Job 14 (BOKCV2)

1 “ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನೂ,ಕಷ್ಟಸಂಕಟಗಳಿಂದ ತುಂಬಿದವನೂ ಆಗಿದ್ದಾನೆ. 2 ಅವನು ಹೂವಿನ ಹಾಗೆ ಅರಳಿ ಬಾಡುವನು;ಅವನು ನೆರಳಿನಂತೆ ಓಡಿಹೋಗುತ್ತಾನೆ, ಶಾಶ್ವತವಾಗಿರುವದಿಲ್ಲ. 3 ಹಾಗಾದರೆ ಇಂಥವನ ಮೇಲೆ ದೇವರೇ, ನೀವು ನಿಮ್ಮ ಕಣ್ಣಿಟ್ಟೀದೀರಲ್ಲಾ?ನಿಮ್ಮ ನ್ಯಾಯಸ್ಥಾನಕ್ಕೆ ನನ್ನನ್ನು ಬರಮಾಡುತ್ತೀರೋ? 4 ಅಶುದ್ಧತೆಯಿಂದ ಶುದ್ಧವಾದದ್ದನ್ನು ತರುವವನು ಯಾರು?ಯಾರೂ ತರಲಾರರು! 5 ಮನುಷ್ಯನ ದಿನಗಳು ಇಷ್ಟೇ ಎಂದು ತೀರ್ಮಾನವಾಗಿದೆ;ಅವನ ತಿಂಗಳುಗಳ ಲೆಕ್ಕ ದೇವರೇ ನಿಮ್ಮ ಬಳಿಯಲ್ಲಿ ಇದೆ;ಅವನು ದಾಟಲಾರದ ಹಾಗೆ ಅವನಿಗೆ ಮೇರೆಗಳನ್ನು ನೇಮಿಸಿದ್ದೀರಿ. 6 ಆದ್ದರಿಂದ ಅವನು ವಿಶ್ರಾಂತಿ ಪಡೆಯಲೆಂದುನಿಮ್ಮ ದೃಷ್ಟಿಯನ್ನು ಅವನ ಕಡೆಯಿಂದ ತಿರುಗಿಸಿಬಿಡಿರಿ;ಅವನು ಕೂಲಿಯವನಿಗಿರುವಷ್ಟು ಸಂತೋಷದಿಂದಾದರೂ ತನ್ನ ದಿನವನ್ನು ಕಳೆಯಲಿ. 7 “ಮರಕ್ಕೆ ಸಹ ಒಂದು ನಿರೀಕ್ಷೆ ಇದೆ:ಅದೇನೆಂದರೆ, ಮರವನ್ನು ಕಡಿದು ಹಾಕಿದರೂತಾನು ಮತ್ತೆ ಚಿಗುರುವೆನೆಂಬ ನಿರೀಕ್ಷೆ ಅದಕ್ಕಿದೆ;ಚಿಗುರುವುದನ್ನು ಆ ಮರವು ನಿಲ್ಲಿಸುವುದೇ ಇಲ್ಲ. 8 ಅದರ ಬೇರು ಭೂಮಿಯಲ್ಲಿ ಹಳೆಯದಾದರೂ,ನೆಲದಲ್ಲಿ ಅದರ ಬುಡ ಸತ್ತಿದ್ದರೂ, 9 ನೀರಿನ ವಾಸನೆಯಿಂದ ಅದು ಮೊಳೆತು,ಗಿಡದ ಹಾಗೆ ಅದು ಕೊಂಬೆಗಳನ್ನು ಬಿಡುವುದು. 10 ಆದರೆ ಮನುಷ್ಯನು ಸತ್ತು ಬಿದ್ದಿರುತ್ತಾನೆ;ಅವನು ಕೊನೆಯುಸಿರೆಳೆದಾಗ ಅವನ ಅಂತ್ಯವಾಗುತ್ತದೆ. 11 ಸರೋವರದ ನೀರು ಒಣಗಿ ಹೋಗುವಂತೆಯೂ,ಬರಗಾಲದಲ್ಲಿ ನದಿಗಳು ಬತ್ತಿಹೋಗುವಂತೆಯೂ, 12 ಮನುಷ್ಯನು ಸತ್ತು ಮಲಗಿದರೆ ಏಳುವುದೇ ಇಲ್ಲ;ಆಕಾಶಗಳು ಅಳಿದು ಹೋಗುವವರೆಗೆ ಅವನು ಎಚ್ಚರಗೊಳ್ಳುವುದಿಲ್ಲ;ನಿದ್ರೆಯಿಂದ ಎಬ್ಬಿಸಲಾಗುವುದೂ ಇಲ್ಲ. 13 “ದೇವರೇ, ನೀವು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ,ನಿಮ್ಮ ಶಿಕ್ಷೆ ಮುಗಿಯುವವರೆಗೂ ನನ್ನನ್ನು ಅಡಗಿಸಿರಿ!