Jeremiah 33 (BOKCV2)

1 ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಅವನು ಇನ್ನು ಸೆರೆಮನೆಯ ಅಂಗಳದಲ್ಲಿ ಸೆರೆಯಾಗಿದ್ದಾಗ ಎರಡನೆಯ ಸಾರಿ ಉಂಟಾಯಿತು. 2 “ಭೂಮಿಯನ್ನು ಸೃಷ್ಟಿಮಾಡುವ ಯೆಹೋವ ದೇವರೂ ಅದನ್ನು ಸ್ಥಾಪಿಸುವುದಕ್ಕಾಗಿ ಅದನ್ನು ರೂಪಿಸಿದ ಯೆಹೋವನೆಂಬ ಹೆಸರುಳ್ಳವನೂ ಹೇಳುವುದೇನೆಂದರೆ, 3 ‘ನನ್ನನ್ನು ಕರೆ, ಆಗ ನಿನಗೆ ಉತ್ತರಕೊಡುವೆನು. ನಿನಗೆ ತಿಳಿಯದ ಮತ್ತು ಪರಿಶೋಧನೆಗೆ ಮೀರಿದ ಮಹಾಕಾರ್ಯಗಳನ್ನೂ ನಿನಗೆ ಹೇಳಿಕೊಡುವೆನು.’ 4 ದಿಬ್ಬಗಳಿಂದಲೂ ಖಡ್ಗದಿಂದಲೂ ಕೆಡವಿರುವ ಈ ಪಟ್ಟಣದ ಮನೆಗಳ ವಿಷಯವಾಗಿವೂ ಯೆಹೂದದ ಅರಸರ ಅರಮನೆಗಳ ವಿಷಯವಾಗಿಯೂ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ. 5 ಅವರು ಕಸ್ದೀಯರ ಸಂಗಡ ಯುದ್ಧ ಮಾಡುವುದಕ್ಕೂ ನಾನು ನನ್ನ ಕೋಪದಲ್ಲಿಯೂ, ‘ನನ್ನ ಉರಿಯಲ್ಲಿಯೂ ಕೊಂದುಹಾಕಿದ ಮನುಷ್ಯರ ಹೆಣಗಳಿಂದ ಅವುಗಳನ್ನು ತುಂಬಿಸುವುದಕ್ಕೂ ಬರುತ್ತಾರೆ. ಏಕೆಂದರೆ ನಾನು ಈ ಪಟ್ಟಣಕ್ಕೆ ವಿರೋಧವಾಗಿ ಅವರ ಸಮಸ್ತ ದುಷ್ಟತನದ ನಿಮಿತ್ತ ನನ್ನ ಮುಖವನ್ನು ಮರೆಮಾಡಿದ್ದೇನೆ. 6 “ ‘ಇಗೋ, ನಾನು ಅದಕ್ಕೆ ಕ್ಷೇಮವನ್ನೂ, ಸ್ವಸ್ಥತೆಯನ್ನೂ ಹುಟ್ಟಿಸಿ ಅವರನ್ನು ಗುಣಪಡಿಸಿ ಸಮಾಧಾನದ ಸತ್ಯವನ್ನು ಸಮೃದ್ಧಿಯಾಗಿ ಅವರಿಗೆ ಪ್ರಕಟಮಾಡುವೆನು. 7 ಯೆಹೂದದ ಸೆರೆಯನ್ನೂ, ಇಸ್ರಾಯೇಲಿನ ಸೆರೆಯನ್ನೂ ತಿರುಗಿಸಿ, ಅವರನ್ನು ಮುಂಚಿನ ಹಾಗೆ ಕಟ್ಟುವೆನು. 8 ಅವರು ಯಾವುದರಿಂದ ನನಗೆ ವಿರೋಧವಾಗಿ ಪಾಪ ಮಾಡಿದರೋ, ಆ ಅಕ್ರಮದಿಂದೆಲ್ಲಾ ಅವರನ್ನು ಶುದ್ಧಮಾಡುವೆನು. ಅವರು ಯಾವವುಗಳಿಂದ ನನಗೆ ವಿರೋಧವಾಗಿ ಪಾಪಮಾಡಿ ನನ್ನ ವಿಷಯದಲ್ಲಿ ದ್ರೋಹಿಗಳಾಗಿದ್ದಾರೋ, ಆ ಅಕ್ರಮಗಳನ್ನೆಲ್ಲಾ ಮನ್ನಿಸುವೆನು. 