2 Kings 11 (IRVK)

1 ಅಹಜ್ಯನು ಮರಣಹೊಂದಿದನೆಂದು ಅವನ ತಾಯಿಯಾದ ಅತಲ್ಯಳು ಕೇಳಿದಾಗ ಪಕ್ಕನೆ ರಾಜಸಂತಾನದವರನ್ನೆಲ್ಲಾ ಸಂಹರಿಸಿಬಿಟ್ಟಳು. 2 ಆದರೆ ಅರಸನಾದ ಯೆಹೋರಾಮನ ಮಗಳೂ, ಅಹಜ್ಯನ ತಂಗಿಯೂ ಆದ ಯೆಹೋಷೆಬಳೆಂಬಾಕೆಯು ಯಾರಿಗೂ ತಿಳಿಯದಂತೆ ತನ್ನ ಅಣ್ಣನ ಮಗನಾದ ಯೆಹೋವಾಷನನ್ನು ಅತಲ್ಯಳಿಂದ ಹತರಾಗಿದ್ದ ರಾಜಪುತ್ರರ ಮಧ್ಯದಿಂದ ಅವನ ದಾದಿಯರೊಡನೆ ಅವನನ್ನು ತೆಗೆದುಕೊಂಡು ಹೋಗಿ, ಮಲಗುವ ಕೋಣೆಯಲ್ಲಿ ಅಡಗಿಸಿಟ್ಟಳು 3 ಹೀಗೆ ಅವನು ಅತಲ್ಯಳಿಂದ ಹತವಾಗದಂತೆ ತಪ್ಪಿಸಿ ಕೊಂಡು ಆರು ವರ್ಷಗಳವರೆಗೂ ಯೆಹೋಷೆಬಳೊಡನೆ ಗುಪ್ತವಾಗಿ ಯೆಹೋವನ ಆಲಯದಲ್ಲಿದ್ದನು. ಆ ಆರು ವರ್ಷಗಳಲ್ಲಿ ಅತಲ್ಯಳೇ ದೇಶವನ್ನು ಆಳುತ್ತಿದ್ದಳು. 4 ಏಳನೆಯ ವರ್ಷದಲ್ಲಿ, ಯೆಹೋಯಾದಾವನು ಕಾರಿಯರ ಎಂಬ ಸಿಪಾಯಿಗಳ ಮತ್ತು ಕಾವಲುದಂಡಿನವರ ಶತಾಧಿಪತಿಗಳನ್ನು ತನ್ನ ಹತ್ತಿರ ಯೆಹೋವನ ಆಲಯಕ್ಕೆ ಕರೆಯಿಸಿದನು. ಅಲ್ಲಿ ಅವನು ಅವರ ಸಂಗಡ ಆಪ್ತನಾಗಿದ್ದು ಪ್ರಮಾಣಪೂರ್ವಕವಾದ ಒಡಂಬಡಿಕೆಯನ್ನು ಮಾಡಿಕೊಂಡ ನಂತರ ರಾಜಕುಮಾರನನ್ನು ತೋರಿಸಿದನು. 5 ಯೆಹೋಯಾದಾವನು ಅವರಿಗೆ, “ಸಬ್ಬತ್ ದಿನದಲ್ಲಿ ಮನೆಗೆ ಹೋಗುವ ಸೈನ್ಯದ ಮೂರರಲ್ಲೊಂದು ಭಾಗವು ರಾಜರ ಅರಮನೆಯನ್ನು ಕಾಯಬೇಕು, 6 ಮೂರರಲ್ಲೊಂದು ಭಾಗವು ಸೂರ್ ಬಾಗಿಲಿನಲ್ಲಿಯೂ, ಮತ್ತೊಂದು ಭಾಗವು ಕಾವಲುದಂಡಿನ ಹಿಂದಿನ ಬಾಗಿಲಿನಲ್ಲಿಯೂ ಇರಬೇಕು. ಈ ಪ್ರಕಾರ ನೀವು ಅರಮನೆಯನ್ನು ಭದ್ರವಾಗಿ ಕಾಯಬೇಕು. 7 ಇದಲ್ಲದೆ, ಸಬ್ಬತ್ ದಿನದಲ್ಲಿ ಅರಸನೊಂದಿಗೆ ಯೆಹೋವನ ಆಲಯವನ್ನು ಕಾಯುವುದಕ್ಕಾಗಿ ಬರುವ ಸೈನ್ಯವು ಇಬ್ಬಗೆಯಾಗಿದ್ದುಕೊಂಡು ಯೆಹೋವನ ಆಲಯವನ್ನು ಕಾಯಬೇಕು. 