ನೀವು ನನಗೆ ಒಂದು ಕಾಲವನ್ನು ನಿಗದಿಪಡಿಸಿ,ಅನಂತರ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು! 14 ಒಬ್ಬ ಮನುಷ್ಯನು ಸತ್ತರೆ ಅವನು ತಿರುಗಿ ಬದುಕುವನೋ?ಆದರೂ ನನಗೆ ನೇಮಕ ಮಾಡಿದ ಪರಿಶ್ರಮದ ದಿನವೆಲ್ಲಾ,ನನಗೆ ಬಿಡುಗಡೆಯಾಗುವವರೆಗೆ ನಾನು ಕಾದುಕೊಂಡಿರುವೆನು. 15 ದೇವರೇ, ನೀವು ನನ್ನನ್ನು ಕರೆಯುವಿರಿ, ನಾನು ನಿಮಗೆ ಉತ್ತರಕೊಡುವೆನು;ನಿಮ್ಮ ಈ ಸೃಷ್ಟಿಯ ಮೇಲೆ ನೀವು ಹಂಬಲಿಸುವಿರಿ. 16 ಆಗ ನೀವು ನನ್ನ ಹೆಜ್ಜೆಗಳನ್ನು ಲೆಕ್ಕಿಸುವಿರಿ;ಆದರೆ ನೀವು ನನ್ನ ಪಾಪದ ಬಗ್ಗೆ ದಾಖಲೆ ಇಡುವುದಿಲ್ಲ. 17 ನನ್ನ ಅಪರಾಧಗಳನ್ನು ಮೂಟೆಕಟ್ಟಿ ಮುದ್ರೆ ಹಾಕಿಬಿಡುವಿರಿ;ನೀವು ನನ್ನ ಅನ್ಯಾಯವನ್ನು ಮರೆಮಾಡುವಿರಿ. 18 “ಆದರೂ ಬೆಟ್ಟವು ಬಿದ್ದು ಹಾಳಾಗುವಂತೆಯೂ,ಬಂಡೆಯು ತನ್ನ ಸ್ಥಳದಿಂದ ತೊಲಗುವಂತೆಯೂ, 19 ನೀರು ಕಲ್ಲುಗಳನ್ನು ಸವೆಯಿಸುವಂತೆಯೂ,ಪ್ರವಾಹಗಳು ಭೂಮಿಯ ಮಣ್ಣನ್ನು ಕೊಚ್ಚಿಕೊಂಡು ಹೋಗುವಂತೆಯೂ,ಮನುಷ್ಯನ ನಿರೀಕ್ಷೆಯನ್ನು ನೀವು ನಾಶಮಾಡುತ್ತೀರಿ. 20 ನೀವು ಅವನ ಮೇಲೆ ಶಾಶ್ವತವಾಗಿ ಮೇಲುಗೈ ಸಾಧಿಸಿರುವದರಿಂದ ಅವನು ಹೊರಟು ಹೋಗುವನು;ನೀವು ಅವನ ಮುಖಭಾವವನ್ನು ಮಾರ್ಪಡಿಸಿ, ಅವನನ್ನು ಕಳುಹಿಸಿಬಿಡುತ್ತೀರಿ. 21 ಮಕ್ಕಳು ಘನತೆಯನ್ನು ಹೊಂದಿದರೆ, ಅದು ಸತ್ತವರಿಗೆ ತಿಳಿಯುವುದಿಲ್ಲ;ಅವರ ಮಕ್ಕಳು ಕಡಿಮೆ ಸ್ಥಿತಿಗೆ ಬಂದರೆ ಸಹ, ಅದನ್ನು ಸತ್ತವರು ಗ್ರಹಿಸಿಕೊಳ್ಳುವುದಿಲ್ಲ. 22 ಆದರೆ ಸತ್ತವರು ತಮ್ಮ ದೇಹದ ನೋವನ್ನು ಅನುಭವಿಸುವರು,ಅವರ ಆತ್ಮವು ಅವರಿಗಾಗಿ ಮಾತ್ರ ಪ್ರಲಾಪಿಸುತ್ತಿರುವುದು.”

