Deuteronomy 6 (IRVK)

1 ನೀವು ಯೊರ್ದನ್ ನದಿ ದಾಟಿ ಸ್ವತಂತ್ರಿಸಿಕೊಳ್ಳುವ ದೇಶದಲ್ಲಿ ಅನುಸರಿಸುವುದಕ್ಕಾಗಿ ನಿಮಗೆ ಬೋಧಿಸಬೇಕೆಂದು ನಿಮ್ಮ ದೇವರಾದ ಯೆಹೋವನು ನನಗೆ ಆಜ್ಞಾಪಿಸಿದ ಧರ್ಮೋಪದೇಶವೂ ಮತ್ತು ವಿಧಿನಿಯಮಗಳೂ ಇವೇ. 2 ನೀವೂ, ನಿಮ್ಮ ಮಕ್ಕಳು, ಅವರ ಮಕ್ಕಳು ಮತ್ತು ಅವರ ಸಂತತಿಯವರು ಜೀವಮಾನದಲ್ಲೆಲ್ಲಾ ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿದ್ದುಕೊಂಡು, ನಾನು ಈಗ ಬೋಧಿಸುವ ಆತನ ವಿಧಿನಿಯಮಗಳನ್ನೆಲ್ಲಾ ಅನುಸರಿಸಬೇಕೆಂದೂ ಮತ್ತು ನೀವು ಬಹುಕಾಲ ಬಾಳಬೇಕೆಂದೂ ಇವುಗಳನ್ನು ಆಜ್ಞಾಪಿಸಿದ್ದಾನೆ. 3 ಆದುದರಿಂದ ಇಸ್ರಾಯೇಲರೇ, ನಿಮ್ಮ ಪೂರ್ವಿಕರ ದೇವರಾದ ಯೆಹೋವನು ವಾಗ್ದಾನಮಾಡಿದ ಪ್ರಕಾರ ಹಾಲೂ ಮತ್ತು ಜೇನೂ ಹರಿಯುವ ಆ ದೇಶದಲ್ಲಿ ನಿಮಗೆ ಶುಭವುಂಟಾಗುವುದಕ್ಕೂ, ನೀವು ಬಹಳವಾಗಿ ಹೆಚ್ಚುವುದಕ್ಕೂ ಈ ಆಜ್ಞೆಗಳನ್ನು ಲಕ್ಷ್ಯವಿಟ್ಟು ಕೇಳಿ ಅನುಸರಿಸಲೇಬೇಕು. 4 ಇಸ್ರಾಯೇಲರೇ, ಕೇಳಿರಿ, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; 5 ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ, ಪೂರ್ಣಪ್ರಾಣದಿಂದಲೂ ಮತ್ತು ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. 6 ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. 7 ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ, ಮನೆಯಲ್ಲಿ ಕುಳಿತಿರುವಾಗಲೂ, ದಾರಿಯಲ್ಲಿ ನಡೆಯುವಾಗಲೂ, ಮಲಗುವಾಗಲೂ ಮತ್ತು ಏಳುವಾಗಲೂ ಇವುಗಳ ವಿಷಯದಲ್ಲಿ ಮಾತನಾಡಬೇಕು. 