Ezekiel 47 (BOKCV2)

1 ಆ ಮನುಷ್ಯನು ನನ್ನನ್ನು ಮತ್ತೆ ಆಲಯದ ಬಾಗಿಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು, ಏಕೆಂದರೆ ಆಲಯದ ಮುಂಭಾಗದಲ್ಲಿ ನೀರು ಇತ್ತು. ಆ ನೀರು ಆಲಯದ ದಕ್ಷಿಣಕ್ಕೆ ಕೆಳಗಡೆ ಹರಿಯಿತು. 2 ಆಮೇಲೆ ಅವನು ನನ್ನನ್ನು ಬಾಗಿಲಿನ ಮಾರ್ಗವಾಗಿ ಉತ್ತರದ ಕಡೆಗೆ ಕರೆದುಕೊಂಡು ಹೋಗಿ ನನ್ನನ್ನು ಹೊರಗಿನ ಬಾಗಿಲಿನವರೆಗೂ ಹೊರಗಿನ ಮಾರ್ಗವಾದ ಪೂರ್ವಕ್ಕೆ ಅಭಿಮುಖವಾದ ಮಾರ್ಗವನ್ನು ಸುತ್ತುವಂತೆ ಮಾಡಿದನು. ಮತ್ತು ದಕ್ಷಿಣ ಭಾಗದಿಂದ ನೀರು ಜಿನುಗುತ್ತಿತ್ತು. 3 ಕೈಯಲ್ಲಿ ಅಳತೆಮಾಡುವ ನೂಲು ಇದ್ದ ಆ ಮನುಷ್ಯನು ಪೂರ್ವದ ಕಡೆಗೆ ಹೊರಟು ಸಾವಿರ ಮೊಳ ಅಳೆದ ಮೇಲೆ, ನನ್ನನ್ನು ನೀರಿನಿಂದ ದಾಟಿಸಿದನು. ಅಲ್ಲಿ ನೀರು ಪಾದ ಮುಳುಗುವಷ್ಟಿತ್ತು. 4 ಅವನು ಸಾವಿರಮೊಳಗಳನ್ನು ಅಳೆದ ಮೇಲೆ ನನ್ನನ್ನು ನೀರಿನಿಂದ ದಾಟಿಸಲು, ಆಗ ನೀರು ಮೊಣಕಾಲುಗಳ ತನಕ ಇತ್ತು; ಇನ್ನೂ ಸಾವಿರ ಅಳೆದು ನನ್ನನ್ನು ದಾಟಿಸಲಾಗಿ ನೀರು ಸೊಂಟದವರೆಗೂ ಇತ್ತು. 5 ಇನ್ನೂ ಸಾವಿರ ಅಳೆದ ಮೇಲೆ ಅದು ನಾನು ದಾಟಲಾಗದಂಥ ನದಿಯಾಗಿತ್ತು. ಏಕೆಂದರೆ ನೀರು ಹೆಚ್ಚಿ, ಈಜುವಷ್ಟಾಗಿ ದಾಟಲಾಗದಷ್ಟು ನದಿಯಾಗಿತ್ತು. 6 ಅವರು ನನಗೆ, “ಮನುಷ್ಯಪುತ್ರನೇ, ನೀನು ಇದನ್ನು ನೋಡಿದೆಯಾ?”ಆಗ ಅವನು ನನ್ನನ್ನು ನಡೆಸಿಕೊಂಡು ಮತ್ತೆ ನದಿಯ ತೀರಕ್ಕೆ ಕರೆತಂದನು. 7 ನಾನು ತಿರುಗಿ ಬಂದಾಗ ಇಗೋ, ನದಿಯ ತೀರದಲ್ಲಿ ಆ ಕಡೆಯೂ ಈ ಕಡೆಯೂ ಅತಿ ಹೆಚ್ಚು ಮರಗಳಿದ್ದವು. 8 ಆಗ ಅವನು, “ಈ ನೀರು ಪೂರ್ವಸೀಮೆಗೆ ಹೋಗಿ ಅರಾಬಾ ಎಂಬ ಒಣಭೂಮಿಗೆ ಇಳಿದು ಲವಣ ಸಮುದ್ರ ಸೇರುವುದು. ಲವಣ ಸಮುದ್ರ ಸೇರಿದ ಮೇಲೆ ಅಲ್ಲಿಯ ನೀರು ಸಿಹಿಯಾಗುವುದು. 