Jeremiah 40 (BOKCV2)
1 ಕಾವಲಿನವರ ಅಧಿಪತಿಯಾದ ನೆಬೂಜರದಾನನು ಯೆರೆಮೀಯನನ್ನು ಸಂಕೋಲೆಗಳಿಂದ ಕಟ್ಟಿಸಿ, ಬಾಬಿಲೋನಿಗೆ ಒಯ್ಯುವ ಯೆರೂಸಲೇಮಿನ ಯೆಹೂದದ ಸೆರೆಯವರೆಲ್ಲರ ಮಧ್ಯದಲ್ಲಿ ತೆಗೆದುಕೊಂಡುಹೋಗಿ, ರಾಮದಿಂದ ಬಿಟ್ಟು ಕಳುಹಿಸಿದ ಮೇಲೆ, ಯೆರೆಮೀಯನಿಗೆ ಯೆಹೋವ ದೇವರಿಂದ ವಾಕ್ಯವು ಬಂದಿತು. 2 ಕಾವಲಿನವರ ಅಧಿಪತಿಯು ಯೆರೆಮೀಯನನ್ನು ಕರೆಯಿಸಿ, ಅವನಿಗೆ ಹೇಳಿದ್ದೇನೆಂದರೆ, “ನಿನ್ನ ದೇವರಾದ ಯೆಹೋವ ದೇವರು ಈ ಸ್ಥಳಕ್ಕೆ ಈ ಕೇಡನ್ನು ಪ್ರಕಟಿಸಿದ್ದಾರೆ. ಹೇಳಿದ ಪ್ರಕಾರವೇ ಯೆಹೋವ ದೇವರು ಅದನ್ನು ಬರಮಾಡಿದ್ದಾನೆ. 3 ನೀವು ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿ, ಆತನ ಮಾತುಗಳನ್ನು ಕೇಳದೆ ಹೋದದ್ದರಿಂದಲೇ ಈ ಕಾರ್ಯವು ನಿಮಗೆ ಸಂಭವಿಸಿದೆ. 4 ಈಗ ಇಗೋ, ನಿನ್ನ ಕೈಗೆ ಹಾಕಿದ ಬೇಡಿಗಳನ್ನು ಈ ದಿವಸ ತೆಗೆಸಿದ್ದೇನೆ. ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ನಿನಗೆ ಒಳ್ಳೆಯದೆಂದು ತೋಚಿದರೆ ಬಾ, ನಾನು ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುವೆನು; ಆದರೆ ನನ್ನ ಸಂಗಡ ಬಾಬಿಲೋನಿಗೆ ಬರುವುದಕ್ಕೆ ನಿನಗೆ ಕೆಟ್ಟದ್ದೆಂದು ತೋಚಿದರೆ ಅದನ್ನು ಬಿಡು. ಇಗೋ, ದೇಶವೆಲ್ಲಾ ನಿನ್ನ ಮುಂದೆ ಇದೆ; ಎಲ್ಲಿ ಹೋಗುವುದಕ್ಕೆ ನಿನಗೆ ಒಳ್ಳೆಯದೆಂದೂ, ಸರಿಯೆಂದೂ ಕಾಣುತ್ತದೋ, ಅಲ್ಲಿಗೆ ಹೋಗು,” ಎಂಬುದು. 5 ಯೆರೆಮೀಯನು ಇನ್ನು ಹಿಂದಿರುಗದೆ ಇರುವಾಗ, ನೆಬೂಜರದಾನನು ಹೇಳಿದ್ದೇನೆಂದರೆ: “ಬಾಬಿಲೋನಿನ ಅರಸನು ಯೆಹೂದದ ಪಟ್ಟಣಗಳ ಮೇಲೆ ಅಧಿಕಾರಿಯಾಗಿ ಇಟ್ಟ ಶಾಫಾನನ ಮೊಮ್ಮಗನೂ ಅಹೀಕಾಮನ ಮಗನೂ ಆದ ಗೆದಲ್ಯನ ಬಳಿಗೆ ತಿರುಗಿಕೋ; ಅವನ ಸಂಗಡ ಜನರೊಳಗೆ ವಾಸಮಾಡು. ಇಲ್ಲವೆ ಎಲ್ಲಿ ಹೋಗುವುದಕ್ಕೆ ನಿನಗೆ ಸರಿಯಾಗಿ ಕಾಣುತ್ತದೋ, ಅಲ್ಲಿಗೆ ಹೋಗು,” ಎಂದು ಹೇಳಿ,ಕಾವಲಿನವರ ಅಧಿಪತಿಯು ಅವನಿಗೆ ಆಹಾರವನ್ನೂ, ಬಹುಮಾನವನ್ನೂ ಕೊಟ್ಟು ಕಳುಹಿಸಿಬಿಟ್ಟನು. 6 ಯೆರೆಮೀಯನು ಅಹೀಕಾಮನ ಮಗ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಹೋಗಿ, ದೇಶದಲ್ಲಿ ಉಳಿದ ಜನರ ಸಂಗಡ ಅವನ ಬಳಿಯಲ್ಲಿ ವಾಸಮಾಡಿದನು. 