8 ಇವುಗಳನ್ನು ಜ್ಞಾಪಕಾರ್ಥವಾಗಿ ಕೈಗೆ ಕಟ್ಟಿಕೊಳ್ಳಬೇಕು, ಇವು ಹಣೆಗೆ ಕಟ್ಟಿಕೊಳ್ಳುವ ಜ್ಞಾಪಕದ ಪಟ್ಟಿಯಂತೆ ಇರಬೇಕು. 9 ನಿಮ್ಮ ಮನೆಬಾಗಿಲಿನ ನಿಲುವು ಪಟ್ಟಿಗಳಲ್ಲಿಯೂ ಮತ್ತು ದ್ವಾರಗಳ ಮೇಲೆಯೂ ಇವುಗಳನ್ನು ಬರೆಯಬೇಕು. 10 ನಿಮ್ಮ ದೇವರಾದ ಯೆಹೋವನು ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಿಮ್ಮನ್ನು ಸೇರಿಸಿದಾಗ ನೀವು ಕಟ್ಟದ ಒಳ್ಳೆಯ ದೊಡ್ಡ ಪಟ್ಟಣಗಳನ್ನೂ, ನೀವು ಕೂಡಿಸದ ಉತ್ತಮ ವಸ್ತುಗಳಿಂದ 11 ತುಂಬಿದ ಮನೆಗಳನ್ನೂ, ನೀವು ತೋಡದ ನೀರುಗುಂಡಿಗಳನ್ನೂ, ನೀವು ಬೆಳಸದ ದ್ರಾಕ್ಷಿತೋಟಗಳನ್ನೂ ಮತ್ತು ಎಣ್ಣೆಮರಗಳನ್ನೂ ಅನುಭವಿಸುತ್ತಾ ತೃಪ್ತರಾಗಿರುವಾಗ, 12 ಐಗುಪ್ತದೇಶದಲ್ಲಿ ದಾಸರಾಗಿದ್ದ ನಿಮ್ಮನ್ನು ಬಿಡುಗಡೆ ಮಾಡಿದ ಯೆಹೋವನನ್ನು ಮರೆಯದೇ ಎಚ್ಚರದಿಂದಿರಿ. 13 ನಿಮ್ಮ ದೇವರಾದ ಯೆಹೋವನಲ್ಲಿಯೇ ಭಯಭಕ್ತಿಯುಳ್ಳವರಾಗಿರಬೇಕು, ಆತನನ್ನೇ ಸೇವಿಸಬೇಕು ಮತ್ತು ಆತನ ಹೆಸರು ಹೇಳಿ ಪ್ರಮಾಣಮಾಡಬೇಕು. 14 ಸುತ್ತಮುತ್ತಲಿರುವ ಜನಾಂಗಗಳು ಸೇವಿಸುವ ದೇವರುಗಳನ್ನು ನೀವು ಆರಾಧಿಸಬಾರದು. 15 ನಿಮ್ಮ ಮಧ್ಯದಲ್ಲಿರುವ ನಿಮ್ಮ ದೇವರಾದ ಯೆಹೋವನು ತನಗೆ ಸಲ್ಲಬೇಕಾದ ಗೌರವವನ್ನು ಇನ್ನೊಬ್ಬನಿಗೆ ಸಲ್ಲಗೊಡಿಸುವುದಿಲ್ಲ, ಆತನು ನಿಮ್ಮ ಮೇಲೆ ಕೋಪಗೊಂಡರೆ ನಿಮ್ಮನ್ನು ಭೂಮಿಯ ಮೇಲೆ ಉಳಿಯದಂತೆ ನಾಶಮಾಡಾನು. 16 ನೀವು ಮಸ್ಸದಲ್ಲಿ ನಿಮ್ಮ ದೇವರಾದ ಯೆಹೋವನನ್ನು ಪರೀಕ್ಷಿಸಿದಂತೆ ಇನ್ನು ಮುಂದೆ ಮಾಡಬೇಡಿರಿ. 17 ನಿಮ್ಮ ದೇವರಾದ ಯೆಹೋವನು ನಿಮಗೆ ನೇಮಿಸಿದ ಆಜ್ಞಾವಿಧಿನಿಯಮಗಳನ್ನು ಅನುಸರಿಸಲೇಬೇಕು. 