Ezekiel 5 (BOKCV2)
1 “ಮನುಷ್ಯಪುತ್ರನೇ, ನೀನು ಹರಿತವಾದ ಖಡ್ಗವನ್ನು ತೆಗೆದುಕೊಂಡು ಕ್ಷೌರಿಕನ ಕತ್ತಿಯನ್ನಾಗಿ ಉಪಯೋಗಿಸಿ, ಅದರಿಂದ ನಿನ್ನ ತಲೆಯನ್ನೂ ನಿನ್ನ ಗಡ್ಡವನ್ನೂ ಬೋಳಿಸಿಬಿಟ್ಟು, ಆಮೇಲೆ ಅದನ್ನು ತೂಕ ಮಾಡುವುದಕ್ಕೆ ತಕ್ಕಡಿಯನ್ನು ತೆಗೆದುಕೋ. ಆ ಕೂದಲನ್ನು ಭಾಗ ಮಾಡು. 2 ಅದರ ಮೂರನೆಯ ಒಂದು ಪಾಲನ್ನು ನಗರದ ಮಧ್ಯದಲ್ಲಿ ಮುತ್ತಿಗೆಯ ದಿವಸಗಳು ಮುಗಿದ ಮೇಲೆ ಬೆಂಕಿಯಿಂದ ಸುಡಬೇಕು. ಮೂರನೆಯ ಒಂದು ಪಾಲನ್ನು ತೆಗೆದುಕೊಂಡು ಖಡ್ಗದಿಂದ ಸುತ್ತಲೂ ಕಡಿಯಬೇಕು. ಉಳಿದ ಮೂರನೆಯ ಪಾಲನ್ನು ಗಾಳಿಗೆ ಚೆಲ್ಲಬೇಕು ಮತ್ತು ನಾನು ಅವುಗಳ ಹಿಂದೆ ಖಡ್ಗವನ್ನು ಬೀಸುವೆನು. 3 ನೀನು ಅವುಗಳೊಳಗಿಂದ ಕೆಲವು ಕೂದಲನ್ನು ಲೆಕ್ಕದಲ್ಲಿ ತೆಗೆದು, ನಿನ್ನ ಸೆರಗುಗಳಲ್ಲಿ ಕಟ್ಟು,” ಎಂದನು. 4 ಆಮೇಲೆ ಅವುಗಳೊಳಗಿಂದ ಕೆಲವನ್ನು ತೆಗೆದು ಬೆಂಕಿಯ ಮಧ್ಯದಲ್ಲಿ ಹಾಕಿ, ಅವುಗಳನ್ನು ಬೆಂಕಿಯಿಂದ ಸುಡು. ಏಕೆಂದರೆ ಇದರಿಂದ ಆ ಬೆಂಕಿಯು ಸಮಸ್ತ ಇಸ್ರಾಯೇಲಿನ ಮನೆತನದವರಿಗೂ ಹೋಗುವುದು. 5 “ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ: ಇದು ಯೆರೂಸಲೇಮು; ನಾನು ಅದನ್ನು ಅದರ ಸುತ್ತಲೂ ಇರುವ ಜನಾಂಗಗಳ ದೇಶಗಳ ನಡುವೆ ಇಟ್ಟಿದ್ದೇನೆ. 6 ಆಕೆಯು ಜನಾಂಗಗಳಿಗಿಂತ ಹೆಚ್ಚಾಗಿ ನನ್ನ ನ್ಯಾಯಗಳನ್ನೂ, ಅದರ ಸುತ್ತಲಿರುವ ದೇಶಗಳಿಗಿಂತ ಹೆಚ್ಚಾಗಿ ನನ್ನ ನಿಯಮಗಳನ್ನೂ ದುಷ್ಟತನಕ್ಕೆ ತಿರುಗಿಸಿಬಿಟ್ಟಳು. ಅವರು ನನ್ನ ನ್ಯಾಯಗಳನ್ನೂ ಅನುಸರಿಸದೆ ನನ್ನ ನಿಯಮಗಳನ್ನೂ ನಿರಾಕರಿಸಿದ್ದಾರೆ. 7 “ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನೀವು ನಿಮ್ಮ ಸುತ್ತಲಿರುವ ಜನಾಂಗಗಳಿಗಿಂತ ಅಧಿಕವಾದುದರಿಂದ ನನ್ನ ನಿಯಮಗಳಲ್ಲಿ ನಡೆಯದೇ ಹೋದದ್ದರಿಂದಲೂ, ನನ್ನ ನ್ಯಾಯಗಳನ್ನು ಪಾಲಿಸದೇ ಇದ್ದುದರಿಂದಲೂ, ನಿಮ್ಮ ಸುತ್ತಲಿರುವ ಜನಾಂಗಗಳ ನ್ಯಾಯಗಳ ಪ್ರಕಾರ ಮಾಡಿದ್ದರಿಂದಲೂ, 8 “ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನೇ, ನಿನಗೆ ವಿರೋಧವಾಗಿದ್ದೇನೆ. ಜನಾಂಗಗಳ ಕಣ್ಣುಗಳ ಮುಂದೆ ನಿಮ್ಮ ಜನರನ್ನು ದಂಡಿಸುವೆನು. 9 ನಾನು ಮಾಡದೆ ಇದ್ದದ್ದನ್ನೂ, ಇನ್ನು ಮೇಲೆ ಮಾಡದೇ ಇರುವಂಥದ್ದನ್ನೂ ನಿಮ್ಮ ಅಸಹ್ಯಗಳ ನಿಮಿತ್ತವಾಗಿ ನಿಮ್ಮಲ್ಲಿ ಮಾಡುತ್ತೇನೆ. 10 ಆದ್ದರಿಂದ ನಿಮ್ಮ ಮಧ್ಯದಲ್ಲಿ ತಂದೆಗಳೇ ಮಕ್ಕಳನ್ನು ತಿನ್ನುವರು. ಮಕ್ಕಳು ಅವರ ತಂದೆಗಳನ್ನು ತಿನ್ನುವರು. ಹೀಗೆ ನಿಮ್ಮಲ್ಲಿ ನ್ಯಾಯತೀರ್ಪನ್ನು ನಡಿಸುವೆನು. ನಿಮ್ಮಲ್ಲಿ ಉಳಿದವರನ್ನೆಲ್ಲಾ ಗಾಳಿ ಬೀಸುವ ಎಲ್ಲಾ ದಿಕ್ಕಿಗೂ ಚದರಿಸುವೆನು. 