Genesis 33 (IRVK)

1 ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಜನರ ಸಮೇತ ಬರುವುದನ್ನು ಕಂಡನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿ 2 ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ನಿಲ್ಲಿಸಿದನು. 3 ತಾನೇ ಅವರ ಮುಂದಾಗಿ ಹೋಗಿ ತನ್ನ ಅಣ್ಣನು ಹತ್ತಿರ ಸಮೀಪಿಸುತ್ತಿರುವಾಗ ಏಳು ಸಾರಿ ನೆಲದವರೆಗೆ ತಲೆಬಾಗಿ ನಮಸ್ಕರಿಸಿದನು. 4 ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು. 5 ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು, “ನಿನ್ನ ಜೊತೆಯಲ್ಲಿರುವ ಜನರು ಯಾರು?” ಎಂದು ಕೇಳಲು ಯಾಕೋಬನು ಅವನಿಗೆ, “ದೇವರು ನಿನ್ನ ಸೇವಕನಿಗೆ ಕೃಪೆಯಿಂದ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು” ಎಂದು ಹೇಳಿದನು. 6 ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ಅಡ್ಡಬಿದ್ದರು. 7 ಆ ಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು. ಕೊನೆಗೆ ಯೋಸೇಫನೂ ರಾಹೇಲಳೂ ಬಂದು ಅಡ್ಡಬಿದ್ದರು. 8 ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು. 9 ಏಸಾವನು ಅದಕ್ಕೆ, “ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು, ನಿನ್ನದು ನಿನಗೇ ಇರಲಿ” ಎನ್ನಲು, 10 ಯಾಕೋಬನು, “ಹಾಗಲ್ಲ, ನಿನಗೆ ನನ್ನ ಮೇಲೆ ದಯೆಯಿದ್ದರೆ, ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಬೇಕು. ನಿನ್ನನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು, ನನ್ನನ್ನು ಪ್ರೀತಿಯಿಂದ ಅಂಗೀಕರಿಸಿದ್ದೇ ವಿಶೇಷ ಸಂಗತಿಯಾಗಿದೆ. 11 ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು. 12 ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ಮುಂದಾಗಿ ಹೋಗುತ್ತೇನೆ” ಎಂದನು. 13 ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು. 14 ತಾವು ದಯವಿಟ್ಟು ಸೇವಕನಿಗಿಂತಲೂ ಮುಂಚೆ ಹೋಗಬಹುದು ನಾನು ನನ್ನ ಮುಂದಿರುವ ಆಡುಕುರಿಗಳ ನಡಿಗೆಗೂ ಮಕ್ಕಳ ಶಕ್ತಿಗೂ ಸರಿಯಾಗಿ ಮೆಲ್ಲಮೆಲ್ಲನೆ ನಡೆದು ನನ್ನ ಪ್ರಭುವಿನ ಸೀಮೆಯಾಗಿರುವ ಸೇಯೀರಿಗೆ ಬರುತ್ತೇನೆ” ಎಂದನು. 15 ಏಸಾವನು, “ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ” ಎನ್ನಲು ಯಾಕೋಬನು, “ಅದರ ಅಗತ್ಯವೇನು? ಒಡೆಯನೇ, ತಮ್ಮ ದಯೆ ನನ್ನ ಮೇಲಿದ್ದರೆ ಸಾಕು” ಎಂದು ಹೇಳಿದನು. 16 ಹೀಗೆ ಏಸಾವನು ಆ ದಿನವೇ ಸೇಯೀರ್ ಸೀಮೆಗೆ ಹೊರಟುಹೋದನು. 17 ಯಾಕೋಬನು ಪ್ರಯಾಣಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಆಶ್ರಯವನ್ನೂ ಮಾಡಿಸಿದನು. ಆದುದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು. 18 ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸುರಕ್ಷಿತವಾಗಿ ಸೇರಿದನು. ಆ ಊರಿನ ಬಳಿಯಲ್ಲಿ ತನ್ನ ಗುಡಾರಗಳನ್ನು ಹಾಕಿಸಿಕೊಂಡನು. 19 ಅವನು ತನ್ನ ಗುಡಾರಗಳನ್ನು ಹಾಕಿಸಿದ ಭೂಮಿಯನ್ನು ಹಮೋರನ ಮಕ್ಕಳಿಗೆ ನೂರು ನಾಣ್ಯ ಕೊಟ್ಟು ಅವರಿಂದ ಕೊಂಡುಕೊಂಡನು. ಹಮೋರನು ಶೆಕೆಮನ ತಂದೆ. 20 ಅಲ್ಲಿ ಯಾಕೋಬನು ಯೆಹೋವನ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಏಲ್ ಎಲೋಹೆ ಇಸ್ರಾಯೇಲ್” ಎಂದು ಹೆಸರಿಟ್ಟನು.