18 ಯೆಹೋವನ ದೃಷ್ಟಿಗೆ ಯಾವುದು ನ್ಯಾಯವೂ ಮತ್ತು ಯೋಗ್ಯವೂ ಆಗಿದೆಯೋ ಅದನ್ನೇ ಮಾಡಬೇಕು. ಹೀಗೆ ನಡೆದರೆ ನಿಮಗೆ ಶುಭವುಂಟಾಗುವುದು, ಮತ್ತು ಯೆಹೋವನು ನಿಮ್ಮ ಪೂರ್ವಿಕರಿಗೆ ಪ್ರಮಾಣಪೂರ್ವಕವಾಗಿ ಕೊಟ್ಟ ಉತ್ತಮದೇಶವನ್ನು ನೀವು ಸೇರಿ ಸ್ವಾಧೀನಮಾಡಿಕೊಳ್ಳುವಿರಿ. 19 ಆತನು ತಾನೇ ನಿಮ್ಮ ಶತ್ರುಗಳನ್ನು ನಿಮ್ಮ ಎದುರಿನಿಂದ ಹೊರಡಿಸುವೆನೆಂದು ಮಾತುಕೊಟ್ಟನಲ್ಲವೇ. 20 ಇನ್ನು ಮುಂದೆ ನಿಮ್ಮ ಮಕ್ಕಳು, “ಈ ಆಜ್ಞಾವಿಧಿನಿಯಮಗಳನ್ನು ನಮ್ಮ ದೇವರಾದ ಯೆಹೋವನು ಏಕೆ ನೇಮಿಸಿದನು?” ಎಂದು ವಿಚಾರಿಸುವಾಗ 21 ನೀವು ಅವರಿಗೆ, “ನಾವು ಐಗುಪ್ತದೇಶದಲ್ಲಿ ಫರೋಹನಿಗೆ ದಾಸರಾಗಿದ್ದಾಗ ಯೆಹೋವನು ತನ್ನ ಭುಜಬಲದಿಂದ ನಮ್ಮನ್ನು ಬಿಡುಗಡೆಮಾಡಿದನು. 22 ಆತನು ಐಗುಪ್ತ್ಯರನ್ನೂ, ಫರೋಹನನ್ನೂ ಮತ್ತು ಅವನ ಮನೆಯವರನ್ನೂ ಬಾಧಕವಾದ ದೊಡ್ಡ ಮಹತ್ಕಾರ್ಯಗಳಿಂದಲೂ, ಉತ್ಪಾತಗಳಿಂದಲೂ ನಮ್ಮ ಕಣ್ಣೆದುರಿನಲ್ಲಿ ಶಿಕ್ಷಿಸಿ, 23 ತಾನು ನಮ್ಮ ಪೂರ್ವಿಕರಿಗೆ ಪ್ರಮಾಣಮಾಡಿಕೊಟ್ಟ ದೇಶದಲ್ಲಿ ನಮ್ಮನ್ನು ಸೇರಿಸುವುದಕ್ಕಾಗಿ ಐಗುಪ್ತದೇಶದೊಳಗಿಂದ ಬರಮಾಡಿದನು. 24 ಆ ಕಾರಣದಿಂದಲೇ ಈ ನಿಯಮಗಳನ್ನೆಲ್ಲಾ ಆಚರಿಸಬೇಕೆಂದು ಆತನು ನಮಗೆ ಅಪ್ಪಣೆಕೊಟ್ಟಿದ್ದಾನೆ. ಯಾವಾಗಲೂ ಶುಭವುಂಟಾಗುವಂತೆಯೂ, ಆತನು ಈಗಲೂ ನಮ್ಮ ಪ್ರಾಣಗಳನ್ನು ಕಾಪಾಡುವಂತೆಯೂ ನಾವು ನಮ್ಮ ದೇವರಾದ ಯೆಹೋವನಿಗೆ ಭಯಭಕ್ತಿಯುಳ್ಳವರಾಗಿರಬೇಕು. 25 ನಮ್ಮ ದೇವರಾದ ಯೆಹೋವನು ನಿರೂಪಿಸಿದ ಈ ಧರ್ಮೋಪದೇಶವನ್ನೆಲ್ಲಾ ನಾವು ಅನುಸರಿಸಿದರೆ ಆತನ ದೃಷ್ಟಿಯಲ್ಲಿ ನೀತಿವಂತರೆಂದು ಪರಿಗಣಿಸಲು ಯೋಗ್ಯರಾಗುವೆವು” ಎಂಬುದಾಗಿ ನೀವು ಉತ್ತರಕೊಡಬೇಕು.