11 ಆದಕಾರಣ ಸಾರ್ವಭೌಮ ಯೆಹೋವ ದೇವರು ಹೇಳುವುದೇನೆಂದರೆ, ನಿಶ್ಚಯವಾಗಿ ನೀವು ನನ್ನ ಪರಿಶುದ್ಧ ಸ್ಥಳವನ್ನು ನಿಮ್ಮ ಎಲ್ಲಾ ಹೇಸಿಗೆಗಳಿಂದಲೂ, ಅಸಹ್ಯಗಳಿಂದಲೂ ಅಪವಿತ್ರಪಡಿಸಿದ ಕಾರಣ, ನಾನೂ ಸಹ ನಿಮ್ಮನ್ನು ಕುಂದಿಸುವೆನು ಮತ್ತು ನನ್ನ ಕಣ್ಣು ಕನಿಕರಿಸುವುದೂ ಇಲ್ಲ, ಕ್ಷಮಿಸುವುದೂ ಇಲ್ಲ. 12 ನಿನ್ನಲ್ಲಿಯ ಮೂರನೆಯ ಒಂದು ಪಾಲು ಜನರು ವ್ಯಾಧಿಗಳಿಂದ ಸಾಯುವರು, ಕ್ಷಾಮದಿಂದ ನಿಮ್ಮಲ್ಲಿ ಅವರು ನಾಶವಾಗುವರು. ಮೂರನೆಯ ಒಂದು ಪಾಲು ನಿಮ್ಮ ಸುತ್ತಲೂ ಖಡ್ಗ ಹಿಡಿದು ಬೀಳುವರು. ಮೂರನೆಯ ಒಂದು ಪಾಲನ್ನು ಎಲ್ಲಾ ದಿಕ್ಕುಗಳಿಗೆ ಗಾಳಿಗೆ ತೂರಿ ಚದರಿಸಿ, ಅವರ ಮೇಲೆ ಖಡ್ಗವನ್ನು ಬೀಸುವೆನು. 13 “ಈ ಪ್ರಕಾರ ನನ್ನ ಕೋಪವನ್ನು ತೀರಿಸಿಕೊಳ್ಳುವೆನು. ನನ್ನ ರೋಷವನ್ನು ಅವರ ಮೇಲೆ ಕಾರಿ, ಸಮಾಧಾನ ಹೊಂದುವೆನು. ಹೀಗೆ ನಾನು ನನ್ನ ರೋಷವನ್ನು ಅವರ ಮೇಲೆ ತೀರಿಸಿದ ತರುವಾಯ, ಯೆಹೋವ ದೇವರಾದ ನಾನು ರೋಷದಿಂದ ಮಾತನಾಡಿದ್ದೇನೆ ಎಂದು ಅವರು ತಿಳಿಯುವರು. 14 “ಹಾದು ಹೋಗುವವರೆಲ್ಲರ ಕಣ್ಣೆದುರಿಗೆ ನಾನು ನಿನ್ನನ್ನು ಹಾಳು ಮಾಡಿ, ಸುತ್ತಲಿನ ಜನಾಂಗಗಳ ನಿಂದೆಗೆ ಗುರಿಮಾಡುವೆನು. 15 ಹೀಗೆ ನಾನು ಕೋಪದಿಂದಲೂ, ರೋಷದಿಂದಲೂ, ಉಗ್ರಖಂಡನೆಯಿಂದಲೂ ನಿಮ್ಮಲ್ಲಿ ನ್ಯಾಯತೀರ್ಪುಗಳನ್ನು ನಡೆಸುವಾಗ, ನಿಮ್ಮ ಸುತ್ತಲಿರುವ ಜನಾಂಗಗಳಿಗೆ ನಿಂದೆಯೂ, ದೂಷಣೆಯೂ, ಶಿಕ್ಷೆಯೂ, ಭಯವೂ ಆಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ. 16 ಆಗ ನಾನು ನಿನ್ನನ್ನು ಹಾಳುಮಾಡಲು ಕ್ಷಾಮವೆಂಬ ವಿನಾಶಕರವಾದ ತೀಕ್ಷ್ಣ ಬಾಣಗಳನ್ನು ನಿನ್ನ ಮೇಲೆ ಬಿಡುವೆನು. ನಿನ್ನ ಮೇಲೆ ಭಯಂಕರವಾದ ಕ್ಷಾಮವನ್ನು ಬರಮಾಡಿ ನಿನ್ನ ಆಹಾರ ಸರಬರಾಜನ್ನು ನಿಲ್ಲಿಸುವೆನು. 17 ನಾನು ಕಳುಹಿಸುವ ಕ್ಷಾಮದಿಂದ ದುಷ್ಟಮೃಗಗಳಿಂದ ನಿನಗೆ ಪುತ್ರ ಶೋಕ ಪ್ರಾಪ್ತಿಯಾಗುವುದು. ವ್ಯಾಧಿಯೂ, ರಕ್ತಪ್ರವಾಹವೂ ನಿನ್ನನ್ನು ಪೀಡಿಸುವುದು, ನಿನ್ನನ್ನು ಖಡ್ಗಕ್ಕೆ ತುತ್ತು ಮಾಡುವೆನು. ಇದು ಯೆಹೋವ ದೇವರಾದ ನನ್ನ ನುಡಿ.”
In Other Versions
Ezekiel 5 in the ANGEFD
Ezekiel 5 in the ANTPNG2D
Ezekiel 5 in the AS21
Ezekiel 5 in the BAGH
Ezekiel 5 in the BBPNG
Ezekiel 5 in the BBT1E
Ezekiel 5 in the BDS
Ezekiel 5 in the BEV
Ezekiel 5 in the BHAD
Ezekiel 5 in the BIB
Ezekiel 5 in the BLPT
Ezekiel 5 in the BNT
Ezekiel 5 in the BNTABOOT
Ezekiel 5 in the BNTLV
