Ezekiel 13 (IRVK)

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು, 2 “ನರಪುತ್ರನೇ, ಪ್ರವಾದನೆ ಮಾಡಿ, ಸ್ವಕಲ್ಪಿತವಾದುದನ್ನೇ ಸಾರುತ್ತಲಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ಖಂಡನೆಯಾಗಿ ನೀನು ಪ್ರವಾದಿಸುತ್ತಾ ಹೀಗೆ ಹೇಳು, ‘ಯೆಹೋವನ ವಾಕ್ಯವನ್ನು ಕೇಳಿರಿ. 3 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ಯಾವ ಸಾಕ್ಷಾತ್ಕಾರವೂ ಇಲ್ಲದೆ ಸ್ವಬುದ್ಧಿಯನ್ನೇ ಅನುಸರಿಸುವ ಮೂರ್ಖ ಪ್ರವಾದಿಗಳ ಗತಿಯನ್ನು ಏನೆಂದು ಹೇಳಲಿ! 4 ಇಸ್ರಾಯೇಲೇ, ನಿನ್ನ ಪ್ರವಾದಿಗಳು ಹಾಳು ಪ್ರದೇಶಗಳಲ್ಲಿನ ನರಿಗಳ ಹಾಗೆ ಇದ್ದಾರೆ. 5 ಯೆಹೋವನ ದಿನದಲ್ಲಿ ಯುದ್ಧಕ್ಕೆ ನಿಲ್ಲಬೇಕೆಂದು ನೀವು ಪೌಳಿ ಗೋಡೆಯ ಒಡಕುಗಳನ್ನೇರಲಿಲ್ಲ, ಇಸ್ರಾಯೇಲ್ ವಂಶದ ರಕ್ಷಣೆಗಾಗಿ ಗೋಡೆಯನ್ನು ಭದ್ರ ಮಾಡಲೂ ಇಲ್ಲ. ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿ, 6 ಅಂಥವರಿಗೆ ಆದ ದರ್ಶನ ಮಿಥ್ಯ, ಕೇಳಿಸಿದ ಕಣಿ ಸುಳ್ಳು; ಯೆಹೋವನು ಅವರನ್ನು ಕಳುಹಿಸಲಿಲ್ಲ, ತಾವು ನುಡಿದ ಮಾತು ನೆರವೇರುವುದೆಂದು ಸುಮ್ಮನೆ ನಿರೀಕ್ಷಿಸಿಕೊಂಡಿದ್ದಾರೆ. 7 ನಾನು ಮಾತನಾಡದೆ ಹೋದರೂ, ‘ಯೆಹೋವನು ಇಂತೆನ್ನುತ್ತಾನೆ’ ಎಂದು ನುಡಿಯುತ್ತಿರುವ ನಿಮಗೆ ಆದ ದರ್ಶನವು ಮಿಥ್ಯ, ನೀವು ಹೇಳಿದ ಕಣಿಯು ಸುಳ್ಳು. 8 “ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ನೀವು ವ್ಯರ್ಥವಾದದ್ದನ್ನು ನುಡಿದು, ಸುಳ್ಳಾದ ದರ್ಶನವನ್ನು ಕಂಡಿದ್ದರಿಂದ ಇಗೋ, ನಿಮಗೆ ವಿರುದ್ಧವಾಗಿದ್ದೇನೆ’ ಇದು ಕರ್ತನಾದ ಯೆಹೋವನೆಂಬ ನನ್ನ ನುಡಿ. 9 ‘ಮಿಥ್ಯ ದರ್ಶನಹೊಂದಿ, ಸುಳ್ಳು ಕಣಿ ಹೇಳುವ ಪ್ರವಾದಿಗಳ ಮೇಲೆ ನಾನು ಕೈಮಾಡುವೆನು; ಅವರು ನನ್ನ ಜನರ ಹಿರೀಸಭೆಯಲ್ಲಿ ಸೇರಬಾರದು, ಇಸ್ರಾಯೇಲ್ ವಂಶದವರ ಪಟ್ಟಿಯಲ್ಲಿ ಅವರ ಹೆಸರುಗಳು ಲಿಖಿತವಾಗಬಾರದು, ಅವರು ಇಸ್ರಾಯೇಲ್ ದೇಶದಲ್ಲಿ ಪ್ರವೇಶಿಸಲೂಬಾರದು; ನಾನೇ ಕರ್ತನಾದ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು. 