8 ನೀವು ಕೈಯಲ್ಲಿ ಆಯುಧಗಳನ್ನು ಹಿಡಿದುಕೊಂಡು ಅವನ ಸುತ್ತಲೂ ನಿಂತು, ಅವನ ಗುಂಪಿನಲ್ಲಿ ನುಗ್ಗುವಂತವನನ್ನು ಸಂಹರಿಸಬೇಕು. ಅರಸನು ಹೊರಗೆ ಹೋಗಿ ಬರುವಾಗಲೆಲ್ಲಾ ನೀವು ಅವನ ಜೊತೆಯಲ್ಲೇ ಇರಬೇಕು. ಇದೇ ನನ್ನ ಅಪ್ಪಣೆ” ಎಂದು ಹೇಳಿದನು. 9 ಯಾಜಕನಾದ ಯೆಹೋಯಾದಾಮನು ಆಜ್ಞಾಪಿಸಿದಂತೆ, ಶತಾಧಿಪತಿಗಳು ಸಬ್ಬತ್ ದಿನದಲ್ಲಿ ಮನೆಗೆ ಹೋಗತಕ್ಕ ಮತ್ತು ಕಾಯುವುದಕ್ಕಾಗಿ ಬರತಕ್ಕ ಸಿಪಾಯಿಗಳನ್ನು ಕರೆದುಕೊಂಡು ರಾಜಪುತ್ರನ ಬಳಿಗೆ ಬಂದರು. 10 ಯಾಜಕನಾದ ಯೆಹೋಯಾದಾವನು ಆ ಶತಾಧಿಪತಿಗಳಿಗೆ ಯೆಹೋವನ ಆಲಯದಲ್ಲಿ ಇಡಲ್ಪಟ್ಟಿದ್ದ ರಾಜನಾದ ದಾವೀದನ ಬರ್ಜಿಯನ್ನೂ, ಗುರಾಣಿಗಳನ್ನೂ ಕೊಟ್ಟನು. 11 ಕಾವಲುದಂಡಿನವರು ಆಯುಧ ಹಿಡಿದುಕೊಂಡು ಅರಸನನ್ನು ಕಾಯುವುದಕ್ಕೋಸ್ಕರ ದೇವಾಲಯದ ದಕ್ಷಿಣ ದಿಕ್ಕಿನ ಮೂಲೆಯಿಂದ ಯಜ್ಞವೇದಿಯವರೆಗೂ, ಅಲ್ಲಿಂದ ಉತ್ತರ ದಿಕ್ಕಿನ ಮೂಲೆಯವರೆಗೂ ಸಾಲಾಗಿ ನಿಂತರು. 12 ಯೆಹೋಯಾದಾವನು ರಾಜಪುತ್ರನನ್ನು ಹೊರಗೆ ಕರೆದುಕೊಂಡು ಬಂದು, ಅವನ ತಲೆಯ ಮೇಲೆ ಕಿರೀಟವನ್ನು ಇಟ್ಟು ಕೈಯಲ್ಲಿ ಧರ್ಮಶಾಸ್ತ್ರವನ್ನು ಕೊಟ್ಟು, ಅವನಿಗೆ ರಾಜ್ಯಾಭಿಷೇಕ ಮಾಡಿದನು. ಕೂಡಲೆ ಜನರು ಚಪ್ಪಾಳೆ ತಟ್ಟುತ್ತಾ, “ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದರು. 13 ಅತಲ್ಯಳು ಕಾವಲುದಂಡಿನವರ ಮತ್ತು ಇತರ ಜನರ ಗದ್ದಲವನ್ನು ಕೇಳಿ ಅವರು ಸೇರಿ ಬಂದಿದ್ದ ಯೆಹೋವನ ಆಲಯಕ್ಕೆ ಬಂದಳು. 14 ಅಲ್ಲಿ ಅರಸನು ಪದ್ದತಿಯ ಪ್ರಕಾರ ಸ್ತಂಭದ ಬಳಿಯಲ್ಲಿ ನಿಂತಿದ್ದನು. ಅಧಿಪತಿಗಳೂ, ತುತ್ತೂರಿಯನ್ನು ಊದುವವರೂ ಅರಸನ ಹತ್ತಿರ ನಿಂತಿದ್ದರು. ದೇಶದ ಜನರೆಲ್ಲರೂ ಸಂತೋಷದಿಂದ ಕೊಂಬೂದುತ್ತಿದ್ದರು. ಇದನ್ನು ಕಂಡ ಕೂಡಲೆ ಅತಲ್ಯಳು ಬಟ್ಟೆಗಳನ್ನು ಹರಿದುಕೊಂಡು, “ದ್ರೋಹ! ದ್ರೋಹ!” ಎಂದು ಕೂಗಿದಳು. 15 ಆಗ ಯಾಜಕನಾದ ಯೆಹೋಯಾದಾವನು ಸೇನಾನಿಗಳಾದ, ಶತಾಧಿಪತಿಗಳಿಗೆ, “ಈಕೆಯನ್ನು ಯೆಹೋವನ ಆಲಯದಲ್ಲಿ ಕೊಲ್ಲಬೇಡಿರಿ ಸಿಪಾಯಿಗಳ ಮಧ್ಯದಲ್ಲಿ ಆಕೆಯನ್ನು ಹೊರಗೆ ಕರೆದುಕೊಂಡು ಹೋಗಿರಿ ಮತ್ತು ಆಕೆಯನ್ನು ಹಿಂಬಾಲಿಸುವವರನ್ನು ಕತ್ತಿಯಿಂದ ಕೊಲ್ಲಿರಿ” ಎಂದು ಆಜ್ಞಾಪಿಸಿದನು. 16 ಅವರು ಆಕೆಯನ್ನು ಹಿಡಿದು ಕುದುರೆಗಳ ಬಾಗಿಲಿನಿಂದ ರಾಜನ ಅರಮನೆಗೆ ಕರೆದೊಯ್ದು ಅಲ್ಲಿ ಹತ್ಯೆ ಮಾಡಿದರು. 17 ಅನಂತರ ಯೆಹೋಯಾದಾವನ ಪ್ರೇರಣೆಯಿಂದ ಅರಸನೂ, ಪ್ರಜೆಗಳೂ ತಾವು ಯೆಹೋವನ ಪ್ರಜೆಗಳಾಗಿರುವುದಾಗಿ ಅಲ್ಲಿ ಪ್ರಮಾಣ ಮಾಡಿದರು. ಇದಲ್ಲದೆ ರಾಜಪ್ರಜೆಗಳೂ ಒಡಂಬಡಿಕೆಮಾಡಿಕೊಂಡರು. 18 ಯೆಹೂದ್ಯರೆಲ್ಲರೂ ಬಾಳನ ದೇವಸ್ಥಾನಕ್ಕೆ ಹೋಗಿ ಬಾಳನ ಪೂಜಾರಿಯಾದ ಮತ್ತಾನನನ್ನು ಬಲಿಪೀಠಗಳ ಎದುರಿನಲ್ಲಿಯೇ ಕೊಂದು, ದೇವಸ್ಥಾನವನ್ನೂ ಅದರಲ್ಲಿದ್ದ ಬಲಿಪೀಠಗಳನ್ನೂ, ವಿಗ್ರಹಗಳನ್ನೂ ಸಂಪೂರ್ಣವಾಗಿ ಹಾಳುಮಾಡಿದರು. ಯೆಹೋಯಾದಾವನು ಯೆಹೋವನ ದೇವಾಲಯಕ್ಕೆ ಕಾವಲಿಟ್ಟನು. 19 ಅಲ್ಲದೆ ಯೆಹೋಯಾದಾವನು ಶತಾಧಿಪತಿಗಳನ್ನು, ಕಾರಿಯರು ಎನ್ನಿಸಿಕೊಳ್ಳುವ ಸೈನ್ಯಗಳ ಕಾವಲುದಂಡನ್ನು, ಸಾಧಾರಣ ಜನರನ್ನು ಅವರೊಡನೆ ಅರಸನಾದ ಯೆಹೋವಾಷನನ್ನು ಯೆಹೋವನ ಆಲಯದಲ್ಲಿ ಕಾವಲುದಂಡಿನವರ ಬಾಗಿಲಿನ ಮಾರ್ಗವಾಗಿ ಅರಮನೆಗೆ ಕರೆದುಕೊಂಡು ಹೋಗಿ ರಾಜಸಿಂಹಾಸನದ ಮೇಲೆ ಕುಳ್ಳಿರಿಸಿದನು. 20 ದೇಶದವರೆಲ್ಲರೂ ಬಹಳವಾಗಿ ಸಂತೋಷಪಟ್ಟರು. ಪಟ್ಟಣದಲ್ಲಿ ಶಾಂತಿ ನೆಲೆಸಿತು. ಅತಲ್ಯಳನ್ನು ರಾಜನ ಅರಮನೆಯ ಸಮೀಪದಲ್ಲಿ ಕತ್ತಿಯಿಂದ ಸಂಹರಿಸಿದರು. 21 ಯೆಹೋವಾಷನು ಅರಸನಾದಾಗ ಅವನು ಏಳು ವರ್ಷದವನಾಗಿದ್ದನು.