Ezekiel 5 in the BOATCB
Ezekiel 5 in the BOATCB2
Ezekiel 5 in the BOBCV
Ezekiel 5 in the BOCNT
Ezekiel 5 in the BOECS
Ezekiel 5 in the BOGWICC
Ezekiel 5 in the BOHCB
Ezekiel 5 in the BOHCV
Ezekiel 5 in the BOHLNT
Ezekiel 5 in the BOHNTLTAL
Ezekiel 5 in the BOICB
Ezekiel 5 in the BOILNTAP
Ezekiel 5 in the BOITCV
Ezekiel 5 in the BOKCV
Ezekiel 5 in the BOKHWOG
Ezekiel 5 in the BOKSSV
Ezekiel 5 in the BOLCB
Ezekiel 5 in the BOLCB2
Ezekiel 5 in the BOMCV
Ezekiel 5 in the BONAV
Ezekiel 5 in the BONCB
Ezekiel 5 in the BONLT
Ezekiel 5 in the BONUT2
Ezekiel 5 in the BOPLNT
Ezekiel 5 in the BOSCB
Ezekiel 5 in the BOSNC
Ezekiel 5 in the BOTLNT
Ezekiel 5 in the BOVCB
Ezekiel 5 in the BOYCB
Ezekiel 5 in the BPBB
Ezekiel 5 in the BPH
Ezekiel 5 in the BSB
Ezekiel 5 in the CCB
Ezekiel 5 in the CUV
Ezekiel 5 in the CUVS
Ezekiel 5 in the DBT
Ezekiel 5 in the DGDNT
Ezekiel 5 in the DHNT
Ezekiel 5 in the DNT
Ezekiel 5 in the ELBE
Ezekiel 5 in the EMTV
Ezekiel 5 in the ESV
Ezekiel 5 in the FBV
Ezekiel 5 in the FEB
Ezekiel 5 in the GGMNT
Ezekiel 5 in the GNT
Ezekiel 5 in the HARY
Ezekiel 5 in the HNT
Ezekiel 5 in the IRVA
Ezekiel 5 in the IRVB
Ezekiel 5 in the IRVG
Ezekiel 5 in the IRVH
Ezekiel 5 in the IRVK
Ezekiel 5 in the IRVM
Ezekiel 5 in the IRVM2
Ezekiel 5 in the IRVO
Ezekiel 5 in the IRVP
Ezekiel 5 in the IRVT
Ezekiel 5 in the IRVT2
Ezekiel 5 in the IRVU
Ezekiel 5 in the ISVN
Ezekiel 5 in the JSNT
Ezekiel 5 in the KAPI
Ezekiel 5 in the KBT1ETNIK
Ezekiel 5 in the KBV
Ezekiel 5 in the KJV
Ezekiel 5 in the KNFD
Ezekiel 5 in the LBA
Ezekiel 5 in the LBLA
Ezekiel 5 in the LNT
Ezekiel 5 in the LSV
Ezekiel 5 in the MAAL
Ezekiel 5 in the MBV
Ezekiel 5 in the MBV2