9 ಈ ದಿನ ಬರುವ ಎಲ್ಲಾ ಸ್ಥಳಗಳಲ್ಲಿ ಸಂಚರಿಸುವಂಥ ಸಮಸ್ತ ಜೀವಿಗಳು ಬದುಕುವುವು ಮತ್ತು ಮೀನುಗಳ ಬಹುದೊಡ್ಡ ಸಮೂಹವಾಗುವುವು. ಏಕೆಂದರೆ ಈ ನೀರು ಅಲ್ಲಿಗೆ ಬರುವಾಗ ಅವು ಶುದ್ಧವಾಗುವುವು. ಈ ನದಿಗಳು ಎಲ್ಲಿಗೆ ಬರುತ್ತವೋ ಅಲ್ಲಿ ಎಲ್ಲಾ ಬದುಕುವುವು. 10 ಏನ್ಗೆದಿ ಮೊದಲುಗೊಂಡು ಎನ್ ಎಗ್ಲಯಿಮಿನವರೆಗೂ ಬೆಸ್ತರು ಅದರ ಬಳಿಯಲ್ಲಿ ನಿಲ್ಲುವರು. ಅಲ್ಲಿ ಬಲೆಹಾಸುವ ಸ್ಥಳಗಳಿರುವುವು. ಅದರ ಮೀನುಗಳು ಮಹಾಸಾಗರದ ಮೀನುಗಳಾಗಿ ಜಾತ್ಯಾನುಸಾರವಾಗಿ ಬಹಳವಾಗಿರುವುವು. 11 ಆದರೆ ಅದರ ಕೆಸರಾದ ಸ್ಥಳಗಳು, ಕೊಳಚೆಗಳು, ಶುದ್ಧವಾಗುವುದಿಲ್ಲ. ಅವು ಉಪ್ಪಿನ ಗಣಿಯಾಗುವುವು. 12 ನದಿಯ ಎರಡೂ ದಡಗಳಲ್ಲಿ ಆಹಾರಕ್ಕಾಗಿ ಎಲ್ಲಾ ತರಹದ ಮರಗಳು ಬೆಳೆಯುವುವು. ಅವುಗಳ ಎಲೆಗಳು ಬಾಡುವುದಿಲ್ಲ. ಅವುಗಳ ಹಣ್ಣು ಮುಗಿದುಹೋಗುವುದಿಲ್ಲ. ಅವು ತಿಂಗಳುಗಳ ಪ್ರಕಾರ ಹೊಸ ಫಲಗಳನ್ನು ಫಲಿಸುವುವು. ಏಕೆಂದರೆ ಅವುಗಳ ನೀರು ಪರಿಶುದ್ಧ ಸ್ಥಳದಿಂದ ಹೊರಟುಬಂದದ್ದು, ಅವುಗಳ ಹಣ್ಣುಗಳು ಆಹಾರಕ್ಕೂ ಅವುಗಳ ಎಲೆಗಳು ಔಷಧಕ್ಕೂ ಆಗುವುವು.” 13 ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀವು ಇಸ್ರಾಯೇಲಿನ ಹನ್ನೆರಡು ಗೋತ್ರಗಳ ಪ್ರಕಾರ ದೇಶವನ್ನು ಬಾಧ್ಯವಾಗಿ ಹೊಂದುವ ಹಾಗೆ ಇದು ಮೇರೆಯಾಗಿದೆ. ಯೋಸೇಫನಿಗೆ ಎರಡು ಪಾಲುಗಳು ಕೊಡಲಾಗಿದೆ. 14 ನೀವು ಒಬ್ಬೊಬ್ಬರೂ ಸರಿಯಾಗಿ ಅದನ್ನು ಬಾಧ್ಯವಾಗಿ ಹೊಂದಬೇಕು. ಏಕೆಂದರೆ ಅದನ್ನು ನಿಮ್ಮ ಪಿತೃಗಳಿಗೆ ಕೊಡುವ ಹಾಗೆ ನಾನು ಕೈಯೆತ್ತಿ ಪ್ರಮಾಣ ಮಾಡಿದ್ದೇನೆ. ಈ ದೇಶವು ನಿಮಗೆ ಬಾಧ್ಯವಾಗಿ ಬರುವುದು. 