Daniel 1 (BOKCV2)
1 ಯೆಹೂದದ ಅರಸನಾದ ಯೆಹೋಯಾಕೀಮನ ಆಳಿಕೆಯ ಮೂರನೆಯ ವರ್ಷದಲ್ಲಿ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಬಂದು ಮುತ್ತಿಗೆಹಾಕಿದನು. 2 ಆಗ ಕರ್ತನು ಯೆಹೂದದ ಅರಸನಾದ ಯೆಹೋಯಾಕೀಮನನ್ನು ದೇವಾಲಯದ ಕೆಲವು ವಸ್ತುಗಳನ್ನು ಕೂಡ ಅವನಿಗೆ ಒಪ್ಪಿಸಿದನು. ಅವನು ಅವುಗಳನ್ನು ಶಿನಾರ್ ದೇಶಕ್ಕೂ, ತನ್ನ ದೇವರ ಆಲಯಕ್ಕೂ ತಂದು, ಅವುಗಳನ್ನು ತನ್ನ ದೇವರ ಬೊಕ್ಕಸದ ಮನೆಯಲ್ಲಿ ಇರಿಸಿದನು. 3 ಅರಸನು ತನ್ನ ಕಂಚುಕಿಯರ ಮುಖ್ಯಸ್ಥನಾದ ಅಶ್ಪೆನಜನ ಸಂಗಡ ಮಾತನಾಡಿ ಅವನು ಇಸ್ರಾಯೇಲರೊಳಗೆ ಕೆಲವರನ್ನು ಅರಸನ ಸಂತಾನದೊಳಗಿಂದಲೂ, ಪ್ರಧಾನರೊಳಗಿಂದಲೂ 4 ಶಾರೀರಿಕ ನ್ಯೂನತೆ ಇಲ್ಲದವರಾಗಿಯೂ, ಸುಂದರವಾಗಿಯೂ, ಅವರು ಎಲ್ಲಾ ರೀತಿಯ ವಿಷಯಗಳನ್ನು ಕಲಿಯುವ ಸಾಮರ್ಥ್ಯವನ್ನು ಹೊಂದಿರಬೇಕು. ಅವರು ವಿವೇಕವುಳ್ಳವರಾಗಿಯೂ ಮತ್ತು ತ್ವರಿತವಾಗಿ ಅರ್ಥಮಾಡಿಕೊಳ್ಳುವವರಾಗಿಯೂ, ಅರಸನ ಅರಮನೆಯಲ್ಲಿ ಸೇವೆ ಮಾಡಲು ಸಾಮರ್ಥ್ಯವುಳ್ಳವರಾಗಿಯೂ ಇರುವ ಯೌವನಸ್ಥರನ್ನು ತಂದು ಬಾಬಿಲೋನಿಯರ ವಿದ್ಯೆಯನ್ನೂ, ಭಾಷೆಯನ್ನೂ ಅವರಿಗೆ ಬೋಧಿಸಬೇಕೆಂದು ಆಜ್ಞಾಪಿಸಿದನು. 5 ಅರಸನು ರಾಜಭೋಜನದಲ್ಲಿಯೂ, ತಾನು ಕುಡಿಯುವ ದ್ರಾಕ್ಷಾರಸದಲ್ಲಿಯೂ ಪ್ರತಿದಿನವೂ ಅವರಿಗೆ ಪಾಲನ್ನು ನೇಮಿಸಿದನು. ಹೀಗೆ ಅವರು ಮೂರು ವರ್ಷಗಳ ಕಾಲ ಪೋಷಿಸಲಾದ ಮೇಲೆ ಅರಸನ ಸನ್ನಿಧಿಯ ಸೇವಕರಾಗುವರು. 6 ಇವರಲ್ಲಿ ಯೆಹೂದದಿಂದ ದಾನಿಯೇಲ, ಹನನ್ಯ, ಮೀಶಾಯೇಲ್, ಅಜರ್ಯ ಎಂಬವರಿದ್ದರು. 