10 “ಅಶಾಂತಿಯಿದ್ದರೂ ಅವರು ‘ಶಾಂತಿಯಿದೆ’ ಎಂದು ಹೇಳಿ ನನ್ನ ಜನರನ್ನು ವಂಚಿಸಿದ್ದಾರೆ. ಒಬ್ಬನು ತೆಳುವಾದ ಗೋಡೆಯನ್ನು ಕಟ್ಟಿದ್ದರೂ, ಇಗೋ, ಅದಕ್ಕೆ ಸುಣ್ಣಬಳಿಯುತ್ತಾರೆ; 11 ಆದಕಾರಣ, ನೀನು ಸುಣ್ಣಬಳಿಯುವವರಿಗೆ ಹೀಗೆ ನುಡಿ, ‘ವಿಪರೀತ ಮಳೆಯಾಗಿ ಗೋಡೆಯು ಬಿದ್ದುಹೋಗುವುದು, ಆನೆಕಲ್ಲುಗಳು ಸುರಿಯುವವು; ಬಿರುಗಾಳಿಯು ಗೋಡೆಯನ್ನು ಒಡೆದುಹಾಕುವುದು.’ 12 ಇಗೋ, ಗೋಡೆಯು ಬಿದ್ದ ಮೇಲೆ, ‘ನೀವು ಬಳಿದ ಸುಣ್ಣ ಎಲ್ಲಿ?’ ಎಂದು ನಿಮ್ಮನ್ನು ಕೇಳುವರಲ್ಲವೆ?” 13 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “‘ನಾನು ಸಿಟ್ಟುಗೊಂಡು ಗೋಡೆಯನ್ನು ಬಿರುಗಾಳಿಯಿಂದ ಒಡೆದುಹಾಕುವೆನು; ಅದನ್ನು ನಾಶ ಮಾಡಲಿಕ್ಕೆ ನನ್ನ ಕೋಪದಿಂದ ವಿಪರೀತ ಮಳೆಯುಂಟಾಗುವುದು, ನನ್ನ ರೋಷದಿಂದ ಆನೆಕಲ್ಲುಗಳು ಸುರಿಯುವವು; 14 ನೀವು ಸುಣ್ಣಬಳಿದ ಗೋಡೆಯನ್ನು ನಾನು ಹೀಗೆ ಕೆಡವಿ ನೆಲ ಸಮಮಾಡಿ ಅದರ ಅಸ್ತಿವಾರವನ್ನು ಬಯಲುಪಡಿಸುವೆನು; ಅದು ಬಿದ್ದುಹೋಗುವುದು ಮತ್ತು ನೀವು ಅದರೊಳಗೆ ಸಿಕ್ಕಿಕೊಂಡು ನಾಶವಾಗುವಿರಿ ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು. 15 ಹೀಗೆ ನಾನು ಗೋಡೆಯಲ್ಲಿಯೂ, ಅದಕ್ಕೆ ಸುಣ್ಣ ಬಳಿದ ನಿಮ್ಮಲ್ಲಿಯೂ ರೋಷವನ್ನು ತೀರಿಸಿಕೊಂಡು ಇಂತೆನ್ನುವೆನು, 16 ‘ಇಸ್ರಾಯೇಲಿನ ಪ್ರವಾದಿಗಳೇ, ಅಶಾಂತಿಯಿದ್ದರೂ ಶಾಂತಿಯಿದೆ ಎಂಬ ದರ್ಶನಗಳನ್ನು ನೀವು ಕಂಡು ಯೆರೂಸಲೇಮಿನ ವಿಷಯವಾಗಿ ಪ್ರವಾದಿಸಿದ್ದೀರಲ್ಲವೆ? ಗೋಡೆಯು ಇಲ್ಲವಾಯಿತು, ಅದಕ್ಕೆ ಸುಣ್ಣ ಬಳಿದವರೂ ಇಲ್ಲವಾದರು’” ಇದು ಕರ್ತನಾದ ಯೆಹೋವನ ನುಡಿ. 17 “‘ನರಪುತ್ರನೇ, ಸ್ವಕಲ್ಪಿತವಾದುದನ್ನು ಕಣಿ ಎಂದು ಹೇಳುವ ನಿನ್ನ ಸ್ವಕುಲ ಸ್ತ್ರೀಯರ ಕಡೆಗೆ ಮುಖ ಮಾಡಿಕೊಂಡು ಅವರನ್ನೂ ಖಂಡಿಸಿ ಹೀಗೆ ಪ್ರವಾದಿಸು.’ 