In Other Versions

2 Kings 11 in the ANGEFD

2 Kings 11 in the ANTPNG2D

2 Kings 11 in the AS21

2 Kings 11 in the BAGH

2 Kings 11 in the BBPNG

2 Kings 11 in the BBT1E

2 Kings 11 in the BDS

2 Kings 11 in the BEV

2 Kings 11 in the BHAD

2 Kings 11 in the BIB

2 Kings 11 in the BLPT

2 Kings 11 in the BNT

2 Kings 11 in the BNTABOOT

2 Kings 11 in the BNTLV

2 Kings 11 in the BOATCB

2 Kings 11 in the BOATCB2

2 Kings 11 in the BOBCV

2 Kings 11 in the BOCNT

2 Kings 11 in the BOECS

2 Kings 11 in the BOGWICC

2 Kings 11 in the BOHCB

2 Kings 11 in the BOHCV

2 Kings 11 in the BOHLNT

2 Kings 11 in the BOHNTLTAL

2 Kings 11 in the BOICB

2 Kings 11 in the BOILNTAP

2 Kings 11 in the BOITCV

2 Kings 11 in the BOKCV

2 Kings 11 in the BOKCV2

2 Kings 11 in the BOKHWOG

2 Kings 11 in the BOKSSV

2 Kings 11 in the BOLCB

2 Kings 11 in the BOLCB2

2 Kings 11 in the BOMCV

2 Kings 11 in the BONAV

2 Kings 11 in the BONCB

2 Kings 11 in the BONLT

2 Kings 11 in the BONUT2

2 Kings 11 in the BOPLNT

2 Kings 11 in the BOSCB

2 Kings 11 in the BOSNC

2 Kings 11 in the BOTLNT

2 Kings 11 in the BOVCB

2 Kings 11 in the BOYCB

2 Kings 11 in the BPBB

2 Kings 11 in the BPH

2 Kings 11 in the BSB

2 Kings 11 in the CCB

2 Kings 11 in the CUV

2 Kings 11 in the CUVS

2 Kings 11 in the DBT

2 Kings 11 in the DGDNT

2 Kings 11 in the DHNT

2 Kings 11 in the DNT

2 Kings 11 in the ELBE

2 Kings 11 in the EMTV

2 Kings 11 in the ESV

2 Kings 11 in the FBV

2 Kings 11 in the FEB

2 Kings 11 in the GGMNT

2 Kings 11 in the GNT

2 Kings 11 in the HARY

2 Kings 11 in the HNT

2 Kings 11 in the IRVA

2 Kings 11 in the IRVB

2 Kings 11 in the IRVG

2 Kings 11 in the IRVH

2 Kings 11 in the IRVM

2 Kings 11 in the IRVM2

2 Kings 11 in the IRVO

2 Kings 11 in the IRVP

2 Kings 11 in the IRVT

2 Kings 11 in the IRVT2

2 Kings 11 in the IRVU

2 Kings 11 in the ISVN

2 Kings 11 in the JSNT

2 Kings 11 in the KAPI

2 Kings 11 in the KBT1ETNIK

2 Kings 11 in the KBV

2 Kings 11 in the KJV