15 “ಇದೇ ದೇಶದ ಮೇರೆಯು: “ಉತ್ತರದ ಕಡೆಗೆ ಮಹಾ ಸಮುದ್ರದಿಂದ ಮೊದಲುಗೊಂಡು ಹೆತ್ಲೋನಿನ ಮಾರ್ಗವಾಗಿ ಲೆಬೊ ಹಮಾತ್ ದಾಟಿ ಚೆದಾದಿಗೆ ಸೇರುವವರೆಗೂ; 16 ಹಮಾತೂ ಬೇರೋತವು, ದಮಸ್ಕದವರೆಗೂ ಹಾಮಾತಿನ ಮೇರೆಗೂ ಮಧ್ಯವಾಗಿರುವ ಸಿಬ್ರಯಿಮ್ ಹವ್ರಾನಿನ ಮೇರೆಯಲ್ಲಿರುವ ಹಾಚೇರ್ ಹತ್ತೀಕೋನಿನ ಬಳಿಯಲ್ಲಿ ಮುಗಿಯಬೇಕು. 17 ಹೀಗೆ ಹಚರ್ ಏನಾನೂ ದಮಸ್ಕದ ಮೇರೆಯೂ ಉತ್ತರದ ಕಡೆಗಿರುವ ಹಮಾತ್ಯರದು ಹಾಮಾತಿನ ಮೇರೆಯೂ ಉತ್ತರದ ಕಡೆಯಾಗಿರುವುದು. ಇದು ಉತ್ತರ ಮೇರೆ. 18 ಪೂರ್ವದಲ್ಲಿ ಹವ್ರಾನ್, ದಮಸ್ಕ, ಗಿಲ್ಯಾದ್ ಇವುಗಳಿಗೂ ಇಸ್ರಾಯೇಲ್ ದೇಶಕ್ಕೂ ಮಧ್ಯೆ ಯೊರ್ದನ್ ಹೊಳೆಯ ಮೇರೆಯಿಂದ ಲವಣ ಸಮುದ್ರದಿಂದ ಮತ್ತು ತಾಮರ್ ನೀವು ಅಳೆಯಬೇಕು. ಇದೇ ಪೂರ್ವದಿಕ್ಕಿನ ಮೇರೆಯಾಗಿದೆ. 19 ದಕ್ಷಿಣದ ಕಡೆಗಿರುವ ದಕ್ಷಿಣದ ಮೇರೆಯೂ ತಾಮಾರ್ ಮೊದಲುಗೊಂಡು ಮೆರೀಬಾ ಕಾದೇಶಿನ ಹಳ್ಳದ ಮೇಲೆ ಈಜಿಪ್ಟಿನ ಮುಂದಿರುವ, ತೊರೆಯ ಮಾರ್ಗವಾಗಿ ದೊಡ್ಡ ಸಮುದ್ರದವರೆಗೆ ಇರುವುದು. ಇದೇ ದಕ್ಷಿಣದ ಮೇರೆ. 20 ಉತ್ತರದ ಮೇರೆಯಿಂದ ಹಮಾತಿನ ಪ್ರದೇಶದವರೆಗೂ ಇರುವ ದೊಡ್ಡ ಸಮುದ್ರವು ಪಶ್ಚಿಮದ ಕಡೆಗಿದೆ. ಇದೇ ಪಶ್ಚಿಮದ ಮೇರೆ. 21 “ಹೀಗೆ ನೀವು ಈ ದೇಶವನ್ನು ಇಸ್ರಾಯೇಲನ ಗೋತ್ರಗಳ ಪ್ರಕಾರ ಪಾಲುಮಾಡಿಕೊಳ್ಳಬೇಕು. 22 ನೀವು ಅದನ್ನು ನಿಮಗೂ ನಿಮ್ಮ ಮಧ್ಯದಲ್ಲಿ ತಂಗುವಂಥವರಿಗೂ ನಿಮ್ಮ ಮಧ್ಯದಲ್ಲಿ ಮಕ್ಕಳನ್ನು ಪಡೆದಂತ ವಿದೇಶಿಯರಿಗೂ ಚೀಟುಹಾಕಿ ಬಾಧ್ಯವಾಗಿ ವಿಭಾಗಿಸಿ ಹಂಚಬೇಕು. ಅವರು ನಿಮಗೆ ಇಸ್ರಾಯೇಲಿನ ಮಕ್ಕಳೊಳಗೆ ಹುಟ್ಟಿದವರೆಂದು ಪರಿಗಣಿಸಬೇಕು. ಅವರಿಗೆ ಇಸ್ರಾಯೇಲಿನ ಗೋತ್ರಗಳೊಳಗೆ ಬಾಧ್ಯತೆಯಾಗಬೇಕು. 23 ವಿದೇಶಿಯರು ಯಾವ ಗೋತ್ರದ ಸಂಗಡ ತಂಗುತ್ತಾರೋ ಅದರಲ್ಲಿಯೇ ನೀವು ಅವರಿಗೆ ಸೊತ್ತನ್ನು ಕೊಡಬೇಕು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.