18 ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಜನರ ಪ್ರಾಣಗಳನ್ನು ಬೇಟೆಯಾಡಬೇಕೆಂದು, ಎಲ್ಲರ ಮೊಣಕೈಗಳಿಗೆ ತಾಯಿತಗಳನ್ನು ಕಟ್ಟಿ, ಉದ್ದವಾದವರಿಗೂ, ಗಿಡ್ಡವಾದವರಿಗೂ ತಕ್ಕ ಮುಸುಕುಗಳನ್ನು ಸಿದ್ಧಮಾಡಿಕೊಂಡಿರುವ ಸ್ತ್ರೀಯರ ಗತಿಯನ್ನು ಏನೆಂದು ಹೇಳಲಿ! ಸ್ತ್ರೀಯರೇ, ನೀವು ನನ್ನ ಜನರ ಪ್ರಾಣಗಳನ್ನು ಬೇಟೆಯಾಡಿ ಸ್ವಂತ ಪ್ರಾಣಗಳನ್ನು ಉಳಿಸಿಕೊಳ್ಳುವಿರೋ? 19 ನೀವು ಜವೆಗೋದಿಯ ಹಿಡಿಗಳನ್ನೂ, ರೊಟ್ಟಿಯ ಚೂರುಗಳನ್ನೂ ಆಶಿಸಿ ಸುಳ್ಳು ಮಾತಿಗೆ ಕಿವಿಗೊಡುವ ನನ್ನ ಜನರಿಗೆ ಸುಳ್ಳು ಹೇಳುವುದರಿಂದ ಜೀವಿಸತಕ್ಕವರನ್ನು ಸಾಯಿಸಿ, ಸಾಯತಕ್ಕವರನ್ನು ಉಳಿಸಿ, ನನ್ನ ಜನರ ನಡುವೆ ನನ್ನ ಘನತೆಗೆ ಕುಂದುತಂದಿದ್ದೀರಿ.’ 20 “ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, ‘ಆಹಾ, ನೀವು ಜನರ ಪ್ರಾಣಗಳನ್ನು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವುದಕ್ಕೆ ಸಾಧನವಾದ ನಿಮ್ಮ ತಾಯಿತಗಳಿಗೆ ನಾನು ಹೇಸಿ, ಅವುಗಳನ್ನು ನಿಮ್ಮ ಕೈಗಳಿಂದ ಕಿತ್ತು ಹಾಕುವೆನು; ನೀವು ಪಕ್ಷಿಗಳನ್ನೋ ಎಂಬಂತೆ ಬೇಟೆಯಾಡುವ ಪ್ರಾಣಿಗಳನ್ನು ನಾನು ಬಿಡಿಸಿ, ಪಕ್ಷಿಗಳ ಹಾಗೆ ಸ್ವತಂತ್ರವಾಗಿಸುವೆನು. 21 ನಾನು ನಿಮ್ಮ ಮುಸುಕುಗಳನ್ನೂ ಹರಿದು, ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು; ಅವರು ಇನ್ನು ಮೇಲೆ ನಿಮ್ಮ ಕೈಗೆ ಬೇಟೆಯಾಗಿ ಸಿಕ್ಕುವುದಿಲ್ಲ; ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು. 22 ನಾನು ಎದೆಗುಂದಿಸದ ಶಿಷ್ಟನ ಮನಸ್ಸನ್ನು ನೀವು ಸುಳ್ಳಾಡಿ ಕುಂದಿಸಿದ್ದೀರಿ, ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ತನ್ನ ಪ್ರಾಣವನ್ನು ಉಳಿಸಿಕೊಳ್ಳದಂತೆ ನೀವು ಅವನ ಕೈಗಳನ್ನು ಬಲಪಡಿಸಿದ್ದೀರಿ. 23 ಆದಕಾರಣ ನೀವು ಮಿಥ್ಯ ದರ್ಶನವನ್ನು ಹೊಂದಿ, ಕಣಿಹೇಳುವ ಕೆಲಸವು ಇನ್ನು ನಡೆಯುವುದೇ ಇಲ್ಲ; ನನ್ನ ಜನರನ್ನು ನಿಮ್ಮ ಕೈಯೊಳಗಿಂದ ತಪ್ಪಿಸುವೆನು, ನಾನೇ ಯೆಹೋವನು’ ಎಂದು ನಿಮಗೆ ಗೊತ್ತಾಗುವುದು.”