7 ಬಾಬಿಲೋನಿನ ಅರಸನು ಅಹೀಕಾಮನ ಮಗ ಗೆದಲ್ಯನನ್ನು ರಾಜ್ಯಪಾಲನಾಗಿ ಮಾಡಿದ್ದಾನೆಂಬ ಸುದ್ದಿಯನ್ನು ಮತ್ತು ಬಾಬಿಲೋನಿಗೆ ಸೆರೆಹೋಗದೆ ಇದ್ದ ದೇಶಿಯರಲ್ಲಿ ಬಡವರಾದ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ ಅವನ ಅಧಿಕಾರಕ್ಕೆ ಒಪ್ಪಿಸಿದ್ದಾನೆಂಬ ಸುದ್ದಿಯನ್ನು ಉಳಿದಿದ್ದ ಯೆಹೂದ ಸೇನಾಧಿಪತಿಗಳೂ ಅವರ ಜನರೂ ಕೇಳಿದಾಗ, 8 ನೆತನ್ಯನ ಮಗ ಇಷ್ಮಾಯೇಲನೂ; ಕಾರೇಹನ ಮಗ ಯೋಹಾನಾನ್, ಯೋನಾತಾನ್; ತನ್ಹುಮೆತನ ಮಗ ಸೆರಾಯ್; ನೆಟೋಫದವನಾದ ಏಫಯನ ಪುತ್ರರೂ; ಮಾಕಾತ್ಯರಲ್ಲಿ ಒಬ್ಬನ ಮಗ ಯಾಜನ್ಯ; ಇವರೆಲ್ಲರೂ ತಮ್ಮ ಜನರಸಹಿತವಾಗಿ ಮಿಚ್ಪದಲ್ಲಿದ್ದ ಗೆದಲ್ಯನ ಬಳಿಗೆ ಬಂದರು. 9 ಆಗ ಶಾಫಾನನ ಮಗ ಅಹೀಕಾಮನ ಮಗ ಗೆದಲ್ಯನು ಅವರಿಗೂ, ಅವರ ಜನರಿಗೂ ಪ್ರಮಾಣಮಾಡಿ, “ ‘ಬಾಬಿಲೋನಿಯರಿಗೆ ಸೇವೆ ಮಾಡುವುದಕ್ಕೆ ಭಯಪಡಬೇಡಿರಿ; ದೇಶದಲ್ಲಿ ವಾಸವಾಗಿದ್ದು, ಬಾಬಿಲೋನಿನ ಅರಸನಿಗೆ ಸೇವೆಮಾಡಿರಿ; ಆಗ ನಿಮಗೆ ಒಳ್ಳೆಯದಾಗುವುದು,’ ಎಂದನು. 10 ನಾನಾದರೋ ಇಗೋ, ನಾನು ನಮ್ಮ ಬಳಿಗೆ ಬರುವ ಬಾಬಿಲೋನಿಯರ ಹತ್ತಿರ ಕಾದುಕೊಳ್ಳುವುದಕ್ಕೆ ಮಿಚ್ಪದಲ್ಲಿ ವಾಸಮಾಡುವೆನು. ಆದರೆ ನೀವು ದ್ರಾಕ್ಷಾರಸವನ್ನೂ, ಹಣ್ಣುಗಳನ್ನೂ, ಎಣ್ಣೆಯನ್ನೂ ಕೂಡಿಸಿ, ನಿಮ್ಮ ಪಾತ್ರೆಗಳಲ್ಲಿ ಇಟ್ಟು, ನೀವು ಹಿಡಿದಿರುವ ನಿಮ್ಮ ಪಟ್ಟಣಗಳಲ್ಲಿ ವಾಸವಾಗಿರಿ,” ಎಂಬುದು. 11 ಹಾಗೆಯೇ ಮೋವಾಬಿನಲ್ಲಿಯೂ, ಅಮ್ಮೋನನ ಮಕ್ಕಳಲ್ಲಿಯೂ, ಎದೋಮಿನಲ್ಲಿಯೂ, ಸಕಲ ದೇಶಗಳಲ್ಲಿಯೂ ಇದ್ದ ಯೆಹೂದ್ಯರೆಲ್ಲರೂ ಬಾಬಿಲೋನಿನ ಅರಸನು ಯೆಹೂದದ ಒಂದು ಶೇಷವನ್ನು ಬಿಟ್ಟಿದ್ದನೆಂದೂ, ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನನ್ನು ಅವರಿಗೆ ಅಧಿಪತಿಯನ್ನಾಗಿ ನೇಮಿಸಿದ್ದಾನೆಂದು ಕೇಳಿದಾಗ 12 ಯೆಹೂದ್ಯರೆಲ್ಲರೂ, ಅವರು ಓಡಿಸಲಾಗಿದ್ದ ಎಲ್ಲಾ ಸ್ಥಳಗಳಿಂದ ತಿರುಗಿಕೊಂಡು, ಯೆಹೂದ ದೇಶಕ್ಕೆ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದು, ಬಹು ಅಧಿಕವಾಗಿ ದ್ರಾಕ್ಷಾರಸವನ್ನೂ, ಬೇಸಿಗೆ ಕಾಲದ ಹಣ್ಣುಗಳನ್ನೂ ಕೂಡಿಸಿದರು. 13 ಇದಲ್ಲದೆ ಕಾರೇಹನ ಮಗ ಯೋಹಾನಾನನೂ, ಸೀಮೆಯಲ್ಲಿದ್ದ ಎಲ್ಲಾ ಸೇನಾಧಿಪತಿಗಳೂ ಗೆದಲ್ಯನ ಬಳಿಗೆ ಮಿಚ್ಪಕ್ಕೆ ಬಂದು, 14 “ಅಮ್ಮೋನನ ಮಕ್ಕಳ ಅರಸನಾದ ಬಾಲೀಸನು ನಿನ್ನನ್ನು ಕೊಲ್ಲುವದಕ್ಕಾಗಿ ನೆತನ್ಯನ ಮಗನಾದ ಇಷ್ಮಾಯೇಲನನ್ನು ಕಳುಹಿಸಿದ್ದಾನೆಂದು ನಿನಗೆ ತಿಳಿದಿದೆಯೋ?” ಎಂದನು. ಆದರೆ ಅಹೀಕಾಮನ ಮಗನಾದ ಗೆದಲ್ಯನು ಅವರನ್ನು ನಂಬಲಿಲ್ಲ. 15 ಆಗ ಕಾರೇಹನ ಮಗ ಯೋಹಾನಾನನು ಮಿಚ್ಪದಲ್ಲಿ ರಹಸ್ಯವಾಗಿ ಗೆದಲ್ಯನ ಸಂಗಡ ಮಾತನಾಡಿ, “ನನ್ನನ್ನು ಹೋಗಗೊಡಿಸು, ನಾನು ನೆತನ್ಯನ ಮಗ ಇಷ್ಮಾಯೇಲನನ್ನು ಯಾರಿಗೂ ತಿಳಿಯದ ಹಾಗೆ ಕೊಂದು ಹಾಕುತ್ತೇನೆ. ಅವನು ನಿನ್ನನ್ನು ಕೊಂದರೆ, ನಿನ್ನ ಬಳಿಗೆ ಕೂಡಿಕೊಳ್ಳುವ ಯೆಹೂದ್ಯರೆಲ್ಲರು ಚದರಿಹೋಗಿ, ಯೆಹೂದದಲ್ಲಿ ಉಳಿದವರು ನಾಶವಾಗುತ್ತಾರಲ್ಲಾ. ಏಕೆ ಹೀಗೆ ಆಗಬೇಕು?” ಎಂದು ವಿಜ್ಞಾಪಿಸಿದನು. 16 ಆದರೆ ಅಹೀಕಾಮನ ಮಗ ಗೆದಲ್ಯನು ಕಾರೇಹನ ಮಗನಾದ ಯೋಹಾನಾನನಿಗೆ, “ಈ ಕೆಲಸ ಮಾಡಬೇಡ, ಏಕೆಂದರೆ ನೀನು ಇಷ್ಮಾಯೇಲನ ವಿಷಯವಾಗಿ ಸುಳ್ಳಾಗಿ ಮಾತನಾಡುತ್ತೀ,” ಎಂದನು.
In Other Versions
Jeremiah 40 in the ANGEFD
Jeremiah 40 in the ANTPNG2D
Jeremiah 40 in the AS21
Jeremiah 40 in the BAGH
Jeremiah 40 in the BBPNG
Jeremiah 40 in the BBT1E
Jeremiah 40 in the BDS
Jeremiah 40 in the BEV
Jeremiah 40 in the BHAD
Jeremiah 40 in the BIB
Jeremiah 40 in the BLPT
Jeremiah 40 in the BNT
Jeremiah 40 in the BNTABOOT
Jeremiah 40 in the BNTLV
Jeremiah 40 in the BOATCB
Jeremiah 40 in the BOATCB2
Jeremiah 40 in the BOBCV
Jeremiah 40 in the BOCNT
Jeremiah 40 in the BOECS
Jeremiah 40 in the BOGWICC
Jeremiah 40 in the BOHCB
Jeremiah 40 in the BOHCV
Jeremiah 40 in the BOHLNT
Jeremiah 40 in the BOHNTLTAL
Jeremiah 40 in the BOICB
Jeremiah 40 in the BOILNTAP
Jeremiah 40 in the BOITCV
Jeremiah 40 in the BOKCV
Jeremiah 40 in the BOKHWOG
Jeremiah 40 in the BOKSSV
Jeremiah 40 in the BOLCB
Jeremiah 40 in the BOLCB2
Jeremiah 40 in the BOMCV
Jeremiah 40 in the BONAV
Jeremiah 40 in the BONCB
Jeremiah 40 in the BONLT
Jeremiah 40 in the BONUT2
Jeremiah 40 in the BOPLNT
Jeremiah 40 in the BOSCB