In Other Versions

Ezekiel 47 in the ANGEFD

Ezekiel 47 in the ANTPNG2D

Ezekiel 47 in the AS21

Ezekiel 47 in the BAGH

Ezekiel 47 in the BBPNG

Ezekiel 47 in the BBT1E

Ezekiel 47 in the BDS

Ezekiel 47 in the BEV

Ezekiel 47 in the BHAD

Ezekiel 47 in the BIB

Ezekiel 47 in the BLPT

Ezekiel 47 in the BNT

Ezekiel 47 in the BNTABOOT

Ezekiel 47 in the BNTLV

Ezekiel 47 in the BOATCB

Ezekiel 47 in the BOATCB2

Ezekiel 47 in the BOBCV

Ezekiel 47 in the BOCNT

Ezekiel 47 in the BOECS

Ezekiel 47 in the BOGWICC

Ezekiel 47 in the BOHCB

Ezekiel 47 in the BOHCV

Ezekiel 47 in the BOHLNT

Ezekiel 47 in the BOHNTLTAL

Ezekiel 47 in the BOICB

Ezekiel 47 in the BOILNTAP

Ezekiel 47 in the BOITCV

Ezekiel 47 in the BOKCV

Ezekiel 47 in the BOKHWOG

Ezekiel 47 in the BOKSSV

Ezekiel 47 in the BOLCB

Ezekiel 47 in the BOLCB2

Ezekiel 47 in the BOMCV

Ezekiel 47 in the BONAV

Ezekiel 47 in the BONCB

Ezekiel 47 in the BONLT

Ezekiel 47 in the BONUT2

Ezekiel 47 in the BOPLNT

Ezekiel 47 in the BOSCB

Ezekiel 47 in the BOSNC

Ezekiel 47 in the BOTLNT

Ezekiel 47 in the BOVCB

Ezekiel 47 in the BOYCB

Ezekiel 47 in the BPBB

Ezekiel 47 in the BPH

Ezekiel 47 in the BSB

Ezekiel 47 in the CCB

Ezekiel 47 in the CUV

Ezekiel 47 in the CUVS

Ezekiel 47 in the DBT

Ezekiel 47 in the DGDNT

Ezekiel 47 in the DHNT

Ezekiel 47 in the DNT

Ezekiel 47 in the ELBE

Ezekiel 47 in the EMTV

Ezekiel 47 in the ESV

Ezekiel 47 in the FBV

Ezekiel 47 in the FEB

Ezekiel 47 in the GGMNT

Ezekiel 47 in the GNT

Ezekiel 47 in the HARY

Ezekiel 47 in the HNT

Ezekiel 47 in the IRVA

Ezekiel 47 in the IRVB

Ezekiel 47 in the IRVG

Ezekiel 47 in the IRVH

Ezekiel 47 in the IRVK

Ezekiel 47 in the IRVM

Ezekiel 47 in the IRVM2

Ezekiel 47 in the IRVO

Ezekiel 47 in the IRVP

Ezekiel 47 in the IRVT

Ezekiel 47 in the IRVT2

Ezekiel 47 in the IRVU

Ezekiel 47 in the ISVN

Ezekiel 47 in the JSNT

Ezekiel 47 in the KAPI

Ezekiel 47 in the KBT1ETNIK

Ezekiel 47 in the KBV

Ezekiel 47 in the KJV

