Jeremiah 35 (BOKCV2)
1 ಯೋಷೀಯನ ಮಗನಾದ ಯೆಹೂದದ ಅರಸ ಯೆಹೋಯಾಕೀಮನ ಕಾಲದಲ್ಲಿ ಯೆರೆಮೀಯನಾದ ನನಗೆ ಯೆಹೋವ ದೇವರಿಂದ ಬಂದ ವಾಕ್ಯ ಇದು: 2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರನ್ನು ಯೆಹೋವ ದೇವರ ಆಲಯದ ಒಂದು ಕೋಣೆಯೊಳಕ್ಕೆ ಕರೆದು, ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.” 3 ಆಗ ನಾನು ಹಬಚ್ಚಿನ್ಯನ ಮಗ, ಯೆರೆಮೀಯನ ಮಗನಾದ, ಯಾಜನ್ಯನೂ, ಅವನ ಸಹೋದರರನ್ನೂ, ಅವನ ಪುತ್ರರೆಲ್ಲರನ್ನೂ ರೇಕಾಬನ ಸಮಸ್ತ ಮನೆಯವರನ್ನೂ ಕರೆಯುವುದಕ್ಕೆ ಹೋದೆನು. 4 ಕರೆದುಕೊಂಡು ಯೆಹೋವ ದೇವರ ಆಲಯಕ್ಕೆ ದ್ವಾರಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ ಹಾನಾನನ ಪುತ್ರರ ಕೊಠಡಿಗೆ ತಂದು, 5 ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಹೂಜೆಗಳನ್ನೂ, ಪಂಚ ಪಾತ್ರೆಗಳನ್ನೂ ಇಟ್ಟು ಅವರಿಗೆ, “ದ್ರಾಕ್ಷಾರಸ ಕುಡಿಯಿರಿ,” ಎಂದನು. 6 ಆದರೆ ಅವರು, “ನಾವು ದ್ರಾಕ್ಷಾರಸ ಕುಡಿಯುವುದಿಲ್ಲ; ಏಕೆಂದರೆ ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ ಈ ಆಜ್ಞೆಯನ್ನು ಕೊಟ್ಟನು. ಅದು ಏನೆಂದರೆ ನೀವಾದರೂ, ನಿಮ್ಮ ಮಕ್ಕಳಾದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬೇಡಿರಿ; 7 ಮನೆ ಕಟ್ಟಬೇಡಿರಿ, ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷಿತೋಟವನ್ನು ನೆಡಬೇಡಿರಿ, ಅಂಥದ್ದು ನಿಮಗಿರಬಾರದು. ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿವಸಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು. 8 ಈ ಪ್ರಕಾರ ನಾವು ನಮ್ಮ ಪೂರ್ವಜನಾದ ರೇಕಾಬನ ಮಗ ಯೆಹೋನಾದಾಬನ ಮಾತನ್ನು, ಅವನು ನಮಗೆ ಆಜ್ಞಾಪಿಸಿದ್ದೆಲ್ಲದರಲ್ಲಿ ನಾವೂ, ನಮ್ಮ ಹೆಂಡತಿಯರೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ನಮ್ಮ ದಿವಸಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ, 9 ವಾಸಮಾಡುವುದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ಇದ್ದೇವೆ. ನಮಗೆ ದ್ರಾಕ್ಷಿ ತೋಟಗಳೂ, ಹೊಲಗಳೂ, ಬೀಜವೂ ಇಲ್ಲ. 10 ಗುಡಾರಗಳಲ್ಲಿ ವಾಸಮಾಡುತ್ತೇವೆ. ನಮ್ಮ ಪೂರ್ವಜನಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಕೇಳಿ ನಡೆದಿದ್ದೇವೆ. 11 ಆದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ, ‘ನಾವು ಬನ್ನಿ, ಕಸ್ದೀಯರ ದಂಡಿಗೂ, ಅರಾಮಿನ ದಂಡಿಗೂ ತಪ್ಪಿಸಿಕೊಂಡು, ಯೆರೂಸಲೇಮಿಗೆ ಹೋಗೋಣ,’ ಎಂದೆವು. ಹೀಗೆ ಯೆರೂಸಲೇಮಿನಲ್ಲಿಯೇ ಉಳಿದುಕೊಂಡಿದ್ದೇವೆ,” ಎಂದರು. 12 ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ, 13 “ಇಸ್ರಾಯೇಲರ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಆದ ನಾನು ಹೇಳುವುದು ಇದು: ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆಂದು ತಿಳಿಸು: ‘ನೀವು ಬುದ್ಧಿ ತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೇ?’ ಎಂದು ಯೆಹೋವ ದೇವರು ಕೇಳುತ್ತಾರೆ. 14 ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.” 15 ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳುಹಿಸುತ್ತಾ ಬಂದೆ. “ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ, ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ವಾಸಿಸುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ.” ಆದರೆ ನೀವು ಕೇಳಲಿಲ್ಲ. ಕಿವಿಗೊಡಲೂ ಇಲ್ಲ. 16 ರೇಕಾಬನ ಮಗ ಯೆಹೋನಾದಾಬನ ಸಂತಾನದವರು ತಮ್ಮ ಪೂರ್ವಜನು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸಿದರು. ಆದರೆ ಈ ಜನರು ನನ್ನ ಮಾತನ್ನು ಕೇಳದೆ ಹೋದರು. 