Ezekiel 5 in the MHNT
Ezekiel 5 in the MKNFD
Ezekiel 5 in the MNG
Ezekiel 5 in the MNT
Ezekiel 5 in the MNT2
Ezekiel 5 in the MRS1T
Ezekiel 5 in the NAA
Ezekiel 5 in the NASB
Ezekiel 5 in the NBLA
Ezekiel 5 in the NBS
Ezekiel 5 in the NBVTP
Ezekiel 5 in the NET2
Ezekiel 5 in the NIV11
Ezekiel 5 in the NNT
Ezekiel 5 in the NNT2
Ezekiel 5 in the NNT3
Ezekiel 5 in the PDDPT
Ezekiel 5 in the PFNT
Ezekiel 5 in the RMNT
Ezekiel 5 in the SBIAS
Ezekiel 5 in the SBIBS
Ezekiel 5 in the SBIBS2
Ezekiel 5 in the SBICS
Ezekiel 5 in the SBIDS
Ezekiel 5 in the SBIGS
Ezekiel 5 in the SBIHS
Ezekiel 5 in the SBIIS
Ezekiel 5 in the SBIIS2
Ezekiel 5 in the SBIIS3
Ezekiel 5 in the SBIKS
Ezekiel 5 in the SBIKS2
Ezekiel 5 in the SBIMS
Ezekiel 5 in the SBIOS
Ezekiel 5 in the SBIPS
Ezekiel 5 in the SBISS
Ezekiel 5 in the SBITS
Ezekiel 5 in the SBITS2
Ezekiel 5 in the SBITS3
Ezekiel 5 in the SBITS4
Ezekiel 5 in the SBIUS
Ezekiel 5 in the SBIVS
Ezekiel 5 in the SBT
Ezekiel 5 in the SBT1E
Ezekiel 5 in the SCHL
Ezekiel 5 in the SNT
Ezekiel 5 in the SUSU
Ezekiel 5 in the SUSU2
Ezekiel 5 in the SYNO
Ezekiel 5 in the TBIAOTANT
Ezekiel 5 in the TBT1E
Ezekiel 5 in the TBT1E2
Ezekiel 5 in the TFTIP
Ezekiel 5 in the TFTU
Ezekiel 5 in the TGNTATF3T
Ezekiel 5 in the THAI
Ezekiel 5 in the TNFD
Ezekiel 5 in the TNT
Ezekiel 5 in the TNTIK
Ezekiel 5 in the TNTIL
Ezekiel 5 in the TNTIN
Ezekiel 5 in the TNTIP
Ezekiel 5 in the TNTIZ
Ezekiel 5 in the TOMA
Ezekiel 5 in the TTENT
Ezekiel 5 in the UBG
Ezekiel 5 in the UGV
Ezekiel 5 in the UGV2
Ezekiel 5 in the UGV3
Ezekiel 5 in the VBL
Ezekiel 5 in the VDCC
Ezekiel 5 in the YALU
Ezekiel 5 in the YAPE
Ezekiel 5 in the YBVTP
Ezekiel 5 in the ZBP