In Other Versions

Deuteronomy 6 in the ANGEFD

Deuteronomy 6 in the ANTPNG2D

Deuteronomy 6 in the AS21

Deuteronomy 6 in the BAGH

Deuteronomy 6 in the BBPNG

Deuteronomy 6 in the BBT1E

Deuteronomy 6 in the BDS

Deuteronomy 6 in the BEV

Deuteronomy 6 in the BHAD

Deuteronomy 6 in the BIB

Deuteronomy 6 in the BLPT

Deuteronomy 6 in the BNT

Deuteronomy 6 in the BNTABOOT

Deuteronomy 6 in the BNTLV

Deuteronomy 6 in the BOATCB

Deuteronomy 6 in the BOATCB2

Deuteronomy 6 in the BOBCV

Deuteronomy 6 in the BOCNT

Deuteronomy 6 in the BOECS

Deuteronomy 6 in the BOGWICC

Deuteronomy 6 in the BOHCB

Deuteronomy 6 in the BOHCV

Deuteronomy 6 in the BOHLNT

Deuteronomy 6 in the BOHNTLTAL

Deuteronomy 6 in the BOICB

Deuteronomy 6 in the BOILNTAP

Deuteronomy 6 in the BOITCV

Deuteronomy 6 in the BOKCV

Deuteronomy 6 in the BOKCV2

Deuteronomy 6 in the BOKHWOG

Deuteronomy 6 in the BOKSSV

Deuteronomy 6 in the BOLCB

Deuteronomy 6 in the BOLCB2

Deuteronomy 6 in the BOMCV

Deuteronomy 6 in the BONAV

Deuteronomy 6 in the BONCB

Deuteronomy 6 in the BONLT

Deuteronomy 6 in the BONUT2

Deuteronomy 6 in the BOPLNT

Deuteronomy 6 in the BOSCB

Deuteronomy 6 in the BOSNC

Deuteronomy 6 in the BOTLNT

Deuteronomy 6 in the BOVCB

Deuteronomy 6 in the BOYCB

Deuteronomy 6 in the BPBB

Deuteronomy 6 in the BPH

Deuteronomy 6 in the BSB

Deuteronomy 6 in the CCB

Deuteronomy 6 in the CUV

Deuteronomy 6 in the CUVS

Deuteronomy 6 in the DBT

Deuteronomy 6 in the DGDNT

Deuteronomy 6 in the DHNT

Deuteronomy 6 in the DNT

Deuteronomy 6 in the ELBE

Deuteronomy 6 in the EMTV

Deuteronomy 6 in the ESV

Deuteronomy 6 in the FBV

Deuteronomy 6 in the FEB

Deuteronomy 6 in the GGMNT

Deuteronomy 6 in the GNT

Deuteronomy 6 in the HARY

Deuteronomy 6 in the HNT

Deuteronomy 6 in the IRVA

Deuteronomy 6 in the IRVB

Deuteronomy 6 in the IRVG

Deuteronomy 6 in the IRVH

Deuteronomy 6 in the IRVM

Deuteronomy 6 in the IRVM2

Deuteronomy 6 in the IRVO

Deuteronomy 6 in the IRVP

Deuteronomy 6 in the IRVT

Deuteronomy 6 in the IRVT2

Deuteronomy 6 in the IRVU

Deuteronomy 6 in the ISVN

Deuteronomy 6 in the JSNT

Deuteronomy 6 in the KAPI

Deuteronomy 6 in the KBT1ETNIK

Deuteronomy 6 in the KBV

Deuteronomy 6 in the KJV

Deuteronomy 6 in the KNFD

Deuteronomy 6 in the LBA

Deuteronomy 6 in the LBLA

Deuteronomy 6 in the LNT

Deuteronomy 6 in the LSV

Deuteronomy 6 in the MAAL

Deuteronomy 6 in the MBV

Deuteronomy 6 in the MBV2

Deuteronomy 6 in the MHNT

Deuteronomy 6 in the MKNFD

Deuteronomy 6 in the MNG

Deuteronomy 6 in the MNT

Deuteronomy 6 in the MNT2

Deuteronomy 6 in the MRS1T

Deuteronomy 6 in the NAA

Deuteronomy 6 in the NASB

Deuteronomy 6 in the NBLA

Deuteronomy 6 in the NBS

Deuteronomy 6 in the NBVTP

Deuteronomy 6 in the NET2

Deuteronomy 6 in the NIV11

Deuteronomy 6 in the NNT

Deuteronomy 6 in the NNT2

Deuteronomy 6 in the NNT3

Deuteronomy 6 in the PDDPT

Deuteronomy 6 in the PFNT

Deuteronomy 6 in the RMNT

Deuteronomy 6 in the SBIAS

Deuteronomy 6 in the SBIBS

Deuteronomy 6 in the SBIBS2

Deuteronomy 6 in the SBICS

Deuteronomy 6 in the SBIDS

Deuteronomy 6 in the SBIGS

Deuteronomy 6 in the SBIHS

Deuteronomy 6 in the SBIIS

Deuteronomy 6 in the SBIIS2

Deuteronomy 6 in the SBIIS3

Deuteronomy 6 in the SBIKS

Deuteronomy 6 in the SBIKS2

Deuteronomy 6 in the SBIMS

Deuteronomy 6 in the SBIOS

Deuteronomy 6 in the SBIPS

Deuteronomy 6 in the SBISS

Deuteronomy 6 in the SBITS

Deuteronomy 6 in the SBITS2

Deuteronomy 6 in the SBITS3

Deuteronomy 6 in the SBITS4

Deuteronomy 6 in the SBIUS

Deuteronomy 6 in the SBIVS

Deuteronomy 6 in the SBT

Deuteronomy 6 in the SBT1E

Deuteronomy 6 in the SCHL

Deuteronomy 6 in the SNT

Deuteronomy 6 in the SUSU

Deuteronomy 6 in the SUSU2

Deuteronomy 6 in the SYNO

Deuteronomy 6 in the TBIAOTANT

Deuteronomy 6 in the TBT1E

Deuteronomy 6 in the TBT1E2

Deuteronomy 6 in the TFTIP

Deuteronomy 6 in the TFTU

Deuteronomy 6 in the TGNTATF3T

Deuteronomy 6 in the THAI

Deuteronomy 6 in the TNFD

Deuteronomy 6 in the TNT

Deuteronomy 6 in the TNTIK

Deuteronomy 6 in the TNTIL

Deuteronomy 6 in the TNTIN

Deuteronomy 6 in the TNTIP

Deuteronomy 6 in the TNTIZ

Deuteronomy 6 in the TOMA

Deuteronomy 6 in the TTENT

Deuteronomy 6 in the UBG

Deuteronomy 6 in the UGV

Deuteronomy 6 in the UGV2

Deuteronomy 6 in the UGV3

Deuteronomy 6 in the VBL

Deuteronomy 6 in the VDCC

Deuteronomy 6 in the YALU

Deuteronomy 6 in the YAPE

Deuteronomy 6 in the YBVTP

Deuteronomy 6 in the ZBP