9 ನಾನು ಈ ಜನರಿಗೆ ಅನುಗ್ರಹಿಸುವ ಎಲ್ಲಾ ಸೌಭಾಗ್ಯಗಳ ಸುದ್ದಿಯನ್ನು ಸಕಲ ಭೂರಾಜ್ಯಗಳು ಕೇಳುವರು. ಈ ನಗರಕ್ಕೆ ನಾನು ನೀಡುವ ಸುಖ ಸಮಾಧಾನಗಳನ್ನು ಅವರು ನೋಡುವರು ಹಾಗೂ ಹೆದರಿ ನಡುಗುವರು. ಇದರಿಂದಾಗಿ ಆ ಎಲ್ಲಾ ರಾಜ್ಯಗಳ ಮುಂದೆ ನನಗೆ ಅದು ಕೀರ್ತಿಯನ್ನು, ಮಹಿಮೆಯನ್ನು ಹಾಗೂ ಆನಂದವನ್ನು ತರುವುದು.’ 10 “ಯೆಹೋವ ದೇವರು ಹೇಳುವುದೇನೆಂದರೆ: ‘ “ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾಯಿತು,” ಎಂದು ನೀವು ಹೇಳುವ ಈ ಸ್ಥಳದಲ್ಲಿಯೂ ಮನುಷ್ಯರೂ ನಿವಾಸಿಗಳೂ ಪಶುಗಳೂ ಇಲ್ಲದೆ ನಾಶವಾದ ಯೆಹೂದದ ಪಟ್ಟಣಗಳಲ್ಲಿಯೂ ಯೆರೂಸಲೇಮಿನ ಬೀದಿಗಳಲ್ಲಿಯೂ 11 ಹರ್ಷಧ್ವನಿ, ಉಲ್ಲಾಸ, ಕೋಲಾಹಲ, ವಧೂವರರ ಸ್ವರ ಮತ್ತು ಹಾಡುತ್ತಾ ಕೃತಜ್ಞತಾ ಬಲಿಯನ್ನು ಯೆಹೋವ ದೇವರ ಆಲಯಕ್ಕೆ ತರುವವರ ಸ್ವರ ಹೀಗೆ ಹೇಳುವವು,“ ‘ “ಸೇನಾಧೀಶ್ವರ ಯೆಹೋವ ದೇವರಿಗೆ ಕೃತಜ್ಞತಾ ಸ್ತೋತ್ರಮಾಡಿರಿ,ಏಕೆಂದರೆ ಯೆಹೋವ ದೇವರು ಒಳ್ಳೆಯವರು.ಆತನ ಪ್ರೀತಿ ಶಾಶ್ವತವಾಗಿರುತ್ತದೆ.”ಏಕೆಂದರೆ ನಾನು ಈ ದೇಶದ ಸಮೃದ್ಧಿಯನ್ನು ಮೊದಲಿನಂತೆ ಪುನಃಸ್ಥಾಪಿಸುವೆನು,’ ಎಂದು ಯೆಹೋವ ದೇವರು ಹೇಳುತ್ತಾರೆ. 12 “ಸೇನಾಧೀಶ್ವರ ಯೆಹೋವ ದೇವರು ಹೇಳುವುದೇನೆಂದರೆ: ‘ಮನುಷ್ಯರೂ ಪಶುಗಳೂ ಇಲ್ಲದೆ ಹಾಳಾದ ಈ ಸ್ಥಳದಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿಯೂ, ಅದರ ಎಲ್ಲಾ ಪಟ್ಟಣಗಳಲ್ಲಿ ಕುರುಬರು ತಮ್ಮ ಹಿಂಡುಗಳಿಗೆ ವಿಶ್ರಾಂತಿ ನೀಡಲು ಮತ್ತೆ ಹುಲ್ಲುಗಾವಲುಗಳು ಇರುತ್ತವೆ. 