Jeremiah 40 in the BOSNC
Jeremiah 40 in the BOTLNT
Jeremiah 40 in the BOVCB
Jeremiah 40 in the BOYCB
Jeremiah 40 in the BPBB
Jeremiah 40 in the BPH
Jeremiah 40 in the BSB
Jeremiah 40 in the CCB
Jeremiah 40 in the CUV
Jeremiah 40 in the CUVS
Jeremiah 40 in the DBT
Jeremiah 40 in the DGDNT
Jeremiah 40 in the DHNT
Jeremiah 40 in the DNT
Jeremiah 40 in the ELBE
Jeremiah 40 in the EMTV
Jeremiah 40 in the ESV
Jeremiah 40 in the FBV
Jeremiah 40 in the FEB
Jeremiah 40 in the GGMNT
Jeremiah 40 in the GNT
Jeremiah 40 in the HARY
Jeremiah 40 in the HNT
Jeremiah 40 in the IRVA
Jeremiah 40 in the IRVB
Jeremiah 40 in the IRVG
Jeremiah 40 in the IRVH
Jeremiah 40 in the IRVK
Jeremiah 40 in the IRVM
Jeremiah 40 in the IRVM2
Jeremiah 40 in the IRVO
Jeremiah 40 in the IRVP
Jeremiah 40 in the IRVT
Jeremiah 40 in the IRVT2
Jeremiah 40 in the IRVU
Jeremiah 40 in the ISVN
Jeremiah 40 in the JSNT
Jeremiah 40 in the KAPI
Jeremiah 40 in the KBT1ETNIK
Jeremiah 40 in the KBV
Jeremiah 40 in the KJV
Jeremiah 40 in the KNFD
Jeremiah 40 in the LBA
Jeremiah 40 in the LBLA
Jeremiah 40 in the LNT
Jeremiah 40 in the LSV
Jeremiah 40 in the MAAL
Jeremiah 40 in the MBV
Jeremiah 40 in the MBV2
Jeremiah 40 in the MHNT
Jeremiah 40 in the MKNFD
Jeremiah 40 in the MNG
Jeremiah 40 in the MNT
Jeremiah 40 in the MNT2
Jeremiah 40 in the MRS1T
Jeremiah 40 in the NAA
Jeremiah 40 in the NASB
Jeremiah 40 in the NBLA
Jeremiah 40 in the NBS
Jeremiah 40 in the NBVTP
Jeremiah 40 in the NET2
Jeremiah 40 in the NIV11
Jeremiah 40 in the NNT