7 ಇವರಿಗೆ ಕಂಚುಕಿಯರ ಯಜಮಾನನು ದಾನಿಯೇಲನಿಗೆ ಬೇಲ್ತೆಶಚ್ಚರ್ ಎಂದೂ, ಹನನ್ಯನಿಗೆ ಶದ್ರಕ್ ಎಂದೂ, ಮೀಶಾಯೇಲನಿಗೆ ಮೇಶಕ್ ಎಂದೂ, ಅಜರ್ಯನಿಗೆ ಅಬೇದ್ನೆಗೋ ಎಂಬ ಹೆಸರಿಟ್ಟನು. 8 ದಾನಿಯೇಲನು ಅರಸನ ಭೋಜನದ ಪಾಲಿನಿಂದಲಾದರೂ, ಅವನು ಕುಡಿಯುವ ದ್ರಾಕ್ಷಾರಸದಿಂದಾದರೂ ತನ್ನನ್ನು ಅಶುದ್ಧಪಡಿಸಿಕೊಳ್ಳುವುದಿಲ್ಲವೆಂದು ತನ್ನ ಹೃದಯದಲ್ಲಿ ನಿಶ್ಚಯಿಸಿಕೊಂಡನು. ಆದ್ದರಿಂದ ತಾನು ಅಶುದ್ಧನಾಗದ ಹಾಗೆ ಕಂಚುಕಿಯರ ಯಜಮಾನನನ್ನು ಬೇಡಿಕೊಂಡನು. 9 ಆಗ ದೇವರು ದಾನಿಯೇಲನ ಮೇಲೆ ಕಂಚುಕಿಯರ ಯಜಮಾನನ ದಯೆ, ಕನಿಕರ ತೋರುವಂತೆ ಮಾಡಿದರು. 10 ಕಂಚುಕಿಯ ಯಜಮಾನನು ದಾನಿಯೇಲನಿಗೆ, “ನಿಮ್ಮ ಅನ್ನಪಾನಾದಿಗಳನ್ನು ನೇಮಿಸಿದ ನನ್ನ ಒಡೆಯ ಅರಸನಿಗೆ ನಾನು ಭಯಪಡುತ್ತೇನೆ. ಏಕೆಂದರೆ ಅರಸನು ಏಕೆ ನಿಮ್ಮ ಮುಖಗಳನ್ನು ನಿಮ್ಮ ಸ್ಥಿತಿಯಲ್ಲಿಯೇ ಇರುವ ಇತರ ಯೌವನಸ್ಥರಿಗಿಂತ ಕಳೆಗುಂದಿದವುಗಳನ್ನಾಗಿ ನೋಡಬೇಕು. ಈ ಪ್ರಕಾರ ನೀವು ಅರಸನ ಹತ್ತಿರ ನನ್ನ ತಲೆಗೆ ಅಪಾಯವನ್ನು ಬರಮಾಡುತ್ತೀರಿ?” ಎಂದನು. 11 ಆಮೇಲೆ ದಾನಿಯೇಲನು ಕಂಚುಕಿಯರ ಯಜಮಾನನು ಹನನ್ಯ, ಮೀಶಾಯೇಲ್, ಅಜರ್ಯ ಮತ್ತು ತನ್ನನ್ನು ನೋಡಿಕೊಳ್ಳುವುದಕ್ಕೆ ಇಟ್ಟಿದ್ದ ಮೇಲ್ವಿಚಾರಕನಿಗೆ, 12 “ನಿನ್ನ ಸೇವಕರನ್ನು ಹತ್ತು ದಿವಸಗಳವರೆಗೂ ಪರೀಕ್ಷಿಸಿ ನೋಡು. ಅವರು ನಮ್ಮ ಆಹಾರಕ್ಕೆ ಕೇವಲ ಕಾಯಿಪಲ್ಯಗಳನ್ನು, ಕುಡಿಯುವುದಕ್ಕೆ ಕೇವಲ ನೀರನ್ನು ಕೊಡಲಿ. 13 ಆಗ ನಮ್ಮ ಮುಖಗಳು ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರ ಮುಖಗಳು ನಿಮ್ಮ ಮುಂದೆ ಕಾಣಬರಲಿ. ನಿನಗೆ ಕಾಣುವ ಪ್ರಕಾರ ನಿನ್ನ ಸೇವಕರಿಗೆ ನೋಡುವ ಹಾಗೆ ಮಾಡು,” ಎಂದು ಬೇಡಿಕೊಂಡನು. 