In Other Versions

Job 14 in the ANGEFD

Job 14 in the ANTPNG2D

Job 14 in the AS21

Job 14 in the BAGH

Job 14 in the BBPNG

Job 14 in the BBT1E

Job 14 in the BDS

Job 14 in the BEV

Job 14 in the BHAD

Job 14 in the BIB

Job 14 in the BLPT

Job 14 in the BNT

Job 14 in the BNTABOOT

Job 14 in the BNTLV

Job 14 in the BOATCB

Job 14 in the BOATCB2

Job 14 in the BOBCV

Job 14 in the BOCNT

Job 14 in the BOECS

Job 14 in the BOGWICC

Job 14 in the BOHCB

Job 14 in the BOHCV

Job 14 in the BOHLNT

Job 14 in the BOHNTLTAL

Job 14 in the BOICB

Job 14 in the BOILNTAP

Job 14 in the BOITCV

Job 14 in the BOKCV

Job 14 in the BOKHWOG

Job 14 in the BOKSSV

Job 14 in the BOLCB

Job 14 in the BOLCB2

Job 14 in the BOMCV

Job 14 in the BONAV

Job 14 in the BONCB

Job 14 in the BONLT

Job 14 in the BONUT2

Job 14 in the BOPLNT

Job 14 in the BOSCB

Job 14 in the BOSNC

Job 14 in the BOTLNT

Job 14 in the BOVCB

Job 14 in the BOYCB

Job 14 in the BPBB

Job 14 in the BPH

Job 14 in the BSB

Job 14 in the CCB

Job 14 in the CUV

Job 14 in the CUVS

Job 14 in the DBT

Job 14 in the DGDNT

Job 14 in the DHNT

Job 14 in the DNT

Job 14 in the ELBE

Job 14 in the EMTV

Job 14 in the ESV

Job 14 in the FBV

Job 14 in the FEB

Job 14 in the GGMNT

Job 14 in the GNT

Job 14 in the HARY

Job 14 in the HNT

Job 14 in the IRVA

Job 14 in the IRVB

Job 14 in the IRVG

Job 14 in the IRVH

Job 14 in the IRVK

Job 14 in the IRVM

Job 14 in the IRVM2

Job 14 in the IRVO

Job 14 in the IRVP

Job 14 in the IRVT

Job 14 in the IRVT2

Job 14 in the IRVU

Job 14 in the ISVN

Job 14 in the JSNT

Job 14 in the KAPI

Job 14 in the KBT1ETNIK

Job 14 in the KBV

Job 14 in the KJV

Job 14 in the KNFD

Job 14 in the LBA

Job 14 in the LBLA

Job 14 in the LNT

Job 14 in the LSV

Job 14 in the MAAL

Job 14 in the MBV

Job 14 in the MBV2

Job 14 in the MHNT

Job 14 in the MKNFD

Job 14 in the MNG

Job 14 in the MNT

Job 14 in the MNT2

Job 14 in the MRS1T

Job 14 in the NAA

Job 14 in the NASB

Job 14 in the NBLA

Job 14 in the NBS

Job 14 in the NBVTP

Job 14 in the NET2

Job 14 in the NIV11

Job 14 in the NNT

Job 14 in the NNT2

Job 14 in the NNT3

Job 14 in the PDDPT

Job 14 in the PFNT

Job 14 in the RMNT

Job 14 in the SBIAS

Job 14 in the SBIBS

Job 14 in the SBIBS2

Job 14 in the SBICS

Job 14 in the SBIDS

Job 14 in the SBIGS

Job 14 in the SBIHS

Job 14 in the SBIIS

Job 14 in the SBIIS2

Job 14 in the SBIIS3

Job 14 in the SBIKS

Job 14 in the SBIKS2

Job 14 in the SBIMS

Job 14 in the SBIOS

Job 14 in the SBIPS

Job 14 in the SBISS

Job 14 in the SBITS

Job 14 in the SBITS2

Job 14 in the SBITS3

Job 14 in the SBITS4

Job 14 in the SBIUS

Job 14 in the SBIVS

Job 14 in the SBT

Job 14 in the SBT1E

Job 14 in the SCHL

Job 14 in the SNT

Job 14 in the SUSU

Job 14 in the SUSU2

Job 14 in the SYNO

Job 14 in the TBIAOTANT

Job 14 in the TBT1E

Job 14 in the TBT1E2

Job 14 in the TFTIP

Job 14 in the TFTU

Job 14 in the TGNTATF3T

Job 14 in the THAI

Job 14 in the TNFD

Job 14 in the TNT

Job 14 in the TNTIK

Job 14 in the TNTIL

Job 14 in the TNTIN

Job 14 in the TNTIP

Job 14 in the TNTIZ

Job 14 in the TOMA

Job 14 in the TTENT

Job 14 in the UBG

Job 14 in the UGV

Job 14 in the UGV2

Job 14 in the UGV3

Job 14 in the VBL

Job 14 in the VDCC

Job 14 in the YALU

Job 14 in the YAPE

Job 14 in the YBVTP

Job 14 in the ZBP