13 ಬೆಟ್ಟದ ಪಟ್ಟಣಗಳಲ್ಲಿಯೂ ತಗ್ಗಿನ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ, ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ ಇನ್ನು ಮೇಲೆ ಕುರಿಮಂದೆಗಳು ಎಣಿಸುವವನ ಕೈಕೆಳಗೆ ಹಾದುಹೋಗುವುದು,’ ಎಂದು ಯೆಹೋವ ದೇವರು ಹೇಳುತ್ತಾರೆ. 14 “ ‘ಇಗೋ, ದಿನಗಳು ಬರಲಿವೆ,’ ಎಂದು ಯೆಹೋವ ದೇವರು ಹೇಳುತ್ತಾರೆ. ‘ಆಗ ನಾನು ಇಸ್ರಾಯೇಲಿನ ಮತ್ತು ಯೆಹೂದದ ಮನೆಯವರ ಸಂಗಡ ಹೇಳಿದ ಒಳ್ಳೆಯ ವಾಗ್ದಾನವನ್ನು ನೆರವೇರಿಸುವೆನು. 15 “ ‘ಆ ದಿನಗಳಲ್ಲಿಯೂ ಆ ಕಾಲದಲ್ಲಿಯೂನಾನು ದಾವೀದನಿಗೆ ನೀತಿಯುಳ್ಳ ಕೊಂಬೆಯನ್ನು ಚಿಗುರ ಮಾಡುವೆನು.ಆತನು ದೇಶದಲ್ಲಿ ನ್ಯಾಯವನ್ನೂ, ನೀತಿಯನ್ನೂ ನಡೆಸುವನು. 16 ಆಗ ಯೆಹೂದ್ಯರು ಸುರಕ್ಷಿತರಾಗಿರುವರು.ಯೆರೂಸಲೇಮಿನವರು ನೆಮ್ಮದಿಯಿಂದ ವಾಸಿಸುವರು.ಯೆಹೋವ ಚಿದ್ಕೇನು ಅಂದರೆಯೆಹೋವ ದೇವರೇ ನಮ್ಮ ಸದ್ಧರ್ಮ ಎಂಬ ಹೆಸರು ಈ ನಗರಕ್ಕೆ ಸಲ್ಲುವುದು.’ 17 ಯೆಹೋವ ದೇವರಾದ ನಾನು ಹೇಳುವುದೇನೆಂದರೆ: ‘ದಾವೀದನು ಎಂದಿಗೂ ಇಸ್ರಾಯೇಲ್ ಸಿಂಹಾಸನದಲ್ಲಿ ಕುಳಿತುಕೊಳ್ಳಲು ಒಬ್ಬ ವ್ಯಕ್ತಿಯನ್ನು ಹೊಂದಲು ವಿಫಲನಾಗುವುದಿಲ್ಲ 18 ಅದಕ್ಕೆ ಆ ಸಂತಾನದವರಲ್ಲಿ ಒಬ್ಬ ಗಂಡಸು ಇಲ್ಲದೆ ಇರನು. ಅಂತೆಯೇ ನನ್ನ ಸನ್ನಿಧಿಯಲ್ಲಿ ನಿರಂತರವಾಗಿ ದಹನಬಲಿಯನ್ನು, ನೈವೇದ್ಯವನ್ನು ಹಾಗು ಕಾಣಿಕೆಯನ್ನು ಒಪ್ಪಿಸತಕ್ಕ ಒಬ್ಬನು ಲೇವಿಯರಾದ ಯಾಜಕರು ಇದ್ದೇ ಇರುವನು.’ ” 19 ಯೆಹೋವ ದೇವರು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದರು: 20 “ಯೆಹೋವ ದೇವರಾದ ನನ್ನ ನುಡಿ ಇದು: ‘ಹಗಲಿರುಳೆಂಬ ನನ್ನ ನಿಬಂಧನೆಗಳನ್ನು ನಿಲ್ಲಿಸಿ, ಹಗಲನ್ನು ಮತ್ತು ಇರುಳನ್ನು ಅದರದರ ಸಮಯದಲ್ಲಿ ಉಂಟಾಗದಂತೆ ಮಾಡಲು ನಿಮ್ಮಿಂದಾದೀತೇ? 