14 ಹಾಗೆಯೇ ಅವನು ಈ ಕಾರ್ಯದ ವಿಷಯವಾಗಿ ಒಪ್ಪಿ, ಹತ್ತು ದಿವಸಗಳವರೆಗೂ ಅವರನ್ನು ಪರೀಕ್ಷಿಸಿದನು. 15 ಹತ್ತು ದಿವಸಗಳಾದ ಮೇಲೆ ಅರಸನ ಭೋಜನದ ಪಾಲನ್ನು ತಿನ್ನುವ ಯೌವನಸ್ಥರೆಲ್ಲರಿಗಿಂತ ಇವರು ಆರೋಗ್ಯಕರವಾಗಿಯೂ, ಶರೀರದಲ್ಲಿ ಪುಷ್ಟರಾಗಿಯೂ ಕಾಣಿಸಿದರು. 16 ಹೀಗೆ ಮೇಲ್ವಿಚಾರಕನು ಅವರ ಭೋಜನದ ಪಾಲನ್ನು ಅವರು ಕುಡಿಯುವಂಥ ದ್ರಾಕ್ಷಾರಸವನ್ನು ತೆಗೆದುಹಾಕಿ ಅವರಿಗೆ ಸಸ್ಯಾಹಾರವನ್ನು ಕೊಟ್ಟನು. 17 ಈ ನಾಲ್ಕು ಯೌವನಸ್ಥರಿಗೆ ದೇವರು ಎಲ್ಲಾ ವಿದ್ಯೆಯಲ್ಲಿಯೂ, ಜ್ಞಾನದಲ್ಲಿಯೂ, ತಿಳುವಳಿಕೆಯನ್ನೂ, ವಿವೇಕವನ್ನೂ ಕೊಟ್ಟರು. ದಾನಿಯೇಲನು ಸಕಲ ದರ್ಶನಗಳಲ್ಲಿಯೂ, ಕನಸುಗಳಲ್ಲಿಯೂ ತಿಳುವಳಿಕೆಯುಳ್ಳವನಾಗಿದ್ದನು. 18 ಅರಸನು ಅವರನ್ನು ಕರೆತರಬೇಕೆಂದು ನೇಮಿಸಿದ ದಿವಸಗಳ ಕೊನೆಯಲ್ಲಿ ಕಂಚುಕಿಯರ ಯಜಮಾನನು ಅವರನ್ನು ನೆಬೂಕದ್ನೆಚ್ಚರನ ಮುಂದೆ ತಂದನು. 19 ಅರಸನು ಅವರ ಸಂಗಡ ಮಾತನಾಡಿದನು. ಅವರೆಲ್ಲರಲ್ಲಿ ದಾನಿಯೇಲ, ಹನನ್ಯ, ಮೀಶಾಯೇಲ್ ಮತ್ತು ಅಜರ್ಯ ಇವರ ಹಾಗೆ ಒಬ್ಬನೂ ಸಿಗಲಿಲ್ಲ. ಆದ್ದರಿಂದಲೇ ಇವರು ಅರಸನ ಸನ್ನಿಧಿಯ ಸೇವಕರಾದರು. 20 ಅರಸನು ಅವರ ಹತ್ತಿರ ವಿಚಾರಿಸಿದಾಗ ಸಮಸ್ತ ಜ್ಞಾನ ವಿವೇಕಗಳ ವಿಷಯದಲ್ಲಿ ತನ್ನ ರಾಜ್ಯದಲ್ಲಿರುವ ಎಲ್ಲಾ ಮಂತ್ರಗಾರರಿಗಿಂತಲೂ, ಜೋತಿಷ್ಯರಿಗಿಂತಲೂ ಇವರೇ ಹತ್ತರಷ್ಟು ಉತ್ತಮರೆಂದು ಕಂಡನು. 21 ದಾನಿಯೇಲನು ರಾಜ ಕೋರೆಷನ ಆಳಿಕೆಯ ಮೊದಲನೆಯ ವರ್ಷದ ತನಕ ಅಲ್ಲಿಯೇ ಇದ್ದನು.