In Other Versions

Ezekiel 13 in the ANGEFD

Ezekiel 13 in the ANTPNG2D

Ezekiel 13 in the AS21

Ezekiel 13 in the BAGH

Ezekiel 13 in the BBPNG

Ezekiel 13 in the BBT1E

Ezekiel 13 in the BDS

Ezekiel 13 in the BEV

Ezekiel 13 in the BHAD

Ezekiel 13 in the BIB

Ezekiel 13 in the BLPT

Ezekiel 13 in the BNT

Ezekiel 13 in the BNTABOOT

Ezekiel 13 in the BNTLV

Ezekiel 13 in the BOATCB

Ezekiel 13 in the BOATCB2

Ezekiel 13 in the BOBCV

Ezekiel 13 in the BOCNT

Ezekiel 13 in the BOECS

Ezekiel 13 in the BOGWICC

Ezekiel 13 in the BOHCB

Ezekiel 13 in the BOHCV

Ezekiel 13 in the BOHLNT

Ezekiel 13 in the BOHNTLTAL

Ezekiel 13 in the BOICB

Ezekiel 13 in the BOILNTAP

Ezekiel 13 in the BOITCV

Ezekiel 13 in the BOKCV

Ezekiel 13 in the BOKCV2

Ezekiel 13 in the BOKHWOG

Ezekiel 13 in the BOKSSV

Ezekiel 13 in the BOLCB

Ezekiel 13 in the BOLCB2

Ezekiel 13 in the BOMCV

Ezekiel 13 in the BONAV

Ezekiel 13 in the BONCB

Ezekiel 13 in the BONLT

Ezekiel 13 in the BONUT2

Ezekiel 13 in the BOPLNT

Ezekiel 13 in the BOSCB

Ezekiel 13 in the BOSNC

Ezekiel 13 in the BOTLNT

Ezekiel 13 in the BOVCB

Ezekiel 13 in the BOYCB

Ezekiel 13 in the BPBB

Ezekiel 13 in the BPH

Ezekiel 13 in the BSB

Ezekiel 13 in the CCB

Ezekiel 13 in the CUV

Ezekiel 13 in the CUVS

Ezekiel 13 in the DBT

Ezekiel 13 in the DGDNT

Ezekiel 13 in the DHNT

Ezekiel 13 in the DNT

Ezekiel 13 in the ELBE

Ezekiel 13 in the EMTV

Ezekiel 13 in the ESV

Ezekiel 13 in the FBV

Ezekiel 13 in the FEB

Ezekiel 13 in the GGMNT

Ezekiel 13 in the GNT

Ezekiel 13 in the HARY

Ezekiel 13 in the HNT

Ezekiel 13 in the IRVA

Ezekiel 13 in the IRVB

Ezekiel 13 in the IRVG

Ezekiel 13 in the IRVH

Ezekiel 13 in the IRVM

Ezekiel 13 in the IRVM2

Ezekiel 13 in the IRVO

Ezekiel 13 in the IRVP

Ezekiel 13 in the IRVT

Ezekiel 13 in the IRVT2

Ezekiel 13 in the IRVU

Ezekiel 13 in the ISVN

Ezekiel 13 in the JSNT

Ezekiel 13 in the KAPI

Ezekiel 13 in the KBT1ETNIK

Ezekiel 13 in the KBV

Ezekiel 13 in the KJV

