLA

1 Chronicles 15 in the LNT

1 Chronicles 15 in the LSV

1 Chronicles 15 in the MAAL

1 Chronicles 15 in the MBV

1 Chronicles 15 in the MBV2

1 Chronicles 15 in the MHNT

1 Chronicles 15 in the MKNFD

1 Chronicles 15 in the MNG

1 Chronicles 15 in the MNT

1 Chronicles 15 in the MNT2

1 Chronicles 15 in the MRS1T

1 Chronicles 15 in the NAA

1 Chronicles 15 in the NASB

1 Chronicles 15 in the NBLA

1 Chronicles 15 in the NBS

1 Chronicles 15 in the NBVTP

1 Chronicles 15 in the NET2

1 Chronicles 15 in the NIV11

1 Chronicles 15 in the NNT

1 Chronicles 15 in the NNT2

1 Chronicles 15 in the NNT3

1 Chronicles 15 in the PDDPT

1 Chronicles 15 in the PFNT

1 Chronicles 15 in the RMNT

1 Chronicles 15 in the SBIAS

1 Chronicles 15 in the SBIBS

1 Chronicles 15 in the SBIBS2

1 Chronicles 15 in the SBICS

1 Chronicles 15 in the SBIDS

1 Chronicles 15 in the SBIGS

1 Chronicles 15 in the SBIHS

1 Chronicles 15 in the SBIIS

1 Chronicles 15 in the SBIIS2

1 Chronicles 15 in the SBIIS3

1 Chronicles 15 in the SBIKS

1 Chronicles 15 in the SBIKS2

1 Chronicles 15 in the SBIMS

1 Chronicles 15 in the SBIOS

1 Chronicles 15 in the SBIPS

1 Chronicles 15 in the SBISS

1 Chronicles 15 in the SBITS

1 Chronicles 15 in the SBITS2

1 Chronicles 15 in the SBITS3

1 Chronicles 15 in the SBITS4

1 Chronicles 15 in the SBIUS

1 Chronicles 15 in the SBIVS

1 Chronicles 15 in the SBT

1 Chronicles 15 in the SBT1E

1 Chronicles 15 in the SCHL

1 Chronicles 15 in the SNT

1 Chronicles 15 in the SUSU

1 Chronicles 15 in the SUSU2

1 Chronicles 15 in the SYNO

1 Chronicles 15 in the TBIAOTANT

1 Chronicles 15 in the TBT1E

1 Chronicles 15 in the TBT1E2

1 Chronicles 15 in the TFTIP

1 Chronicles 15 in the TFTU

1 Chronicles 15 in the TGNTATF3T

1 Chronicles 15 in the THAI

1 Chronicles 15 in the TNFD

1 Chronicles 15 in the TNT

1 Chronicles 15 in the TNTIK

1 Chronicles 15 in the TNTIL

1 Chronicles 15 in the TNTIN

1 Chronicles 15 in the TNTIP

1 Chronicles 15 in the TNTIZ

1 Chronicles 15 in the TOMA

1 Chronicles 15 in the TTENT

1 Chronicles 15 in the UBG

1 Chronicles 15 in the UGV

1 Chronicles 15 in the UGV2

1 Chronicles 15 in the UGV3

1 Chronicles 15 in the VBL

1 Chronicles 15 in the VDCC

1 Chronicles 15 in the YALU

1 Chronicles 15 in the YAPE

1 Chronicles 15 in the YBVTP

1 Chronicles 15 in the ZBP