Jeremiah 35 (IRVK)

1 ಯೋಷೀಯನ ಮಗನೂ, ಯೆಹೂದದ ಅರಸನೂ ಆದ ಯೆಹೋಯಾಕೀಮನ ಕಾಲದಲ್ಲಿ ಯೆಹೋವನು ಯೆರೆಮೀಯನಿಗೆ ದಯಪಾಲಿಸಿದ ವಾಕ್ಯ, 2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ ಅವರ ಸಂಗಡ ಮಾತನಾಡಿ ಅವರನ್ನು ಯೆಹೋವನ ಆಲಯದ ಒಂದು ಕೋಣೆಯೊಳಕ್ಕೆ ಕರೆದು ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು” ಎಂಬುದೇ. 3 ಆಗ ಪ್ರವಾದಿಯು ಯೆರೆಮೀಯನ ಮಗನೂ ಹಬಚ್ಚಿನ್ಯನ ಮೊಮ್ಮಗನೂ ಆದ ಯಾಜನ್ಯನನ್ನು, ಅವನ ಅಣ್ಣತಮ್ಮಂದಿರನ್ನು, ಅವನ ಎಲ್ಲಾ ಮಕ್ಕಳನ್ನು, ಅಂತು ರೇಕಾಬನ ಮನೆತನದವರೆಲ್ಲರನ್ನೂ 4 ಯೆಹೋವನ ಆಲಯಕ್ಕೆ ಕರೆದು ಇಗ್ದಲ್ಯನ ಮಗನೂ, ದೇವರ ಮನುಷ್ಯನೂ ಆದ ಹಾನಾನನ ಮಕ್ಕಳ ಕೋಣೆಯೊಳಕ್ಕೆ, ಅಂದರೆ ಸರದಾರರ ಕೋಣೆಯ ಪಕ್ಕದಲ್ಲಿ, ಶಲ್ಲೂಮನ ಮಗನೂ ದ್ವಾರಪಾಲಕನೂ ಆದ ಮಾಸೇಯನ ಕೋಣೆಯ ಮೇಲ್ಗಡೆ ಇರುವ ಕೋಣೆಯೊಳಕ್ಕೆ ಬರಮಾಡಿದನು. 5 ಆ ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಬಟ್ಟಲುಗಳನ್ನೂ, ಪಂಚಪಾತ್ರೆಗಳನ್ನೂ ಇಟ್ಟು, “ದ್ರಾಕ್ಷಾರಸವನ್ನು ಕುಡಿಯಿರಿ” ಅಂದನು. 6 ಅದಕ್ಕೆ ಅವರು, “ನಾವು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ, ನಮ್ಮ ಪಿತೃವಾದ ರೇಕಾಬನ ಮಗನಾದ ಯೋನಾದಾಬನು ನಮಗೆ, ‘ನೀವಾಗಲಿ ನಿಮ್ಮ ಸಂತಾನದವರಾಗಲಿ ಯುಗಯುಗಾಂತರಕ್ಕೂ ದ್ರಾಕ್ಷಾರಸ ಕುಡಿಯಬಾರದು, 7 ಮನೆಕಟ್ಟಬಾರದು, ಬೀಜ ಬಿತ್ತಬಾರದು, ದ್ರಾಕ್ಷಿತೋಟ ಮಾಡಬಾರದು, ಅನುಭವಿಸಲೂ ಬಾರದು, ನಿಮ್ಮ ಜೀವಮಾನವೆಲ್ಲಾ ಗುಡಾರಗಳಲ್ಲೇ ವಾಸಿಸಬೇಕು, ಇದರಿಂದ ನೀವು ತಂಗುವ ದೇಶದಲ್ಲಿ ನಿಮಗೆ ದೀರ್ಘಾಯುಷ್ಯವಾಗವುದು’” ಎಂದು ಅಪ್ಪಣೆಕೊಟ್ಟಿದ್ದಾನೆ. 8 ನಮ್ಮ ಪಿತೃವಾದ ರೇಕಾಬನ ಮಗನಾಗಿರುವ ಯೋನಾದಾಬನು ನಮಗೆ ಕೊಟ್ಟ ಈ ಅಪ್ಪಣೆಯನ್ನು, ಎಲ್ಲಾ ವಿಷಯದಲ್ಲಿಯೂ ಕೈಗೊಳ್ಳುತ್ತಿದ್ದೇವೆ; ನಾವಾಗಲಿ, ನಮ್ಮ ಹೆಂಡತಿಯರಾಗಲಿ, ಗಂಡು ಹೆಣ್ಣುಮಕ್ಕಳಾಗಲಿ ಜೀವಮಾನದಲ್ಲೆಲ್ಲಾ ದ್ರಾಕ್ಷಾರಸವನ್ನು ಕುಡಿಯುವುದಿಲ್ಲ. 9 ನಮ್ಮ ವಾಸಕ್ಕೆ ಮನೆಯನ್ನು ಕಟ್ಟುವುದಿಲ್ಲ; ನಮಗೆ ದ್ರಾಕ್ಷಿತೋಟ, ಹೊಲ ಮತ್ತು ಬೀಜಗಳೂ ಇಲ್ಲ. 10 ನಾವು ಗುಡಾರಗಳಲ್ಲಿ ವಾಸಿಸುತ್ತಾ ನಮ್ಮ ಪಿತೃವಾದ ಯೋನಾದಾಬನು ನಮಗೆ ವಿಧಿಸಿದ್ದನ್ನೆಲ್ಲಾ ಶಿರಸಾವಹಿಸಿ ನಡೆಸುತ್ತಿದ್ದೇವೆ. 11 ಆದರೆ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ದೇಶದೊಳಗೆ ನುಗ್ಗಿದಾಗ, “ಕಸ್ದೀಯರ ಮತ್ತು ಅರಾಮ್ಯರ ಸೈನ್ಯಗಳ ಮುಂದೆ ನಿಲ್ಲದೆ ಯೆರೂಸಲೇಮಿಗೆ ಹೋಗೋಣ ಬನ್ನಿ ಎಂದುಕೊಂಡು ಯೆರೂಸಲೇಮಿನಲ್ಲಿ ವಾಸಿಸುತ್ತಿದ್ದೇವೆ” ಎಂದು ಹೇಳಿದರು. 