Ezekiel 47 in the KNFD

Ezekiel 47 in the LBA

Ezekiel 47 in the LBLA

Ezekiel 47 in the LNT

Ezekiel 47 in the LSV

Ezekiel 47 in the MAAL

Ezekiel 47 in the MBV

Ezekiel 47 in the MBV2

Ezekiel 47 in the MHNT

Ezekiel 47 in the MKNFD

Ezekiel 47 in the MNG

Ezekiel 47 in the MNT

Ezekiel 47 in the MNT2

Ezekiel 47 in the MRS1T

Ezekiel 47 in the NAA

Ezekiel 47 in the NASB

Ezekiel 47 in the NBLA

Ezekiel 47 in the NBS

Ezekiel 47 in the NBVTP

Ezekiel 47 in the NET2

Ezekiel 47 in the NIV11

Ezekiel 47 in the NNT

Ezekiel 47 in the NNT2

Ezekiel 47 in the NNT3

Ezekiel 47 in the PDDPT

Ezekiel 47 in the PFNT

Ezekiel 47 in the RMNT

Ezekiel 47 in the SBIAS

Ezekiel 47 in the SBIBS

Ezekiel 47 in the SBIBS2

Ezekiel 47 in the SBICS

Ezekiel 47 in the SBIDS

Ezekiel 47 in the SBIGS

Ezekiel 47 in the SBIHS

Ezekiel 47 in the SBIIS

Ezekiel 47 in the SBIIS2

Ezekiel 47 in the SBIIS3

Ezekiel 47 in the SBIKS

Ezekiel 47 in the SBIKS2

Ezekiel 47 in the SBIMS

Ezekiel 47 in the SBIOS

Ezekiel 47 in the SBIPS

Ezekiel 47 in the SBISS

Ezekiel 47 in the SBITS

Ezekiel 47 in the SBITS2

Ezekiel 47 in the SBITS3

Ezekiel 47 in the SBITS4

Ezekiel 47 in the SBIUS

Ezekiel 47 in the SBIVS

Ezekiel 47 in the SBT

Ezekiel 47 in the SBT1E

Ezekiel 47 in the SCHL

Ezekiel 47 in the SNT

Ezekiel 47 in the SUSU

Ezekiel 47 in the SUSU2

Ezekiel 47 in the SYNO

Ezekiel 47 in the TBIAOTANT

Ezekiel 47 in the TBT1E

Ezekiel 47 in the TBT1E2

Ezekiel 47 in the TFTIP

Ezekiel 47 in the TFTU

Ezekiel 47 in the TGNTATF3T

Ezekiel 47 in the THAI

Ezekiel 47 in the TNFD

Ezekiel 47 in the TNT

Ezekiel 47 in the TNTIK

Ezekiel 47 in the TNTIL

Ezekiel 47 in the TNTIN

Ezekiel 47 in the TNTIP

Ezekiel 47 in the TNTIZ

Ezekiel 47 in the TOMA

Ezekiel 47 in the TTENT

Ezekiel 47 in the UBG

Ezekiel 47 in the UGV

Ezekiel 47 in the UGV2

Ezekiel 47 in the UGV3

Ezekiel 47 in the VBL

Ezekiel 47 in the VDCC

Ezekiel 47 in the YALU

Ezekiel 47 in the YAPE

Ezekiel 47 in the YBVTP

Ezekiel 47 in the ZBP