17 “ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರೂ, ಇಸ್ರಾಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ‘ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ, ಅವರು ಕೇಳಲಿಲ್ಲ; ಕೂಗಿದರೂ ಉತ್ತರ ಕೊಡಲಿಲ್ಲ.’ ” 18 ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆನ್ನುತ್ತಾರೆ: ನೀವು ನಿಮ್ಮ ಪೂರ್ವಜನಾದ ಯೆಹೋನಾದಾಬನ ಅಪ್ಪಣೆಯನ್ನು ಕೇಳಿ, ಅವನ ಎಲ್ಲ ವಿಧಿಗಳನ್ನು ಅನುಸರಿಸಿ, ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ 19 ರೇಕಾಬನ ಮಗ ಯೋನಾದಾಬನ ಸಂತಾನದವರಲ್ಲಿ ನನ್ನ ಸಮ್ಮುಖ ಸೇವೆ ಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು, ಇಸ್ರಾಯೇಲರ ದೇವರೂ ಸರ್ವಶಕ್ತರೂ ಆದ ಯೆಹೋವ ದೇವರು ಇದನ್ನು ನುಡಿದಿದ್ದಾರೆ,” ಎಂದನು.
In Other Versions
Jeremiah 35 in the ANGEFD
Jeremiah 35 in the ANTPNG2D
Jeremiah 35 in the AS21
Jeremiah 35 in the BAGH
Jeremiah 35 in the BBPNG
Jeremiah 35 in the BBT1E
Jeremiah 35 in the BDS
Jeremiah 35 in the BEV
Jeremiah 35 in the BHAD
Jeremiah 35 in the BIB
Jeremiah 35 in the BLPT
Jeremiah 35 in the BNT
Jeremiah 35 in the BNTABOOT
Jeremiah 35 in the BNTLV
Jeremiah 35 in the BOATCB
Jeremiah 35 in the BOATCB2
Jeremiah 35 in the BOBCV
Jeremiah 35 in the BOCNT
Jeremiah 35 in the BOECS
Jeremiah 35 in the BOGWICC
Jeremiah 35 in the BOHCB
Jeremiah 35 in the BOHCV
Jeremiah 35 in the BOHLNT
Jeremiah 35 in the BOHNTLTAL
Jeremiah 35 in the BOICB
Jeremiah 35 in the BOILNTAP
Jeremiah 35 in the BOITCV
Jeremiah 35 in the BOKCV
Jeremiah 35 in the BOKHWOG
Jeremiah 35 in the BOKSSV
Jeremiah 35 in the BOLCB
Jeremiah 35 in the BOLCB2
Jeremiah 35 in the BOMCV
Jeremiah 35 in the BONAV
Jeremiah 35 in the BONCB
Jeremiah 35 in the BONLT
Jeremiah 35 in the BONUT2
Jeremiah 35 in the BOPLNT
Jeremiah 35 in the BOSCB
Jeremiah 35 in the BOSNC
Jeremiah 35 in the BOTLNT
Jeremiah 35 in the BOVCB
Jeremiah 35 in the BOYCB
Jeremiah 35 in the BPBB
Jeremiah 35 in the BPH
Jeremiah 35 in the BSB
Jeremiah 35 in the CCB
Jeremiah 35 in the CUV
Jeremiah 35 in the CUVS
Jeremiah 35 in the DBT
Jeremiah 35 in the DGDNT
Jeremiah 35 in the DHNT
Jeremiah 35 in the DNT
Jeremiah 35 in the ELBE
Jeremiah 35 in the EMTV
Jeremiah 35 in the ESV
Jeremiah 35 in the FBV
Jeremiah 35 in the FEB
Jeremiah 35 in the GGMNT
Jeremiah 35 in the GNT
Jeremiah 35 in the HARY
Jeremiah 35 in the HNT
Jeremiah 35 in the IRVA
Jeremiah 35 in the IRVB
Jeremiah 35 in the IRVG