12 ಆಗ ಯೆಹೋವನು ಯೆರೆಮೀಯನಿಗೆ ಈ ಮಾತನ್ನು ದಯಪಾಲಿಸಿದನು, 13 “ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆ ಹೇಳು, ‘ಇದರಿಂದ ನೀವು ಬುದ್ಧಿತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೋ?’ ಎಂದು ಯೆಹೋವನು ಅನ್ನುತ್ತಾನೆ. 14 ರೇಕಾಬನ ಮಗನಾದ ಯೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ; ಅವರು ಇಂದಿನ ವರೆಗೂ ಕುಡಿಯಲಿಲ್ಲ, ತಮ್ಮ ಪಿತೃವಿನ ಆಜ್ಞೆಯನ್ನು ಕೈಕೊಂಡಿದ್ದಾರೆ; ನೀವೋ, ನಾನು ನಿಮಗೆ ಎಡೆಬಿಡದೆ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ. 15 ಇದಲ್ಲದೆ ನಾನು ನನ್ನ ಸೇವಕರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿತ್ಯವೂ ಕಳುಹಿಸುತ್ತಾ, ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ, ಅನ್ಯದೇವತೆಗಳನ್ನು ಹಿಂಬಾಲಿಸಿ ಸೇವಿಸದಿರಿ; ಹೀಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಿಕರಿಗೂ ದಯಪಾಲಿಸಿದ ದೇಶದಲ್ಲಿ ನೀವು ಸುಖವಾಸಿಗಳಾಗಿರುವಿರಿ ಎಂದು ಹೇಳಿಸಿದರೂ ನೀವು ನನ್ನ ಮಾತನ್ನು ಕೇಳಲಿಲ್ಲ, ಕಿವಿಗೊಡಲೂ ಇಲ್ಲ. 16 ರೇಕಾಬನ ಮಗನಾದ ಯೋನಾದಾಬನ ಸಂತಾನದವರು ತಮ್ಮ ಪಿತೃವು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸುತ್ತಿರುವಲ್ಲಿ ಈ ಜನರು ನನ್ನ ಮಾತನ್ನು ಕೇಳದೆ ಹೋದುದರಿಂದ, 17 ಇಗೋ, ನಾನು ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ಕೊಟ್ಟ ಶಾಪದ ಕೇಡನ್ನೆಲ್ಲಾ ಅವರ ಮೇಲೆ ಬರಮಾಡುವೆನು; ನಾನು ಹೇಳಿದರೂ ಅವರು ಕೇಳಲಿಲ್ಲ, ಕೂಗಿದರೂ ಉತ್ತರಕೊಡಲಿಲ್ಲ ಎಂದು ಸೇನಾಧೀಶ್ವರ ಸ್ವಾಮಿಯೂ, ಇಸ್ರಾಯೇಲರ ದೇವರೂ ಆದ ಯೆಹೋವನು ಅನ್ನುತ್ತಾನೆ” ಎಂಬುದೇ. 18 ಮತ್ತು ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀವು ನಿಮ್ಮ ಪಿತೃವಾದ ಯೋನಾದಾಬನ ಅಪ್ಪಣೆಯನ್ನು ಕೇಳಿ ಅವನ ಸಕಲ ವಿಧಿಗಳನ್ನು ಅನುಸರಿಸಿ ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ, 19 ರೇಕಾಬನ ಮಗನಾದ ಯೋನಾದಾಬನ ಸಂತಾನದವರೊಳಗೆ ನನ್ನ ಸಮ್ಮುಖದಲ್ಲಿ ಸೇವೆಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು. ಇಸ್ರಾಯೇಲರ ದೇವರೂ, ಸೇನಾಧೀಶ್ವರನೂ ಆದ ಯೆಹೋವನು ಇದನ್ನು ನುಡಿದಿದ್ದಾನೆ’” ಎಂಬುದೇ.