21 ಆಗುವುದಾದರೆ ಮಾತ್ರ ನನ್ನ ದಾಸ ದಾವೀದನೊಂದಿಗೆ ನನ್ನ ಪರಿಚಾರಕರಾದ ಲೇವಿ ಕುಲದ ಯಾಜಕರೊಂದಿಗೆ ನಾನು ಮಾಡಿದ ಒಡಂಬಡಿಕೆ ನಿಂತುಹೋಗುವುದು ಮತ್ತು ದಾವೀದನ ಸಿಂಹಾಸನವನ್ನು ಏರಿ ಆಳತಕ್ಕ ಅವನ ಸಂತಾನದವನು ಒಬ್ಬನೂ ಇಲ್ಲವಾಗುವನು. 22 ಆದರೆ ನನ್ನ ದಾಸ ದಾವೀದನ ಸಂತಾನವನ್ನೂ ನನ್ನ ಪರಿಚಾರಕರಾದ ಲೇವಿಯರನ್ನೂ ಅಸಂಖ್ಯಾತ ನಕ್ಷತ್ರಗಣದಷ್ಟು ಮತ್ತು ಎಣಿಸಲಾಗದ ಸಮುದ್ರತೀರದ ಮರಳಿನಷ್ಟು ಅಧಿಕಗೊಳಿಸುವೆನು.’ ” 23 ಇದಲ್ಲದೆ ಯೆಹೋವ ದೇವರು ಯೆರೆಮೀಯನಿಗೆ ಈ ವಾಕ್ಯವನ್ನು ಅನುಗ್ರಹಿಸಿದರು: 24 “ ‘ಯೆಹೋವ ದೇವರಾದ ನಾನು ಆರಿಸಿಕೊಂಡಿದ್ದ ಎರಡು ವಂಶಗಳನ್ನು ನಿರಾಕರಿಸಿಬಿಟ್ಟಿದ್ದೇನೆ, ಎಂದು ಜನರು ಆಡಿಕೊಳ್ಳುತ್ತಿದ್ದಾರೆ.’ ಈ ಮಾತನ್ನು ನೀನು ಗಮನಿಸಿರಬೇಕು. ನನ್ನ ಜನರು ಒಂದು ಜನಾಂಗವೇ ಅಲ್ಲ ಎನ್ನುವಷ್ಟರ ಮಟ್ಟಿಗೆ ಅವರು ಅಸಡ್ಡೆ ಮಾಡುತ್ತಿದ್ದಾರಲ್ಲವೇ? 25 ಯೆಹೋವನಾದ ನಾನು ಹೇಳುವುದನ್ನು ಕೇಳು: ‘ಹಗಲಿರುಳೆಂಬ ಸ್ಥಿರವಾದ ನಿಬಂಧನೆಯನ್ನು ನಾನು ಮಾಡದೆ ಹೋಗಿದ್ದರೆ, ಭೂಮ್ಯಾಕಾಶಗಳಿಗೆ ನಿಯಮವನ್ನು ನಾನು ವಿಧಿಸದೆ ಹೋಗಿದ್ದರೆ, 26 ಆಗ ಮಾತ್ರ ನಾನು ಯಾಕೋಬನ ಸಂತಾನದವರನ್ನು ತ್ಯಜಿಸುತ್ತಿದ್ದೆ. ಅಬ್ರಹಾಮ, ಇಸಾಕ, ಯಾಕೋಬ ಇವರ ಸಂತತಿಯನ್ನು ಆಳತಕ್ಕ ಒಡೆಯನನ್ನು ದಾಸ ದಾವೀದನ ವಂಶದಿಂದ ಆರಿಸದೆ, ಆ ವಂಶವನ್ನು ನಿರಾಕರಿಸುತ್ತಿದ್ದೆ. ಆದರೆ ಈಗ ಗುಲಾಮಗಿರಿಯಿಂದ ಅವರನ್ನು ಬಿಡುಗಡೆಮಾಡುವೆನು. ಅವರಿಗೆ ಕರುಣೆಯನ್ನು ತೋರಿಸಿಯೇ ತೋರಿಸುವೆನು.’ ”