Jeremiah 35 in the IRVH
Jeremiah 35 in the IRVK
Jeremiah 35 in the IRVM
Jeremiah 35 in the IRVM2
Jeremiah 35 in the IRVO
Jeremiah 35 in the IRVP
Jeremiah 35 in the IRVT
Jeremiah 35 in the IRVT2
Jeremiah 35 in the IRVU
Jeremiah 35 in the ISVN
Jeremiah 35 in the JSNT
Jeremiah 35 in the KAPI
Jeremiah 35 in the KBT1ETNIK
Jeremiah 35 in the KBV
Jeremiah 35 in the KJV
Jeremiah 35 in the KNFD
Jeremiah 35 in the LBA
Jeremiah 35 in the LBLA
Jeremiah 35 in the LNT
Jeremiah 35 in the LSV
Jeremiah 35 in the MAAL
Jeremiah 35 in the MBV
Jeremiah 35 in the MBV2
Jeremiah 35 in the MHNT
Jeremiah 35 in the MKNFD
Jeremiah 35 in the MNG
Jeremiah 35 in the MNT
Jeremiah 35 in the MNT2
Jeremiah 35 in the MRS1T
Jeremiah 35 in the NAA
Jeremiah 35 in the NASB
Jeremiah 35 in the NBLA
Jeremiah 35 in the NBS
Jeremiah 35 in the NBVTP
Jeremiah 35 in the NET2
Jeremiah 35 in the NIV11
Jeremiah 35 in the NNT
Jeremiah 35 in the NNT2
Jeremiah 35 in the NNT3
Jeremiah 35 in the PDDPT
Jeremiah 35 in the PFNT
Jeremiah 35 in the RMNT
Jeremiah 35 in the SBIAS
Jeremiah 35 in the SBIBS
Jeremiah 35 in the SBIBS2
Jeremiah 35 in the SBICS
Jeremiah 35 in the SBIDS
Jeremiah 35 in the SBIGS
Jeremiah 35 in the SBIHS
Jeremiah 35 in the SBIIS
Jeremiah 35 in the SBIIS2
Jeremiah 35 in the SBIIS3
Jeremiah 35 in the SBIKS
Jeremiah 35 in the SBIKS2
Jeremiah 35 in the SBIMS
Jeremiah 35 in the SBIOS
Jeremiah 35 in the SBIPS
Jeremiah 35 in the SBISS
Jeremiah 35 in the SBITS
Jeremiah 35 in the SBITS2
Jeremiah 35 in the SBITS3
Jeremiah 35 in the SBITS4
Jeremiah 35 in the SBIUS
Jeremiah 35 in the SBIVS
Jeremiah 35 in the SBT
Jeremiah 35 in the SBT1E
Jeremiah 35 in the SCHL
Jeremiah 35 in the SNT
Jeremiah 35 in the SUSU
Jeremiah 35 in the SUSU2
Jeremiah 35 in the SYNO
Jeremiah 35 in the TBIAOTANT
Jeremiah 35 in the TBT1E
Jeremiah 35 in the TBT1E2
Jeremiah 35 in the TFTIP
Jeremiah 35 in the TFTU
Jeremiah 35 in the TGNTATF3T
Jeremiah 35 in the THAI
Jeremiah 35 in the TNFD
Jeremiah 35 in the TNT
Jeremiah 35 in the TNTIK
Jeremiah 35 in the TNTIL
Jeremiah 35 in the TNTIN
Jeremiah 35 in the TNTIP
Jeremiah 35 in the TNTIZ
Jeremiah 35 in the TOMA
Jeremiah 35 in the TTENT
Jeremiah 35 in the UBG
Jeremiah 35 in the UGV
Jeremiah 35 in the UGV2
Jeremiah 35 in the UGV3
Jeremiah 35 in the VBL
Jeremiah 35 in the VDCC
Jeremiah 35 in the YALU
Jeremiah 35 in the YAPE
Jeremiah 35 in the YBVTP
Jeremiah 35 in the ZBP