In Other Versions

Jeremiah 35 in the ANGEFD

Jeremiah 35 in the ANTPNG2D

Jeremiah 35 in the AS21

Jeremiah 35 in the BAGH

Jeremiah 35 in the BBPNG

Jeremiah 35 in the BBT1E

Jeremiah 35 in the BDS

Jeremiah 35 in the BEV

Jeremiah 35 in the BHAD

Jeremiah 35 in the BIB

Jeremiah 35 in the BLPT

Jeremiah 35 in the BNT

Jeremiah 35 in the BNTABOOT

Jeremiah 35 in the BNTLV

Jeremiah 35 in the BOATCB

Jeremiah 35 in the BOATCB2

Jeremiah 35 in the BOBCV

Jeremiah 35 in the BOCNT

Jeremiah 35 in the BOECS

Jeremiah 35 in the BOGWICC

Jeremiah 35 in the BOHCB

Jeremiah 35 in the BOHCV

Jeremiah 35 in the BOHLNT

Jeremiah 35 in the BOHNTLTAL

Jeremiah 35 in the BOICB

Jeremiah 35 in the BOILNTAP

Jeremiah 35 in the BOITCV

Jeremiah 35 in the BOKCV

Jeremiah 35 in the BOKCV2

Jeremiah 35 in the BOKHWOG

Jeremiah 35 in the BOKSSV

Jeremiah 35 in the BOLCB

Jeremiah 35 in the BOLCB2

Jeremiah 35 in the BOMCV

Jeremiah 35 in the BONAV

Jeremiah 35 in the BONCB

Jeremiah 35 in the BONLT

Jeremiah 35 in the BONUT2

Jeremiah 35 in the BOPLNT

Jeremiah 35 in the BOSCB

Jeremiah 35 in the BOSNC

Jeremiah 35 in the BOTLNT

Jeremiah 35 in the BOVCB

Jeremiah 35 in the BOYCB

Jeremiah 35 in the BPBB

Jeremiah 35 in the BPH

Jeremiah 35 in the BSB

Jeremiah 35 in the CCB

Jeremiah 35 in the CUV

Jeremiah 35 in the CUVS

Jeremiah 35 in the DBT

Jeremiah 35 in the DGDNT

Jeremiah 35 in the DHNT

Jeremiah 35 in the DNT

Jeremiah 35 in the ELBE

Jeremiah 35 in the EMTV

Jeremiah 35 in the ESV

Jeremiah 35 in the FBV

Jeremiah 35 in the FEB

Jeremiah 35 in the GGMNT

Jeremiah 35 in the GNT

Jeremiah 35 in the HARY

Jeremiah 35 in the HNT

Jeremiah 35 in the IRVA

Jeremiah 35 in the IRVB

Jeremiah 35 in the IRVG

Jeremiah 35 in the IRVH

Jeremiah 35 in the IRVM

Jeremiah 35 in the IRVM2

Jeremiah 35 in the IRVO

Jeremiah 35 in the IRVP

Jeremiah 35 in the IRVT

Jeremiah 35 in the IRVT2

Jeremiah 35 in the IRVU

Jeremiah 35 in the ISVN

Jeremiah 35 in the JSNT

Jeremiah 35 in the KAPI

Jeremiah 35 in the KBT1ETNIK

Jeremiah 35 in the KBV

Jeremiah 35 in the KJV