In Other Versions

Jeremiah 33 in the ANGEFD

Jeremiah 33 in the ANTPNG2D

Jeremiah 33 in the AS21

Jeremiah 33 in the BAGH

Jeremiah 33 in the BBPNG

Jeremiah 33 in the BBT1E

Jeremiah 33 in the BDS

Jeremiah 33 in the BEV

Jeremiah 33 in the BHAD

Jeremiah 33 in the BIB

Jeremiah 33 in the BLPT

Jeremiah 33 in the BNT

Jeremiah 33 in the BNTABOOT

Jeremiah 33 in the BNTLV

Jeremiah 33 in the BOATCB

Jeremiah 33 in the BOATCB2

Jeremiah 33 in the BOBCV

Jeremiah 33 in the BOCNT

Jeremiah 33 in the BOECS

Jeremiah 33 in the BOGWICC

Jeremiah 33 in the BOHCB

Jeremiah 33 in the BOHCV

Jeremiah 33 in the BOHLNT

Jeremiah 33 in the BOHNTLTAL

Jeremiah 33 in the BOICB

Jeremiah 33 in the BOILNTAP

Jeremiah 33 in the BOITCV

Jeremiah 33 in the BOKCV

Jeremiah 33 in the BOKHWOG

Jeremiah 33 in the BOKSSV

Jeremiah 33 in the BOLCB

Jeremiah 33 in the BOLCB2

Jeremiah 33 in the BOMCV

Jeremiah 33 in the BONAV

Jeremiah 33 in the BONCB

Jeremiah 33 in the BONLT

Jeremiah 33 in the BONUT2

Jeremiah 33 in the BOPLNT

Jeremiah 33 in the BOSCB

Jeremiah 33 in the BOSNC

Jeremiah 33 in the BOTLNT

Jeremiah 33 in the BOVCB

Jeremiah 33 in the BOYCB

Jeremiah 33 in the BPBB

Jeremiah 33 in the BPH

Jeremiah 33 in the BSB

Jeremiah 33 in the CCB

Jeremiah 33 in the CUV

Jeremiah 33 in the CUVS

Jeremiah 33 in the DBT

Jeremiah 33 in the DGDNT

Jeremiah 33 in the DHNT

Jeremiah 33 in the DNT

Jeremiah 33 in the ELBE

Jeremiah 33 in the EMTV

Jeremiah 33 in the ESV

Jeremiah 33 in the FBV

Jeremiah 33 in the FEB

Jeremiah 33 in the GGMNT

Jeremiah 33 in the GNT

Jeremiah 33 in the HARY

Jeremiah 33 in the HNT

Jeremiah 33 in the IRVA

Jeremiah 33 in the IRVB

Jeremiah 33 in the IRVG

Jeremiah 33 in the IRVH

Jeremiah 33 in the IRVK

Jeremiah 33 in the IRVM

Jeremiah 33 in the IRVM2

Jeremiah 33 in the IRVO

Jeremiah 33 in the IRVP

Jeremiah 33 in the IRVT

Jeremiah 33 in the IRVT2

Jeremiah 33 in the IRVU

Jeremiah 33 in the ISVN

Jeremiah 33 in the JSNT

Jeremiah 33 in the KAPI

Jeremiah 33 in the KBT1ETNIK

Jeremiah 33 in the KBV

Jeremiah 33 in the KJV