Ezekiel 13 in the KNFD

Ezekiel 13 in the LBA

Ezekiel 13 in the LBLA

Ezekiel 13 in the LNT

Ezekiel 13 in the LSV

Ezekiel 13 in the MAAL

Ezekiel 13 in the MBV

Ezekiel 13 in the MBV2

Ezekiel 13 in the MHNT

Ezekiel 13 in the MKNFD

Ezekiel 13 in the MNG

Ezekiel 13 in the MNT

Ezekiel 13 in the MNT2

Ezekiel 13 in the MRS1T

Ezekiel 13 in the NAA

Ezekiel 13 in the NASB

Ezekiel 13 in the NBLA

Ezekiel 13 in the NBS

Ezekiel 13 in the NBVTP

Ezekiel 13 in the NET2

Ezekiel 13 in the NIV11

Ezekiel 13 in the NNT

Ezekiel 13 in the NNT2

Ezekiel 13 in the NNT3

Ezekiel 13 in the PDDPT

Ezekiel 13 in the PFNT

Ezekiel 13 in the RMNT

Ezekiel 13 in the SBIAS

Ezekiel 13 in the SBIBS

Ezekiel 13 in the SBIBS2

Ezekiel 13 in the SBICS

Ezekiel 13 in the SBIDS

Ezekiel 13 in the SBIGS

Ezekiel 13 in the SBIHS

Ezekiel 13 in the SBIIS

Ezekiel 13 in the SBIIS2

Ezekiel 13 in the SBIIS3

Ezekiel 13 in the SBIKS

Ezekiel 13 in the SBIKS2

Ezekiel 13 in the SBIMS

Ezekiel 13 in the SBIOS

Ezekiel 13 in the SBIPS

Ezekiel 13 in the SBISS

Ezekiel 13 in the SBITS

Ezekiel 13 in the SBITS2

Ezekiel 13 in the SBITS3

Ezekiel 13 in the SBITS4

Ezekiel 13 in the SBIUS

Ezekiel 13 in the SBIVS

Ezekiel 13 in the SBT

Ezekiel 13 in the SBT1E

Ezekiel 13 in the SCHL

Ezekiel 13 in the SNT

Ezekiel 13 in the SUSU

Ezekiel 13 in the SUSU2

Ezekiel 13 in the SYNO

Ezekiel 13 in the TBIAOTANT

Ezekiel 13 in the TBT1E

Ezekiel 13 in the TBT1E2

Ezekiel 13 in the TFTIP

Ezekiel 13 in the TFTU

Ezekiel 13 in the TGNTATF3T

Ezekiel 13 in the THAI

Ezekiel 13 in the TNFD

Ezekiel 13 in the TNT

Ezekiel 13 in the TNTIK

Ezekiel 13 in the TNTIL

Ezekiel 13 in the TNTIN

Ezekiel 13 in the TNTIP

Ezekiel 13 in the TNTIZ

Ezekiel 13 in the TOMA

Ezekiel 13 in the TTENT

Ezekiel 13 in the UBG

Ezekiel 13 in the UGV

Ezekiel 13 in the UGV2

Ezekiel 13 in the UGV3

Ezekiel 13 in the VBL

Ezekiel 13 in the VDCC

Ezekiel 13 in the YALU

Ezekiel 13 in the YAPE

Ezekiel 13 in the YBVTP

Ezekiel 13 in the ZBP