In Other Versions
Daniel 1 in the ANGEFD
Daniel 1 in the ANTPNG2D
Daniel 1 in the AS21
Daniel 1 in the BAGH
Daniel 1 in the BBPNG
Daniel 1 in the BBT1E
Daniel 1 in the BDS
Daniel 1 in the BEV
Daniel 1 in the BHAD
Daniel 1 in the BIB
Daniel 1 in the BLPT
Daniel 1 in the BNT
Daniel 1 in the BNTABOOT
Daniel 1 in the BNTLV
Daniel 1 in the BOATCB
Daniel 1 in the BOATCB2
Daniel 1 in the BOBCV
Daniel 1 in the BOCNT
Daniel 1 in the BOECS
Daniel 1 in the BOGWICC
Daniel 1 in the BOHCB
Daniel 1 in the BOHCV
Daniel 1 in the BOHLNT
Daniel 1 in the BOHNTLTAL
Daniel 1 in the BOICB
Daniel 1 in the BOILNTAP
Daniel 1 in the BOITCV
Daniel 1 in the BOKCV
Daniel 1 in the BOKHWOG
Daniel 1 in the BOKSSV
Daniel 1 in the BOLCB
Daniel 1 in the BOLCB2
Daniel 1 in the BOMCV
Daniel 1 in the BONAV
Daniel 1 in the BONCB
Daniel 1 in the BONLT
Daniel 1 in the BONUT2
Daniel 1 in the BOPLNT
Daniel 1 in the BOSCB
Daniel 1 in the BOSNC
Daniel 1 in the BOTLNT
Daniel 1 in the BOVCB
Daniel 1 in the BOYCB
Daniel 1 in the BPBB
Daniel 1 in the BPH
Daniel 1 in the BSB
Daniel 1 in the CCB
Daniel 1 in the CUV
Daniel 1 in the CUVS
Daniel 1 in the DBT
Daniel 1 in the DGDNT
Daniel 1 in the DHNT
Daniel 1 in the DNT
Daniel 1 in the ELBE
Daniel 1 in the EMTV
Daniel 1 in the ESV
Daniel 1 in the FBV
Daniel 1 in the FEB
Daniel 1 in the GGMNT
Daniel 1 in the GNT
Daniel 1 in the HARY
Daniel 1 in the HNT
Daniel 1 in the IRVA
Daniel 1 in the IRVB
Daniel 1 in the IRVG
Daniel 1 in the IRVH
Daniel 1 in the IRVK
Daniel 1 in the IRVM
Daniel 1 in the IRVM2
Daniel 1 in the IRVO
Daniel 1 in the IRVP
Daniel 1 in the IRVT
Daniel 1 in the IRVT2
Daniel 1 in the IRVU
Daniel 1 in the ISVN
Daniel 1 in the JSNT
Daniel 1 in the KAPI
Daniel 1 in the KBT1ETNIK
Daniel 1 in the KBV
Daniel 1 in the KJV
Daniel 1 in the KNFD
Daniel 1 in the LBA
Daniel 1 in the LBLA
Daniel 1 in the LNT
Daniel 1 in the LSV
Daniel 1 in the MAAL
Daniel 1 in the MBV
Daniel 1 in the MBV2
Daniel 1 in the MHNT
Daniel 1 in the MKNFD
Daniel 1 in the MNG
Daniel 1 in the MNT
Daniel 1 in the MNT2
Daniel 1 in the MRS1T
Daniel 1 in the NAA
Daniel 1 in the NASB
Daniel 1 in the NBLA
Daniel 1 in the NBS
Daniel 1 in the NBVTP
Daniel 1 in the NET2
Daniel 1 in the NIV11
Daniel 1 in the NNT
Daniel 1 in the NNT2
Daniel 1 in the NNT3
Daniel 1 in the PDDPT
Daniel 1 in the PFNT
Daniel 1 in the RMNT
Daniel 1 in the SBIAS
Daniel 1 in the SBIBS
Daniel 1 in the SBIBS2
Daniel 1 in the SBICS
Daniel 1 in the SBIDS
Daniel 1 in the SBIGS
Daniel 1 in the SBIHS
Daniel 1 in the SBIIS
Daniel 1 in the SBIIS2
Daniel 1 in the SBIIS3
Daniel 1 in the SBIKS
Daniel 1 in the SBIKS2
Daniel 1 in the SBIMS
Daniel 1 in the SBIOS
Daniel 1 in the SBIPS
Daniel 1 in the SBISS
Daniel 1 in the SBITS
Daniel 1 in the SBITS2
Daniel 1 in the SBITS3
Daniel 1 in the SBITS4
Daniel 1 in the SBIUS
Daniel 1 in the SBIVS
Daniel 1 in the SBT
Daniel 1 in the SBT1E
Daniel 1 in the SCHL
Daniel 1 in the SNT
Daniel 1 in the SUSU
Daniel 1 in the SUSU2
Daniel 1 in the SYNO
Daniel 1 in the TBIAOTANT
Daniel 1 in the TBT1E
Daniel 1 in the TBT1E2
Daniel 1 in the TFTIP
Daniel 1 in the TFTU
Daniel 1 in the TGNTATF3T
Daniel 1 in the THAI
Daniel 1 in the TNFD
Daniel 1 in the TNT
Daniel 1 in the TNTIK
Daniel 1 in the TNTIL
Daniel 1 in the TNTIN
Daniel 1 in the TNTIP
Daniel 1 in the TNTIZ
Daniel 1 in the TOMA
Daniel 1 in the TTENT
Daniel 1 in the UBG
Daniel 1 in the UGV
Daniel 1 in the UGV2
Daniel 1 in the UGV3
Daniel 1 in the VBL
Daniel 1 in the VDCC
Daniel 1 in the YALU
Daniel 1 in the YAPE
Daniel 1 in the YBVTP
Daniel 1 in the ZBP