In Other Versions

Genesis 33 in the ANGEFD

Genesis 33 in the ANTPNG2D

Genesis 33 in the AS21

Genesis 33 in the BAGH

Genesis 33 in the BBPNG

Genesis 33 in the BBT1E

Genesis 33 in the BDS

Genesis 33 in the BEV

Genesis 33 in the BHAD

Genesis 33 in the BIB

Genesis 33 in the BLPT

Genesis 33 in the BNT

Genesis 33 in the BNTABOOT

Genesis 33 in the BNTLV

Genesis 33 in the BOATCB

Genesis 33 in the BOATCB2

Genesis 33 in the BOBCV

Genesis 33 in the BOCNT

Genesis 33 in the BOECS

Genesis 33 in the BOGWICC

Genesis 33 in the BOHCB

Genesis 33 in the BOHCV

Genesis 33 in the BOHLNT

Genesis 33 in the BOHNTLTAL

Genesis 33 in the BOICB

Genesis 33 in the BOILNTAP

Genesis 33 in the BOITCV

Genesis 33 in the BOKCV

Genesis 33 in the BOKCV2

Genesis 33 in the BOKHWOG

Genesis 33 in the BOKSSV

Genesis 33 in the BOLCB

Genesis 33 in the BOLCB2

Genesis 33 in the BOMCV

Genesis 33 in the BONAV

Genesis 33 in the BONCB

Genesis 33 in the BONLT

Genesis 33 in the BONUT2

Genesis 33 in the BOPLNT

Genesis 33 in the BOSCB

Genesis 33 in the BOSNC

Genesis 33 in the BOTLNT

Genesis 33 in the BOVCB

Genesis 33 in the BOYCB

Genesis 33 in the BPBB

Genesis 33 in the BPH

Genesis 33 in the BSB

Genesis 33 in the CCB

Genesis 33 in the CUV

Genesis 33 in the CUVS

Genesis 33 in the DBT

Genesis 33 in the DGDNT

Genesis 33 in the DHNT

Genesis 33 in the DNT

Genesis 33 in the ELBE

Genesis 33 in the EMTV

Genesis 33 in the ESV

Genesis 33 in the FBV

Genesis 33 in the FEB

Genesis 33 in the GGMNT

Genesis 33 in the GNT

Genesis 33 in the HARY

Genesis 33 in the HNT

Genesis 33 in the IRVA

Genesis 33 in the IRVB

Genesis 33 in the IRVG

Genesis 33 in the IRVH

Genesis 33 in the IRVM

Genesis 33 in the IRVM2

Genesis 33 in the IRVO

Genesis 33 in the IRVP

Genesis 33 in the IRVT

Genesis 33 in the IRVT2

Genesis 33 in the IRVU

Genesis 33 in the ISVN

Genesis 33 in the JSNT

Genesis 33 in the KAPI

Genesis 33 in the KBT1ETNIK

Genesis 33 in the KBV

Genesis 33 in the KJV

Genesis 33 in the KNFD

Genesis 33 in the LBA

Genesis 33 in the LBLA

Genesis 33 in the LNT

Genesis 33 in the LSV

Genesis 33 in the MAAL

Genesis 33 in the MBV

Genesis 33 in the MBV2

Genesis 33 in the MHNT

Genesis 33 in the MKNFD

Genesis 33 in the MNG

Genesis 33 in the MNT

Genesis 33 in the MNT2

Genesis 33 in the MRS1T

Genesis 33 in the NAA

Genesis 33 in the NASB

Genesis 33 in the NBLA

Genesis 33 in the NBS

Genesis 33 in the NBVTP

Genesis 33 in the NET2

Genesis 33 in the NIV11

Genesis 33 in the NNT

Genesis 33 in the NNT2

Genesis 33 in the NNT3

Genesis 33 in the PDDPT

Genesis 33 in the PFNT

Genesis 33 in the RMNT

Genesis 33 in the SBIAS

Genesis 33 in the SBIBS

Genesis 33 in the SBIBS2

Genesis 33 in the SBICS

Genesis 33 in the SBIDS

Genesis 33 in the SBIGS

Genesis 33 in the SBIHS

Genesis 33 in the SBIIS

Genesis 33 in the SBIIS2

Genesis 33 in the SBIIS3

Genesis 33 in the SBIKS

Genesis 33 in the SBIKS2

Genesis 33 in the SBIMS

Genesis 33 in the SBIOS

Genesis 33 in the SBIPS

Genesis 33 in the SBISS

Genesis 33 in the SBITS

Genesis 33 in the SBITS2

Genesis 33 in the SBITS3

Genesis 33 in the SBITS4

Genesis 33 in the SBIUS

Genesis 33 in the SBIVS

Genesis 33 in the SBT

Genesis 33 in the SBT1E

Genesis 33 in the SCHL

Genesis 33 in the SNT

Genesis 33 in the SUSU

Genesis 33 in the SUSU2

Genesis 33 in the SYNO

Genesis 33 in the TBIAOTANT

Genesis 33 in the TBT1E

Genesis 33 in the TBT1E2

Genesis 33 in the TFTIP

Genesis 33 in the TFTU

Genesis 33 in the TGNTATF3T

Genesis 33 in the THAI

Genesis 33 in the TNFD

Genesis 33 in the TNT

Genesis 33 in the TNTIK

Genesis 33 in the TNTIL

Genesis 33 in the TNTIN

Genesis 33 in the TNTIP

Genesis 33 in the TNTIZ

Genesis 33 in the TOMA

Genesis 33 in the TTENT

Genesis 33 in the UBG

Genesis 33 in the UGV

Genesis 33 in the UGV2

Genesis 33 in the UGV3

Genesis 33 in the VBL

Genesis 33 in the VDCC

Genesis 33 in the YALU

Genesis 33 in the YAPE

Genesis 33 in the YBVTP

Genesis 33 in the ZBP