2 Kings 11 in the KNFD

2 Kings 11 in the LBA

2 Kings 11 in the LBLA

2 Kings 11 in the LNT

2 Kings 11 in the LSV

2 Kings 11 in the MAAL

2 Kings 11 in the MBV

2 Kings 11 in the MBV2

2 Kings 11 in the MHNT

2 Kings 11 in the MKNFD

2 Kings 11 in the MNG

2 Kings 11 in the MNT

2 Kings 11 in the MNT2

2 Kings 11 in the MRS1T

2 Kings 11 in the NAA

2 Kings 11 in the NASB

2 Kings 11 in the NBLA

2 Kings 11 in the NBS

2 Kings 11 in the NBVTP

2 Kings 11 in the NET2

2 Kings 11 in the NIV11

2 Kings 11 in the NNT

2 Kings 11 in the NNT2

2 Kings 11 in the NNT3

2 Kings 11 in the PDDPT

2 Kings 11 in the PFNT

2 Kings 11 in the RMNT

2 Kings 11 in the SBIAS

2 Kings 11 in the SBIBS

2 Kings 11 in the SBIBS2

2 Kings 11 in the SBICS

2 Kings 11 in the SBIDS

2 Kings 11 in the SBIGS

2 Kings 11 in the SBIHS

2 Kings 11 in the SBIIS

2 Kings 11 in the SBIIS2

2 Kings 11 in the SBIIS3

2 Kings 11 in the SBIKS

2 Kings 11 in the SBIKS2

2 Kings 11 in the SBIMS

2 Kings 11 in the SBIOS

2 Kings 11 in the SBIPS

2 Kings 11 in the SBISS

2 Kings 11 in the SBITS

2 Kings 11 in the SBITS2

2 Kings 11 in the SBITS3

2 Kings 11 in the SBITS4

2 Kings 11 in the SBIUS

2 Kings 11 in the SBIVS

2 Kings 11 in the SBT

2 Kings 11 in the SBT1E

2 Kings 11 in the SCHL

2 Kings 11 in the SNT

2 Kings 11 in the SUSU

2 Kings 11 in the SUSU2

2 Kings 11 in the SYNO

2 Kings 11 in the TBIAOTANT

2 Kings 11 in the TBT1E

2 Kings 11 in the TBT1E2

2 Kings 11 in the TFTIP

2 Kings 11 in the TFTU

2 Kings 11 in the TGNTATF3T

2 Kings 11 in the THAI

2 Kings 11 in the TNFD

2 Kings 11 in the TNT

2 Kings 11 in the TNTIK

2 Kings 11 in the TNTIL

2 Kings 11 in the TNTIN

2 Kings 11 in the TNTIP

2 Kings 11 in the TNTIZ

2 Kings 11 in the TOMA

2 Kings 11 in the TTENT

2 Kings 11 in the UBG

2 Kings 11 in the UGV

2 Kings 11 in the UGV2

2 Kings 11 in the UGV3

2 Kings 11 in the VBL

2 Kings 11 in the VDCC

2 Kings 11 in the YALU

2 Kings 11 in the YAPE

2 Kings 11 in the YBVTP

2 Kings 11 in the ZBP