Jeremiah 35 in the KNFD

Jeremiah 35 in the LBA

Jeremiah 35 in the LBLA

Jeremiah 35 in the LNT

Jeremiah 35 in the LSV

Jeremiah 35 in the MAAL

Jeremiah 35 in the MBV

Jeremiah 35 in the MBV2

Jeremiah 35 in the MHNT

Jeremiah 35 in the MKNFD

Jeremiah 35 in the MNG

Jeremiah 35 in the MNT

Jeremiah 35 in the MNT2

Jeremiah 35 in the MRS1T

Jeremiah 35 in the NAA

Jeremiah 35 in the NASB

Jeremiah 35 in the NBLA

Jeremiah 35 in the NBS

Jeremiah 35 in the NBVTP

Jeremiah 35 in the NET2

Jeremiah 35 in the NIV11

Jeremiah 35 in the NNT

Jeremiah 35 in the NNT2

Jeremiah 35 in the NNT3

Jeremiah 35 in the PDDPT

Jeremiah 35 in the PFNT

Jeremiah 35 in the RMNT

Jeremiah 35 in the SBIAS

Jeremiah 35 in the SBIBS

Jeremiah 35 in the SBIBS2

Jeremiah 35 in the SBICS

Jeremiah 35 in the SBIDS

Jeremiah 35 in the SBIGS

Jeremiah 35 in the SBIHS

Jeremiah 35 in the SBIIS

Jeremiah 35 in the SBIIS2

Jeremiah 35 in the SBIIS3

Jeremiah 35 in the SBIKS

Jeremiah 35 in the SBIKS2

Jeremiah 35 in the SBIMS

Jeremiah 35 in the SBIOS

Jeremiah 35 in the SBIPS

Jeremiah 35 in the SBISS

Jeremiah 35 in the SBITS

Jeremiah 35 in the SBITS2

Jeremiah 35 in the SBITS3

Jeremiah 35 in the SBITS4

Jeremiah 35 in the SBIUS

Jeremiah 35 in the SBIVS

Jeremiah 35 in the SBT

Jeremiah 35 in the SBT1E

Jeremiah 35 in the SCHL

Jeremiah 35 in the SNT

Jeremiah 35 in the SUSU

Jeremiah 35 in the SUSU2

Jeremiah 35 in the SYNO

Jeremiah 35 in the TBIAOTANT

Jeremiah 35 in the TBT1E

Jeremiah 35 in the TBT1E2

Jeremiah 35 in the TFTIP

Jeremiah 35 in the TFTU

Jeremiah 35 in the TGNTATF3T

Jeremiah 35 in the THAI

Jeremiah 35 in the TNFD

Jeremiah 35 in the TNT

Jeremiah 35 in the TNTIK

Jeremiah 35 in the TNTIL

Jeremiah 35 in the TNTIN

Jeremiah 35 in the TNTIP

Jeremiah 35 in the TNTIZ

Jeremiah 35 in the TOMA

Jeremiah 35 in the TTENT

Jeremiah 35 in the UBG

Jeremiah 35 in the UGV

Jeremiah 35 in the UGV2

Jeremiah 35 in the UGV3

Jeremiah 35 in the VBL

Jeremiah 35 in the VDCC

Jeremiah 35 in the YALU

Jeremiah 35 in the YAPE

Jeremiah 35 in the YBVTP

Jeremiah 35 in the ZBP