Jeremiah 40 in the NNT2
Jeremiah 40 in the NNT3
Jeremiah 40 in the PDDPT
Jeremiah 40 in the PFNT
Jeremiah 40 in the RMNT
Jeremiah 40 in the SBIAS
Jeremiah 40 in the SBIBS
Jeremiah 40 in the SBIBS2
Jeremiah 40 in the SBICS
Jeremiah 40 in the SBIDS
Jeremiah 40 in the SBIGS
Jeremiah 40 in the SBIHS
Jeremiah 40 in the SBIIS
Jeremiah 40 in the SBIIS2
Jeremiah 40 in the SBIIS3
Jeremiah 40 in the SBIKS
Jeremiah 40 in the SBIKS2
Jeremiah 40 in the SBIMS
Jeremiah 40 in the SBIOS
Jeremiah 40 in the SBIPS
Jeremiah 40 in the SBISS
Jeremiah 40 in the SBITS
Jeremiah 40 in the SBITS2
Jeremiah 40 in the SBITS3
Jeremiah 40 in the SBITS4
Jeremiah 40 in the SBIUS
Jeremiah 40 in the SBIVS
Jeremiah 40 in the SBT
Jeremiah 40 in the SBT1E
Jeremiah 40 in the SCHL
Jeremiah 40 in the SNT
Jeremiah 40 in the SUSU
Jeremiah 40 in the SUSU2
Jeremiah 40 in the SYNO
Jeremiah 40 in the TBIAOTANT
Jeremiah 40 in the TBT1E
Jeremiah 40 in the TBT1E2
Jeremiah 40 in the TFTIP
Jeremiah 40 in the TFTU
Jeremiah 40 in the TGNTATF3T
Jeremiah 40 in the THAI
Jeremiah 40 in the TNFD
Jeremiah 40 in the TNT
Jeremiah 40 in the TNTIK
Jeremiah 40 in the TNTIL
Jeremiah 40 in the TNTIN
Jeremiah 40 in the TNTIP
Jeremiah 40 in the TNTIZ
Jeremiah 40 in the TOMA
Jeremiah 40 in the TTENT
Jeremiah 40 in the UBG
Jeremiah 40 in the UGV
Jeremiah 40 in the UGV2
Jeremiah 40 in the UGV3
Jeremiah 40 in the VBL
Jeremiah 40 in the VDCC
Jeremiah 40 in the YALU
Jeremiah 40 in the YAPE
Jeremiah 40 in the YBVTP
Jeremiah 40 in the ZBP