Jeremiah 33 in the KNFD

Jeremiah 33 in the LBA

Jeremiah 33 in the LBLA

Jeremiah 33 in the LNT

Jeremiah 33 in the LSV

Jeremiah 33 in the MAAL

Jeremiah 33 in the MBV

Jeremiah 33 in the MBV2

Jeremiah 33 in the MHNT

Jeremiah 33 in the MKNFD

Jeremiah 33 in the MNG

Jeremiah 33 in the MNT

Jeremiah 33 in the MNT2

Jeremiah 33 in the MRS1T

Jeremiah 33 in the NAA

Jeremiah 33 in the NASB

Jeremiah 33 in the NBLA

Jeremiah 33 in the NBS

Jeremiah 33 in the NBVTP

Jeremiah 33 in the NET2

Jeremiah 33 in the NIV11

Jeremiah 33 in the NNT

Jeremiah 33 in the NNT2

Jeremiah 33 in the NNT3

Jeremiah 33 in the PDDPT

Jeremiah 33 in the PFNT

Jeremiah 33 in the RMNT

Jeremiah 33 in the SBIAS

Jeremiah 33 in the SBIBS

Jeremiah 33 in the SBIBS2

Jeremiah 33 in the SBICS

Jeremiah 33 in the SBIDS

Jeremiah 33 in the SBIGS

Jeremiah 33 in the SBIHS

Jeremiah 33 in the SBIIS

Jeremiah 33 in the SBIIS2

Jeremiah 33 in the SBIIS3

Jeremiah 33 in the SBIKS

Jeremiah 33 in the SBIKS2

Jeremiah 33 in the SBIMS

Jeremiah 33 in the SBIOS

Jeremiah 33 in the SBIPS

Jeremiah 33 in the SBISS

Jeremiah 33 in the SBITS

Jeremiah 33 in the SBITS2

Jeremiah 33 in the SBITS3

Jeremiah 33 in the SBITS4

Jeremiah 33 in the SBIUS

Jeremiah 33 in the SBIVS

Jeremiah 33 in the SBT

Jeremiah 33 in the SBT1E

Jeremiah 33 in the SCHL

Jeremiah 33 in the SNT

Jeremiah 33 in the SUSU

Jeremiah 33 in the SUSU2

Jeremiah 33 in the SYNO

Jeremiah 33 in the TBIAOTANT

Jeremiah 33 in the TBT1E

Jeremiah 33 in the TBT1E2

Jeremiah 33 in the TFTIP

Jeremiah 33 in the TFTU

Jeremiah 33 in the TGNTATF3T

Jeremiah 33 in the THAI

Jeremiah 33 in the TNFD

Jeremiah 33 in the TNT

Jeremiah 33 in the TNTIK

Jeremiah 33 in the TNTIL

Jeremiah 33 in the TNTIN

Jeremiah 33 in the TNTIP

Jeremiah 33 in the TNTIZ

Jeremiah 33 in the TOMA

Jeremiah 33 in the TTENT

Jeremiah 33 in the UBG

Jeremiah 33 in the UGV

Jeremiah 33 in the UGV2

Jeremiah 33 in the UGV3

Jeremiah 33 in the VBL

Jeremiah 33 in the VDCC

Jeremiah 33 in the YALU

Jeremiah 33 in the YAPE

Jeremiah 33 in the YBVTP

Jeremiah 33 in the ZBP